AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಚುನಾವಣೆ, ಹೊಸ ಪಕ್ಷ ರಚಿಸುವುದಾಗಿ ಘೋಷಿಸಿದ ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ಶಶಿಕಲಾ

ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಹೊಸ ದ್ರಾವಿಡ ಪಕ್ಷ ರಚಿಸುವುದಾಗಿ ಘೋಷಿಸಿದ್ದಾರೆ. ಮಾಜಿ ಸಿಎಂ ಜಯಲಲಿತಾ ಜನ್ಮದಿನದಂದು ಪಕ್ಷದ ಧ್ವಜ ಅನಾವರಣಗೊಳಿಸಿದರು. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಶಿಕಲಾ, 'ನನ್ನನ್ನು ದ್ರೋಹ ಮಾಡಿದ್ದಾರೆ, ಪಕ್ಷ ಅವನತಿ ಕಂಡಿದೆ' ಎಂದರು. ತಮ್ಮ ರಾಜಕೀಯ ಪುನರಾಗಮನವನ್ನು 'ಹೊಸ ಯುಗ' ಎಂದು ಬಣ್ಣಿಸಿದ್ದಾರೆ.

ತಮಿಳುನಾಡು ಚುನಾವಣೆ, ಹೊಸ ಪಕ್ಷ ರಚಿಸುವುದಾಗಿ ಘೋಷಿಸಿದ ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ಶಶಿಕಲಾ
ಶಶಿಕಲಾ-ಜಯಲಲಿತಾImage Credit source: NDTV
ನಯನಾ ರಾಜೀವ್
|

Updated on:Feb 25, 2026 | 7:47 AM

Share

ಚೆನ್ನೈ, ಫೆಬ್ರವರಿ 25: ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿಕೆ ಶಶಿಕಲಾ(Sasikala) ಮಂಗಳವಾರ ಹೊಸ ದ್ರಾವಿಡ ಪಕ್ಷವನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಇದೇ ಏಪ್ರಿಲ್​-ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ 78ನೇ ಜನ್ಮ ದಿನಾಚರಣೆಯಂದು ಅವರು ಪಕ್ಷದ ಧ್ವಜವನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಶಶಿಕಲಾ ಮಾತನಾಡಿ, ತಮ್ಮ ಮಾಜಿ ಸಹೋದ್ಯೋಗಿ ಮತ್ತು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮಗೆ ದ್ರೋಹ ಬಗೆದಿದ್ದಾರೆ, ಅವರ ನಾಯಕತ್ವದಲ್ಲಿ ಪಕ್ಷವು ಅವನತಿ ಕಂಡಿದೆ ಎಂದು ಹೇಳಿಕೊಂಡಿದ್ದಾರೆ. ಒಂದು ಕಾಲದಲ್ಲಿ ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ಮತ್ತು ಜಯಲಲಿತಾ ಅವರ ಆಪ್ತ ಸಹಾಯಕರಾಗಿದ್ದ ಶಶಿಕಲಾ ಅವರನ್ನು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಒಳಗಾದ ಬಳಿಕ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ನಾನು ಕಳೆದ 9 ವರ್ಷಗಳಿಂದ ಮೌನವಾಗಿದ್ದರೆ ಅದು ತಮಿಳುನಾಡಿನ ಜನರಿಗೆ ಮಾಡಿದ ದ್ರೋಹವಾಗುತ್ತಿತ್ತು, ಆದ್ದರಿಂದ ತಮಿಳುನಾಡಿನ ಜನರು ಮತ್ತು ನಮ್ಮ ಪಕ್ಷದ ಕಾರ್ಯಕರ್ತರಿಗಾಗಿ ನಾವು ಹೊಸ ಯುವನ್ನು ಪ್ರಾರಂಭಿಸಲಿದ್ದೇವೆ, ನಾವು ಹೊಸ ಪಕ್ಷವನ್ನು ಕಟ್ಟಲಿದ್ದೇವೆ ಎಂದು ಘೋಷಿಸಿದ್ದಾರೆ.

ಶಶಿಕಲಾ ಅವರು ಕಪ್ಪು, ಬಿಳಿ ಮತ್ತು ಕೆಂಪು ಬಣ್ಣದ ಹೊಸ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದರು, ಇದರಲ್ಲಿ ಸಿಎನ್ ಅಣ್ಣಾದೊರೈ, ಎಂಜಿ ರಾಮಚಂದ್ರನ್ ಮತ್ತು ಜಯಲಲಿತಾ ಚಿತ್ರಗಳಿವೆ. ಸಧ್ಯಕ್ಕೆ ತಾವು ಪಕ್ಷದ ಧ್ವಜವನ್ನಷ್ಟೇ ಅನಾವರಣಗೊಳಿಸುತ್ತಿರುವುದಾಗಿ ಪಕ್ಷದ ಹೆಸರು ಶೀಘ್ರದಲ್ಲೇ ಘೋಷಿಸುವುದಾಗಿ ಹೇಳಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೂಡಾ ತಿಳಿಸಿದ್ದಾರೆ.

ಮತ್ತಷ್ಟು ಓದಿ: ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ, ಟಿವಿಕೆಗೆ ಪೂರ್ಣ ಬಹಮತ ಸಿಗಲಿದೆ: ವಿಜಯ್

2026ರ ಮೊದಲಾರ್ಧದಲ್ಲಿ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ನಾನು ಜೈಲಿನಲ್ಲಿದ್ದಾಗ, ಜೈಲು ಅಧಿಕಾರಿಗಳು ನನಗೆ 15 ದಿನಗಳ ಪೆರೋಲ್ ನೀಡಿದರು. ಆದರೆ, ಚೆನ್ನೈ ಆಯುಕ್ತರು ಜೈಲು ಎಸ್‌ಪಿಯನ್ನು ಸಂಪರ್ಕಿಸಿ, ಮುಖ್ಯಮಂತ್ರಿಗಳು ನನಗೆ ಐದು ದಿನಗಳಿಗಿಂತ ಹೆಚ್ಚು ಪೆರೋಲ್ ನೀಡಬಾರದು ಎಂದು ಆದೇಶಿಸಿದ್ದಾರೆ ಎಂದು ತಿಳಿಸಿದರು.

ನನ್ನ ಪತಿ ನಿಧನರಾದಾಗಲೂ, ಆರಂಭದಲ್ಲಿ 15 ದಿನಗಳನ್ನು ನೀಡಲಾಗಿದ್ದರೂ, ನಂತರ ಅವರು ಕೇವಲ 10 ದಿನಗಳನ್ನು ಮಾತ್ರ ನೀಡುವುದಾಗಿ ನಮಗೆ ತಿಳಿಸಿದರು. ನಾನು ಮುಖ್ಯಮಂತ್ರಿಯನ್ನಾಗಿ ಮಾಡಿದ ವ್ಯಕ್ತಿಯೇ ನನ್ನ ಬೆನ್ನಿಗೆ ಇರಿದಿದ್ದ ಎಂದು ಅವರು ಹೇಳಿದ್ದಾರೆ.

ಇಲ್ಲಿಯವರೆಗೆ, ಎಐಎಡಿಎಂಕೆ ಹತ್ತು ಬಾರಿ ಸೋಲನ್ನು ಎದುರಿಸಿದೆ ಮತ್ತು ಒಂದೇ ಒಂದು ಚುನಾವಣೆಯನ್ನು ಸಹ ಗೆದ್ದಿಲ್ಲ. ವಿರೋಧ ಪಕ್ಷದ ಕಾರ್ಯವೈಖರಿ ಅತ್ಯಂತ ಕಳಪೆಯಾಗಿದೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:45 am, Wed, 25 February 26

Follow Us
ವ್ಯಕ್ತಿಯನ್ನು ಚೀಲಕ್ಕೆ ತುಂಬಿಕೊಂಡು ತಂದು ಕೊರಿಯರ್ ಮಾಡುವಂತೆ ಪಟ್ಟು
ವ್ಯಕ್ತಿಯನ್ನು ಚೀಲಕ್ಕೆ ತುಂಬಿಕೊಂಡು ತಂದು ಕೊರಿಯರ್ ಮಾಡುವಂತೆ ಪಟ್ಟು
ಅಪ್ಪು ಅಭಿಮಾನಿಗಳ ಪುಣ್ಯದ ಕೆಲಸ: ಮನಸಾರೆ ಹೊಗಳಿದ ನಟ ಪ್ರಥಮ್
ಅಪ್ಪು ಅಭಿಮಾನಿಗಳ ಪುಣ್ಯದ ಕೆಲಸ: ಮನಸಾರೆ ಹೊಗಳಿದ ನಟ ಪ್ರಥಮ್
ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು
ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು
ಮಂಗಳೂರಿನಲ್ಲಿ ಕಾರಿನಿಂದ ಗುದ್ದಿ ಕೊಲೆಗೆ ಯತ್ನ: ಭಯಾನಕ ವಿಡಿಯೋ
ಮಂಗಳೂರಿನಲ್ಲಿ ಕಾರಿನಿಂದ ಗುದ್ದಿ ಕೊಲೆಗೆ ಯತ್ನ: ಭಯಾನಕ ವಿಡಿಯೋ
ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ
ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ
ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ಆಗಿದ್ದೇನು?
ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ಆಗಿದ್ದೇನು?
‘ಕೆಡಿ’ ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ಪತ್ರ
‘ಕೆಡಿ’ ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ಪತ್ರ
ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​
ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಅಪ್ಪು ಸಮಾಧಿಗೆ ಪೂಜೆ ಮಾಡಿದ ಶಿವರಾಜ್ ಕುಮಾರ್: ವಿಡಿಯೋ ನೋಡಿ
ಅಪ್ಪು ಸಮಾಧಿಗೆ ಪೂಜೆ ಮಾಡಿದ ಶಿವರಾಜ್ ಕುಮಾರ್: ವಿಡಿಯೋ ನೋಡಿ