AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಪೇಟಿಯಂ ಆ್ಯಪ್ ಮೂಲಕ ರೈಲು ಎಲ್ಲಿದೆ ಎಂದು ಟ್ರ್ಯಾಕ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್

Paytm: ಆಂಡ್ರಾಯ್ಡ್ ಮತ್ತು ಐಒಎಸ್ ಪೇಟಿಯಂ ಬಳಕೆದಾರರಿಗೆ ಈ ಆಯ್ಕೆ ನೀಡಲಾಗಿದ್ದು, ಅಪ್ಡೇಟ್ ಮಾಡಿದ ತಕ್ಷಣ ಸಿಗಲಿದೆ. ರೈಲು ಲೈವ್ ಟ್ರ್ಯಾಕ್ ಮಾಡಲು ಮತ್ತು ಪಿಎನ್​ಆರ್​ ಸ್ಟೇಟಸ್ ಚೆಕ್ ಮಾಡಲು ಈ ಕೆಳಗಿನ ಸೂತ್ರ ಅನುಸರಿಸಿ.ಪ್ರಸಿದ್ಧ ಪೇಟಿಯಂ ಆ್ಯಪ್ (Paytm App) ಈಗೀಗ ಆಕರ್ಷಕ ಫೀಚರ್​ಗಳನ್ನು ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ರೈಲು ಪ್ರಯಾಣಿಕರಿಗೆ ಉಪಯೋಗವಾಗುವಂತಹ ಅನೇಕ ಫೀಚರ್​ಗಳು ಇದರಲ್ಲಿದೆ. ಈಗಾಗಲೇ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) Paytm ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಸ್ವಯಂಚಾಲಿತ ಮಾರಾಟ ಯಂತ್ರದ ಮೂಲಕ ಪ್ರಯಾಣಿಕರ ಪ್ರಯಾಣಕ್ಕಾಗಿ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು ಸುಲಭ ಮತ್ತು ತ್ವರಿತ ಮಾರ್ಗವನ್ನು ಒದಗಿಸುತ್ತಿದೆ

Tech Tips: ಪೇಟಿಯಂ ಆ್ಯಪ್ ಮೂಲಕ ರೈಲು ಎಲ್ಲಿದೆ ಎಂದು ಟ್ರ್ಯಾಕ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Paytm App
TV9 Web
| Edited By: |

Updated on:Jul 03, 2026 | 1:33 PM

Share

ಪ್ರಸಿದ್ಧ ಪೇಟಿಯಂ ಆ್ಯಪ್ (Paytm App) ಈಗೀಗ ಆಕರ್ಷಕ ಫೀಚರ್​ಗಳನ್ನು ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ರೈಲು ಪ್ರಯಾಣಿಕರಿಗೆ ಉಪಯೋಗವಾಗುವಂತಹ ಅನೇಕ ಫೀಚರ್​ಗಳು ಇದರಲ್ಲಿದೆ. ಈಗಾಗಲೇ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) Paytm ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಸ್ವಯಂಚಾಲಿತ ಮಾರಾಟ ಯಂತ್ರದ ಮೂಲಕ ಪ್ರಯಾಣಿಕರ ಪ್ರಯಾಣಕ್ಕಾಗಿ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು ಸುಲಭ ಮತ್ತು ತ್ವರಿತ ಮಾರ್ಗವನ್ನು ಒದಗಿಸುತ್ತಿದೆ. Paytm QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಅಥವಾ UPI ಆಯ್ಕೆಗಳ ಮೂಲಕ ಪ್ರಯಾಣಿಕರು ಪಾವತಿಸಿ ಸುಲಭವಾಗಿ ಹಾಗೂ ತ್ವರಿತವಾಗಿ ಟಿಕೆಟ್ ಕಾಯ್ದಿರಿಸಬಹುದು. ಇದರ ಜೊತೆಗೆ ರೈಲು ಎಲ್ಲಿದೆ?, ಪಿಎನ್​ಆರ್​ ಸ್ಟೇಟಸ್ ಟ್ರ್ಯಾಕ್ ಮಾಡಬಹುದಾದ ಆಯ್ಕೆಯನ್ನು ಕೂಡ ಪೇಟಿಯಂ ನೀಡಿದೆ.

ಆಂಡ್ರಾಯ್ಡ್ ಮತ್ತು ಐಒಎಸ್ ಪೇಟಿಯಂ ಬಳಕೆದಾರರಿಗೆ ಈ ಆಯ್ಕೆ ನೀಡಲಾಗಿದ್ದು, ಅಪ್ಡೇಟ್ ಮಾಡಿದ ತಕ್ಷಣ ಸಿಗಲಿದೆ. ರೈಲು ಲೈವ್ ಟ್ರ್ಯಾಕ್ ಮಾಡಲು ಮತ್ತು ಪಿಎನ್​ಆರ್​ ಸ್ಟೇಟಸ್ ಚೆಕ್ ಮಾಡಲು ಈ ಕೆಳಗಿನ ಸೂತ್ರ ಅನುಸರಿಸಿ.

Tech Tips: ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಯ್ತಾ?: ಟೆನ್ಶನ್ ಬೇಡ, ಹೀಗೆ ಮಾಡಿ

  • Paytm ಅಪ್ಲಿಕೇಶನ್‌ಗೆ ಹೋಗಿ ಮತ್ತು ಟ್ರೈನ್ ಸ್ಟೇಟಸ್ ಆಯ್ಕೆಯನ್ನು ಸರ್ಚ್ ಮಾಡಿ.
  • ಈಗ Paytm ಟ್ರಾವೆಲ್ ವಿಭಾಗವು ತೆರೆಯುತ್ತದೆ ಮತ್ತು ಇಲ್ಲಿ ನಿಮಗೆ ರೈಲು, ಬಸ್, ವಿಮಾನಗಳು ಮತ್ತು ಹೆಚ್ಚಿನದನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ.
  • ನೀವು ರೈಲುಗಳುಆಯ್ಕೆಯನ್ನು ಆರಿಸಬೇಕು. ಇಲ್ಲಿ PNR ಸ್ಥಿತಿ, ಲೈವ್ ರೈಲು ಸ್ಥಿತಿ, ರೈಲು ಕ್ಯಾಲೆಂಡರ್ ಮತ್ತು ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಆಯ್ಕೆ ಕಾಣುತ್ತೀರಿ.
  • ನೀವು ರೈಲು ಸಂಖ್ಯೆಯನ್ನು ನಮೂದಿಸಬಹುದು ಮತ್ತು ಸರ್ಚ್ ಬಟನ್ ಅನ್ನು ಟ್ಯಾಪ್ ಮಾಡಬಹುದು.
  • ಒಮ್ಮೆ ನೀವು ಮಾಹಿತಿಯನ್ನು ಹಾಕಿದರೆ, ಮುಂಬರುವ ನಿಲ್ದಾಣ, ಕೊನೆಯದಾಗಿ ಕಳೆದ ನಿಲ್ದಾಣ, ಪ್ರಯಾಣಕ್ಕೆ ಉಳಿದಿರುವ ಸಮಯ, ಪ್ಲಾಟ್‌ಫಾರ್ಮ್ ವಿವರಗಳು, ಆಗಮನ ಮತ್ತು ನಿರ್ಗಮನ ಸಮಯಗಳು, ನಿರೀಕ್ಷಿತ ಆಗಮನದ ಸಮಯಗಳು ಸೇರಿದಂತೆ ಎಲ್ಲಾ ಪ್ರಯಾಣದ ವಿವರಗಳನ್ನು ಅಪ್ಲಿಕೇಶನ್ ತೋರಿಸುತ್ತದೆ.
  • ಅಂತೆಯೇ, ನಿಮ್ಮ ಟಿಕೆಟ್ ಬುಕಿಂಗ್ ಸ್ಥಿತಿಯನ್ನು ಪರಿಶೀಲಿಸಲು ನೀವು ನಿಮ್ಮ PNR ಸಂಖ್ಯೆಯನ್ನು ನಮೂದಿಸಬಹುದು.
  • ವು ರೈಲು ಕ್ಯಾಲೆಂಡರ್ ಅನ್ನು ಸಹ ಪರಿಶೀಲಿಸಬಹುದು ಮುಂದಿನ ಒಂದು ವಾರದ ಬಗೆಗಿನ ಮಾಹಿತಿ, ಸೀಟುಗಳ ಲಭ್ಯತೆಯನ್ನು ನೋಡಲು ಸಾಧ್ಯವಾಗುತ್ತದೆ.

ATVM ಗಳ ಮೂಲಕ IRCTC ಟಿಕೆಟ್ ಬುಕ್ ಮಾಡುವುದೇಗೆ?:

  • ನಿಮ್ಮ ಹತ್ತಿರದ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಮತ್ತು ATVM ಅನ್ನು ಗಮನಿಸಿ.
  • ATVM ನಲ್ಲಿ ನಿಮ್ಮ ಆದ್ಯತೆಯ ಮಾರ್ಗವನ್ನು ಆಯ್ಕೆಮಾಡಿ.
  • ಈಗ, Paytm UPI ಅನ್ನು ನಿಮ್ಮ ಪಾವತಿ ಆಯ್ಕೆಯಾಗಿ ಆಯ್ಕೆಮಾಡಿ.
  • ಪರದೆಯ ಮೇಲೆ ಲಭ್ಯವಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
  • ವಹಿವಾಟು ಪೂರ್ಣಗೊಂಡ ನಂತರ ನೀವು ATVM ನಿಂದ ಭೌತಿಕ ಟಿಕೆಟ್ ಪಡೆಯುತ್ತೀರಿ.

ರೈಲು ನಿಲ್ದಾಣಗಳಲ್ಲಿ ATVM ನ ಹೊಸ ಸೇವೆಗಳ ಹೊರತಾಗಿ, IRCTC ಪ್ರಯಾಣಿಕರ ಪ್ರಯಾಣಕ್ಕಾಗಿ ಸೇವೆಗಳನ್ನು ಒದಗಿಸುವ ಅಪ್ಲಿಕೇಶನ್ ಅನ್ನು ಸಹ ಪರಿಚಯಿಸಿದೆ. ಸೇವೆಯನ್ನು Confirm TICKET ಮೊಬೈಲ್ ಅಪ್ಲಿಕೇಶನ್ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. IRCTC ಯ ಈ ಅಪ್ಲಿಕೇಶನ್ ತತ್ಕಾಲ್ ಕೋಟಾದ ಅಡಿಯಲ್ಲಿ ಲಭ್ಯವಿರುವ ಆಸನಗಳ ಬಗ್ಗೆ ಮಾಹಿತಿಯನ್ನು ಪ್ರವೇಶಿಸಲು ನಿಮಗೆ ಸಹಾಯ ಮಾಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 am, Mon, 26 December 22

Follow Us
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!