AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದಲ್ಲಿ ನಕಲಿ ನಾಣ್ಯ ತಯಾರಿಕೆ ಗ್ಯಾಂಗ್ ಖಾಕಿ ಬಲೆಗೆ: ಐವರು ಆರೋಪಿಗಳು ಅರೆಸ್ಟ್​​

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಕಲಿ ನಾಣ್ಯಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಯಂತ್ರಗಳನ್ನು ಎಲ್ಲಿಂದ ಖರೀದಿಸಲಾಗಿತ್ತು ಮತ್ತು ಯಾವ ಸ್ಥಳದಲ್ಲಿ ಹೊಸ ಘಟಕ ಸ್ಥಾಪಿಸಲು ಜಾಲ ಯೋಜಿಸಿತ್ತು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ನಕಲಿ ನಾಣ್ಯ ತಯಾರಿಕೆ ಗ್ಯಾಂಗ್ ಖಾಕಿ ಬಲೆಗೆ: ಐವರು ಆರೋಪಿಗಳು ಅರೆಸ್ಟ್​​
ನಕಲಿ ನಾಣ್ಯ ತಯಾರಿಕೆ ಗ್ಯಾಂಗ್ ಖಾಕಿ ಬಲೆಗೆImage Credit source: Indian Express
ಪ್ರಸನ್ನ ಹೆಗಡೆ
|

Updated on:Sep 14, 2026 | 4:54 PM

Share

ಲಖನೌ, ಸೆಪ್ಟೆಂಬರ್​​ 14: ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಕಲಿ ನಾಣ್ಯ ತಯಾರಿಕೆ ಗ್ಯಾಂಗ್​​ನ ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಹಾರನ್‌ಪುರದ ಟಿಟಾವಾ ಪ್ರದೇಶದಲ್ಲಿ ಹೊಸ ಘಟಕ ಸ್ಥಾಪಿಸಲು ಯಂತ್ರೋಪಕರಣಗಳನ್ನು ಸಾಗಿಸುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ, ಪಂಜಾಬ್ ಮತ್ತು ಬಿಹಾರದಲ್ಲಿ ಈ ಜಾಲ ಕಾರ್ಯಾಚರಿಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. 2001ರಿಂದಲೇ ನಕಲಿ ನಾಣ್ಯ ತಯಾರಿಕೆಯಲ್ಲಿ ಆರೋಪಿಗಳು ತೊಡಗಿದ್ದರು ಎನ್ನಲಾಗಿದೆ.

ಅಭಯ್ ಪ್ರತಾಪ್ ಸಿಂಗ್ ಎಂಬಾತನೇ ಪ್ರಮುಖ ಆರೋಪಿ

ಪೊಲೀಸರು 20 ರೂ. ಮೌಲ್ಯದ 6,400 ನಕಲಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಮುಖಬೆಲೆ 1.28 ಲಕ್ಷವಾಗಿದೆ. ಇದರ ಜೊತೆಗೆ ಸುಮಾರು 5 ಲಕ್ಷ ಮೌಲ್ಯದ ಅರೆ-ಸಿದ್ಧ ನಾಣ್ಯಗಳು ಹಾಗೂ ಆರು ನಾಣ್ಯ ತಯಾರಿಕಾ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಜಾಲದ ಪ್ರಮುಖ ಆರೋಪಿ ಎನ್ನಲಾದ ಉಪ್ಕರ್ ಲುತ್ರಾ ಅಲಿಯಾಸ್ ಅಭಯ್ ಪ್ರತಾಪ್ ಸಿಂಗ್ ಕೂಡ ಇದ್ದಾನೆ. 50ರ ಹರೆಯದ ಲುತ್ರಾ ಮೊಹಾಲಿಯ ಮಾಜಿ ಚಿನ್ನದ ಕೆಲಸಗಾರನಾಗಿದ್ದು, 2001ರಿಂದ ನಕಲಿ ನಾಣ್ಯಗಳ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಾಗಿರುವ ಇತರ ನಾಲ್ವರನ್ನು ಸಹಾರನ್‌ಪುರದ ಹಿಮಾಂಶು ಅಲಿಯಾಸ್ ಗುಲ್ಲು, ಮುಜಫರ್‌ನಗರದ ಕುಲದೀಪ್, ಭದೋಹಿಯ ಅನುರಾಗ್ ಪಾಲ್ ಅಲಿಯಾಸ್ ಲಂಕೇಶ್ ಮತ್ತು ಬಿಹಾರದ ಸಂತೋಷ್ ಚೌರಾಸಿಯಾ ಅಲಿಯಾಸ್ ಜನಾರ್ದನ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಬೀದಿಗೆ ಬಂದ ಪೆಟ್ ಡಾಗ್ ಜಗಳ: ಲಿಫ್ಟ್ ಒಳಗೆ ಮಹಿಳೆಯರ ನಡುವೆ ಜಗಳ, ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

52.50 ಕೋಟಿ ಲಾಭಗಳಿಸಿದ್ದ ಗ್ಯಾಂಗ್​​?

ಈವರೆಗೆ ಬರೋಬ್ಬರಿ 3.5 ಕೋಟಿ ನಕಲಿ ನಾಣ್ಯಗಳನ್ನು ತಯಾರಿ ಮಾಡಿರುವ ಗ್ಯಾಂಗ್​​ ಇವುಗಳ ತಯಾರಿಕೆಗಾಗಿ ಸುಮಾರು 17.50 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಆರೋಪಿಗಳು ನಕಲಿ ನಾಣ್ಯಗಳ ಮೂಲಕ 52.50 ಕೋಟಿ ಲಾಭ ಗಳಿಸಿರುವ ಆರೋಪವಿದ್ದು, ಈ ನಾಣ್ಯಗಳನ್ನು ಕಮಿಷನ್ ಆಧಾರದ ಮೇಲೆ ಮದ್ಯದಂಗಡಿಗಳು, ಟೋಲ್ ಪ್ಲಾಜಾಗಳು ಮತ್ತು ಕಿರಾಣಿ ಅಂಗಡಿಗಳ ಮೂಲಕ ಚಲಾವಣೆಗೆ ಬಿಡಲಾಗುತ್ತಿತ್ತು. ಈ ಪೈಕಿ ಮದ್ಯದಂಗಡಿಗಳೇ ಜಾಲದ ಪ್ರಮುಖ ಮಾರುಕಟ್ಟೆಯಾಗಿದ್ದವು ಎಂಬುದು ತನಿಖೆ ವೇಳೆ ಬಯಲಾಗಿದೆ.

ಕಾರ್ಯಾಚರಣೆ ಹೇಗೆ ನಡೆಯುತ್ತಿತ್ತು?

ಪೊಲೀಸರ ಪ್ರಕಾರ, ಈ ಜಾಲವು ಈ ಹಿಂದೆ ಹರಿಯಾಣದಲ್ಲಿ ನಕಲಿ ನಾಣ್ಯ ತಯಾರಿಕಾ ಘಟಕ ನಡೆಸುತ್ತಿತ್ತು. ಇದೀಗ ಕಾರ್ಯಾಚರಣೆಯನ್ನು ಸಹಾರನ್‌ಪುರಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಸಿತ್ತು. ವಶಪಡಿಸಿಕೊಂಡ ಯಂತ್ರಗಳು ಕೂಡ ಈ ಹಿಂದೆ ಬಳಸಲಾಗಿದ್ದವು. ಜಾಲದಲ್ಲಿದ್ದ ಎಂಟು ಸದಸ್ಯರಿಗೆ ವಿಭಿನ್ನ ಜವಾಬ್ದಾರಿಗಳನ್ನು ನೀಡಲಾಗಿತ್ತು. ಕೆಲವರು ಯಂತ್ರೋಪಕರಣಗಳನ್ನು ವ್ಯವಸ್ಥೆ ಮಾಡುವುದು ಹಾಗೂ ಉತ್ಪಾದನೆಯ ಮೇಲ್ವಿಚಾರಣೆ ಮಾಡುತ್ತಿದ್ದರು. ಇನ್ನು ಕೆಲವರು ಸಿದ್ಧಪಡಿಸಿದ ನಾಣ್ಯಗಳನ್ನು ಏಜೆಂಟ್‌ಗಳಿಗೆ ಪೂರೈಸಿ, ಮಾರುಕಟ್ಟೆಯಲ್ಲಿ ಚಲಾವಣೆಗೆ ಬಿಡುವ ಜವಾಬ್ದಾರಿ ಹೊಂದಿದ್ದರು. ಜಾಲದ ಯಾವುದೇ ಒಬ್ಬ ಸದಸ್ಯ ಸಿಕ್ಕಿಬಿದ್ದರೂ ಇಡೀ ಜಾಲ ಬಯಲಾಗದಂತೆ ಈ ವ್ಯವಸ್ಥೆ ಮಾಡಲಾಗಿತ್ತು .

ಆರೋಪಿಗಳ ಹೇಳಿಕೆ ಪ್ರಕಾರ, ಒಂದು ನಕಲಿ ನಾಣ್ಯ ತಯಾರಿಸಲು 5ರಿಂದ 6 ರೂ. ವೆಚ್ಚವಾಗುತ್ತಿತ್ತು. ಬಳಿಕ ಅವುಗಳನ್ನು ಏಜೆಂಟ್‌ಗಳಿಗೆ ತಲಾ 12ರಿಂದ 15ರೂ.ಗಳಿಗೆ ಪೂರೈಸಲಾಗುತ್ತಿತ್ತು. ಮತ್ತೊಂದೆಡೆಚ ಯಂತ್ರಗಳನ್ನು ಎಲ್ಲಿಂದ ಖರೀದಿಸಲಾಗಿತ್ತು ಮತ್ತು ಸಹಾರನ್‌ಪುರದಲ್ಲಿ ಯಾವ ಸ್ಥಳದಲ್ಲಿ ಹೊಸ ಘಟಕ ಸ್ಥಾಪಿಸಲು ಜಾಲ ಯೋಜಿಸಿತ್ತು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡ ಎಂಟು ಮೊಬೈಲ್ ಫೋನ್‌ಗಳು, ಏಳು ಖಾತೆ ನೋಂದಣಿ ಪುಸ್ತಕಗಳು ಹಾಗೂ ಇತರ ದಾಖಲೆಗಳ ಆಧಾರದ ಮೇಲೆ ಜಾಲದ ಪೂರೈಕೆ ವ್ಯವಸ್ಥೆಯನ್ನೂ ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:53 pm, Mon, 14 September 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!