ನೂತನ ಸೇನಾ ಮುಖ್ಯಸ್ಥರಾದ ಉಪೇಂದ್ರ ದ್ವಿವೇದಿ; ಸಹಪಾಠಿಗಳಿಬ್ಬರು ಸೇನಾಪಡೆ, ನೌಕಾಪಡೆ ಮುಖ್ಯಸ್ಥರಾಗಿರುವುದು ಇದೇ ಮೊದಲು

Upendra Dwivedi becomes 30th Chief of Army Staff: ಭಾರತೀಯ ಸೇನಾಪಡೆಯ ನೂತನ ಮುಖ್ಯಸ್ಥರಾಗಿ ಜನರಲ್ ಉಪೇಂದ್ರ ದ್ವಿವೇದಿ ಇಂದು ಜೂನ್ 30ರಂದು ಅಧಿಕಾರ ಪಡೆದಿದ್ದಾರೆ. ಜೂನ್ 11ರಂದು ಅವರ ಹೆಸರನ್ನು ಆ ಸ್ಥಾನಕ್ಕೆ ಸೂಚಿಸಲಾಗಿತ್ತು. ಜನರಲ್ ಮನೋಜ್ ಪಾಂಡೆ ಅವರ ಸೇವಾವಧಿ ಮುಗಿದ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಉಪೇಂದ್ರ ತುಂಬಿದ್ದಾರೆ.

ನೂತನ ಸೇನಾ ಮುಖ್ಯಸ್ಥರಾದ ಉಪೇಂದ್ರ ದ್ವಿವೇದಿ; ಸಹಪಾಠಿಗಳಿಬ್ಬರು ಸೇನಾಪಡೆ, ನೌಕಾಪಡೆ ಮುಖ್ಯಸ್ಥರಾಗಿರುವುದು ಇದೇ ಮೊದಲು
ಉಪೇಂದ್ರ ದ್ವಿವೇದಿ
Follow us
|

Updated on: Jun 30, 2024 | 4:56 PM

ನವದೆಹಲಿ, ಜೂನ್ 30: ಜನರಲ್ ಉಪೇಂದ್ರ ದ್ವಿವೇದಿ ಅವರು ಭಾರತದ ಸೇನಾ ಪಡೆಯ (Chief of Army Staff) 30ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಜನರಲ್ ಮನೋಜ್ ಸಿ ಪಾಂಡೆ ಅವರ ಸೇವಾವಧಿ ಮುಗಿದ ಹಿನ್ನೆಲೆಯಲ್ಲಿ ಜೂನ್ 11ರಂದು ಉಪೇಂದ್ರ ದ್ವಿವೇದಿ ಅವರು ಸೇನಾ ಪಡೆಯ ಪರಮೋಚ್ಚ ಪದವಿಗೆ ಆಯ್ಕೆಯಾಗಿದ್ದರು. ಇದಕ್ಕೆ ಮುನ್ನ ನಾಲ್ಕು ತಿಂಗಳ ಕಾಲ ಸೇನಾ ಪಡೆಯ ವೈಸ್ ಚೀಫ್ ಆಗಿ ಕೆಲಸ ಮಾಡಿದ್ದರು. ಈ ಹಂತಕ್ಕೆ ಬರುವ ಮುನ್ನ ಅವರು ಸೇನಾ ಪಡೆಯ ವಿವಿಧ ಸ್ತರ ಮತ್ತು ಹುದ್ದೆಗಳಲ್ಲಿ ಕೆಲ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇತ್ಯಾದಿ ಹೊಸ ಆವಿಷ್ಕಾರಗಳನ್ನು ಸೇನಾ ಪಡೆಗೆ ನಿಯೋಜಿಸಬೇಕು. ಅತ್ಯಾಧುನಿಕ ಸಮರ ಕಲೆಗಳನ್ನು ಅಳವಡಿಸಬೇಕೆನ್ನುವ ಮನೋಭಾವದ ಜನರಲ್ ಉಪೇಂದ್ರ ದ್ವಿವೇದಿ ಸರಿಯಾದ ಸಂದರ್ಭದಲ್ಲಿ ಸೇನಾ ಪಡೆ ಚುಕ್ಕಾಣಿ ಹಿಡಿಯುತ್ತಿದ್ದಾರೆ.

ನೌಕಾಪಡೆ ಮುಖ್ಯಸ್ಥರು ಮತ್ತು ಇವರು ಸಹಪಾಠಿಗಳು…

ನೌಕಾಪಡೆ ಮುಖ್ಯಸ್ಥರಾಗಿರುವ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಮತ್ತು ಈಗ ಸೇನಾ ಪಡೆ ಮುಖ್ಯಸ್ಥರಾಗಿರುವ ಉಪೇಂದ್ರ ದ್ವಿವೇದಿ ಇಬ್ಬರೂ ಒಂದು ಕಾಲದಲ್ಲಿ ಸಹಪಾಠಿಗಳಾಗಿದ್ದರು. 60 ವರ್ಷ ವಯಸ್ಸಿನ ಈ ಇಬ್ಬರು ಮಧ್ಯಪ್ರದೇಶದ ರೇವಾ ನಗರದ ಸೈನಿಕ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಒಟ್ಟಿಗೆ ಓದಿದ್ದರು. ಈಗ ಐವತ್ತು ವರ್ಷದ ಬಳಿಕ ರಕ್ಷಣಾ ವಿಭಾಗದಲ್ಲಿ ಸಹವರ್ತಿಗಳಾಗಿದ್ದಾರೆ.

ಇದನ್ನೂ ಓದಿ: ಇವಿಎಂ ಅನ್​ಲಾಕ್ ವರದಿ ಪ್ರಕಟಿಸಿದ ಮಿಡ್-ಡೇ, ಹಾಗೂ ಸುಳ್ಳು ಸುದ್ದಿ ಹಂಚಿಕೊಂಡ ಧ್ರುವ್ ರಾಠಿ, ರಾಜದೀಪ್ ಸರ್ದೇಸಾಯಿ ವಿರುದ್ಧ ದೂರು

ರಕ್ಷಣಾ ವಿಭಾಗದಲ್ಲಿ ಮೂರು ಪಡೆಗಳಿವೆ. ಸೇನಾ ಪಡೆ, ವಾಯುಪಡೆ ಮತ್ತು ನೌಕಾಪಡೆ. ವಾಯುಪಡೆಗೆ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಮುಖ್ಯಸ್ಥರಾಗಿದ್ದಾರೆ. ಸೇನಾ ಪಡೆ ಮತ್ತು ನೌಕಾಪಡೆಗೆ ಇಬ್ಬರು ಸಹಪಾಠಿಗಳು ಒಂದೇ ಸಮಯದಲ್ಲಿ ಮುಖ್ಯಸ್ಥ ಸ್ಥಾನ ಅಲಂಕರಿಸಿರುವುದು ಭಾರತದ ಮಿಲಿಟರಿ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

ರಕ್ಷಣಾ ಸಚಿವರ ಅಧಿಕೃತ ವಕ್ತಾರರಾದ ಭರತ್ ಭೂಷಣ್ ಬಾಬು ಈ ವಿಚಾರವನ್ನು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ.

ಚೀನಾ, ಪಾಕಿಸ್ತಾನ ವಿಚಾರದಲ್ಲಿ ಅನುಭವಿ ಉಪೇಂದ್ರ ದ್ವಿವೇದಿ

1964ರ ಜುಲೈ 1ರಂದು ಹುಟ್ಟಿದ ಜನರಲ್ ಉಪೇಂದ್ರ ದ್ವಿವೇದಿ ಅವರು ಚೀನಾ ಮತ್ತು ಪಾಕಿಸ್ತಾನ ವಿಚಾರದಲ್ಲಿ ಸಾಕಷ್ಟು ಕಾರ್ಯಾಚರಣೆಯ ಅನುಭವ ಹೊಂದಿದ್ದಾರೆ. ಚೀನಾ ಗಡಿ ಭಾಗದಲ್ಲಿ ಕಾರ್ಯಾಚರಿಸುವ ನಾರ್ತರ್ನ್ ಕಮಾಂಡ್​ನ ಮುಖ್ಯ ಕಮಾಂಡರ್ ಆಗಿ 2022ರಿಂದ 2024ರವರೆಗೂ ಅವರು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಅಮ್ಮನ ಹೆಸರಲ್ಲಿ ಗಿಡ ನೆಡುವ ಅಭಿಯಾನಕ್ಕೆ ಮನ್ ಕೀ ಬಾತ್​ನಲ್ಲಿ ಕರೆ ನೀಡಿದ ಪ್ರಧಾನಿ ಮೋದಿ

ಭಾರತದ ಸೇನಾ ಪಡೆಯಲ್ಲಿ 13 ಲಕ್ಷ ಸೈನಿಕರಿದ್ದಾರೆ. ವಿಶ್ವದ ಅತಿದೊಡ್ಡ ಸೇನಾ ಪಡೆಗಳಲ್ಲಿ ಭಾರತವೂ ಒಂದು. ಇವತ್ತಿನ ದಿನಗಳಲ್ಲಿ ಯುದ್ಧದ ಸ್ವರೂಪವೇ ಬದಲಾಗುತ್ತಿದೆ. ಕೈಯಲ್ಲಿ ಬಂದೂಕು ಹಿಡಿದು ನುಗ್ಗಿ ಹೊಡೆದಾಡಬೇಕಾದ ಪ್ರಮೇಯ ಬಹಳ ಕಡಿಮೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇತ್ಯಾದಿ ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ಮಿಲಿಟರಿ ಪಡೆಗಳೇ ಬಲಿಷ್ಠ ಎನಿಸುತ್ತವೆ. ಹೊಸ ಸೇನಾ ಮುಖ್ಯಸ್ಥರು ಇಂತಹ ಹೊಸ ತಂತ್ರಜ್ಞಾನ ಅಳವಡಿಕೆ ಬಗ್ಗೆ ಆಸಕ್ತಿ ಹೊಂದಿದವರಾಗಿದ್ದಾರೆ. ಈ ಕಾರಣಕ್ಕೆ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬಹುದು.

ಸದ್ಯ ಜನರಲ್ ಅನಿಲ್ ಚೌಹಾಣ್ ಅವರು ಸಿಡಿಎಸ್ ಆಗಿದ್ದಾರೆ. ರಕ್ಷಣಾ ಮುಖ್ಯಸ್ಥರಾಗಿರುವ ಚೌಹಾಣ್ ಅವರು ಸೇನಾ ಪಡೆ, ವಾಯುಪಡೆ ಮತ್ತು ನೌಕಾಪಡೆಗಳ ಮುಖ್ಯಸ್ಥರೊಂದಿಗೆ ಸಹಕಾರ ಏರ್ಪಡಿಸುತ್ತಾರೆ. ಈ ಮೂರು ಮುಖ್ಯಸ್ಥರಿಗೆ ಸಿಡಿಎಸ್ ಉಸ್ತುವಾರಿ ಆಗಿರುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ
ಮಂಗಳೂರಿನಲ್ಲಿ ಮಳೆ ಅವಾಂತರ: ರಾಜಕಾಲುವೆಯ ತಡೆಗೋಡೆ ಕುಸಿದು ರಸ್ತೆ ಬಂದ್
ಮಂಗಳೂರಿನಲ್ಲಿ ಮಳೆ ಅವಾಂತರ: ರಾಜಕಾಲುವೆಯ ತಡೆಗೋಡೆ ಕುಸಿದು ರಸ್ತೆ ಬಂದ್
ಜಿಯೋ ಬಳಿಕ ಏರ್​ಟೆಲ್ ರೀಚಾರ್ಜ್ ಪ್ಲ್ಯಾನ್​ ಬೆಲೆಯಲ್ಲಿ ಹೆಚ್ಚಳ
ಜಿಯೋ ಬಳಿಕ ಏರ್​ಟೆಲ್ ರೀಚಾರ್ಜ್ ಪ್ಲ್ಯಾನ್​ ಬೆಲೆಯಲ್ಲಿ ಹೆಚ್ಚಳ
ಕಲರ್​ ಬಳಸಿದ್ದ ಕಬಾಬ್, ಚಿಕನ್ ತಂದೂರಿ, ಗೋಬಿ ಸೀಜ್ ಮಾಡಿದ ಅಧಿಕಾರಿಗಳು
ಕಲರ್​ ಬಳಸಿದ್ದ ಕಬಾಬ್, ಚಿಕನ್ ತಂದೂರಿ, ಗೋಬಿ ಸೀಜ್ ಮಾಡಿದ ಅಧಿಕಾರಿಗಳು
ಮುಳುಗಡೆಯಾಗಿರುವ ಸೇತುವೆ ಮೇಲೆ ಪ್ರಾಣದೊಂದಿಗೆ ಬೈಕರ್ಸ್ ಚೆಲ್ಲಾಟ
ಮುಳುಗಡೆಯಾಗಿರುವ ಸೇತುವೆ ಮೇಲೆ ಪ್ರಾಣದೊಂದಿಗೆ ಬೈಕರ್ಸ್ ಚೆಲ್ಲಾಟ
ಬಸ್​ಗೆ ಚಾಲನೆ ನೀಡಿ ಜನರ ಕುಂದು-ಕೊರತೆ ಅಲಿಸಿದ ಶಾಸಕ ಸಿಮೆಂಟ್ ಮಂಜು
ಬಸ್​ಗೆ ಚಾಲನೆ ನೀಡಿ ಜನರ ಕುಂದು-ಕೊರತೆ ಅಲಿಸಿದ ಶಾಸಕ ಸಿಮೆಂಟ್ ಮಂಜು
ಹಾಸನ: ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ
ಹಾಸನ: ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ