ಜ್ಞಾನವಾಪಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಾರಣಾಸಿ ನ್ಯಾಯಾಧೀಶ ರವಿಕುಮಾರ್ ದಿವಾಕರ್ ವರ್ಗಾವಣೆ
ನ್ಯಾಯಾಧೀಶ ದಿವಾಕರ್ ಅವರ ವರ್ಗಾವಣೆಯು ವಾಡಿಕೆಯ ಪ್ರಕ್ರಿಯೆ ಆಗಿದ್ದು ಹೊಸ ಪೋಸ್ಟಿಂಗ್‌ಗೂ ಜ್ಞಾನವಾಪಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವರದಿಗಳು ತಿಳಿಸಿವೆ.

ವಾರಣಾಸಿ: ಜ್ಞಾನವಾಪಿ ಮಸೀದಿ ಪ್ರಕರಣದ (Gyanvapi mosque case) ವಿಚಾರಣೆ ನಡೆಸುತ್ತಿದ್ದ ಮತ್ತು ಮಸೀದಿಯ ವಿಡಿಯೊ ಸಮೀಕ್ಷೆಗೆ ಆದೇಶಿಸಿದ್ದ ವಾರಣಾಸಿ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್(Ravi Kumar Diwakar) ಅವರನ್ನು ಬರೇಲಿಗೆ (Bareilly)ವರ್ಗಾವಣೆ ಮಾಡಲಾಗಿದೆ. ಏತನ್ಮಧ್ಯೆ, ನ್ಯಾಯಾಧೀಶ ದಿವಾಕರ್ ಅವರ ವರ್ಗಾವಣೆಯು ವಾಡಿಕೆಯ ಪ್ರಕ್ರಿಯೆ ಆಗಿದ್ದು ಹೊಸ ಪೋಸ್ಟಿಂಗ್‌ಗೂ ಜ್ಞಾನವಾಪಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವರದಿಗಳು ತಿಳಿಸಿವೆ. ಜೂನ್ 20 ರಂದು ಅಲಹಾಬಾದ್ ಹೈಕೋರ್ಟ್ 121 ಸಿವಿಲ್ ನ್ಯಾಯಾಧೀಶರನ್ನು ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳಿಗೆ ವರ್ಗಾಯಿಸಿತು. ವರ್ಗಾವಣೆಗೊಂಡ ನ್ಯಾಯಾಧೀಶರು ಜುಲೈ 4 ರೊಳಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ ಸಿವಿಲ್ ನ್ಯಾಯಾಧೀಶರಿಗೆ ‘ಇಸ್ಲಾಮಿಕ್ ಅಘಾಜ್ ಮೂವ್‌ಮೆಂಟ್’ ಎಂಬ ಸಂಘಟನೆಯಿಂದ ಬೆದರಿಕೆ ಪತ್ರ ಬಂದಿತ್ತು, ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ನ್ಯಾಯಾಧೀಶ ದಿವಾಕರ್ ಅವರ ಭದ್ರತೆಯನ್ನು ಹೆಚ್ಚಿಸಿತ್ತು.
ಬೆದರಿಕೆ ಪತ್ರವನ್ನು ಸಿಕ್ಕಿದ ನಂತರ ನ್ಯಾಯಾಧೀಶರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ), ಪೊಲೀಸ್ ಮಹಾನಿರ್ದೇಶಕರು ಮತ್ತು ವಾರಣಾಸಿ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದ್ದು, ಶೀಘ್ರ ಕ್ರಮ ಕೈಗೊಂಡ ವಾರಣಾಸಿ ಪೊಲೀಸರು ಬೆದರಿಕೆ ಪತ್ರ ಪ್ರಕರಣದ ತನಿಖೆಗೆ ಆದೇಶಿಸಿದ್ದರು.
“ಹಲವು ಅಟ್ಯಾಚ್ಮೆಂಟ್ಗಳನ್ನು ಹೊಂದಿರುವ ಪತ್ರದ ಬಗ್ಗೆ ಸಿವಿಲ್ ನ್ಯಾಯಾಧೀಶರು ಎಚ್ಚರಿಸಿದ ನಂತರ, ಈ ಬಗ್ಗೆ ತನಿಖೆ ನಡೆಸಲು ಪೊಲೀಸ್ ಉಪ ಕಮಿಷನರ್ (ವರುಣಾ ವಲಯ) ಅವರನ್ನು ನಿಯೋಜಿಸಲಾಗಿದೆ” ಎಂದು ವಾರಣಾಸಿ ಪೊಲೀಸ್ ಕಮಿಷನರ್ ಎ ಸತೀಶ್ ಗಣೇಶ್ ಹೇಳಿದ್ದಾರೆ. ಬೆದರಿಕೆ ಹಿನ್ನಲೆಯಲ್ಲಿ ವಾರಣಾಸಿಯಲ್ಲಿ ಸಿವಿಲ್ ನ್ಯಾಯಾಧೀಶರಿಗೆ ಮತ್ತು ಲಖನೌದಲ್ಲಿರುವ ಅವರ ತಾಯಿಗೆ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದಾರೆ.
ಬೆದರಿಕೆ ಪತ್ರವನ್ನು ಪೋಸ್ಟ್ ಮೂಲಕ ಕಳುಹಿಸಲಾಗಿದೆ ಮತ್ತು ಅದರಲ್ಲಿ ಕಾಸಿಫ್ ಅಹ್ಮದ್ ಸಿದ್ದಿಕಿ ಎಂಬ ಹೆಸರಿದ್ದು, ಈತ ‘ಇಸ್ಲಾಮಿಕ್ ಅಘಾಜ್ ಮೂವ್‌ಮೆಂಟ್’ ಅಧ್ಯಕ್ಷ ಎಂದು ಹೇಳಿಕೊಂಡಿದ್ದಾರೆ. ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಲಾಗಿತ್ತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ