AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯ ಆಭರಣಗಳನ್ನು ಕದ್ದು ಆಕೆಯನ್ನು ಬಾವಿಗೆ ತಳ್ಳಿದ ಕಳ್ಳ, 21 ಗಂಟೆಗಳ ಬಳಿಕ ಬದುಕಿ ಬಂದ ಧೀರ ಮಹಿಳೆ

ಕರೀಂನಗರದಲ್ಲಿ ದರೋಡೆಗೊಳಗಾದ 55 ವರ್ಷದ ಲಕ್ಷ್ಮಿ, ಸಾಕ್ಷಿ ನಾಶಕ್ಕೆ ಕಳ್ಳನಿಂದ ಬಾವಿಗೆ ತಳ್ಳಲ್ಪಟ್ಟರು. 21 ಗಂಟೆಗಳ ಕಾಲ ಕತ್ತಲಲ್ಲಿ, ಕೇಬಲ್ ಆಧಾರದಲ್ಲಿ ಸಾವಿನೊಂದಿಗೆ ಹೋರಾಡಿ ಪವಾಡಸದೃಶವಾಗಿ ಬದುಕುಳಿದರು. ಆಕೆಯ ಧೈರ್ಯದಿಂದ ಆರೋಪಿ ವಿದ್ಯಾರ್ಥಿ ಬಂಧಿತನಾಗಿದ್ದು, ಆನ್‌ಲೈನ್ ಜೂಜಿನ ಸಾಲ ತೀರಿಸಲು ಕೃತ್ಯ ಎಸಗಿರುವುದು ಬಯಲಾಗಿದೆ. ಲಕ್ಷ್ಮಿಯ ಹೋರಾಟ ಒಂದು ಸ್ಫೂರ್ತಿದಾಯಕ ಕಥೆ.

ಮಹಿಳೆಯ ಆಭರಣಗಳನ್ನು ಕದ್ದು ಆಕೆಯನ್ನು ಬಾವಿಗೆ ತಳ್ಳಿದ ಕಳ್ಳ, 21 ಗಂಟೆಗಳ ಬಳಿಕ ಬದುಕಿ ಬಂದ ಧೀರ ಮಹಿಳೆ
ಬಾವಿ
ನಯನಾ ರಾಜೀವ್
|

Updated on: Jul 05, 2026 | 10:55 AM

Share

ಕರೀಂನಗರ, ಜುಲೈ 05: ಕಳ್ಳನೊಬ್ಬ ಒಡವೆ, ಹಣ ದೋಚಿ ಸಾಕ್ಷಿ ನಾಶಪಡಿಸಲು 55 ವರ್ಷದ ಮಹಿಳೆಯೊಬ್ಬರನ್ನು ಕೃಷಿ ಬಾವಿ(Well)ಗೆ ತಳ್ಳಿದ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ. ಆದರೆ, ಸಾವಿನ ದವಡೆಯಿಂದ ಪಾರಾದ ಮಹಿಳೆ ಸುಮಾರು 21 ಗಂಟೆಗಳ ಕಾಲ ಬಾವಿಯಲ್ಲೇ ಹೋರಾಟ ನಡೆಸಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಆಕೆಯ ಧೈರ್ಯದಿಂದಾಗಿ ಪೊಲೀಸರು 21 ವರ್ಷದ ಆರೋಪಿ ವಿದ್ಯಾರ್ಥಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಲಸದ ಆಮಿಷ ಒಡ್ಡಿ ದರೋಡೆ ದಿನಗೂಲಿ ಕಾರ್ಮಿಕರಾದ ತಂಗರಾಲ ಲಕ್ಷ್ಮೀ ಎಂಬುವವರು ಜುಲೈ 1 ರಂದು ಕೆಲಸಕ್ಕೆ ಹೋಗಿ ಮನೆಗೆ ಮರಳದಿದ್ದಾಗ, ಅವರ ಮಗ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಕರಾಳ ಸತ್ಯ ಹೊರಬಿದ್ದಿದೆ. ಆರೋಪಿ ಧಮ್ಮ ದಿನೇಶ್ ರೆಡ್ಡಿ (21) ಎಂಬಾತ ಲಕ್ಷ್ಮೀಗೆ ತನ್ನ ಜಮೀನಿನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ, ಮೊದಲು ರಾಪಿಡೋ ಬೈಕ್‌ನಲ್ಲಿ ಹಾಗೂ ನಂತರ ತನ್ನದೇ ಬೈಕ್‌ನಲ್ಲಿ ಜನರಿಲ್ಲದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಲಕ್ಷ್ಮೀಯನ್ನು ಹೆದರಿಸಿ ಅವರಲ್ಲಿದ್ದ 5 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿಯ ಕಾಲ್ಗೆಜ್ಜೆ ಹಾಗೂ ನಗದನ್ನು ದೋಚಿದ್ದ.

ಸಾಕ್ಷಿ ನಾಶಕ್ಕೆ ಸಂಚು, ಹಗ್ಗ ಕತ್ತರಿಸಿದ ಪಾಪಿ ದರೋಡೆ ಮಾಡಿದ ನಂತರ ಯಾರೂ ತನ್ನನ್ನು ಕಂಡುಹಿಡಿಯಬಾರದೆಂದು ಆರೋಪಿ ದಿನೇಶ್ ರೆಡ್ಡಿ ಆಕೆಯನ್ನು ಆಳವಾದ ಕೃಷಿ ಬಾವಿಗೆ ತಳ್ಳಿದ್ದಾನೆ. ಬಾವಿಗೆ ಬಿದ್ದ ತಕ್ಷಣ ಲಕ್ಷ್ಮೀ ಅಲ್ಲಿದ್ದ ಹಗ್ಗವೊಂದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದ ಕ್ರೂರಿ ಆರೋಪಿ, ಆಕೆ ಹೇಗೊ ಬದುಕುಳಿಯಬಾರದು ಎಂದು ಆ ಹಗ್ಗವನ್ನೂ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದ.

ಮತ್ತಷ್ಟು ಓದಿ: ಮಂಗಳೂರಿನಲ್ಲಿ ಮಹಾ ಅಚ್ಚರಿ: ಬಾವಿಗಳಲ್ಲಿ ಉಕ್ಕಿ ಬಂತು ಡೀಸೆಲ್, ನೀರು ಕುಡಿಯಲಾಗದೆ ಕಾವೂರು ನಿವಾಸಿಗಳು ಕಂಗಾಲು!

ಸಾವು ಗೆದ್ದ ಈಜು ಮತ್ತು ಧೈರ್ಯ ಲಕ್ಷ್ಮೀ ಅವರಿಗೆ ಈಜು ಬರುತ್ತಿದ್ದ ಕಾರಣ ಬಾವಿಯ ನೀರಿನಲ್ಲಿ ತೇಲುತ್ತಾ, ಮೋಟಾರ್ ಪೈಪ್‌ಲೈನ್‌ಗೆ ಜೋಡಿಸಲಾಗಿದ್ದ ಮತ್ತೊಂದು ಕೇಬಲ್ ವೈರ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡರು. ನಿರ್ಜನ ಪ್ರದೇಶವಾದ್ದರಿಂದ ಆಕೆಯ ಕಿರುಚಾಟ ಯಾರಿಗೂ ಕೇಳಿಸಲಿಲ್ಲ. ಹಾಗಾಗಿ ಇಡೀ ರಾತ್ರಿ ಕತ್ತಲಲ್ಲಿ, ಕೇವಲ ಆ ಕೇಬಲ್ ವೈರ್ ಆಸರೆಯಲ್ಲಿ ಸುಮಾರು 20 ರಿಂದ 21 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿದರು. ಮರುದಿನ ಬೆಳಗ್ಗೆ ಸ್ಥಳೀಯ ರೈತರು ಬಾವಿಯಿಂದ ಶಬ್ದ ಕೇಳಿ ಆಕೆಯನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದರು.

ಕರೀಂನಗರ ಪೊಲೀಸ್ ಆಯುಕ್ತ ಗೌಸ್ ಆಲಂ ನೇತೃತ್ವದ ವಿಶೇಷ ತಂಡವು ರಾಪಿಡೋ ಬುಕಿಂಗ್, ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ತಾಂತ್ರಿಕ ತನಿಖೆ ನಡೆಸಿ ಆರೋಪಿ ಧಮ್ಮ ದಿನೇಶ್ ರೆಡ್ಡಿಯನ್ನು ಬಂಧಿಸಿದೆ. 21 ವರ್ಷದ ಈ ಕಾಲೇಜು ವಿದ್ಯಾರ್ಥಿ ಆನ್‌ಲೈನ್ ಜೂಜು ಹಾಗೂ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಬರೋಬ್ಬರಿ 4 ಲಕ್ಷ ರೂಪಾಯಿ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದ. ಆ ಸಾಲ ತೀರಿಸಲು ಈ ದರೋಡೆ ಹಾಗೂ ಕೊಲೆ ಯತ್ನದ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಕದ್ದ ಒಡವೆಗಳನ್ನು ಖರೀದಿಸಿದ ಆಭರಣ ವ್ಯಾಪಾರಿಯನ್ನೂ ಪೊಲೀಸರು ಬಂಧಿಸಿದ್ದು, ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಅಕ್ರಮವಾಗಿ ಸ್ಫೋಟಕಗಳ ಸಾಗಾಟ: 600 ಜಿಲೆಟಿನ್, 100 ಡಿಟೋನೇಟರ್ ಜಪ್ತಿ
ಅಕ್ರಮವಾಗಿ ಸ್ಫೋಟಕಗಳ ಸಾಗಾಟ: 600 ಜಿಲೆಟಿನ್, 100 ಡಿಟೋನೇಟರ್ ಜಪ್ತಿ
ಭಾರಿ ಮಳೆಯಿಂದ ದೆಹಲಿ ವಿಮಾನ ನಿಲ್ದಾಣ ಜಲಾವೃತ; ಪ್ರಯಾಣಿಕರ ಪರದಾಟ
ಭಾರಿ ಮಳೆಯಿಂದ ದೆಹಲಿ ವಿಮಾನ ನಿಲ್ದಾಣ ಜಲಾವೃತ; ಪ್ರಯಾಣಿಕರ ಪರದಾಟ
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಆಯ್ಕೆ
ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಆಯ್ಕೆ
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ