ಸ್ವಚ್ಛ ಭಾರತ ಅಭಿಯಾನದ ಪುನರ್ ವಿಮರ್ಶೆ ಅತಿ ಅವಶ್ಯಕ; ಡಾ ರವಿಕಿರಣ ಪಟವರ್ಧನ
ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯಿತಿಯವರೆಗೆ ಅಧಿಕಾರಿ ವರ್ಗದವರು ಈ ಶೌಚಾಲಯ ನಿರ್ಮಾಣಗಳ ಕಡೆಗೆ ಅತಿ ಗರಿಷ್ಠ ಗಮನವನ್ನು ನೀಡಿ ಶೌಚಾಲಯ ನಿರ್ಮಾಣದಲ್ಲಿ ಎಲ್ಲರೂ ಕೂಡ ತಮ್ಮ , ತಮ್ಮ ಅಳಿಲುಸೇವೆಯನ್ನು ಒದಗಿಸಿದ್ದಾರೆ. ಆದರೆ ಭಾರತೀಯ ಜನರ ಮಾನಸಿಕತೆ ಬದಲಾಗುವಂತಹ ಅವಶ್ಯಕತೆ ಇದೆ.
ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಪ್ರತಿ ಭಾರತೀಯ ಕುಟುಂಬಕ್ಕೆ ಶೌಚಾಲಯ ನಿರ್ಮಾಣ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ನಗರಸಭೆ ಗಳಿಗೆ ಸ್ವಚ್ಛತೆ ಕಾಪಾಡಲು ವಿಶೇಷ ವಾಹನಗಳು, ವಿಶೇಷ ಪರಿಕರಗಳು, ಕಸ ಸಂಗ್ರಹ ವಾಹನಕ್ಕೆ ಮೈಕ್ ವ್ಯವಸ್ಥೆ ಅಲ್ಲದೆ ಸ್ವಚ್ಛ ಸ್ಪರ್ಧೆಗಳು, ಸ್ವಚ್ಛ ಪ್ರಬಂಧ ಸ್ಪರ್ಧೆಗಳು ವಿಶೇಷ ಯಂತ್ರೋಪಕರಣಗಳನ್ನು ಸ್ವಚ್ಛ ಭಾರತ ಅಭಿಯಾನದಡಿಯಲ್ಲಿಕೈಗೊಳ್ಳಲಾಗಿದೆ. ಪ್ರತಿ ಗ್ರಾಮ ಮಟ್ಟದಲ್ಲಿ ಈ ಸ್ವಚ್ಛತೆಯ ಅರಿವು , ಕಸ ಸಂಗ್ರಹಿಸುವ ವಾಹನವನ್ನು ಪ್ರತಿ ಮನೆಯ ಬಾಗಿಲಿಗೂ ಕಳಿಸುವ ವ್ಯವಸ್ಥೆ ಭಾರತ ಸರ್ಕಾರ ರಾಜ್ಯ ಸರ್ಕಾರ ಮಾಡಿದೆ. ಕಸ ಸಂಗ್ರಹದ ವಾಹನದ ಹಾಡು ಇಡೀ ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಡಾಗಿದೆ. ಹಾಗೂ ಹಲವು ಜನರ ಬೆಳಗಿನ ಕೋಳಿಯ ಕೂಗಂತಾಗಿದೆ. ಇಷ್ಟು ವರ್ಷದಲ್ಲಿ ಸಾವಿರಾರು ಕೋಟಿ ರೂಪಾಯಿಯನ್ನು ಭಾರತ್ ಸರ್ಕಾರ, ಇತರ ರಾಜ್ಯ ಸರ್ಕಾರಗಳು ಸ್ವಚ್ಛತೆಯ ಕಡೆಗೆ ಹೆಚ್ಚಿನ ವೆಚ್ಚ ಮಾಡಿವೆ.
ನಾನು ಹಲವು ವರ್ಷಗಳ ಕಾಲ ಮಾಹಿತಿ ಸಂಗ್ರಹಿಸಿದಂತೆ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡುವ ಚಳುವಳಿಗೆ ಭಾರತ್ ಸರಕಾರ ಧುಮುಕಿದ್ದು ಯಾಕೆ ಎಂದು ನೋಡೋಣ ಬಯಲು ಶೌಚದಿಂದ ಅನಾರೋಗ್ಯ ಹೆಚ್ಚುತ್ತಿತ್ತು ಈ ಅನಾರೋಗ್ಯದಿಂದ ಸಾವನ್ನಪ್ಪುವ ಮಕ್ಕಳ ಸಂಖ್ಯೆ ಹೆಚ್ಚಾಗಿತ್ತು. ಜೊತೆಗೆ ಪ್ರತಿ ಭಾರತೀಯ ಮನೆಯ ಮಹಿಳೆಯ ಮಾನವೂ ಕೂಡ ಸಂಕಷ್ಟಕ್ಕೆ ಇಡಾಗುತ್ತಿತ್ತು. ಈ ನೈಸರ್ಗಿಕ ಸಹಜ ವೇಗಗಳ ನಿಯಂತ್ರಣದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿತ್ತು, ಯಾಕೆಂದರೆ ಮುಂಜಾನೆಯ ವೇಳೆ ಅಥವಾ ರಾತ್ರಿ ವೇಳೆ ಆಗುವವರೆಗೆ ಮಹಿಳೆ ಅಥವಾ ಪುರುಷರು ತನ್ನ ಶೌಚ ವ್ಯವಸ್ಥೆಗಾಗಿ ಕಾಯಬೇಕಿತ್ತು. ಆಯುರ್ವೇದದಲ್ಲಿ ಹೇಳಿದಂತೆ ವೇಗಾನ್ ನ ಧಾರಯೇತ ಅಂದರೆ ನೈಸರ್ಗಿಕ ಈ ವೇಗಗಳನ್ನು ತಡೆಯಬಾರದು ತಡೆದಲ್ಲಿ ಈ ಕಾರಣದಿಂದ ಹಲವು ರೋಗಗಳಿಗೆ ಕಾರಣ ಇದು ಆಗುವ ಸಾಧ್ಯತೆ ಇದೆ ಎನ್ನುವುದು. ಇವೆಲ್ಲವೂಗಳನ್ನ ದೂರ ಮಾಡಲು ಒಂದೇ ಉಪಾಯ ಎಂದು ಸರಕಾರ ಮನಗಂಡು ಶೌಚಾಲಯ ಪ್ರತಿ ಮನೆಗೂ ಅವಶ್ಯ ಎಂಬ ಯೋಚನೆಗೆ ಮುಂದಾಯಿತು. ಇಷ್ಟು ವರ್ಷಗಳಲ್ಲಿ ಹಲವು ಮನೆಗಳಲ್ಲಿ ಶೌಚಾಲಯ ನಿರ್ಮಾಣ ಈಗಾಗಲೇ ಆಗಿದೆ ಇನ್ನು ಕೆಲವು ಕುಟುಂಬಗಳು ಸರಕಾರದ ಮಹತ್ವದ್ದೇಶವನ್ನು ಅರಿತು ಶೌಚಾಲಯವನ್ನು ಬಳಸುತ್ತಿದ್ದಾರೆ ಹೇಳುವುದು ಅಷ್ಟೇ ಮಹತ್ವದ ಸಂಗತಿ.
ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯಿತಿಯವರೆಗೆ ಅಧಿಕಾರಿ ವರ್ಗದವರು ಈ ಶೌಚಾಲಯ ನಿರ್ಮಾಣಗಳ ಕಡೆಗೆ ಅತಿ ಗರಿಷ್ಠ ಗಮನವನ್ನು ನೀಡಿ ಶೌಚಾಲಯ ನಿರ್ಮಾಣದಲ್ಲಿ ಎಲ್ಲರೂ ಕೂಡ ತಮ್ಮ , ತಮ್ಮ ಅಳಿಲುಸೇವೆಯನ್ನು ಒದಗಿಸಿದ್ದಾರೆ. ಆದರೆ ಭಾರತೀಯ ಜನರ ಮಾನಸಿಕತೆ ಬದಲಾಗುವಂತಹ ಅವಶ್ಯಕತೆ ಇದೆ. ನಗರಗಳಲ್ಲಿ ಹೆಚ್ಚಿನ ಜನರು ಶೌಚಾಲಯವನ್ನು ಬಳಸುತ್ತಿದ್ದಾರೆ ಗ್ರಾಮ ಮಟ್ಟದಲ್ಲಿ ಜನರು ಇದಕ್ಕಿನ್ನು ಒಪ್ಪುತ್ತಿಲ್ಲ, ಮನೆಯಲ್ಲಿ ಶೌಚಾಲಯ ನಿರ್ಮಾಣವಾಗಿದೆ ಎರಡು ದಿನಗಳ ಹಿಂದೆ ಮುಂಜಾನೆ ಬೇಗ ಹಾಗೂ ರಾತ್ರಿಯ ಸಮಯದಲ್ಲಿ ನಾನು ಉತ್ತರ ಕರ್ನಾಟಕದ ಹಲವು ಕಡೆ ಪ್ರಯಾಣ ಮಾಡುವಂತಹ ಸಂದರ್ಭದಲ್ಲಿ ನಮ್ಮ ಭಾರತೀಯ ಮಾನಸಿಕತೆ ಬದಲಾಗುವಂತೆ ಮಾಡಲು ಭಗೀರಥ ಪ್ರಯತ್ನ ಮತ್ತು ಚಿಂತನೆ ಸರಕಾರ ಮಾಡಬೇಕಿದೆ ಎನ್ನುವುದು ರಸ್ತೆಯ ಮೇಲೆ ಪ್ರಯಾಣಿಸುವಾಗಲೇ ಗೊತ್ತಾಗುತ್ತಿತ್ತು. ಮೇಲೆ ಹೇಳಿದ ತೊಂದರೆ ತಾಪತ್ರಗಳನ್ನು ದೂರ ಮಾಡಲು ಶೌಚಾಲಯ ಯೋಜನೆ ಸರಕಾರ ಜಾರಿಗೆ ತಂದಿದೆ .
ಈ ಶೌಚಾಲಯವನ್ನು ಬಳಸುವಂತಹ ವಿಚಾರ ಪ್ರತಿ ಮನ ಮನದಲ್ಲೂ ಬರುವಂತೆ ಮಾಡಬೇಕಿದೆ ಇದಕ್ಕಾಗಿ ಸರಕಾರ ವಿಧ್ಯಾಪನಗಳನ್ನ ಕೊಟ್ಟು ಅರಿವು ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಮಾಡಿದರು ಕೂಡ ಇದು ಹಳ್ಳಿಗಾಡಿನ ಜನರ ಮನಸ್ಸಿಗೆ ಇನ್ನೂ ತಲುಪಿಲ್ಲವೇನೋ ಎಂಬ ಅನುಮಾನ ನನ್ನದು. ಆದ್ದರಿಂದ ಇನ್ನು ಸರ್ಕಾರ ಚಾಣಕ್ಯ ನೀತಿಯನ್ನ ಬಳಸುವ ಅವಶ್ಯಕತೆ ಇದೆ ಶೌಚಾಲಯ ಸರಕಾರದ ಸಹಾಯದಿಂದ ನಿರ್ಮಾಣ ಮಾಡಿಕೊಂಡವರು ಕಡ್ಡಾಯವಾಗಿ ಶೌಚಾಲಯವನ್ನು ಬಳಸಲೇಬೇಕು ಬಳಸದೆ ಇರುವ ಸಂದರ್ಭ ದಲ್ಲಿ ಅವರಿಗೆ ಸರಕಾರ ನೀಡುವಂತಹ ಉಚಿತ ಪಡಿತರವನ್ನು ಅಲ್ಲದೆ ಸರ್ಕಾರ ನೀಡುವಂತಹ ಎಲ್ಲಾ ಭಾಗ್ಯ ಯೋಜನೆಗಳನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎನ್ನುವ ಆಜ್ಞೆ ಮುಂಬರುವ ದಿನಗಳಲ್ಲಿ ಬರಲಿದೆ ಎಂಬ ಗುಮಾನಿಯನ್ನು ಪ್ರಬಲವಾಗಿ ಎಲ್ಲಾ ಕಡೆಗೆ ಪಸರಿಸಬೇಕು. ಹೇಗೆ ಹತ್ತು ರೂಪಾಯಿಯ ನಾಣ್ಯ ಬಳಕೆಯನ್ನು ನಿಲ್ಲಿಸಿದೆ ಎನ್ನುವಂತಹ ಅನವಶ್ಯಕ ಗುಲ್ಲು ಎಬ್ಬಿಸಲಾಯಿತು ಅದೇ ರೀತಿ ನಿರ್ಮಾಣವಾದ ಅಂತಹ ಶೌಚಾಲಯವನ್ನು ಬಳಸದೆ ಇದ್ದಲ್ಲಿ ಪಡಿತರವನ್ನ ಹಾಗೂ ಸರಕಾರದ ಎಲ್ಲ ಭಾಗ್ಯ ಯೋಜನೆಗಳನ್ನು ಸರ್ಕಾರ ನಿಲ್ಲಿಸುವ ಸುದ್ದಿ ಪಸರಿಸುವಂತಹ ಬೃಹತ್ ಪ್ರಯತ್ನಕ್ಕೆ ಗಮನಹರಿಸಬೇಕಿದೆ.
ಇನ್ನು ಕೆಲವರಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಶೌಚಾಲಯವೇನೋ ಸರ್ಕಾರ ಕೊಟ್ಟಿದೆ ಆದರೆ ನೀರ್ ಯಾರ್ ಕೊಡೋರು ? ಹೇಳುವಂತ ಉತ್ತರ ಕೇಳಿ ಬಂದಿತು ಅದಕ್ಕೂ ಕೂಡ ಪ್ರತಿ ಮನೆಮನೆಗೂ ನೀರಿನ ವ್ಯವಸ್ಥೆಯನ್ನು ಸರ್ಕಾರ ಮಾಡುವ ಪ್ರಯತ್ನದಲ್ಲಿದೆ ಹೇಳುವುದು ಅಷ್ಟೇ ವಿಧಿತವಾದಂತ ಸಂಗತಿ. ಸರಕಾರ ಶೌಚಾಲಯ ಯೋಜನೆಯ ಯಾಕೆ ಮೂಲಭೂತವಾಗಿ ಜಾರಿಗೆ ತಂದಿದ್ದು ಎನ್ನುವುದು ಮನ ಮನದಲ್ಲಿ ಶೌಚಾಲಯ ನಿರ್ಮಾಣ ಹಾಗೂ ಭಾರತೀಯರ ಆರೋಗ್ಯ ರಕ್ಷಣೆಗೆ, ಮಾನ ರಕ್ಷಣೆಗೆ ಕಾರಣ ಎನ್ನುವುದು ಪ್ರತಿಯೊಬ್ಬರು ಮನಗಾಣ ಬೇಕಿದೆ. ಆಗ ಮಾತ್ರ ಶೌಚಾಲಯ ನಿರ್ಮಾಣ ಸ್ವಚ್ಛ ಭಾರತದ ಮೂಲ ಉದ್ದೇಶ ಈಡೇರಿದಂತೆ ಆಗುವುದು.
ಲೇಖನ : ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು, ಶಿರಸಿ