Horoscope: ನಿಮ್ಮದೇ ಕಾರ್ಯವಾದರೂ ನಿಮಗೆ ಅದರ ಯಶಸ್ಸು ಸಿಗದು

25 ಜನವರಿ​​ 2025: ಶನಿವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಇಂದು ಅನೇಕ ಕೆಲಸವನ್ನು ಒತ್ತಡವಿಲ್ಲದೇ ನಿರ್ವಹಿಸುವಿರಿ. ಹಣವನ್ನು ಅಲ್ಪ ಹೂಡಿಕೆ ಮಾಡಿ ಪರೀಕ್ಷಿಸಿಕೊಳ್ಳಿ. ಹಾಗಾದರೆ ಜನವರಿ 25ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ನಿಮ್ಮದೇ ಕಾರ್ಯವಾದರೂ ನಿಮಗೆ ಅದರ ಯಶಸ್ಸು ಸಿಗದು
ನಿಮ್ಮದೇ ಕಾರ್ಯವಾದರೂ ನಿಮಗೆ ಯಶಸ್ಸು ಸಿಗದು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 25, 2025 | 12:12 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ಧ್ರುವ, ಕರಣ: ಬವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 27 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09: 54 ರಿಂದ 11:20ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:11ರಿಂದ 03:36 ರವರೆಗೆ, ಗುಳಿಕ ಬೆಳಿಗ್ಗೆ 07:03 ರಿಂದ 08:28 ರವರೆಗೆ.

ತುಲಾ ರಾಶಿ: ಕುಟುಂಬವನ್ನು ಪಾರದರ್ಶಕವಾಗಿ ಇಟ್ಟುಕೊಳ್ಳಬೇಕಾಗುವುದು. ವಿದೇಶ ಪ್ರವಾಸದ ವಾರ್ತೆಯಿಂದ ಸಂತಸ. ಇಂದು ಅನೇಕ ಕೆಲಸವನ್ನು ಒತ್ತಡವಿಲ್ಲದೇ ನಿರ್ವಹಿಸುವಿರಿ. ಹಣವನ್ನು ಅಲ್ಪ ಹೂಡಿಕೆ ಮಾಡಿ ಪರೀಕ್ಷಿಸಿಕೊಳ್ಳಿ. ಸಂತೋಷದ ಸುದ್ದಿಯನ್ನು ಆನಂದಿಸುವ ಮನಃಸ್ಥಿತಿ ಇಂದು ನಿಮ್ಮಲ್ಲಿ ಇರದು. ಸದಾ ಅವಕಾಶಗಳನ್ನು ಹುಡುಕುತ್ತಲೇ ಇರುವಿರಿ. ಸ್ನೇಹಿತರ ಮೇಲೆ ಕೂಗಾಡುವಷ್ಟು ಸಲುಗೆ ಬೇಡ. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದೇ ಎಲ್ಲರ ಜೊತೆ ವ್ಯವಹರಿಸಿ. ಉನ್ನತ ಸ್ಥಾನದ ನಿರೀಕ್ಷೆಯುಳ್ಳವರು ವಿರುದ್ಧ ದಿಕ್ಕಿನಲ್ಲಿ ಹೋದರೆ ಆಗದು. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉಪಯೋಗಕ್ಕೆ ಬರಲಿದೆ. ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಸರಿಮಾಡಿಕೊಳ್ಳಿ.

ವೃಶ್ಚಿಕ ರಾಶಿ; ದೂರದ ವಿವಾಹ ಸಂಬಂಧವಿಂದು ನಿಮಗೆ ಕೂಡಿಬರಲಿದೆ. ಅದನ್ನು ಗೃಹಸ್ಥಿತಿಗೆ ಅನುಸಾರವಾಗಿ ಮುಂದುವರಿಯಿರಿ. ನಿಮ್ಮ ಆಲೋಚನೆಗಳನ್ನು ಅನೇಕ ಜನರ ಜೊತೆ ಹಂಚಿಕೊಳ್ಳುವಿರಿ. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವು ಬರಬಹುದು. ಕುಟುಂಬದ ಜೊತೆ ಸುಳ್ಳು ಹೇಳಿ, ನಿಮ್ಮ ನಿಜವಾದ ಕಾರ್ಯವನ್ನು ಮುಚ್ಚಿಡುವಿರಿ. ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವಿರಿ. ಯಾರಿಗೂ ನೋವಾಗದಂತೆ ಎಚ್ಚರಿಕೆಯಿಂದ ಮುನ್ನಡೆಯುವುದು ಶ್ರೇಯಸ್ಕರ. ನೂತನ ಉದ್ಯಮಕ್ಕೆ ಹೆಚ್ಚು ಆದ್ಯತೆ ಇರಲಿದೆ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ ನಿಮ್ಮ ಖರ್ಚಿನ ಅಂದಾಜು ತಪ್ಪಿಹೋಗಬಹುದು. ಅನಿರೀಕ್ಷಿತವಾಗಿ ಪ್ರಭಾವಿ ವ್ಯಕ್ತಿಗಳ ಸಂಪರ್ಕವು ಸಿಗುವುದು. ಕುಟುಂಬದಲ್ಲಿ ನಿಮ್ಮ ಪ್ರತಿ ಮಾತನ್ನು ಅನೇಕ ಅರ್ಥದಲ್ಲಿ ಗ್ರಹಿಸಬಹುದು. ವಾಹನ ಸವಾರಿಯನ್ನು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮದೇ ಕಾರ್ಯವಾದರೂ ನಿಮಗೆ ಅದರ ಸಂಪೂರ್ಣ ಯಶಸ್ಸು ಸಿಗದು.

ಧನು ರಾಶಿ: ಸಹಜವಾಗಿಯೇ ನ್ಯಾಯಾಲಯಕ್ಕೆ ಹೋದ ವಿಚಾರವು ವಿಲಂಬವಾಗಿದ್ದು, ಅದು ಮತ್ತು ನಿದಾನ ಎನಿಸಿ, ಬೇಸರ ಕೊಡಬಹುದು. ಪ್ರೀತಿಯನ್ನು ನೀವು ಬಹಳ ಸೂಕ್ಷ್ಮವಾಗಿ ಮುಂದುವರಿಸಬೇಕಾಗುವುದು. ವ್ಯಾವಹಾರಿಕ ಜಾಣ್ಮೆಯನ್ನು ನೀವು ಇಟ್ಟುಕೊಂಡು ಲಾಭವನ್ನು ಪಡೆಯುವಿರಿ. ನಿಮಗೆ ವಿದ್ಯೆಯನ್ನು ನೀಡಿದವರು ಅನೇಕ ವರ್ಷಗಳ ಅನಂತರ ಸಿಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ನಿಮ್ಮ ಶ್ರಮ ಬೇಕಾಗುವುದು. ನಿಮ್ಮ ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗಬಹುದು. ಆಸ್ತಿಯನ್ನು ಮಾಡುವ ಚಿಂತನೆ ಅಧಿಕವಾಗಿರುವುದು. ಹಠದ ಸ್ವಭಾವವು ಎಲ್ಲರ ಪ್ರೀತಿಯಿಂದ ನಿಮ್ಮನ್ನು ದೂರಮಾಡಬಹುದು. ಇಂದು ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು. ನಿಮ್ಮ ಇಷ್ಟವಾದ ವಸ್ತುವು ಕಣ್ಮೆಯಾರಿಗಿರುವುದು ಇಂದು ಗೊತ್ತಾಗುವುದು. ಇಂದು ಆರ್ಥಿಕ ಸಹಾಯವನ್ನು ಇನ್ನೊಬ್ಬರಿಂದ ಪಡೆಯುವಿರಿ.

ಮಕರ ರಾಶಿ: ನಿಮ್ಮ ಉದ್ಯೋಗಕ್ಕೆ ಪ್ರಭಾವಿಗಳ ಆಗಮನ. ವ್ಯಾಪಾರವು ಲಾಭದತ್ತ ಮುಖ ಮಾಡುವುದು. ಆದರೆ ಅದೃಷ್ಟ ನಿಮ್ಮ ಜೊತೆ ಇದೆ ಎಂದು ಏನೆಲ್ಲ ಮಾಡಿಕೊಳ್ಳುವುದು ಬೇಡ. ಕುಟುಂಬದ ಕಡೆಯಿಂದ ಸಂತೋಷದ ಮಾತುಗಳು ಇರುವುದು. ನಿಮ್ಮ ಕೆಲಸದಿಂದ ಉತ್ತಮ ಹೆಸರು ಕುಟುಂಬಕ್ಕೆ ಸಿಗುವುದು. ನೀವೇ ಕೊಟ್ಟ ಹಣವನ್ನು ಪುನಃ ಕೇಳಲು ಮುಜುಗರವಾದೀತು. ಸಾಲದ ಬಗ್ಗೆ ನಿಮ್ಮನ್ನು ಮತ್ತೆ ಮತ್ತೆ ಎಚ್ಚರಿಸಬೇಕಾಗುವುದು. ಉನ್ನತ ಶಿಕ್ಷಣವನ್ನು ಪಡೆಯಲು ನೀವು ಸಫಲರಾಗಬಹುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ತಲೆಕೊಡಬೇಕಾದೀತು. ಭೂಮಿಯ ವ್ಯವಹಾರದಲ್ಲಿ ಸುಮ್ಮನೆ ಕೆಲವನ್ನು ನಿಮ್ಮ ಮೇಲೆ ಬರುವಂತೆ ಮಾಡಿಕೊಳ್ಳುವಿರಿ. ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳು ಕೇಳಿಬರಬಹುದು. ತುರ್ತು ಹಣವು ಬೇಕಾಗಿದ್ದು ಸಾಲವನ್ನು ಮಾಡಲು ನಿಮಗೆ ಭಯವಾಗಬಹುದು. ನಿಮ್ಮ ಸ್ವಂತ ಕೆಲಸಕ್ಕಾಗಿ ವಿರಾಮ ಸಿಗದು. ಸಂಗಾತಿಯನ್ನು ತಮಾಷೆ ಕೋಪ ತರಿಸುವಿರಿ.

ಕುಂಭ ರಾಶಿ: ನೀವು ಮಾಡಬೇಕಾದ ಕಾರ್ಯವನ್ನು ಬಹಳ ಪರಿಶ್ರಮದಿಂದ ಮಾಡುವಿರಿ. ನೀವು ಇಂದು ಅನೇಕರ ಸಹಕಾರದ ಜೊತೆ ಜವಾಬ್ದಾರಿಯಲ್ಲಿ ಯಶಸ್ವಿಯಾಗುವಿರಿ. ನಿಮ್ಮೆದುರೇ ನಿಮ್ಮ ಸಹೋದರರನ್ನು ಹೊಗಳುವುದು ನಿಮಗೆ ಆಗದು. ಯಾರ ಜೊತೆಗಾದರೂ ವೈಮನಸ್ಯವಿದ್ದರೆ ಕುಳಿತು ಮಾತನಾಡಿಕೊಂಡು ಸರಿ ಮಾಡಿಕೊಳ್ಳುವಿರಿ. ನಿಮಗೆ ನಿಮ್ಮವರ ಭಾವವನ್ನು ಸರಿಯಾಗಿ ಅಂದಾಜು ಮಾಡಲಾಗದು. ಹೊಸ ಕಾರ್ಯವನ್ನು ಆರಂಭಿಸಲು ವಿಘ್ನ ಬಾರದೇ ಇದ್ದರೆ, ಮುಂದೆ ಅದು ಬರುವ ಸೂಚನೆಯಾಗಲಿದೆ. ಮಾಡಲು ಬಂಧುಗಳನ್ನು ನೀವು ಆಡಿಕೊಳ್ಳುವಿರಿ. ಯಾರ ಮೇಲಾದರೂ ದೋಷಾರೋಪ ಮಾಡುವ ಸಂಭವವಿದೆ. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಅಂತರ್ಜಾಲದಿಂದ ನಿಮಗೆ ಕೆಲಸಕ್ಕೆ ಕರೆ ಬರಬಹುದು. ನಿರಾಕರಿಸುವುದು ಉತ್ತಮ. ಸ್ನೇಹವು ಸಡಿಲವಾಗುವ ಸಾಧ್ಯತೆ ಇದೆ.

ಮೀನ ರಾಶಿ: ವಿನ್ಯಾಸದ ವೃತ್ತಿಯವರಿಗೆ ಔದ್ಯೋಗಿಕ ಹಿನ್ನಡೆ. ಇಂದು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ಮಾಡುವರು. ಸಾಲವನ್ನು ಕೇಳಿ ಬಂದವರಿಗೆ ಅಲ್ಪವನ್ನು ಮಾತ್ರ ಕೊಡಿ. ವ್ಯಾಪಾರವು ಕೆಲವು ತಿರುವನ್ನು ಪಡೆಯಬಹುದು. ಆತ್ಮೀಯರ ಬಗ್ಗೆ ಕಾಳಜಿ ಹೆಚ್ಚಿರುವುದು. ಚರಾಸ್ತಿಯ ನಷ್ಟಕ್ಕೆ ನೀವೇ ಕಾರಣವಾಗುವಿರಿ. ಆಸ್ತಿಯ ಕಡತಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯ. ವೃತ್ತಿಯ ಸ್ಥಳದಲ್ಲಿ ಬದಲಾವಣೆಯನ್ನು ಬಯಸುವಿರಿ. ನಿಮ್ಮ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲಿದೆ. ಸೇವಾ ಮನೋಭಾವದಿಂದ ಮಾಡುವ ಕೆಲಸಕ್ಕೆ ನಿಮಗೆ ಗೌರವ ಪ್ರಾಪ್ತವಾಗಲಿದೆ. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡುವಿರಿ. ತಾಯಿಯ ಕಡೆಯ ಬಂಧುಗಳಿಂದ ನಿಮಗೆ ಸಹಾಯವು ಸಿಗಲಿದೆ.