ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ದಾಂಪತ್ಯದಲ್ಲಿ ಬಿರುಕು?
ಅರ್ಜುನ್ ಅವರ ಮೊದಲ ಪುತ್ರಿ, ನಟಿ ಐಶ್ವರ್ಯಾ ಸಹ ಭಾಗಿ ಆಗಿದ್ದರು. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಐಶ್ವರ್ಯಾ ಸರ್ಜಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಐಶ್ವರ್ಯಾ ಸರ್ಜಾ ಅವರು ಕೆಲ ವರ್ಷಗಳ ಹಿಂದಷ್ಟೆ ತಮಿಳು ನಟ ಉಮಾಪತಿ ಅವರನ್ನು ವಿವಾಹವಾಗಿದ್ದರು. ಆದರೆ ಈಗ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ.

ಮುಖ್ಯಾಂಶಗಳು
- ಅರ್ಜುನ್ ಸರ್ಜಾ ಮೊದಲ ಮಗಳು ಐಶ್ವರ್ಯಾ ಸರ್ಜಾ
- ಐಶ್ವರ್ಯಾ ಸರ್ಜಾ ದಾಂಪತ್ಯದಲ್ಲಿ ಬಿರುಕು
- ಐಶ್ವರ್ಯಾ ಸರ್ಜಾ-ಉಮಾಪತಿ ರಾಮಯ್ಯ ವಿವಾಹ
ಖ್ಯಾತ ಪ್ಯಾನ್ ಇಂಡಿಯಾ ನಟ ಅರ್ಜುನ್ ಸರ್ಜಾ ಅವರ ದ್ವಿತೀಪ ಪುತ್ರಿ ಅಂಜನಾ ಅವರ ವಿವಾಹ ಇತ್ತೀಚೆಗಷ್ಟೆ ನಡೆಯಿತು. ಅರ್ಜುನ್ ಸರ್ಜಾ ಅವರ ಕುಟುಂಬ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ವಿವಾಹ ಕಾರ್ಯದಲ್ಲಿ ಅರ್ಜುನ್ ಅವರ ಮೊದಲ ಪುತ್ರಿ, ನಟಿ ಐಶ್ವರ್ಯಾ ಸಹ ಭಾಗಿ ಆಗಿದ್ದರು. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಐಶ್ವರ್ಯಾ ಸರ್ಜಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಐಶ್ವರ್ಯಾ ಸರ್ಜಾ ಅವರು ಕೆಲ ವರ್ಷಗಳ ಹಿಂದಷ್ಟೆ ತಮಿಳು ನಟ ಉಮಾಪತಿ ಅವರನ್ನು ವಿವಾಹವಾಗಿದ್ದರು. ಆದರೆ ಈಗ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ.
ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಸರ್ಜಾ ಅವರು ತಮಿಳು ನಟ ಉಮಾಪತಿ ರಾಮಯ್ಯ ಅವರೊಟ್ಟಿಗೆ 2024 ರಲ್ಲಿ ವಿವಾಹವಾಗಿದ್ದರು. ಆದರೆ ಇದೀಗ ಈ ಜೋಡಿಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ದ್ವಿತೀಯ ಪುತ್ರಿಯ ಮದುವೆಯಲ್ಲಿ ಉಮಾಪತಿ ಭಾಗಿ ಆಗಿಲ್ಲ ಎನ್ನಲಾಗಿದ್ದು, ಚಿತ್ರಗಳಲ್ಲಿ ಸಹ ಉಮಾಪತಿ ಅವರು ಕಾಣಿಸಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಐಶ್ವರ್ಯಾ ಹಾಗೂ ಉಮಾಪತಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿತ್ತು.
ಇದನ್ನೂ ಓದಿ:ವಿದೇಶಿ ವರನೊಟ್ಟಿಗೆ ಅರ್ಜುನ್ ಸರ್ಜಾ ಕಿರಿಯ ಪುತ್ರಿಯ ವಿವಾಹ: ಇಲ್ಲಿವೆ ಚಿತ್ರಗಳು
ಆದರೆ ಉಮಾಪತಿ ರಾಮಯ್ಯ ಅವರ ತಂದೆ ಖ್ಯಾತ ಹಾಸ್ಯನಟ ತಂಬಿ ರಾಮಯ್ಯ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ವಿಚ್ಛೇದನ ಸುದ್ದಿ ಹಬ್ಬಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಉಮಾಪತಿ ಹಾಗೂ ಐಶ್ವರ್ಯಾ ಅವರು ಸಂತೋಷದಿಂದ ಇದ್ದಾರೆ. ಇಬ್ಬರೂ ಚೆನ್ನೈನ ನಿವಾಸದಲ್ಲಿ ಒಟ್ಟಿಗೆ ಇದ್ದಾರೆ. ಅವರ ದಾಂಪತ್ಯದ ಬಗ್ಗೆ ಯಾರೂ ಸುಳ್ಳು ಸುದ್ದಿಗಳನ್ನು ಹರಿಬಿಡಬಾರದು ಎಂದು ಕೈಜೋಡಿಸಿ ಮನವಿ ಮಾಡಿದ್ದಾರೆ. ತಂಬಿ ರಾಮಯ್ಯ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿ ಅಂಜನಾ ಅವರು ಇತ್ತೀಚೆಗಷ್ಟೆ ಇಟಲಿಯಲ್ಲಿ ಇಸಾಯಾ ನಟ್ಟರ್ ಎಂಬ ಇಟಲಿ ಪ್ರಜೆಯನ್ನು ವಿವಾಹವಾಗಿದ್ದಾರೆ. ಇವರ ವಿವಾಹ ಇಟಲಿಯಲ್ಲೇ ನಡೆದಿದ್ದು, ಅರ್ಜುನ್ ಸರ್ಜಾ ಅವರ ಕುಟುಂಬ ವಿವಾಹದಲ್ಲಿ ಭಾಗಿ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




