AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಲಕ್ಷ್ಮೀ ಫಲಾನುಭವಿಗಳೊಂದಿಗೆ ಸಿಎಂ ಸಂವಾದ: ಮಹಿಳೆಯರಿಗೆ ಮಹತ್ವದ ಸಲಹೆ ನೀಡಿದ ಡಿಕೆಶಿ

ಸಿಎಂ ಡಿಕೆ ಶಿವಕುಮಾರ್​​ ಇಂದು ಗೃಹಕಚೇರಿ ಕೃಷ್ಣಾದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಕರಕುಶಲ ಕರ್ಮಿಯೊಬ್ಬರು ಗೃಹಲಕ್ಷ್ಮೀ ಹಣದಿಂದ ತಯಾರಿಸಿದ ತೊಟ್ಟಿಲನ್ನು ಸಿಎಂ ಖರೀದಿಸಿದರು. ಮೀಟರ್ ಬಡ್ಡಿ, ಚಿಟ್ ಫಂಡ್ ಆಮಿಷಗಳಿಗೆ ಬಲಿಯಾಗದಂತೆ ಸಿಎಂ ಫಲಾನುಭವಿಗಳಿಗೆ ಸಲಹೆ ನೀಡಿದ್ದಾರೆ.

ಗೃಹಲಕ್ಷ್ಮೀ ಫಲಾನುಭವಿಗಳೊಂದಿಗೆ ಸಿಎಂ ಸಂವಾದ: ಮಹಿಳೆಯರಿಗೆ ಮಹತ್ವದ ಸಲಹೆ ನೀಡಿದ ಡಿಕೆಶಿ
ಫಲಾನುಭವಿಗಳ ಜೊತೆ ಸಿಎಂ ಸಂವಾದ
ಈರಣ್ಣಾ ಬಸವಾ
| Edited By: |

Updated on: Nov 06, 2026 | 3:21 PM

Share

ಮುಖ್ಯಾಂಶಗಳು

  • ಗೃಹಲಕ್ಷ್ಮೀ ಫಲಾನುಭವಿಗಳ ಜೊತೆ ಸಿಎಂ ಸಂವಾದ
  • ಗೃಹಲಕ್ಷ್ಮೀಯಿಂದ ಆರ್ಥಿಕ ಸಹಾಯವಾಗಿದೆ ಎಂದ ಫಲಾನುಭವಿ
  • ಮೀಟರ್ ಬಡ್ಡಿ ಹಣದ ಆಸೆಗೆ ಬೀಳದಂತೆ ಸಲಹೆ

ಬೆಂಗಳೂರು, ನವೆಂಬರ್​​ 06: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮೂರು ಕಂತಿನ ಹಣ ಬಿಡುಗಡೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್​​ ಸರ್ಕಾರ ಈಗಾಗಲೇ ಭರ್ಜರಿ ಗಿಫ್ಟ್​ ನೀಡಿದೆ. ಈ ಬೆನ್ನಲ್ಲೇ ಇಂದು ಸಿಎಂ ಡಿಕೆ ಶಿವಕುಮಾರ್​, ಗೃಹಕಚೇರಿ ಕೃಷ್ಣಾದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ತಾಯಂದಿರು ಮತ್ತು ಸಹೋದರಿಯರೊಂದಿಗೆ ಮುಕ್ತವಾಗಿ ಸಂವಾದ ನಡೆಸಿ, ಅವರ ಅನಿಸಿಕೆಗಳನ್ನು ಆಲಿಸಿದ್ದಾರೆ.

ಸರ್ಕಾರ ಮೊನ್ನೆಯಷ್ಟೇ 3 ತಿಂಗಳ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡಿದೆ. ಆ ಮೂಲಕ ದೀಪಾವಳಿ ಸಮಯದಲ್ಲಿ ಮಹಿಳೆಯರಿಗೆ ಆರ್ಥಿಕ ನೆರವು ನೀಡಿದೆ. ಇನ್ನು ಗೃಹಲಕ್ಷ್ಮೀ ಯೋಜನೆಯ ಪ್ರಯೋಗದ ಬಗ್ಗೆ ಸಂವಾದದಲ್ಲಿ ಮಹಿಳಾ ಫಲಾನುಭವಿಗಳಿಂದ ಸಿಎಂ ಡಿಕೆ ಶಿವಕುಮಾರ್​ ಮಾಹಿತಿ ಪಡೆದರು.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿ: ಹಾರೈಸಿದ ಫಲಾನುಭವಿ

ಈ ವೇಳೆ ಮಾತನಾಡಿದ ಫಲಾನುಭವಿಯೊಬ್ಬರು, ‘ಗೃಹಲಕ್ಷ್ಮೀ ಯೋಜನೆ ಹಣದಲ್ಲಿ ಮಕ್ಕಳನ್ನು ಓದಿಸಿದ್ದೇನೆ. ದ್ವಿತೀಯ ಪಿಯುಸಿಯಲ್ಲಿ ಮಗ ಶೇ.98ರಷ್ಟು ಅಂಕ ಪಡೆದಿದ್ದಾನೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿ’ ಹಾರೈಸಿದರು.

ಗೃಹಲಕ್ಷ್ಮೀ ಹಣದಿಂದ ವ್ಯಾಪಾರ ಆರಂಭಿಸಿದ ಫಲಾನುಭವಿ 

ಮತ್ತೊಬ್ಬರು ಫಲಾನುಭವಿ ಮಾತನಾಡಿ, ‘ಗೃಹಲಕ್ಷ್ಮೀ ಯೋಜನೆಯಿಂದ ನಮಗೆ ಆರ್ಥಿಕ ಸಹಾಯವಾಗಿದೆ. ಆ ಹಣದಿಂದ ಸಣ್ಣಪುಟ್ಟ ವ್ಯವಹಾರ ಆರಂಭಿಸಿದ್ದೇನೆ. ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ವ್ಯಾಪಾರ ಮಾಡುತ್ತಿದ್ದೇನೆ. ಜಿಲ್ಲೆ, ರಾಜ್ಯ, ವಿದೇಶಕ್ಕೂ ರಫ್ತು ಮಾಡುತ್ತಿದ್ದೇನೆ’ ಎಂದರು. ಈ ವೇಳೆ ‘ನನಗೂ ಕೋಡುಬಳೆ ತಂದಿದ್ಯಾ’ ಎಂದ ಡಿಕೆ ಶಿವಕುಮಾರು ಕೇಳಿದರು.

LIVE TV

ನಿಮ್ಕ ಆಶೀರ್ವಾದ ನನ್ನ ಮೇಲೆ ಇರಲಿ ಎಂದ ಡಿಕೆ ಶಿವಕುಮಾರ್​ 

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘ಹೆಣ್ಮಗಳಿಗೆ ಸಹಾಯ ಮಾಡಬೇಕು ಅಂತ ನಾವು ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದ್ದೇವೆ. 36 ತಿಂಗಳು ಕೊಟ್ಟಿದ್ದೇವೆ. ಮುಂದೆ ಯಾರೂ ಸಹ ಈ ಯೋಜನೆಯನ್ನ ನಿಲ್ಲಿಸುವುದಕ್ಕೆ‌ ಆಗಲ್ಲ. ನಮ್ಮನ್ನ ನೋಡಿ ಮಹಾರಾಷ್ಟ್ರ, ಮಧ್ಯಪ್ರವೇಶದಲ್ಲೂ ಯೋಜನೆ ಮಾಡಿದ್ದಾರೆ. ಬೆಳಗಾವಿ ಅಧಿವೇಶನ ಶುರುವಾಗುವುದರೊಳಗೆ ಹೆಣ್ಮಗಳನ್ನ ಮಂತ್ರಿ ಮಾಡುತ್ತೇನೆ. ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅದೇ ಆಸ್ತಿ. ನಿಮ್ಕ ಆಶೀರ್ವಾದ ನನ್ನ ಮೇಲೆ ಇರಲಿ’ ಎಂದಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ಹಣ ವಿತರಣೆಗೆ ಆರ್ಥಿಕ ಸಮಸ್ಯೆ ಒಪ್ಪಿಕೊಂಡ ರಾಜ್ಯ ಸರ್ಕಾರ, ಪ್ರಮಾಣ ಪತ್ರದಲ್ಲೇನಿದೆ?

‘ಒಟ್ಟು 86 ಸಾವಿರ ಕೋಟಿ ರೂ ಹಣ ಗೃಹಲಕ್ಷ್ಮೀಯರಿಗೆ ತಲುಪಿದೆ. ಫಲಾನುಭವಿಗಳ ಫೋನ್ ನಂಬರ್​ ಬೇರೆ ಬೇರೆ ಇತ್ತು. ಸತ್ತು ಹೋಗಿರುವವರ ಅಕೌಂಟ್​ಗೂ ಹಣ ಹೋಗಿದೆ. ಆ ಹಣ ಯಾರು ಹೇಗೆ ಉಪಯೋಗಿಸಿಕೊಂಡರು ಎನ್ನುವುದು ಗೊತ್ತಾಗಲಿಲ್ಲ. ಹಾಗಾಗಿ ಗೃಹಲಕ್ಷ್ಮೀ ಯೋಜನೆಗೆ ಫಿಲ್ಟರ್ ಮಾಡಿದ್ದವು. ನಾವು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿದ್ದೇವೆ. ಕೆಲವರು ವ್ಯಾಪಾರ ಶುರು ಮಾಡಿದ್ದಾರೆ. ಕೆಲವರು ಹಣದಲ್ಲಿ ಉಳಿತಾಯ ಮಾಡಿದ್ದಾರೆ. ಕೆಲವರು ಕುಟುಂಬದ ನಿರ್ವಹಣೆ ಮಾಡಿದ್ದಾರೆ’ ಎಂದರು.

ಮೀಟರ್ ಬಡ್ಡಿ ಹಣದ ಆಸೆಗೆ ಬೀಳಬೇಡಿ: ಸಿಎಂ ಸಲಹೆ

‘ಕೆಲವರು ಗೃಹಲಕ್ಷ್ಮೀ ಯೋಜನೆಯ ಮೀಟರ್ ಬಡ್ಡಿ ಆಸೆಗೆ ಹಣ ಕೊಟ್ಟು ಮೋಸ ಹೋಗುತ್ತಿದ್ದಾರೆ. ಮೀಟರ್ ಬಡ್ಡಿ ಹಣದ ಆಸೆಗೆ ಬೀಳಬೇಡಿ ಎಂದು ಹೇಳಿದ್ದೇನೆ. ಗೃಹಲಕ್ಷ್ಮೀ ಹಣವನ್ನು ಚಿಟ್ ಫಂಡ್​ನಲ್ಲಿ ಹಾಕಿ ಕಳೆದುಕೊಳ್ತಿದ್ದಾರೆ. ಹಾಗಾಗಿ ಹೆಚ್ಚಿನ ಹಣದ ಆಸೆಗೆ ಬಿದ್ದು ಚಿಟ್​ಫಂಡ್​ಗೆ ಹಾಕದಂತೆ ಹೇಳಿರುವೆ. ಯಾರೊಬ್ಬರೂ ಅಧಿಕ ಬಡ್ಡಿ, ಚಿಟ್ ಫಂಡ್ ಆಸೆಗೆ ಬೀಳಬಾರದು ಎಂದಿರುವ ಸಿಎಂ ಹಣ ಕಳೆದುಕೊಂಡವರ ಪ್ರಕರಣ ಉಲ್ಲೇಖಿಸಿ ಸಲಹೆ ಕೂಡ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಈರಣ್ಣಾ ಬಸವಾ
ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More
ಬಿಗ್ ಬಾಸ್ ಸ್ಪರ್ಧಿಗಳಿಗೆ ಬರುತ್ತಿದೆ ಅನಾಮಧೇಯ ಪತ್ರ
ಬಿಗ್ ಬಾಸ್ ಸ್ಪರ್ಧಿಗಳಿಗೆ ಬರುತ್ತಿದೆ ಅನಾಮಧೇಯ ಪತ್ರ
‘ಮೋದಿಗಿಂತ ಚೆನ್ನಾಗಿ ಇಂಗ್ಲಿಷ್ ಬರುತ್ತೆ ನಂಗೆ’: ಪ್ರಿಯಾಂಕ್ ಖರ್ಗೆ
‘ಮೋದಿಗಿಂತ ಚೆನ್ನಾಗಿ ಇಂಗ್ಲಿಷ್ ಬರುತ್ತೆ ನಂಗೆ’: ಪ್ರಿಯಾಂಕ್ ಖರ್ಗೆ
ಊಟದಲ್ಲಿ ಮತ್ತಿನ ಮಾತ್ರೆ ಬೆರೆಸಿ ನಂತರ ಕೊಲೆ ಮಾಡಿದ ಶಂಕೆ!
ಊಟದಲ್ಲಿ ಮತ್ತಿನ ಮಾತ್ರೆ ಬೆರೆಸಿ ನಂತರ ಕೊಲೆ ಮಾಡಿದ ಶಂಕೆ!
7 ಜನರ ಭೀಕರ ಹತ್ಯೆ ಬಗ್ಗೆ ಗೃಹ ಸಚಿವರು ಹೇಳಿದ್ದೇನು ನೋಡಿ
7 ಜನರ ಭೀಕರ ಹತ್ಯೆ ಬಗ್ಗೆ ಗೃಹ ಸಚಿವರು ಹೇಳಿದ್ದೇನು ನೋಡಿ
ಏಳು ಜನರ ಭೀಕರ ಹತ್ಯೆ: ತಂದೆ ಕೃತ್ಯಕ್ಕೆ ಮಗಳೂ ಸಾಥ್​​ ನೀಡಿರುವ ಶಂಕೆ
ಏಳು ಜನರ ಭೀಕರ ಹತ್ಯೆ: ತಂದೆ ಕೃತ್ಯಕ್ಕೆ ಮಗಳೂ ಸಾಥ್​​ ನೀಡಿರುವ ಶಂಕೆ
ಬೆಂಗಳೂರಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆಗೆ ಅಸಲಿಗೆ ಕಾರಣವೇನು ಗೊತ್ತಾ?
ಬೆಂಗಳೂರಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆಗೆ ಅಸಲಿಗೆ ಕಾರಣವೇನು ಗೊತ್ತಾ?
7 ಜನರ ಹತ್ಯೆ ಕೇಸ್​​: ಆರೋಪಿಯ ಕರಾಳ ಇತಿಹಾಸ ಬಿಚ್ಚಿಟ್ಟ ಸಂಬಂಧಿಕರು
7 ಜನರ ಹತ್ಯೆ ಕೇಸ್​​: ಆರೋಪಿಯ ಕರಾಳ ಇತಿಹಾಸ ಬಿಚ್ಚಿಟ್ಟ ಸಂಬಂಧಿಕರು
ಮೇಖ್ರಿ ಸರ್ಕಲ್​ನಿಂದ ಹೆಬ್ಬಾಳ ರಸ್ತೆಯಲ್ಲಿ ಬೆಳಗ್ಗಿನಿಂದಲೇ ಭಾರೀ ಟ್ರಾಫಿಕ್
ಮೇಖ್ರಿ ಸರ್ಕಲ್​ನಿಂದ ಹೆಬ್ಬಾಳ ರಸ್ತೆಯಲ್ಲಿ ಬೆಳಗ್ಗಿನಿಂದಲೇ ಭಾರೀ ಟ್ರಾಫಿಕ್
ಹಾಸನಾಂಬೆ ದರ್ಶನಕ್ಕೆ ಕಿಕ್ಕಿರಿದು ಆಗಮಿಸುತ್ತಿರುವ ಭಕ್ತರು!
ಹಾಸನಾಂಬೆ ದರ್ಶನಕ್ಕೆ ಕಿಕ್ಕಿರಿದು ಆಗಮಿಸುತ್ತಿರುವ ಭಕ್ತರು!
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್; ಗೆಲ್ಲೋದು ಯಾರು?
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್; ಗೆಲ್ಲೋದು ಯಾರು?