Social networks: ಉಗ್ರವಾದದ ಪ್ರಚಾರ ಮಾಡಲು ಸಹಾಯ ಮಾಡುತ್ತಿವೆ ಸಾಮಾಜಿಕ ಜಾಲತಾಣಗಳು!

ಉಗ್ರಗಾಮಿಗಳು ತಮ್ಮ ವಾದವನ್ನು ಪ್ರಚುರಪಡಿಸಲು, ಸಂಘಟನೆಗಳಿಗೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಉಗ್ರವಾದ ಹರಡಲು ಸಹಾಯ ಮಾಡುತ್ತಿವೆ ಎಂದು ಆರೋಪಿಸಿ, ಸಾಮಾಜಿಕ ಜಾಲತಾಣಗಳನ್ನು ಕಾನೂನಿನ ಪ್ರಕಾರ ದೋಷಿ ಎನ್ನಲು ಸಾಧ್ಯವಿಲ್ಲ.

Social networks: ಉಗ್ರವಾದದ ಪ್ರಚಾರ ಮಾಡಲು ಸಹಾಯ ಮಾಡುತ್ತಿವೆ ಸಾಮಾಜಿಕ ಜಾಲತಾಣಗಳು!
ಸಾಂದರ್ಭಿಕ ಚಿತ್ರ
Follow us
|

Updated on:May 20, 2023 | 6:24 PM

ಉಗ್ರಗಾಮಿಗಳು ತಮ್ಮ ವಾದವನ್ನು ಪ್ರಚುರಪಡಿಸಲು, ಸಂಘಟನೆಗಳಿಗೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಉಗ್ರವಾದ ಹರಡಲು ಸಹಾಯ ಮಾಡುತ್ತಿವೆ ಎಂದು ಆರೋಪಿಸಿ, ಸಾಮಾಜಿಕ ಜಾಲತಾಣಗಳನ್ನು ಕಾನೂನಿನ ಪ್ರಕಾರ ದೋಷಿ ಎನ್ನಲು ಸಾಧ್ಯವಿಲ್ಲ. ಅಮೆರಿಕಾದಲ್ಲಿ ದೀರ್ಘ ಕಾಲದಿಂದಲೂ ಒಂದು ಕಾನೂನಾತ್ಮಕ ನೀತಿ ಜಾರಿಯಲ್ಲಿದೆ. ಅದೇನೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ವಿಚಾರಗಳಿಗೆ ಸಾಮಾಜಿಕ ಜಾಲತಾಣ ಸಂಸ್ಥೆಗಳು ಜವಾಬ್ದಾರವಾಗಿಲ್ಲ. ಈ ನೀತಿ ಮೊದಲ ತಿದ್ದುಪಡಿಯ ಆಧಾರಿತವಾಗಿದ್ದು, ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಸಾಮಾಜಿಕ ಜಾಲತಾಣಗಳನ್ನು ಜನರ ಮಾತಿನ ವೇದಿಕೆ ಎಂದು ಪರಿಗಣಿಸಲಾಗಿದೆಯೇ ಹೊರತು, ಸಂಸ್ಥೆಗಳನ್ನು ಅವುಗಳ ಪ್ರಕಾಶಕ ಎಂದು ಪರಿಗಣಿಸಲಾಗಿಲ್ಲ. ಇದರ ಅರ್ಥವೆಂದರೆ, ಈ ಸಾಮಾಜಿಕ ಜಾಲತಾಣ ಸಂಸ್ಥೆಗಳು ಅವುಗಳು ಸಕ್ರಿಯವಾಗಿ ಉತ್ತೇಜನ ನೀಡದೆ ತಟಸ್ಥವಾಗಿರುವ ತನಕ ಅವುಗಳ ಜಾಲತಾಣದಲ್ಲಿ ಪ್ರಕಟವಾಗುವ ವಿಚಾರಗಳಿಗೆ ಜವಾಬ್ದಾರವಾಗಿರುವುದಿಲ್ಲ.

ಈ ನೀತಿಯನ್ನು ನ್ಯಾಯಾಲಯಗಳೂ ಹಲವು ಪ್ರಕರಣಗಳಲ್ಲಿ ಎತ್ತಿ ಹಿಡಿದಿವೆ. 2019ರಲ್ಲಿ ನೈಂತ್ ಸರ್ಕ್ಯುಟ್ ಕೋರ್ಟ್ ಆಫ್ ಅಪೀಲ್ಸ್ ತನ್ನ ತೀರ್ಪಿನಲ್ಲಿ ತನ್ನ ಜಾಲತಾಣದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಸಂದೇಶವನ್ನು ಹರಡಿರುವ ಆರೋಪದಡಿ ಫೇಸ್‌ಬುಕ್‌ ಸಂಸ್ಥೆಯನ್ನು ದೋಷಿ ಎನ್ನಲು ಸಾಧ್ಯವಿಲ್ಲ ಎಂದಿತ್ತು. ನ್ಯಾಯಾಲಯಕ್ಕೆ ಫೇಸ್‌ಬುಕ್‌ ತಾನಾಗಿಯೇ ಅಂತಹ ವಿಚಾರವನ್ನು ಪ್ರಕಟಿಸಿಲ್ಲ, ಮತ್ತು ಅಂತಹ ಕಾನೂನು ವಿರೋಧಿ ವಿಚಾರವನ್ನು ತನ್ನ ತಾಣದಿಂದ ಕಿತ್ತುಹಾಕಿದೆ ಎಂದು ಮನವರಿಕೆಯಾಗಿತ್ತು.

ಇದನ್ನೂ ಓದಿ:ಉಕ್ರೇನ್ ಸೇನೆ ಉಗ್ರವಾದ ಪ್ರತಿದಾಳಿ ನಡೆಸಿ ರಷ್ಯಾ ವಶಪಡಿಸಿಕೊಂಡಿದ್ದ 20 ಪ್ರದೇಶಗಳನ್ನು ವಾಪಸ್ಸು ಪಡೆದಿದೆ

ಇದೇ ನೀತಿ ಇತರ ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಹಾಗೂ ಯೂಟ್ಯೂಬ್‌ಗಳಿಗೂ ಅನ್ವಯವಾಗುತ್ತದೆ. ಸಾಮಾಜಿಕ ಜಾಲತಾಣಗಳನ್ನು ಭಯೋತ್ಪಾದನೆ ಹರಡುವ ಸಂದೇಶಗಳಿಗೆ ಜವಾಬ್ದಾರರನ್ನಾಗಿಸಲು ಸಾಧ್ಯವಿಲ್ಲದೆ ಹೋದರೂ, ಅವುಗಳು ಅಂತಹ ಕಾನೂನು ಬಾಹಿರ ಸಂಗತಿಗಳನ್ನು ತೆಗೆದು ಹಾಕಲು ಕ್ರಮ ಕೈಗೊಂಡಿದ್ದು, ಭಯೋತ್ಪಾದನಾ ನಿಗ್ರಹಕ್ಕಾಗಿ ಮತ್ತು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸುವ ಉಗ್ರರನ್ನು ಪತ್ತೆಹಚ್ಚಲು ತನಿಖಾ ಸಂಸ್ಥೆಗಳೊಡನೆ ಸಹಕರಿಸಿವೆ.

ಮುಖ್ಯವಾಗಿ, ಭಯೋತ್ಪಾದಕ ಸಂಸ್ಥೆಗಳಿಗೆ ತಮ್ಮ ಸಂದೇಶ ಹಂಚಲು, ಜನರನ್ನು ಸೆಳೆಯಲು ಸಾಮಾಜಿಕ ಜಾಲತಾಣಗಳು ಮಾತ್ರವೇ ಮಾರ್ಗವಾಗಿಲ್ಲ. ಅವುಗಳು ಸಾಂಪ್ರದಾಯಿಕ ಮಾಧ್ಯಮಗಳಾದ ಸುದ್ದಿಪತ್ರಿಕೆ ಹಾಗೂ ಟಿವಿ, ಮುಖತಃ ಭೇಟಿಯಂತಹ ಕ್ರಮಗಳನ್ನೂ ಕೈಗೊಳ್ಳುತ್ತವೆ. ಆದರೆ ಸಾಮಾಜಿಕ ಜಾಲತಾಣಗಳು ಭಯೋತ್ಪಾದಕರಿಗೆ ದಿನೇ ದಿನೇ ಅತ್ಯಂತ ಮಹತ್ವದ ಆಯುಧಗಳಾಗುತ್ತಿದ್ದು, ಜಾಲತಾಣಗಳು ಈ ಸವಾಲನ್ನು ಮೀರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಸಾಮಾಜಿಕ ಜಾಲತಾಣಗಳು ಕೈಗೊಂಡ ಹಲವು ಕ್ರಮಗಳು:

ಸಾಮಾಜಿಕ ಜಾಲತಾಣಗಳು ತಮ್ಮ ತಾಣಗಳಿಂದ ಅಕ್ರಮ ವಿಚಾರಗಳನ್ನು ತೆಗೆಯಲು, ಸಾಮಾಜಿಕ ಜಾಲತಾಣಗಳನ್ನು ಬಳಸುವ ಭಯೋತ್ಪಾದಕರನ್ನು ಪತ್ತೆಹಚ್ಚಲು ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿವೆ. ಅವೆಂದರೆ,

ಅಕ್ರಮ ವಿಚಾರಗಳನ್ನು ಪತ್ತೆಹಚ್ಚಿ, ಅದನ್ನು ತೆಗೆಯುವ ತಂತ್ರಜ್ಞಾನ: ಈ ವೇದಿಕೆಗಳು ದ್ವೇಷದ ಮಾತು, ಮಕ್ಕಳ ಮೇಲಿನ ಲೈಂಗಿಕ ಶೋಷಣೆ, ಹಾಗೂ ಉಗ್ರವಾದ ಬೆಂಬಲಿತ ಮಾತುಗಳನ್ನು ತಡೆಯಲು ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದೆ. ಇದರಲ್ಲಿ ಕೃತಕ ಬುದ್ಧಿಮತ್ತೆ (ಎಐ), ಮೆಷಿನ್ ಲರ್ನಿಂಗ್ (ಎಂಎಲ್), ಹಾಗೂ ಮಾನವ ಮೇಲ್ವಿಚಾರಣೆಗಳು ಸೇರಿವೆ.

ಅಕ್ರಮ ವಿಚಾರಗಳನ್ನು ತಡೆಯಲು ನೂತನ ನೀತಿಗಳು:

ಸಾಮಾಜಿಕ ಜಾಲತಾಣಗಳು ಕಾನೂನುಬಾಹಿರ ವಿಷಯಗಳನ್ನು ಸರಿಪಡಿಸಲು ಹಲವು ನೀತಿಗಳನ್ನು, ಕ್ರಮಗಳನ್ನು ಅಳವಡಿಸಿಕೊಂಡಿವೆ. ಈ ನೀತಿಗಳು ಸಾಮಾಜಿಕ ಜಾಲತಾಣಗಳು ಹೇಗೆ ಇಂತಹ ವಿಚಾರಗಳನ್ನು ಗುರುತಿಸಿ, ತೆಗೆದುಹಾಕುತ್ತವೆ ಎಂದು ವಿವರಿಸುತ್ತವೆ.

ಕಾನೂನು ಜಾರಿ ಸಂಸ್ಥೆಗಳೊಡನೆ ಕಾರ್ಯಾಚರಣೆ:

ಸಾಮಾಜಿಕ ಜಾಲತಾಣ ವೇದಿಕೆಗಳು ಉಗ್ರಗಾಮಿಗಳು ಸಾಮಾಜಿಕ ಜಾಲತಾಣಗಳ ವೇದಿಕೆಗಳನ್ನು ಬಳಸುವುದನ್ನು ತಡೆಯಲು ಕಾನೂನು ಜಾರಿ ಸಂಸ್ಥೆಗಳೊಡನೆ ಕಾರ್ಯಾಚರಿಸುತ್ತವೆ. ಇದರಲ್ಲಿ ಈ ಸಂಸ್ಥೆಗಳಿಗೆ ಉಗ್ರಗಾಮಿಗಳು ಮತ್ತು ಅವರ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನೂ ಸಾಮಾಜಿಕ ಜಾಲತಾಣಗಳು ಒದಗಿಸುತ್ತವೆ.

ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಉಗ್ರಗಾಮಿ ಸಂಘಟನೆಗಳು ಹಾಗೂ ಸರ್ಕಾರೇತರರ ಕೈಯಲ್ಲಿ ಪ್ರಮುಖ ಆಯುಧಗಳಾಗಿವೆ. ಐಸಿಸ್‌ನಂತಹ ಉಗ್ರಗಾಮಿ ಸಂಘಟನೆಗಳು ಜಗತ್ತಿನಾದ್ಯಂತ ಯುವಕರನ್ನು ಸೇರ್ಪಡೆಗೊಳಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿವೆ ಎನ್ನುವ ವಾಸ್ತವ ಈಗ ಜಗತ್ತಿಗೆ ಅರಿವಾಗಿದೆ. ಇತ್ತೀಚೆಗೆ ಭಾರತದಲ್ಲಿ ಲಕ್ಷಾಂತರ ಎಟಿಎಂ ಕಾರ್ಡ್‌ಗಳ ಮಾಹಿತಿ ಕಳ್ಳತನವಾಗಿರುವುದು ಅಂತರ್ಜಾಲದ ದುರ್ಬಳಕೆಗೆ ಒಂದು ಉದಾಹರಣೆಯಾಗಿದೆ. ಸಮಾನ ಮನಸ್ಕರು ಸಾಮಾಜಿಕ ಜಾಲತಾಣಗಳನ್ನು ಮೂಲಭೂತವಾದವನ್ನು ಹರಡಲು ಬಳಸಿಕೊಳ್ಳುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ, ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳಿಂದ ಎದುರಾಗುವ ಅಪಾಯಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಜಾರಿಗೆ ತರುವ ಅವಶ್ಯಕತೆಯಿದೆ. ಅದಕ್ಕೆ ಕೆಲವು ಪರಿಹಾರೋಪಾಯಗಳು ಇಂತಿವೆ:

ಇದನ್ನೂ ಓದಿ: ಸೆ.25ರಂದು ಯುಎನ್​​ಜಿಎ ಅಧಿವೇಶನ; ಉಗ್ರವಾದ, ತೀವ್ರವಾದ ಸಿದ್ಧಾಂತಗಳ ವಿರುದ್ಧ ಹೋರಾಟ ಸೇರಿದಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ ಮೋದಿ

ಸಾಮಾಜಿಕ ಜಾಲತಾಣ ಮತ್ತು ಭಾರತದ ಪರಿಸ್ಥಿತಿ:

• ಭಾರತ ಇತ್ತೀಚೆಗೆ ತನ್ನ ಪ್ರಥಮ ಚೀಫ್ ಇಂಟರ್ನೆಟ್ ಸೆಕ್ಯುರಿಟಿ ಆಫೀಸರ್ (ಸಿಎಸ್ಐಓ) ಅನ್ನು ನೇಮಕಗೊಳಿಸಿದೆ. ಇದು ಭಾರತಕ್ಕೆ ಸೈಬರ್ ಅಪರಾಧಗಳನ್ನು ತಡೆಯಲು, ಸೈಬರ್ ಸುರಕ್ಷತೆಯನ್ನು ಹೆಚ್ಚಿಸಲು ನೆರವಾಗಲಿದೆ.

• ನ್ಯಾಷನಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ (ಎನ್ಎಸ್‌ಸಿಎ) ಭಾರತದ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತದೆ.

• ಗುಪ್ತಚರ ಸಂಸ್ಥೆಗಳಾದ ಇಂಟಲಿಜೆನ್ಸ್ ಬ್ಯೂರೋ ಹಾಗೂ ರಾ ಗಳು ಅಂತರ್ಜಾಲದಲ್ಲಿರುವ ವಿಚಾರಗಳ ಮೇಲ್ವಿಚಾರಣೆ ನಡೆಸುವುದರಿಂದ ಯುವಕರನ್ನು ಸೆಳೆಯುವ ಮೂಲಭೂತವಾದಿಗಳ ಪ್ರಯತ್ನಗಳನ್ನು ತಡೆಯಬಹುದು.

• ರಾಷ್ಟ್ರೀಯ ಸೈಬರ್ ಸುರಕ್ಷತಾ ನೀತಿ 2013ನ್ನು ಸೈಬರ್ ಮಾಹಿತಿ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ಬಲಹೀನತೆಯನ್ನು ಕಡಿಮೆಗೊಳಿಸಲು ಸ್ಥಾಪಿಸಲಾಯಿತು. ಸೈಬರ್ ಅಪಾಯಗಳನ್ನು ಎದುರಿಸುವ ಸಲುವಾಗಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ 24×7 ಕಾರ್ಯಯೋಜನೆಯನ್ನು ನ್ಯಾಷನಲ್ ಕ್ರಿಟಿಕಲ್ ಇನ್ಫಾರ್ಮೇಶನ್ ಇನ್‌ಫ್ರಾಸ್ಟ್ರಕ್ಚರ್ ಪ್ರೊಟೆಕ್ಷನ್ ಸೆಂಟರ್ (ಎನ್‌ಸಿಐಐಪಿಸಿ) ಮೂಲಕ ಜಾರಿಗೆ ತರಲಾಯಿತು.

• ಒಂದು ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ-ಇನ್) ಸ್ಥಾಪಿಸಲಾಗಿದ್ದು, ಇದು ಬಿಕ್ಕಟ್ಟು ನಿರ್ವಹಣಾ ವಿಚಾರದಲ್ಲಿ ನೋಡಲ್ ಏಜೆನ್ಸಿಯಾಗಿ ಕಾರ್ಯಾಚರಿಸುತ್ತದೆ.

Girish Linganna

Girish Linganna

ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Published On - 6:22 pm, Sat, 20 May 23