ಯುವ ಪೀಳಿಗೆ ಪುನೀತ್​ರಿಂದ ಕಲಿಯಬೇಕಾದ ಪಾಠವೇನು?: ಡಾ. ರವಿಕಿರಣ

ಖಂಡಿತವಾಗಿಯೂ ಹೌದು ಪುನೀತ್ ಒಂದು ಪಾಠ. ಇಷ್ಟು ದಿನಗಳವರೆಗೆ ಜನರು ಈ ಘಟನೆಯ ನಂತರ ಕಂಬನಿ ಮಿಡಿದ ಆಯ್ತು ಕುಟುಂಬಕ್ಕೆ ದೇವರು ಅದನ್ನು ಸಹಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಯ್ತು, ಇನ್ನು ಕೆಲವರು ವಿಧಿಗೆ ಬೈದಾಯಿತು.

ಯುವ ಪೀಳಿಗೆ ಪುನೀತ್​ರಿಂದ ಕಲಿಯಬೇಕಾದ ಪಾಠವೇನು?: ಡಾ. ರವಿಕಿರಣ
Dr Ravikiran
Follow us
TV9 Web
| Updated By: ನಯನಾ ರಾಜೀವ್

Updated on: Oct 31, 2022 | 11:20 AM

ಖಂಡಿತವಾಗಿಯೂ ಹೌದು ಪುನೀತ್ ಒಂದು ಪಾಠ. ಇಷ್ಟು ದಿನಗಳವರೆಗೆ ಜನರು ಈ ಘಟನೆಯ ನಂತರ ಕಂಬನಿ ಮಿಡಿದ ಆಯ್ತು ಕುಟುಂಬಕ್ಕೆ ದೇವರು ಅದನ್ನು ಸಹಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಯ್ತು, ಇನ್ನು ಕೆಲವರು ವಿಧಿಗೆ ಬೈದಾಯಿತು. ಅನ್ನದಾನ ರಕ್ತದಾನ, ದೇಹದಾನ ,ನೇತ್ರದಾನ, ಕೇಶ ದಾನ ಗೋಶಾಲೆಗೆ ದಾನ ,ಅನಾಥಾಲಯಕ್ಕೆ ದಾನ, ವೃದ್ಧಾಶ್ರಮಕ್ಕೆ ದಾನ ಇವೆಲ್ಲವುಗಳು ಈಗಾಗಲೇ ಮಾದರಿಯಾಗಿ ಜನರು ಅನುಸರಿಸಿದ್ದು ಇದೆ.

ಇವೆಲ್ಲವೂ ಹೌದು ಆದರೆ ಮುಂದಿನ ಪಾಠ ಏನು ? ಒಮ್ಮೆ ಯೋಚಿಸಿ 46ರ ವಯಸ್ಸಿನಲ್ಲಿ 56 ಇಂಚಿನ ಕುಟುಂಬದ ಮುಖ್ಯಸ್ಥ ಅತ್ಯಂತ ಮಾನವತಾವಾದಿ, ಮಹಾದಾನಿ, ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ದಾನಮಾಡಿದ ಮಹಾಪುರುಷ ಕುಟುಂಬವನ್ನು ಅಗಲುತ್ತಾನೆ. ಹೀಗೆ ಜನಸಾಮಾನ್ಯ ಕುಟುಂಬದ ಒಬ್ಬ ಮುಖ್ಯಸ್ಥ ನ ಸ್ಥಾನ ತೆರವಾದರೆ ಕುಟುಂಬದ ಅವಸ್ಥೆ ಏನು ಎಂದು ಯೋಚಿಸುವ ಪಾಠ ಪುನೀತನ ಮುಂದಿನ ಪಾಠ.

ಶಿಕ್ಷಣ ಪಡೆಯುತ್ತಿರುವ ಮಕ್ಕಳು ಉಚ್ಚ ಶಿಕ್ಷಣ ಪಡೆಯುತ್ತಿರುವ ಮಗ ಅಥವಾ ಮಗಳು, ಮನೆಯನ್ನು ನೋಡಿಕೊಂಡಿರುವ ಮಡದಿ ,ಅಷ್ಟೇ ಅಲ್ಲದೆ ಹಲವಾರು ಸಾರ್ವಜನಿಕ ಕೆಲಸಗಳ ಸಾರ್ವಜನಿಕರ ಮಧ್ಯ ಇರುವಂತಹ ಕುಟುಂಬದ ಮುಖ್ಯಸ್ಥನ ಸ್ಥಾನ ರಿಕ್ತ ಆದರೆ ಕುಟುಂಬದ ಕಷ್ಟ ಯಾರಿಗೂ ಬೇಡ. ಮಡದಿ ಮಕ್ಕಳ ಸಮಸ್ಯೆ

ಮುಖ್ಯವಾಗಿ ಎರಡು ಪಾಠ 1 ಆರೋಗ್ಯ ಪಾಠ 2 ತನ್ನ ಜೀವನದ ನಂತರ ಕುಟುಂಬದ ಜೀವನ ಸಹಜವಾಗಿ ತನ್ನ ಅನುಪಸ್ಥಿತಿಯಲ್ಲಿ ನಡೆಯುವ ವ್ಯವಸ್ಥೆ.

1 ಆರೋಗ್ಯ ಪಾಠ ಪ್ರತಿಯೊಬ್ಬನ ದೇಹಕ್ಕೂ ತನ್ನದೇ ಆದಂತಹ ದೈಹಿಕ ಆಕಾರ ಹಾಗೂ ಗುಣ ಇರುತ್ತದೆ ಅದರ ವ್ಯತಿರಿಕ್ತವಾಗಿ ದೇಹವನ್ನು ಅನವಶ್ಯಕವಾಗಿ ಬೆಳಸುವುದು ಆರೋಗ್ಯಕ್ಕೆ ಕಂಟಕ. ಫೋಟೋಕೆ ತಕ್ಕದಾದ ದೇಹ ಇದೆ ಎಂದರೆ ಅವನು ಸಂಪೂರ್ಣ ಆರೋಗ್ಯವಾಗಿದ್ದಾನೆ ಎನ್ನುವ ವಿಚಾರ ಅಲ್ಲ. ದೇಹದ ಆಕೃತಿಯನ್ನು ಕಂಡು ತನ್ನ ಆರೋಗ್ಯ ಚೆನ್ನಾಗಿದೆ ಎಂದು ತಿಳಿದುಕೊಳ್ಳುವುದು ಸರಿಯಲ್ಲ. ನಿಸರ್ಗದತ್ತವಾದ ಅಂತಹ ಆ ದೇವರಿಂದ ನೀಡಲು ಪಟ್ಟಂತಹ ದೇಹವನ್ನು ಅವಶ್ಯಕ ಕಾಳಜಿಯೊಂದಿಗೆ ,ಅವಶ್ಯಕ ಮುಂಜಾಗ್ರತೆ ಯೊಂದಿಗೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯ.

ಅತಿ ಸರ್ವತ್ರ ವರ್ಜಯೇತ್ ಹೇಳುವಂತಹ ಪುರಾತನ ಕಾಲದ ನುಡಿ ಈ ಕಾಲದಲ್ಲೂ ಸತ್ಯವೆಂಬುದು ಅರಿಯ ಬೇಕಾದಂತಹ ಸಂಗತಿ.

ಎರಡನೇ ಪಾಠ ವಿಮಾ ಕಂಪನಿಯ ಜಾಹೀರಾತಿನಂತೆ ಜೀವನದ ನಂತರ, ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಜೀವನದ ನಂತರ ತನ್ನ ಕುಟುಂಬಕ್ಕಾಗಿ ಜನಸಾಮಾನ್ಯರಿಗೆ ಅವಶ್ಯವಿರುವ ಯೋಜನೆಗಳ ಮಾಹಿತಿ ಇರುವುದು ಪುನೀತ್ ಪಾಠದ ಮುಂದಿನ ಭಾಗ. ಇವುಗಳನ್ನು ಅತಿ ಹೆಚ್ಚು ಜಾಗ್ರತೆಯಿಂದ ಮಾಡುವಂತಹ ಅವಶ್ಯಕತೆ ಇದೆ.

ಯಾರೋ ಪ್ರತಿನಿಧಿ ಹೇಳುತ್ತಾನೆ ಎಂದು ಕೇಳುವುದಕ್ಕಿಂತ ಅದನ್ನು ನಾಲ್ಕು ಬಾರಿ ಸ್ವಸಾಮರ್ಥ್ಯ ಅವಶ್ಯವಿರುವಷ್ಟು ಸಾರಾಸಾರ ವಿಚಾರ ಮಾಡಿ ಹೆಜ್ಜೆ ಇಡುವ ಅವಶ್ಯಕತೆ ಇದೆ. ಹಾಗಾದರೆ ಇವುಗಳು ಏನೇನು ಜೀವ ವಿಮೆ, ಅಪಘಾತ ವಿಮೆ ಆರೋಗ್ಯ ವಿಮೆ. ಜೀವ ವಿಮೆಗಳ ಜೊತೆಗೆ ರೈಡರ್​​ಗಳ ಮಾಹಿತಿ, ಪಿಪಿಎಫ್ ಖಾತೆ ಎನ್ಪಪಿಎಸ್ ಖಾತೆಗಳು. ಅಂದರೆ ಸೂಕ್ತ ಅವಶ್ಯಕ ವಿಮೆಗಳು ಹಾಗೂ ಉಳಿತಾಯದ ಅವಶ್ಯಕತೆ ಪುನೀತ್ ಜೀವನದ ಪ್ರಮುಖ ಪಾಠ ಜನಸಾಮಾನ್ಯರಿಗೆ.

ನನ್ನ ಅಭಿಪ್ರಾಯದಂತೆ ಸರಕಾರಿ ಯೋಜನೆಗಳ ಚಂದಾದಾರಿಕೆ ಕೆಲವು ಮಟ್ಟಿಗೆ ಜನಸಾಮಾನ್ಯರಿಗೆ ಅತಿ ಅವಶ್ಯ ಹಾಗೂ ಅತ್ಯಂತ ಕಡಿಮೆ ಹಣದಲ್ಲಿ ಲಭ್ಯ.

ಸರ್ಕಾರದ ಯೋಜನೆಗಳು ಯಾವುದೇ ಖಾಸಗಿ ಸಂಸ್ಥೆಗಳ ಯೋಜನೆಗಳಿಗಿಂತ ಹೆಚ್ಚು ವಿಶ್ವಾಸ ಎನ್ನುವುದು ತಿಳಿದ ಸಂಗತಿ ಅತಿ ಕಡಿಮೆ ವೆಚ್ಚದಲ್ಲಿ ಈಗಾಗಲೇ ಸರಕಾರ ನೀಡುತ್ತಿರುವ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ (ಅಪಘಾತ ವಿಮೆ )ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನ(ಸಾಮಾನ್ಯ ಜೀವ ವಿಮೆ) ಅತಿ ಹೆಚ್ಚು ಬಡ್ಡಿಯನ್ನು ಅಲ್ಲದೆ ಯಾವುದೇ ಸಾಲದ ಖಾತೆಗಳಿಗೆ ಜಮಾ ಆಗದಂತಹ ಪಿಪಿಎಫ್ ಖಾತೆ ಜನಸಾಮಾನ್ಯರ ಕುಟುಂಬದ ಹಿತದೃಷ್ಟಿಯಿಂದ ಅತಿ ಅವಶ್ಯಕ ಉಳಿತಾಯ ಯೋಜನೆ.

ಈ ರೀತಿಯಾಗಿ ಪುನೀತ್ ಪಾಠ ಜನಸಾಮಾನ್ಯರಿಗೆ ಅತಿ ಅವಶ್ಯ ಸರಕಾರ ತನ್ನ ಶುದ್ಧ ಮನಸ್ಸಿನಿಂದ ಶ್ರದ್ಧಾಂಜಲಿಯನ್ನು ಪುನೀತ್ ಅರ್ಪಿಸುವ ಯೋಚನೆ ಇದ್ದಲ್ಲಿ ಪಾಠಗಳ ಬಗ್ಗೆ ಕಡ್ಡಾಯವಾಗಿ ಪದವಿ ಶಿಕ್ಷಣದಲ್ಲಿ ಮಾಹಿತಿ ನೀಡುವ ಯೋಜನೆಯನ್ನು ತಯಾರಿಸುವುದು ನಿಜವಾದ ಶ್ರದ್ಧಾಂಜಲಿ ಯಾಗುವುದು. ಅಲ್ಲದೆ ಯೋಜನೆಗೆ ಪುನೀತ್ ಜೀವನ್ ಯೋಜನ ಎಂಬ ಹೆಸರನ್ನು ಕೂಡ ಇಟ್ಟರೆ ಹೆಚ್ಚು ಸೂಕ್ತವಾಗಬಹುದು.

ಈ ಪಾಠದಲ್ಲಿ ಅವಶ್ಯವಿರುವ ಅಂಶಗಳು ಮುಂದಿನ ರೀತಿ ಇದೆ ಅನ್ನದಾನ, ರಕ್ತದಾನ, ದೇಹದಾನ ,ನೇತ್ರದಾನ, ಕೇಶ ದಾನ ಗೋಶಾಲೆಗೆ ದಾನ ,ಅನಾಥಾಲಯ , ವೃದ್ಧಾಶ್ರಮ ,

ಜೀವ ವಿಮೆ, ಅಪಘಾತ ವಿಮೆ ಆರೋಗ್ಯ ವಿಮೆ. ಜೀವ ವಿಮೆಗಳ ಜೊತೆಗೆ ರೈಡರ್ ಗಳ ಮಾಹಿತಿ, ಪಿಪಿಎಫ್ ಖಾತೆ ಎನ್ಪಪಿಎಸ್ ಖಾತೆಗಳು,

ಏನೇ ಇರಲಿ ಪುನೀತ್ ಜೀವನ ಪಾಠವಾಗಿ ಮುಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಲೇಬೇಕು ಎಂಬುದು ನಮ್ಮ ಆಶಯ.

ಮಾಹಿತಿ: ಡಾ. ರವಿಕಿರಣ ಪಟವರ್ಧನ, ಶಿರಸಿ, ಆಯುರ್ವೇದ ವೈದ್ಯರು