- TV9 Kannada Photo gallery Karnataka News In Kannada: A leopard came to city from the forest and got stuck under a BMTC bus
ಬೆಂಗಳೂರು: ಕಾಡಿನಿಂದ ನಾಡಿಗೆ ಬಂದು ಬಿಎಂಟಿಸಿ ಬಸ್ ಕೆಳಗೆ ಅವಿತುಕೊಂಡ ಮರಿ ಚಿರತೆ
ಬೆಂಗಳೂರಿನ ಹೊರವಲಯದ ತುರಹಳ್ಳಿ ಅರಣ್ಯ ಪ್ರದೇಶದಿಂದ ಬರುತ್ತಿದ್ದ ಪ್ರಯಾಣಿಕರಿದ್ದ ಬಿಎಂಟಿಸಿ ಬಸ್ ಹತ್ತಲು ಚಿರತೆ ಮರಿಯೊಂದು ಯತ್ನಿಸಿರುವಂತಹ ಘಟನೆ ನಡೆದಿದೆ. ತುರಹಳ್ಳಿ ಫಾರೆಸ್ಟ್ನಿಂದ ಚಿರತೆ ಮತ್ತು ಮರಿ ರಸ್ತೆಗೆ ನುಗ್ಗಿದೆ. ಚಿರತೆ ತಪ್ಪಿಸಿಕೊಂಡಿದ್ದು, ಮರಿ ಮಾತ್ರ ಬಸ್ ಕೆಳಗೆ ಅವಿತುಕೊಂಡಿತ್ತು.
Updated on: Apr 03, 2024 | 6:15 PM
Share

ಬೆಂಗಳೂರಿನ ಹೊರವಲಯದ ತುರಹಳ್ಳಿ ಅರಣ್ಯ ಪ್ರದೇಶದಿಂದ ಬರುತ್ತಿದ್ದ ಪ್ರಯಾಣಿಕರಿದ್ದ ಬಿಎಂಟಿಸಿ ಬಸ್ ಹತ್ತಲು ಚಿರತೆ ಮರಿಯೊಂದು ಯತ್ನಿಸಿರುವಂತಹ ಘಟನೆ ನಡೆದಿದೆ.

ತುರಹಳ್ಳಿ ಫಾರೆಸ್ಟ್ನಿಂದ ಚಿರತೆ ಮತ್ತು ಮರಿ ರಸ್ತೆಗೆ ನುಗ್ಗಿದೆ. ಚಿರತೆ ತಪ್ಪಿಸಿಕೊಂಡಿದ್ದು, ಮರಿ ಮಾತ್ರ ಬಸ್ ಕೆಳಗೆ ಅವಿತುಕೊಂಡಿತ್ತು.

ಬಿಸಿಲಿಗೆ ಬಳಲಿದ ಚಿರತೆ ಮರಿಗೆ ಬಿಎಂಟಿಸಿ ಚಾಲಕ ನೀರು ಕುಡಿಸಲು ಮುಂದಾಗಿದ್ದು, ಈ ವೇಳೆ ಚಾಲಕನ ಮೇಲೆ ದಾಳಿ ಮಾಡಲು ಮರಿ ಚಿರತೆ ಮುಂದಾಗಿದೆ.

ಕೆಂಗೇರಿ ಟೂ ಚಿಕ್ಕೇಗೌಡನ ಪಾಳ್ಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ಬಸ್ ಕೆಳಗೆ ಮರಿ ಚಿರತೆ ಅವಿತುಕೊಂಡಿತ್ತು. ಹೀಗಾಗಿ ಬಸ್ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯದಂತೆ ಚಾಲಕ ಮತ್ತು ಕಂಡಕ್ಟರ್ ಸೂಚನೆ ನೀಡಿದ್ದಾರೆ.

ಈ ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಮರಿಯನ್ನು ರಕ್ಷಣೆ ಮಾಡಿದ್ದಾರೆ. ತಾಯಿ ಚಿರತೆಗಾಗಿ ಹುಡುಕಾಟ ನಡೆಸಿದ್ದಾರೆ.
Related Photo Gallery
ಅಮೆರಿಕದಿಂದ ಇರಾನ್ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆ ಎಲ್ಲ ದೋಚಿದ ಖದೀಮರು!
ಇಂದು ಈ ರಾಶಿಯವರಿಗೆ ಒತ್ತಡಗಳಿಂದ ಮುಕ್ತಿ
ಧುರಂಧರ್ ಸಿನಿಮಾ ಶೈಲಿಯಲ್ಲಿ ಸ್ಕೆಚ್: ಸ್ಫೋಟಕ ಮಾಹಿತಿ ಬಯಲು
RSS, ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ, ಈಗಾಗಲೇ ಇದೆ: ಜೋಶಿ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ




