- Kannada News Photo gallery Bigg Boss Kannada Fame Siri Shares Photo with Prabhakara Boregowda Entertainment News In Kannada
Siri: ಪತಿ ಮೇಲಿನ ಪ್ರೀತಿ ಎಂಥದ್ದು? ಒಂದೇ ಸಾಲಲ್ಲಿ ವಿವರಿಸಿದ ಸಿರಿ
ಸಿರಿ ಅವರು ಮದುವೆ ಆಗಿದ್ದು ಉದ್ಯಮಿ ಪ್ರಭಾಕರ್ ಬೋರೇಗೌಡ ಎಂಬುವವರನ್ನು. ಅವರು ಮಂಡ್ಯ ಮೂಲದವರಾಗಿದ್ದು, ಬೆಂಗಳೂರಲ್ಲಿ ಸೆಟಲ್ ಆಗಿದ್ದಾರೆ. ಅವರು ಉದ್ಯಮಿ. ಜೊತೆಗೆ ಚಿತ್ರರಂಗದ ಜೊತೆಯೂ ನಂಟು ಹೊಂದಿದ್ದಾರೆ. ಈಗ ಅವರು ಪತಿ ಜೊತೆಗಿನ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Updated on: Jul 09, 2024 | 12:44 PM

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸಿರಿ ಅವರು ಸ್ಪರ್ಧಿಸಿದ್ದರು. ಈ ವೇಳೆ ಅವರು ವಿವಾಹದ ಬಗ್ಗೆ, ವಿವಾಹ ಆದರೆ ಆಗಬಹುದಾದ ತೊಂದರೆಗಳ ಬಗ್ಗೆ ಮಾತನಾಡಿದ್ದರು. ಇತ್ತೀಚೆಗೆ ಅವರು ಸದ್ದಿಲ್ಲದೆ ಮದುವೆ ಆಗಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿತ್ತು.

ಈಗ ಮದುವೆ ಬಳಿಕ ಸಿರಿ ಅವರು ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಈಗ ಪತಿ ಜೊತೆ ಇರೋ ಫೋಟೋಗಳನ್ನು ಸಿರಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ನಾನಾ ರೀತಿಯ ಕಮೆಂಟ್ಗಳು ಬಂದಿವೆ.

ಈ ಫೋಟೋಗೆ ಸಿರಿ ಅವರು ‘ಪ್ರೀತಿ ಏನೆಂದು ನನಗೆ ತಿಳಿದಿದ್ದರೆ ಅದಕ್ಕೆ ಕಾರಣ ನೀನು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪತಿ ಮೇಲಿರುವ ಪ್ರೀತಿ ಎಂಥದ್ದು ಎಂಬುದನ್ನು ಅವರು ಬರೆದುಕೊಂಡಿದ್ದಾರೆ.

ಜೂನ್ 13ರಂದು ಸಿರಿ ಹಾಗೂ ಪ್ರಭಾಕರ್ ಬೋರೇಗೌಡ ಅವರ ಮದುವೆ ನೆರವೇರಿತ್ತು. ಚಿಕ್ಕಬಳ್ಳಾಪುರ ಬಳಿ ಇರುವ ಭೋಗ ನಂದೀಶ್ವರ ದೇವಾಲಯದಲ್ಲಿ ಈ ವಿವಾಹ ಜರುಗಿತ್ತು. ಪ್ರಭಾಕರ್ ಬೋರೇಗೌಡ ಮಂಡ್ಯ ಮೂಲದವರು.

ಸಿರಿ ಅವರು ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಜವಾಬ್ದಾರಿ ಸಿರಿ ಮೇಲೆಯೆ ಇದೇ. ಒಂದೊಮ್ಮೆ ಮದುವೆ ಆದರೆ ಇದಕ್ಕೆಲ್ಲ ಅವಕಾಶ ಸಿಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಭಯ ಅವರಿಗೆ ಈ ಮೊದಲು ಕಾಡಿತ್ತು.




