AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ‘ಐಪಿಎಲ್ ಮಧ್ಯದಲ್ಲಿ ನಾಯಕತ್ವ ತ್ಯಜಿಸಲಿದ್ದಾರೆ ಧೋನಿ’; ಮಾಜಿ ಸಿಎಸ್​ಕೆ ಬ್ಯಾಟರ್

IPL 2024: ಪಂದ್ಯಾವಳಿಯಲ್ಲಿ ಕೆಲವು ಪಂದ್ಯಗಳ ನಂತರ ಧೋನಿ ಸಿಎಸ್‌ಕೆ ತಂಡದ ನಾಯಕತ್ವವನ್ನು ತೊರೆಯಬಹುದು ಮತ್ತು ತಂಡದ ನಾಯಕತ್ವವನ್ನು ಬೇರೆ ಆಟಗಾರನಿಗೆ ಹಸ್ತಾಂತರಿಸಬಹುದು. ಐಪಿಎಲ್ 17ನೇ ಸೀಸನ್ ಬಳಿಕ ಧೋನಿ ಈ ಸ್ವರೂಪಕ್ಕೆ ವಿದಾಯ ಹೇಳುವ ಸಾಧ್ಯತೆಯೂ ಇದೆ ಎಂದಿದ್ದಾರೆ.

ಪೃಥ್ವಿಶಂಕರ
|

Updated on:Mar 16, 2024 | 9:46 PM

Share
ತಮ್ಮ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿರುವ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ದಾಖಲೆಯ 6ನೇ ಬಾರಿಗೆ ತಂಡವನ್ನು ಚಾಂಪಿಯನ್ ಮಾಡುವ ಗುರಿಯೊಂದಿಗೆ 17 ನೇ ಆವೃತ್ತಿಯ ಐಪಿಎಲ್​ಗೆ ಈಗಾಗಲೇ ತಯಾರಿ ನಡೆಸಿದ್ದಾರೆ.

1 / 6
ಮಾರ್ಚ್ 22 ರಿಂದ ಪ್ರಾರಂಭವಾಗುವ ಈ ಟೂರ್ನಿಯ ಮೊದಲ ಪಂದ್ಯ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ನಡೆಯಲಿದೆ. ಆದರೆ ಅದಕ್ಕೂ ಮುಂಚೆ ವರ್ಷಗಳ ಕಾಲ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸಿದ್ದ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಶಾಕಿಂಗ್ ಹೇಳಿಕೆ ನೀಡಿದ್ದು, ಈ ಬಾರಿಯ ಐಪಿಎಲ್ ಮಧ್ಯದಲ್ಲಿ ಧೋನಿ ತಂಡದ ನಾಯಕತ್ವವನ್ನು ತೊರೆಯಬಹುದು ಎಂದಿದ್ದಾರೆ.

2 / 6
ಈ ಬಗ್ಗೆ ಮಾತನಾಡಿರುವ ರಾಯುಡು, ಪಂದ್ಯಾವಳಿಯಲ್ಲಿ ಕೆಲವು ಪಂದ್ಯಗಳ ನಂತರ ಧೋನಿ ಸಿಎಸ್‌ಕೆ ತಂಡದ ನಾಯಕತ್ವವನ್ನು ತೊರೆಯಬಹುದು ಮತ್ತು ತಂಡದ ನಾಯಕತ್ವವನ್ನು ಬೇರೆ ಆಟಗಾರನಿಗೆ ಹಸ್ತಾಂತರಿಸಬಹುದು. ಐಪಿಎಲ್ 17ನೇ ಸೀಸನ್ ಬಳಿಕ ಧೋನಿ ಈ ಸ್ವರೂಪಕ್ಕೆ ವಿದಾಯ ಹೇಳುವ ಸಾಧ್ಯತೆಯೂ ಇದೆ ಎಂದಿದ್ದಾರೆ.

3 / 6
ಧೋನಿ 15 ಆಗಸ್ಟ್ 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಆದರೆ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರೆಸಿದರು. ಕ್ರೀಡಾ ವಾಹಿನಿಯೊಂದರ ಜೊತೆ ಮಾತನಾಡಿದ ರಾಯುಡು, ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಯಲ್ಲಿರುವುದರಿಂದ ಧೋನಿ ಈ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಸೀಸನ್ ಮಧ್ಯದಲ್ಲಿ ಮತ್ತೊಬ್ಬ ಆಟಗಾರನಿಗೆ ನಾಯಕನಾಗಿ ಬಡ್ತಿ ನೀಡಬಹುದು ಎಂದಿದ್ದಾರೆ.

4 / 6
ರಾಯುಡು ಪ್ರಕಾರ, ಧೋನಿ ಐಪಿಎಲ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದರೆ ಈ ಸೀಸನ್,​ ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡಕ್ಕೆ ಬದಲಾವಣೆಯ ಅವಧಿಯಾಗಲಿದೆ. ಒಂದು ವೇಳೆ ಧೋನಿ ಮತ್ತಷ್ಟು ಕ್ರಿಕೆಟ್ ಆಡಲು ಬಯಸಿದರೆ, ಅವರು ಇನ್ನೂ ಕೆಲವು ಸೀಸನ್ ಆಡಬಹುದು. ಹಾಗೆನಾದರೂ ಆದರೆ ಧೋನಿ ನಾಯಕನಾಗಿ ಮುಂದುವರೆಯಲ್ಲಿದ್ದಾರೆ.

5 / 6
ಆದರೆ ನಾನು ಧೋನಿಯನ್ನು ನಾಯಕನಾಗಿ ಮಾತ್ರ ನೋಡಲು ಬಯಸುತ್ತೇನೆ. ಧೋನಿ ಕೇವಲ 10 ಪ್ರತಿಶತದಷ್ಟು ಫಿಟ್ ಆಗಿದ್ದರೂ, ಅವರು ಎಲ್ಲಾ ಪಂದ್ಯಗಳನ್ನು ಆಡಬಹುದು. ಅವರು ಮೊಣಕಾಲಿನ ಗಾಯದ ಹೊರತಾಗಿಯೂ ಕಳೆದ ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರು ಇಡೀ ಸೀಸನ್ ಆಡಿಬೇಕು ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.

6 / 6

Published On - 9:44 pm, Sat, 16 March 24

Follow Us
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ

ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ

ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ

ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು

ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?

ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ

ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ

‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ

ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ

‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್