AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2027: ಮರಳಿ ಡೆಲ್ಲಿಗೆ ರಿಷಭ್ ಪಂತ್, ಲಕ್ನೋ ಸೇರಲಿದ್ದಾರೆ ಕುಲ್ದೀಪ್..!

IPL 2027: 2027ರ ಐಪಿಎಲ್ ಮಾರ್ಚ್ 10ರಿಂದ ಆರಂಭವಾಗಲಿದೆ. ಈ ನಡುವೆ ಇಬ್ಬರು ಸ್ಟಾರ್ ಆಟಗಾರರ ತಂಡ ಬದಲಾವಣೆ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಲಕ್ನೋ ಸೂಪರ್‌ಜೈಂಟ್ಸ್‌ನ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳುವ ಸಾಧ್ಯತೆ ಇದೆ. ಡೆಲ್ಲಿಯ ಕುಲದೀಪ್ ಯಾದವ್ ಲಕ್ನೋ ಸೇರಬಹುದು. ಕನ್ನಡಿಗ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗುವ ವದಂತಿಗಳೂ ಇವೆ.

ಪೃಥ್ವಿಶಂಕರ
|

Updated on: Jun 19, 2026 | 5:43 PM

Share
2026 ರ ಐಪಿಎಲ್ ಮುಗಿದು ತಿಂಗಳು ಕಳೆದಿದೆ. ಮುಂದಿನ ಆವೃತ್ತಿಯ ಐಪಿಎಲ್ ಆರಂಭದ ಬಗ್ಗೆ ಈಗಾಗಲೇ ಮಾಹಿತಿಯೂ ಹೊರಬಿದ್ದಿದೆ. ಆ ಪ್ರಕಾರ 2027 ರ ಐಪಿಎಲ್ ಮಾರ್ಚ್​ 10 ರಿಂದ ಆರಂಭವಾಗಲಿದೆ ಎಂಬ ಮಾಹಿತಿ ಇದೆ. ಈ ನಡುವೆ ಇಬ್ಬರು ಸ್ಟಾರ್ ಆಟಗಾರರು ತಮ್ಮ ತಮ್ಮ ತಂಡಗಳನ್ನು ಬದಲಿಸಲಿದ್ದಾರೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ (PC-PTI).

1 / 6
ಮಾಹಿತಿ ಪ್ರಕಾರ, ಲಕ್ನೋ ಸೂಪರ್​ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ತಂಡವನ್ನು ತೊರೆದು ತಮ್ಮ ಮಾತೃ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಬಹುದು ಎಂದು ಹೇಳಲಾಗುತ್ತಿದೆ. ಹಾಗೆಯೇ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಕುಲ್ದೀಪ್ ಯಾದವ್, ಲಕ್ನೋ ಸೂಪರ್​ಜೈಂಟ್ಸ್ ತಂಡವನ್ನು ಸೇರುವ ಸಾಧ್ಯತೆಗಳಿವೆ (PC-PTI).

2 / 6
2026 ರ ಐಪಿಎಲ್ ಮುಗಿದ ಬೆನ್ನಲ್ಲೇ ರಿಷಭ್ ಪಂತ್ ಲಕ್ನೋ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಆಗಲೇ ಪಂತ್ ತಂಡವನ್ನು ತೊರೆಯುವ ಬಗ್ಗೆ ವದಂತಿಗಳಿದ್ದವು. ಇದೀಗ ಆ ವದಂತಿಗೆ ಮತ್ತಷ್ಟು ರೆಕ್ಕೆಪುಕ್ಕ ಸಿಕ್ಕಿದೆ. ಇದಕ್ಕೆ ಕಾರಣವೂ ಇದ್ದು, ಬರೋಬ್ಬರಿ 27 ಕೋಟಿ ರೂ. ಸಂಭಾವನೆ ಪಡೆಯುವ ಪಂತ್, ಲಕ್ನೋ ತಂಡದ ನಿರೀಕ್ಷೆಗಳಿಗೆ ತಕ್ಕನಾದ ಪ್ರದರ್ಶನವನ್ನು ಇದುವರೆಗೆ ನೀಡಿಲ್ಲ (PC-PTI).

3 / 6
2025 ರ ಮೆಗಾ ಹರಾಜಿನಲ್ಲಿ ಲಕ್ನೋ ಫ್ರಾಂಚೈಸಿ ಪಂತ್​ಗೆ 27 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಆ ಸಮಯದಲ್ಲಿ ಮಾತನಾಡಿದ್ದ ಪಂತ್, ಮುಂದಿನ 10 ವರ್ಷಗಳಲ್ಲಿ ತಂಡವನ್ನು ಹಲವು ಬಾರಿ ಚಾಂಪಿಯನ್ ಮಾಡುವುದಾಗಿ ಹೇಳಿದ್ದರು. ಆದರೆ ತಂಡ ಚಾಂಪಿಯನ್ ಆಗುವುದಿರಲಿ, ಪ್ಲೇಆಫ್​ಗೂ ಅರ್ಹತೆ ಪಡೆಯಲಿಲ್ಲ. ಇತ್ತ ಆಟಗಾರನಾಗಿಯೂ ಪಂತ್ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು (PC-PTI).

4 / 6
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಕುಲ್ದೀಪ್ ಯಾದವ್ ಕೂಡ ತಂಡವನ್ನು ತೊರೆಯುವ ಬಗ್ಗೆ ವದಂತಿ ಇದೆ. ಆದರೆ ಕುಲ್ದೀಪ್ ಯಾವ ಕಾರಣಕ್ಕೆ ಡೆಲ್ಲಿ ತಂಡವನ್ನು ತೊರೆಯುತ್ತಿದ್ದಾರೆ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ಈ ಆವೃತ್ತಿಯಲ್ಲಿ ಕುಲ್ದೀಪ್ ಅವರ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ. ಆಡಿದ 12 ಪಂದ್ಯಗಳಲ್ಲಿ 10 ವಿಕೆಟ್​ಗಳನಷ್ಟೇ ಪಡೆದಿದ್ದರು. ಅವರ ಎಕಾನಮಿ ಕೂಡ ಪ್ರತಿ ಓವರ್‌ಗೆ 10 ರನ್‌ಗಳಿಗಿಂತ ಹೆಚ್ಚಿತ್ತು. ಹೀಗಾಗಿ ಮುಂದಿನ ಸೀಸನ್ ಆರಂಭಕ್ಕೂ ಮುನ್ನ ಕುಲ್ದೀಪ್​ರನ್ನು ತಂಡದಿಂದ ಕೈಬಿಡಲು ಡೆಲ್ಲಿ ಯೋಚಿಸುತ್ತಿದೆ ಎಂದು ವರದಿಯಾಗಿದೆ (PC-PTI).

5 / 6
ಇದರ ಜೊತೆಗೆ ಕೇಳಿಬಂದಿರುವ ಮತ್ತೊಂದು ಮಾಹಿತಿಯ ಪ್ರಕಾರ, ಕನ್ನಡಿಗ ಕೆಎಲ್ ರಾಹುಲ್​ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಹಸ್ತಾಂತರಿಸುವ ಸಾಧ್ಯತೆಗಳಿವೆ. ರಾಹುಲ್ ಈ ಹಿಂದೆ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಹೀಗಾಗಿ ಅಪಾರ ಅನುಭವ ಹೊಂದಿರುವ ರಾಹುಲ್​ಗೆ ನಾಯಕತ್ವ ನೀಡಲು ಫ್ರಾಂಚೈಸಿ ಚಿಂತಿಸಿದೆ ಎಂದು ವರದಿಯಾಗಿದೆ (PC-PTI).

6 / 6
Follow Us
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?

ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ

‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು

ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು

ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ

ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ

ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು

ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್

ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ