AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL: ಅತ್ಯಧಿಕ ಬ್ರಾಂಡ್ ಮೌಲ್ಯ ಹೊಂದಿರುವ ತಂಡ ಆರ್​ಸಿಬಿ; ಸಿಎಸ್​ಕೆಗೆ ಯಾವ ಸ್ಥಾನ?

IPL brand valuation 2026: ಹೌಲಿಹಾನ್ ಲೋಕೆ 2026ರ ಐಪಿಎಲ್ ಬ್ರಾಂಡ್ ಮೌಲ್ಯಮಾಪನ ಅಧ್ಯಯನದ ಪ್ರಕಾರ, ಐಪಿಎಲ್ ವ್ಯವಹಾರ ಮೌಲ್ಯ 2 ಲಕ್ಷ ಕೋಟಿ ರೂ. ತಲುಪಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು $312 ಮಿಲಿಯನ್ ಬ್ರಾಂಡ್ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದೆ, $300 ಮಿಲಿಯನ್ ದಾಟಿದ ಮೊದಲ ಐಪಿಎಲ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈ ಇಂಡಿಯನ್ಸ್, ಕೆಕೆಆರ್, ಮತ್ತು ಸಿಎಸ್​ಕೆ ಕೂಡ ಗಮನಾರ್ಹ ಬ್ರಾಂಡ್ ಮೌಲ್ಯಗಳನ್ನು ಹೊಂದಿವೆ. ಐಪಿಎಲ್ ಜಾಗತಿಕವಾಗಿ ಕ್ರೀಡಾ ಕ್ಷೇತ್ರದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ.

ಪೃಥ್ವಿಶಂಕರ
|

Updated on: Jul 29, 2026 | 7:52 PM

Share
ಅಮೆರಿಕದ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕೆ ಬಿಡುಗಡೆ ಮಾಡಿರುವ 2026 ರ ಐಪಿಎಲ್ ಬ್ರಾಂಡ್ ಮೌಲ್ಯಮಾಪನ ಅಧ್ಯಯನದ ಪ್ರಕಾರ, ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ವ್ಯವಹಾರ ಮೌಲ್ಯವು ಸರಿಸುಮಾರು 2 ಲಕ್ಷ ಕೋಟಿ ರೂ.ಗಳನ್ನು ತಲುಪಿದೆ. ಹಾಗೆಯೇ ಅಧ್ಯಯನದ ಪ್ರಕಾರ, ಕಳೆದ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬ್ರಾಂಡ್ ಮೌಲ್ಯ ಕೂಡ  300 ಮಿಲಿಯನ್ ದಾಟಿದೆ(PC-PTI).

1 / 6
ಐಪಿಎಲ್‌ನಲ್ಲಿ ಅತಿ ಹೆಚ್ಚು ಬ್ರಾಂಡ್ ಮೌಲ್ಯವನ್ನು ಹೊಂದಿರುವ ತಂಡಗಳ ಪಟ್ಟಿಯಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ ಅಗ್ರಸ್ಥಾನದಲ್ಲಿದೆ. ಆರ್‌ಸಿಬಿಯ ಬ್ರಾಂಡ್ ಮೌಲ್ಯ 312 ಮಿಲಿಯನ್ ಅಥವಾ ಅಂದಾಜು 2,600 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಹಾಗೆಯೇ ಬ್ರಾಂಡ್ ಮೌಲ್ಯದಲ್ಲಿ 300 ಮಿಲಿಯನ್ ದಾಟಿದ ಮೊದಲ ಐಪಿಎಲ್ ತಂಡವೆಂಬ ದಾಖಲೆಯೂ ಆರ್‌ಸಿಬಿ ಪಾಲಾಗಿದೆ(PC-PTI).

2 / 6
ಆರ್​ಸಿಬಿ ನಂತರದ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡದ ಬ್ರಾಂಡ್ ಮೌಲ್ಯ 264.0 ಮಿಲಿಯನ್ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮುಂಬೈ ಬ್ರಾಂಡ್ ಮೌಲ್ಯ ಶೇ. 9.1 ರಷ್ಟು ಏರಿಕೆಯಾಗಿದೆ. 2026 ರ ಐಪಿಎಲ್‌ನಲ್ಲಿ ಮುಂಬೈ ಒಂಬತ್ತನೇ ಸ್ಥಾನ ಪಡೆದಿದ್ದರೂ, ತನ್ನ ಹಿಂದಿನ ದಾಖಲೆಗಳು, ತಂಡದ ಮಾಲೀಕತ್ವ ಮತ್ತು ವಾಣಿಜ್ಯ ಪಾಲುದಾರಿಕೆಗಳಿಂದ ತನ್ನ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ(PC-PTI).

3 / 6
3ನೇ ಸ್ಥಾನದಲ್ಲಿರುವ ಕೆಕೆಆರ್ ಬ್ರಾಂಡ್ ಮೌಲ್ಯವು 2025 ರಲ್ಲಿ 227.0 ಮಿಲಿಯನ್ ಆಗಿತ್ತು. ಆದರೆ 2026 ರ ಐಪಿಎಲ್ ನಂತರ ಕೆಕೆಆರ್ ತಂಡದ ಬ್ರಾಂಡ್ ಮೌಲ್ಯ ಶೇ. 7.9% ರಷ್ಟು ಹೆಚ್ಚಾಗಿದ್ದು 245.0 ಮಿಲಿಯನ್ ಆಗಿದೆ. 2024 ರಲ್ಲಿ ಕೆಕೆಆರ್ ಚಾಂಪಿಯನ್ ಆಗುವ ಮೂಲಕ ತನ್ನ ಬ್ರಾಂಡ್ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ(PC-PTI).

4 / 6
ಐದು ಬಾರಿಯ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಕೆಲವು ಆವೃತ್ತಿಗಳಿಂದ ತೀರ ಕಳಪೆ ಪ್ರದರ್ಶನ ನೀಡುತ್ತಿದೆ. ಆದಾಗ್ಯೂ ಸಿಎಸ್​ಕೆ ತಂಡದ ಬ್ರಾಂಡ್ ಮೌಲ್ಯ ಶೇ. 3.8% ರಷ್ಟು ಹೆಚ್ಚಳವಾಗಿದೆ. ಅಂದರೆ ಸಿಎಸ್​ಕೆ ತಂಡದ ಪ್ರಸ್ತುತ ಬ್ರಾಂಡ್ ಮೌಲ್ಯ 244 ಮಿಲಿಯನ್ ಆಗಿದೆ. ಸಿಎಸ್​ಕೆ ಬ್ರಾಂಡ್ ಮೌಲ್ಯ ಗಣನೀಯವಾಗಿ ಏರಿಕೆಯಾಗದಿರಲು ತಂಡದ ಕಳಪೆ ಪ್ರದರ್ಶನದ ಜೊತೆಗೆ ಧೋನಿಯ ಅನುಪಸ್ಥಿತಿಯೂ ಪ್ರಮುಖ ಕಾರಣವಾಗಿದೆ(PC-PTI).

5 / 6
ಉಳಿದಂತೆ ಸನ್‌ರೈಸರ್ಸ್ ಹೈದರಾಬಾದ್ 168.0 ಮಿಲಿಯನ್ ಬ್ರಾಂಡ್ ಮೌಲ್ಯದೊಂದಿಗೆ 5ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್ 161.0 ಮಿಲಿಯನ್​ನೊಂದಿಗೆ 6ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ತಂಡವು 158.0 ಮಿಲಿಯನ್​ನೊಂದಿಗೆ 7 ನೇ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ 157.0 ಮಿಲಿಯನ್​ ಬ್ರಾಂಡ್ ಮೌಲ್ಯದೊಂದಿಗೆ 8 ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 156.0 ಮಿಲಿಯನ್​ನೊಂದಿಗೆ 9 ನೇ ಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ 122.0 ಮಿಲಿಯನ್ ಬ್ರಾಂಡ್ ಮೌಲ್ಯದೊಂದಿಗೆ 10 ನೇ ಸ್ಥಾನದಲ್ಲಿದೆ(PC-PTI).

6 / 6
Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ

ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು

ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!

ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk

37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ

ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ

ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ

ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು

ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ