AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಶತಕಕ್ಕೆ ‘ವೈಭವ’ದ ೮ ದಾಖಲೆಗಳು ಉಡೀಸ್

Vaibhav Sooryavanshi Records: ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 37 ಎಸೆತಗಳಲ್ಲಿ 12 ಭರ್ಜರಿ ಸಿಕ್ಸರ್ ಹಾಗೂ 5 ಫೋರ್​ಗಳೊಂದಿಗೆ 103 ರನ್​ ಬಾರಿಸಿದ್ದರು. ಈ ಭರ್ಜರಿ ಶತಕದೊಂದಿಗೆ ವೈಭವ್ ನಿರ್ಮಿಸಿದ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

ಝಾಹಿರ್ ಯೂಸುಫ್
|

Updated on: Apr 26, 2026 | 9:52 AM

Share
ಕ್ರಿಕೆಟ್ ಎನ್ನುವುದು ಕೇವಲ ಅನುಭವದ ಆಟವಲ್ಲ, ಅದು ಪ್ರತಿಭೆಯ ಪ್ರದರ್ಶನ ಎಂಬುದನ್ನು 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ದಾಳಿಯನ್ನು ಪುಡಿ ಮಾಡಿದ ಸೂರ್ಯವಂಶಿ, ಐಪಿಎಲ್ ಇತಿಹಾಸ ಕಂಡ ಅತ್ಯಂತ ಸ್ಫೋಟಕ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಆಡಿ ಮುಗಿಸಿದ್ದಾರೆ. ಈ ಭರ್ಜರಿ ಇನಿಂಗ್ಸ್​ನೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳ ಮಾಹಿತಿ ಇಲ್ಲಿದೆ...

1 / 9
ಸಿಕ್ಸರ್​ ಕಿಂಗ್:  ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವೈಭವ್ ಅವರ ಬ್ಯಾಟಿಂಗ್ ಎಷ್ಟು ಆಕ್ರಮಣಕಾರಿಯಾಗಿತ್ತೆಂದರೆ, ಮೊದಲ ಓವರ್‌ನಲ್ಲೇ ಪ್ರಫುಲ್ ಹಿಂಗೆ ಬೌಲಿಂಗ್‌ನಲ್ಲಿ 4 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಅಲ್ಲದೆ ಒಟ್ಟು 12 ಸಿಕ್ಸರ್ ಬಾರಿಸುವ ಮೂಲಕ ಐಪಿಎಲ್ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

2 / 9
ವೇಗದ ಶತಕದ ಸರದಾರ: ಐಪಿಎಲ್​ ಇತಿಹಾಸದಲ್ಲೇ 36 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಭರ್ಜರಿ ದಾಖಲೆಯನ್ನು ವೈಭವ್ ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ಸೀಸನ್​ನಲ್ಲಿ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದ ಯುವ ದಾಂಡಿಗ ಇದೀಗ 36 ಎಸೆತಗಳಲ್ಲಿ ಶತಕ ಪೂರೈಸಿ ಈ ದಾಖಲೆ ಬರೆದಿದ್ದಾರೆ.

3 / 9
1000 ರನ್ ಸರದಾರ: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕೇವಲ 15 ವರ್ಷ 29 ದಿನಗಳ ವಯಸ್ಸಿನಲ್ಲಿ 1000 ರನ್ ಪೂರೈಸಿದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯನ್ನು ಕೂಡ ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.

4 / 9
ವೇಗದ 4 ಶತಕಗಳು: ಅತೀ ಕಡಿಮೆ ಇನಿಂಗ್ಸ್​ಗಳಲ್ಲಿ 4 ಟಿ20 ಶತಕಗಳನ್ನು ಬಾರಿಸಿ ಉಸ್ಮಾನ್ ಖಾನ್ (33) ಅವರ ವಿಶ್ವ ದಾಖಲೆಯನ್ನು ಕೂಡ ವೈಭವ್ ಸೂರ್ಯವಂಶಿ ಅಳಿಸಿ ಹಾಕಿದ್ದಾರೆ. ವೈಭವ್ ಕೇವಲ 26 ಇನಿಂಗ್ಸ್​ಗಳ ಮೂಲಕ ಈ ಸಾಧನೆ ಮಾಡಿದ್ದಾರೆ.

5 / 9
ಗೇಲ್ ದಾಖಲೆ ಉಡೀಸ್: ಕೇವಲ 15 ಇನ್ನಿಂಗ್ಸ್‌ಗಳಲ್ಲಿ 50 ಐಪಿಎಲ್ ಸಿಕ್ಸರ್ ಪೂರೈಸುವ ಮೂಲಕ ವೈಭವ್ ಸೂರ್ಯವಂಶಿ ಕ್ರಿಸ್ ಗೇಲ್ (21 ಇನ್ನಿಂಗ್ಸ್) ಅವರ ಭರ್ಜರಿ ದಾಖಲೆಯನ್ನು ಮುರಿದಿದ್ದಾರೆ.

6 / 9
ಅತೀ ವೇಗದ ಅರ್ಧಶತಕ: ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದು ಈ ಸೀಸನ್​ನ ಜಂಟಿ ವೇಗದ ಅರ್ಧಶತಕವಾಗಿದೆ. ಈ ಪಟ್ಟಿಯಲ್ಲಿ ವೈಭವ್ ಜೊತೆ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಭಿಷೇಕ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ.

7 / 9
ಮೂರನೇ ಅತಿ ವೇಗದ ಶತಕ: ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೂರನೇ ಅತ್ಯಂತ ವೇಗದ ಶತಕವಾಗಿದೆ. ಕ್ರಿಸ್ ಗೇಲ್ 30 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.

8 / 9
ವೇಗದ ಸಾವಿರ ರನ್: ವೈಭವ್ ಸೂರ್ಯವಂಶಿ ಕೇವಲ 473 ಎಸೆತಗಳಲ್ಲಿ ಟಿ20 ಕ್ರಿಕೆಟ್​ನಲ್ಲಿ 1000 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ಮಿಚೆಲ್ ಓವನ್ (533 ಎಸೆತಗಳು) ದಾಖಲೆಯನ್ನು ಮುರಿದಿದ್ದಾರೆ.

9 / 9
Follow Us