AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 12 ವರ್ಷಗಳ ಬಳಿಕ ಹೀಗೆ ರನ್ ಗಳಿಸಿದ ವಿರಾಟ್ ಕೊಹ್ಲಿ

India vs South Africa: ರಾಯ್​ಪುರದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 358 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತುವ ಮೂಲಕ ಸೌತ್ ಆಫ್ರಿಕಾ ತಂಡ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on: Dec 04, 2025 | 8:55 AM

Share
ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 135 ರನ್ ಬಾರಿಸಿದ್ದ ಕಿಂಗ್ ಕೊಹ್ಲಿ ರಾಯ್​ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಬರೋಬ್ಬರಿ 102 ರನ್ ಗಳಿಸಿದ್ದಾರೆ.

1 / 5
ವಿಶೇಷ ಎಂದರೆ ಈ ಬಾರಿ ಕಿಂಗ್ ಕೊಹ್ಲಿ ರನ್ ಖಾತೆ ತೆರೆದಿದ್ದು ಭರ್ಜರಿ ಸಿಕ್ಸರ್ ನೊಂದಿಗೆ. ಲುಂಗಿ ಎನ್​ಗಿಡಿ ಎಸೆದ 6ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ಕೊಹ್ಲಿ ಶುಭಾರಂಭ ಮಾಡಿದ್ದರು. ಹೀಗೆ ಸಿಕ್ಸ್ ನೊಂದಿಗೆ ಕೊಹ್ಲಿ ರನ್ ಖಾತೆ ತೆರೆದಿರುವುದು ಬರೋಬ್ಬರಿ 12 ವರ್ಷಗಳ ಬಳಿಕ ಎಂಬುದು ವಿಶೇಷ.

2 / 5
ಇದಕ್ಕೂ ಮುನ್ನ ಹೀಗೆ ಸಿಕ್ಸ್ ಸಿಡಿಸಿ ರನ್ ಖಾತೆ ತೆರೆದಿದ್ದು 2013 ರಲ್ಲಿ. ಕಿಂಗ್​​ಸ್ಟನ್​ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಸಿಕ್ಸ್ ಬಾರಿಸಿ ಇನಿಂಗ್ಸ್ ಆರಂಭಿಸಿದ್ದರು. ಇದಾದ ಬಳಿಕ ಒಮ್ಮೆಯೂ ಅವರು ಸಿಕ್ಸ್ ನೊಂದಿಗೆ ರನ್ ಖಾತೆ ತೆರೆದಿರಲಿಲ್ಲ.

3 / 5
ಇದೀಗ ಬರೋಬ್ಬರಿ 12 ವರ್ಷಗಳ ಬಳಿಕ ಸಿಕ್ಸರ್ ನೊಂದಿಗೆ ಶುಭಾರಂಭ‌ ಮಾಡಿದ್ದಾರೆ. ಈ ಶುಭಾರಂಭದೊಂದಿಗೆ 93 ಎಸೆತಗಳನ್ನು ಎದುರಿಸಿದ ಕೊಹ್ಲಿ 2 ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ 102 ರನ್ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 50 ಓವರ್‌ಗಳಲ್ಲಿ 358 ರನ್ ಕಲೆಹಾಕಿತು.

4 / 5
ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಪರ ಐಡೆನ್ ಮಾರ್ಕ್ರಾಮ್ 110 ರನ್​ಗಳ ಭರ್ಜರಿ ಶತಕ ಸಿಡಿಸಿದರು. ಈ ಸೆಂಚುರಿ ನೆರವಿನೊಂದಿಗೆ ಆಫ್ರಿಕಾ ಪಡೆ 49.2 ಓವರ್​ಗಳಲ್ಲಿ 362 ರನ್​ ಬಾರಿಸಿ 4 ವಿಕೆಟ್​ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಗೊಂಡಿದೆ.

5 / 5
Follow Us
ಮತದಾನಕ್ಕೆ ಸಿದ್ಧತೆ ಜೋರು, ಮತಗಟ್ಟೆಲೇ ಸಿಬ್ಬಂದಿಗೆ ಹೆಲ್ತ್ ಚೆಕಪ್

ಪ್ರಯಾಣಿಕರೆದುರೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಟ್ರಾನ್ಸ್‌ಜೆಂಡರ್

ಊಬರ್ ಕಂಪನಿ ಚಾಲಕರಿಗೆ ಮಾಡೋ ಮೋಸ ಎಂಥದ್ದು ಅಂತ ಬಿಚ್ಚಿಟ್ಟ ಚಾಲಕರು!

ಕಾಲುಂಗರ ಹಾಕಿಕೊಳ್ತಾರೆ ನಟಿ ರಜಿನಿ ಪತಿ ಅರುಣ್ 

ಪೂಜೆ ವೇಳೆ ಪಾದರಕ್ಷೆ ಬಿಡಲು ವೈಷ್ಣೋದೇವಿ ಮಂಡಳಿ ಹೆಚ್ಚುವರಿ ಸಿಇಒ ನಿರಾಕರಣೆ

ಕೇವಲ ಫೋಟೊಗಾಗಿ ತಿಲಕವೇ? ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ನಡೆ

ಬಾಗಲಕೋಟೆ ಬೈ ಎಲೆಕ್ಷನ್: ಕೊನೇ ಹಂತದ ಸಿದ್ಧತೆ ಹೇಗಿದೆ ಗೊತ್ತಾ?

ಪ್ರವಾಸಿಗರನ್ನೇ ದಿಟ್ಟಿಸಿ ನೋಡುತ್ತಾ ಸಾಗಿದ ಹುಲಿರಾಯನ ಖದರ್ ನೋಡಿ!

ಈರುಳ್ಳಿ ಖರೀದಿಗೆಂದು ರೈತ ಸ್ಕೂಟಿಯಲ್ಲಿಟ್ಟಿದ್ದ 5 ಲಕ್ಷ ರೂ. ಕದ್ದ ಕಳ್ಳ

ಬೆಂಗಳೂರು: ಮೈಸೂರು ರಸ್ತೆಯಲ್ಲಿ ಭೀಕರ ಅಪಘಾತ
ಬೆಂಗಳೂರು: ಮೈಸೂರು ರಸ್ತೆಯಲ್ಲಿ ಭೀಕರ ಅಪಘಾತ