ವೈಕುಂಠ ಏಕಾದಶಿ 2021: ವಿಷ್ಣುವಿನ ಈ ಮಂತ್ರಗಳನ್ನು ಪಠಿಸುವುದರಿಂದ ಸಂತೋಷ, ಧನ ಸಮೃದ್ಧಿಯಾಗುತ್ತದೆ
ವೈಕುಂಠ ಏಕಾದಶಿಯಂದು ಉಪವಾಸ ಮಾಡುವುದು ಮತ್ತು ಉಪವಾಸದ ಕಥೆಯನ್ನು ಕೇಳುವುದರಿಂದ ಭಗವಾನ್ ವಿಷ್ಣು ಪ್ರಸನ್ನನಾಗುತ್ತಾನೆ. ಹಾಗೂ ತನ್ನ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ. ಪಂಚಾಂಗದ ಪ್ರಕಾರ ಮಾರ್ಗಶಿರ ಅಥವಾ ಧನುರ್ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವನ್ನು ಮೋಕ್ಷದ ಏಕಾದಶಿ ಅಥವಾ ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತೆ. ಇದು ವರ್ಷದ ಕೊನೆಯ ಏಕಾದಶಿಯಾಗಿದ್ದು ಈ ಬಾರಿ ಡಿಸೆಂಬರ್ 14 ರಂದು ಆಚರಿಸಲಾಗುತ್ತದೆ. ಭಗವಾನ್ ವಿಷ್ಣುವಿಗೆ ತುಪ್ಪದ ದೀಪವನ್ನು ಹಚ್ಚಿ ಪೂಜೆ ಮಾಡಿ ಬಳಿಕ ಈ ಮಂತ್ರವನ್ನು ಏಕಾಗ್ರತೆಯಿಂದ ಪಠಿಸಿದ್ರೆ ನಿಮ್ಮ ಕಷ್ಟಗಳು ದೂರವಾಗುತ್ತವೆ.