- Kannada News Photo gallery Sai Pallavi and Sivakarthikeyan new movie SK 21 muhurtha graced by Kamal Haasan
SK 21: ಸಾಯಿ ಪಲ್ಲವಿ ಹೊಸ ಸಿನಿಮಾಗೆ ಕಮಲ್ ಹಾಸನ್ ಬಂಡವಾಳ; ಶಿವಕಾರ್ತಿಕೇಯನ್ ಹೀರೋ
Kamal Haasan: ಶಿವಕಾರ್ತಿಕೇಯನ್ ನಟನೆಯ ಹೊಸ ಚಿತ್ರದ ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ. ಈ ಸಿನಿಮಾಗೆ ಕಾಶ್ಮೀರದಲ್ಲಿ ಎರಡು ತಿಂಗಳು ಶೂಟಿಂಗ್ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
Updated on:May 06, 2023 | 10:41 AM

ನಟಿ ಸಾಯಿ ಪಲ್ಲವಿ ಅವರು ಪ್ರತಿಬಾರಿ ವಿಶೇಷವಾದ ಕಥೆ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ ಅವರು ಶಿವಕಾರ್ತಿಕೇಯನ್ ಜೊತೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಪೂಜೆ ನೆರವೇರಿದೆ. ಆ ಸಂದರ್ಭದ ಫೋಟೋಗಳು ವೈರಲ್ ಆಗಿವೆ.

ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಸದ್ಯಕ್ಕೆ ಇದನ್ನು ‘ಎಸ್ಕೆ 21’ ಎಂದು ಕರೆಯಲಾಗುತ್ತಿದೆ. ಕಮಲ್ ಹಾಸನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅವರ ರಾಜ್ ಕಮಲ್ ಇಂಟರ್ನ್ಯಾಷನಲ್ ಸಂಸ್ಥೆಯ ಜೊತೆ ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಪ್ರೊಡಕ್ಷಕ್ಸ್ ಕೈ ಜೋಡಿಸಿದೆ.

‘ಎಸ್ಕೆ 21’ ಸಿನಿಮಾದ ಲಾಂಚಿಂಗ್ ವೇಳೆ ಇಡೀ ಚಿತ್ರತಂಡ ಹಾಜರಿ ಹಾಕಿತ್ತು. ಕಮಲ್ ಹಾಸನ್ ಅವರು ಆಗಮಿಸಿದ್ದು ಎಲ್ಲರಿಗೂ ಖಷಿ ನೀಡಿತು. ನಾಯಕ ನಟ ಶಿವಕಾರ್ತಿಯನ್ ಹಾಗೂ ನಾಯಕಿ ಸಾಯಿ ಪಲ್ಲವಿ ಅವರಿಗೆ ಕಮಲ್ ಹಾಸನ್ ಅವರು ಶುಭ ಕೋರಿದರು.

ಕಮಲ್ ಹಾಸನ್ ಅವರು ಕ್ಲ್ಯಾಪ್ ಮಾಡುವ ಮೂಲಕ ಸಿನಿಮಾದ ಕೆಲಸಗಳಿಗೆ ಚಾಲನೆ ನೀಡಿದರು. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ರಾಜ್ಕುಮಾರ್ ಪೆರಿಯಸಾಮಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಜಿ.ವಿ. ಪ್ರಕಾಶ್ ಸಂಗೀತ ನಿರ್ದೇಶನ, ಸಿ.ಎಚ್. ಸಾಯಿ ಛಾಯಾಗ್ರಹಣ, ಆರ್. ಕಲೈವನನ್ ಸಂಕಲನ ಮತ್ತು ಸ್ಟೀಫನ್ ರಿಕ್ಟರ್ ಅವರ ಸಾಹಸ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದೆ. ಗಾಡ್ ಬ್ಲೆಸ್ ಎಂಟರ್‌ಟೈನ್‌ಮೆಂಟ್ ಕೂಡ ನಿರ್ಮಾಣದಲ್ಲಿದೆ ಕೈ ಜೋಡಿಸಿದೆ. ಕಾಶ್ಮೀರದಲ್ಲಿ ಶೂಟಿಂಗ್ ನಡೆಯಲಿದೆ.
Published On - 7:15 am, Sat, 6 May 23




