ಸಲ್ಲು ಜೊತೆ ಕಾರು ಡ್ರಿಫ್ಟ್ ಮಾಡಿದ ಧೋನಿ; ಫಾರ್ಮ್ಹೌಸ್ನಲ್ಲಿ ಮಸ್ತಿ
ನಟ ಸಲ್ಮಾನ್ ಖಾನ್ ಹಾಗೂ ಕ್ರಿಕೆಟರ್ ಎಂಎಸ್ ಧೋನಿ ಮಧ್ಯೆ ಒಳ್ಳೆಯ ಒಡನಾಟ ಇದೆ. ಇದು ಆಗಾಗ ಸಾಬೀತಾಗುತ್ತಾ ಇರುತ್ತದೆ. ಈಗ ಸಲ್ಲು ಫಾರ್ಮ್ಹೌಸ್ನಲ್ಲಿ ಸೇರಿರೋ ಇವರು ಕಾರುಗಳನ್ನು ಡ್ರಿಫ್ಟ್ ಮಾಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.
Updated on: Jan 14, 2026 | 1:18 PM

ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಎಂಎಸ್ ಧೋನಿಗೆ ವಾಹನಗಳ ಬಗ್ಗೆ ವಿಶೇಷ ಕ್ರೇಜ್ ಇದೆ. ಈಗ ಸಲ್ಮಾನ್ ಖಾನ್ ಫಾರ್ಮ್ಹೌಸ್ಗೆ ತೆರಳಿರೋ ಅವರು ವಾಹನವೊಂದನ್ನು ಓಡಿಸಿ ಅದನ್ನು ಡ್ರಿಫ್ಟ್ ಮಾಡಿ ಗಮನ ಸೆಳೆದಿದ್ದಾರೆ.

ಸಿಂಗರ್ ಎಪಿ ದಿಲ್ಲೋನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಧೋನಿ ಹಾಗೂ ಸಲ್ಲು ಹೆಗಲಮೇಲೆ ಕೈ ಹಾಕಿ ನಿಂತಿದ್ದಾರೆ.

ಧೋನಿ ಅವರು ರೇನ್ಕೋಟ್ ಹಾಕಿ ಪೋಸ್ ಕೊಟ್ಟಿದ್ದಾರೆ. ಸಲ್ಮಾನ್ ಖಾನ್ ಫಾರ್ಮ್ಹೌಸ್ನಲ್ಲಿ ಅವರು ಸಮಯ ಕಳೆದಿದ್ದಾರೆ ಎನ್ನಲಾಗಿದೆ. ಪಾರ್ಟಿ ಮಾಡೋಕೆ ಇವರು ಆಗಾಗ ಒಟ್ಟಿಗೆ ಸೇರುತ್ತಾರೆ ಎಂಬುದು ವಿಶೇಷ.

ಚಿಕ್ಕದಾದ ವಾಹನದಲ್ಲಿ ಇವರು ತೆರಳಿದ್ದು, ಇದನ್ನು ಮನಸ್ಸೋ ಇಚ್ಛೆ ಡ್ರಿಫ್ಟ್ ಮಾಡಿದ್ದಾರೆ. ಡ್ರೈವಿಂಗ್ ಸೀಟ್ನಲ್ಲಿ ಧೋನಿ ಇದ್ದರು ಎನ್ನಲಾಗಿದೆ. ದಿಲ್ಲೋನ್ ಅವರು ಕಾರ ಹಿಂಭಾಗದಲ್ಲಿ ನಿಂತಿದ್ದರು.

ಸಲ್ಮಾನ್ ಖಾನ್ ಅವರು ಧೋನಿ, ರಾಮ್ ಚರಣ್, ಬಾಬಿ ಡಿಯೋಲ್ ಸೇರಿದಂತೆ ದೊಡ್ಡ ಗೆಳೆಯರ ಬಳಗ ಹೊಂದಿದ್ದಾರೆ. ಬರ್ತ್ಡೇ ಸೇರಿದಂತೆ ಅನೇಕ ವಿಶೇಷ ಸಂದರ್ಭದಲ್ಲಿ ಇವರು ಒಟ್ಟಿಗೆ ಸೇರುತ್ತಾರೆ,




