Updated on: Mar 27, 2024 | 7:05 PM
ರವಿತೇಜ ನಟಿಸಿ ಎಸ್ಎಸ್ ರಾಜಮೌಳಿ ನಿರ್ದೇಶನ ಮಾಡಿರುವ 2006 ರಲ್ಲಿ ಬಿಡುಗಡೆ ಆಗಿದ್ದ ‘ವಿಕ್ರಮಾರ್ಕುಡು’ ಸಿನಿಮಾ ರವಿತೇಜ ಚಿತ್ರ ಜೀವನದ ಅತಿ ದೊಡ್ಡ ಹಿಟ್ಗಳಲ್ಲಿ ಒಂದು.
ರವಿತೇಜ ನಟನೆಯ ‘ವಿಕ್ರಮಾರ್ಕುಡು’ ಸಿನಿಮಾ ಖಡಕ್ ಪೊಲೀಸ್ ಅಧಿಕಾರಿ ಹಾಗೂ ಕಳ್ಳನ ಕತೆಯ ಜೊತೆಗೆ ಅಪ್ಪ-ಮಗಳ ನಡುವಿನ ಬಾಂಧವ್ಯದ ಕತೆಯೂ ಸಹ ಹೌದು.
‘ವಿಕ್ರಮಾರ್ಕುಡು’ ಸಿನಿಮಾನಲ್ಲಿ ರವಿತೇಜ ಮಗಳ ಪಾತ್ರದಲ್ಲಿ ಬೇಬಿ ನೇಹಾ ನಟಿಸಿದ್ದರು. ಪುಟ್ಟ ಬಾಲಕಿಯ ನಟನೆಯ ಅದ್ಭುತವಾಗಿತ್ತು. ಬಾಲಕಿಯ ನಟನೆಯನ್ನು ಸಿನಿಮಾ ಪ್ರೇಮಿಗಳು ಮೆಚ್ಚಿಕೊಂಡಿದ್ದರು.
‘ವಿಕ್ರಮಾರ್ಕುಡು’ ಸಿನಿಮಾದ ಬೇಬಿ ನೇಹಾ ಈಗ ಯುವತಿ ನೇಹಾ ಆಗಿದ್ದಾರೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೇಹಾ ಸಿನಿಮಾಗಳಿಂದ ಬಹುತೇಕ ದೂರವಾಗಿಬಿಟ್ಟಿದ್ದಾರೆ.
ಆದರೆ ವಿದೇಶದಲ್ಲಿ ಗೆಳೆಯ-ಗೆಳತಿಯರೊಟ್ಟಿಗೆ ಜೀವನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಬದುಕಿನ ಖುಷಿಯ ಕ್ಷಣಗಳ ಚಿತ್ರಗಳನ್ನು ನೇಹಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ದಂತ ವೈದ್ಯೆಯಾಗಿ ಯುಎನ್ಇ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ನೇಹಾ ಶರ್ಮಾ ವಿದ್ಯಾರ್ಥಿ ದೆಸೆಯ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ.
ಬಾಲ್ಯದಲ್ಲಿ ನಟಿಯಾಗಿದ್ದ ನೇಹಾ ಶರ್ಮಾ ಈಗ ಸಂಗೀತಗಾರ್ತಿಯಾಗಿ ಗುರುತು ಪಡೆಯುವ ಪ್ರಯತ್ನದಲ್ಲಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸಂಗೀತಗಾರ್ತಿ ಎಂದು ಬರೆದುಕೊಂಡಿದ್ದಾರೆ.