AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಳಂಬವಾದ್ರು ಬಿಜೆಪಿ ಮಹಿಳಾ ಮೀಸಲಾತಿ ಬಿಲ್ ಜಾರಿ ಮಾಡುತ್ತೆ: ಸಂಸದ ತೇಜಸ್ವಿ ಸೂರ್ಯ

ಸಂಸದ ತೇಜಸ್ವಿ ಸೂರ್ಯ, ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಕಾಂಗ್ರೆಸ್ ನಿಲುವನ್ನು ಟೀಕಿಸಿದ್ದಾರೆ. 1992ರಿಂದಲೂ ಬಿಜೆಪಿ ಈ ಮಸೂದೆಗೆ ಬೆಂಬಲ ನೀಡಿದೆ, ಆದರೆ ಕಾಂಗ್ರೆಸ್ ನಿರಂತರವಾಗಿ ವಿಳಂಬ ಮಾಡುತ್ತಿದೆ. 2023ರಲ್ಲಿ ಬಿಜೆಪಿ ಮಸೂದೆಯನ್ನು ಅಂಗೀಕರಿಸಿತು. 2011ರ ಜನಗಣತಿ ಆಧಾರದ ಮೇಲೆ ಜಾರಿಗೊಳಿಸಲು ಮುಂದಾದರೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದಿದ್ದಾರೆ.

ವಿಳಂಬವಾದ್ರು ಬಿಜೆಪಿ ಮಹಿಳಾ ಮೀಸಲಾತಿ ಬಿಲ್ ಜಾರಿ ಮಾಡುತ್ತೆ: ಸಂಸದ ತೇಜಸ್ವಿ ಸೂರ್ಯ
ಬಿಜೆಪಿ ಸಂಸದ ತೇಜಸ್ವಿ ಸೂರ್ಯImage Credit source: tv9 kannada
Sunil MH
| Edited By: |

Updated on: Apr 19, 2026 | 3:08 PM

Share

ಬೆಂಗಳೂರು, ಏಪ್ರಿಲ್​ 19: ಮಹಿಳಾ ಮೀಸಲಿಗೆ (Women’s Reservation Bill) ಸೋಲು ಆಗಿರುವುದು ರಾಜ್ಯದಲ್ಲೂ ಕಿಚ್ಚು ಹಚ್ಚಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಮಣಿಯರು ಸಿಡಿದೆದಿದ್ದಾರೆ. ರಾಜ್ಯ ವಿವಿಧೆಡೆ ಪ್ರತಿಭಟನೆ ಮಾಡಲಾಗುತ್ತಿದೆ. ಬೆಂಗಳೂರಿನ ಜೆಪಿ ನಗರದ ಆರ್​.ವಿ.ಕಾಲೇಜು ಬಳಿ ಬಿಜೆಪಿ ಕಾರ್ಯಕರ್ತೆಯರು ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಭಾಗಿಯಾಗಿದ್ದು, ಹೆಣ್ಣು ಮಕ್ಕಳು ನಮ್ಮ ಜೊತೆ‌ ಕೂರಬಾರದು ಅಂತ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ನೂರಕ್ಕೆ ನೂರು ಈ ಬಿಲ್ ಜಾರಿ ಮಾಡುತ್ತೇವೆ. ಸ್ವಲ್ಪ ವಿಳಂಬ ಆಗಬಹುದು ಆದರೆ ಬಿಜೆಪಿ ಮಾಡುತ್ತದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​​ನ ಲಾಜಿಕ್ ಅರ್ಥ ಆಗುತ್ತಿಲ್ಲ ಎಂದ ತೇಜಸ್ವಿ ಸೂರ್ಯ

ಬಿಬಿಎಂಪಿ ತೆಗೆದು 5 ಮಹಾನಗರ ಪಾಲಿಕೆಗಳನ್ನಾಗಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಳ ಆಗಿದೆ ಅಂತಾ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಹೇಳುತ್ತಾರೆ. 198 ಇದ್ದ ವಾರ್ಡ್​​ಗಳನ್ನು ಜಿಬಿಎ ಮಾಡಿ 369ಕ್ಕೆ ಹೆಚ್ಚಿಸಿದ್ದಾರೆ. ಬೆಂಗಳೂರಿನಲ್ಲಿ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಡಿಲಿಮಿಟೇಶನ್ (ಕ್ಷೇತ್ರ ಮರು ವಿಂಗಡಣೆ) ಮಾಡಿದರೆ ತೊಂದರೆಯಿಲ್ಲ ಎನ್ನುವ ಕಾಂಗ್ರೆಸ್, ಸಂಸತ್ ಮಟ್ಟದಲ್ಲಿ ಮಾಡಿದರೆ ಇವರಿಗೆ ತೊಂದರೆ ಆಗುತ್ತಾ. ಇದರಲ್ಲಿ ಕಾಂಗ್ರೆಸ್ ಲಾಜಿಕ್ ಅರ್ಥ ಆಗುತ್ತಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮೂರು ವಿಧೇಯಕ ಮಿಕ್ಸ್ ಮಾಡಿದ್ದರಿಂದ ಬಿದ್ದೋಗಿದೆ: ಮಹಿಳಾ ಮೀಸಲಾತಿಗೆ ನಮ್ಮ ವಿರೋಧ ಇಲ್ಲ; ಸಿಎಂ ಸಿದ್ದರಾಮಯ್ಯ

1992ರಿಂದ ಮಹಿಳಾ ಮೀಸಲಾತಿ ಬಿಲ್​ ಬಗ್ಗೆ ಚರ್ಚೆ ನಡೆಯುತ್ತಿದೆ. ಮೀಸಲಾತಿ ವಿಚಾರದಲ್ಲಿ ಆಗಿನಿಂದಲೂ ಬಿಜೆಪಿ ನಿಲುವು ಒಂದೇ ಇದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಆದಷ್ಟು ಬೇಗ ಕೊಡಬೇಕು. ಇದು ಭಾರತೀಯ ಜನತಾ ಪಕ್ಷದ ನಿಲುವಾಗಿದೆ. ಲೋಕಸಭೆಯಲ್ಲಿ ಬಿಲ್ ಚರ್ಚೆಗೆ ಬಂದಾಗಲೆಲ್ಲಾ ಬಿಜೆಪಿ ಬೆಂಬಲಿಸಿದೆ ಎಂದರು.

ಮಹಿಳಾ ಮೀಸಲಾತಿ ಮಸೂದೆಯನ್ನ ಕಾಂಗ್ರೆಸ್ 1992ರಿಂದ ಸೋಲಿಸುತ್ತಾ ಬರುತ್ತಿದೆ

1992ರಿಂದ ಇಲ್ಲಿಯವರೆಗೆ ಮಹಿಳಾ ಮೀಸಲಾತಿ ಮಸೂದೆಯನ್ನ ಕಾಂಗ್ರೆಸ್ ಪಕ್ಷವು ಹೇಗಾದರೂ ಮಾಡಿ ಸೋಲಿಸುತ್ತಾ ಬರುತ್ತಿದೆ. ಲಾಲೂಪ್ರಸಾದ್​, ಮುಲಾಯಂ ಸಿಂಗ್ ಮೂಲಕ ಬಿಲ್ ಸೋಲಿಸಿದರು. ಅವರೆಲ್ಲಾ ಇನ್ನೊಮ್ಮೆ ಸೇರಿ ಲೋಕಸಭೆಯಲ್ಲಿ ಪ್ರತಿ ಹರಿದುಹಾಕಿದರು. ಬಿಜೆಪಿ ಸರ್ಕಾರ 2023ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಅಂಗೀಕಾರಗೊಳಿಸ್ತು. 40 ವರ್ಷದಿಂದ ಬಾಕಿ ಇದ್ದ ಬಿಲ್ 2023ರಲ್ಲಿ ಲೋಕಸಭೆಯಲ್ಲಿ ಬಿಲ್​ ಪಾಸ್ ಮಾಡಿ ಜಾರಿ ಮಾಡಿದ್ದು ಬಿಜೆಪಿ. ಬಿಜೆಪಿ ವಿಪಕ್ಷ ಆಗಿದ್ದಾಗೆಲ್ಲ ಮಹಿಳಾ ಮೀಸಲಾತಿಗೆ ಬೆಂಬಲಿಸಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಮಹಿಳಾ ವಿರೋಧಿ ಎಂದ ಬಿಜೆಪಿ: ದೇಶದ ಮಹಿಳೆಯರ ಗೆಲುವು ಎಂದ ಕೈ; ನಾಯಕರ ಕೆಸರೆರಚಾಟ

2023ರಲ್ಲಿ ಬಿಲ್ ಪಾಸ್ ಆದಾಗ ಜಾರಿ ಮಾಡುವ ಉದ್ದೇಶ ಇತ್ತು. ಹೊಸ ಜನಗಣತಿ ಆಧಾರದ ಮೇಲೆ ಜಾರಿ ಮಾಡುವ ಉದ್ದೇಶ ಇತ್ತು. 2011ರ ಜನಗಣತಿ ಆಧಾರದಲ್ಲೇ ಮಹಿಳಾ ಮೀಸಲಾತಿ ಜಾರಿಗೆ ನಿರ್ಧರಿಸಿತ್ತು. ಅದರಂತೆ ಜಾರಿಗೆ ಮುಂದಾಗಿದಕ್ಕೆ ಅದಕ್ಕೂ ಕಾಂಗ್ರೆಸ್​​ ಕಲ್ಲುಹಾಕಿದೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us