ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ ಆಗುತ್ತೇನೆ: ಯತ್ನಾಳ್​

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಪರವಾಗಿ ಮತಯಾಚಿಸಿದ ಬಳಿಕ ಅಥಣಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಮುಂದಿನ ಮುಖ್ಯಮಂತ್ರಿ ನಾನೇ ಎಂದಿದ್ದಾರೆ.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ ಆಗುತ್ತೇನೆ: ಯತ್ನಾಳ್​
ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​
Follow us
Sahadev Mane
| Updated By: ವಿವೇಕ ಬಿರಾದಾರ

Updated on:Apr 12, 2024 | 9:04 AM

ಬೆಳಗಾವಿ, ಏಪ್ರಿಲ್​ 12: ರಾಜ್ಯದಲ್ಲಿ ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Yatnal Patil) ಹೇಳಿದರು. ಗುರುವಾರ (ಏ.11) ರಂದು ಅಥಣಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೇ ಉತ್ತರ ಕರ್ನಾಟಕದ, ನಾನೇ ಮುಖ್ಯಮಂತ್ರಿಯಾಗುತ್ತೇನೆ. ಜಾತಿ ಜಾತಿ ಅಂತ ನೋಡದೆ, ದೇಶ ಉಳಿಸುವುದಕ್ಕಾಗಿ ಎಲ್ಲರೂ ವೋಟ್ ಹಾಕಿ ಎಂದರು.

ಜಾರಕಿಹೊಳಿ ಅವರ ಕಾಲಿಗೆ ನಮಸ್ಕರಿಸಿ, ಸಾಹುಕಾರ್ ಸಾಹುಕಾರ್ ಯಾಕೆ ಅನ್ನುತ್ತೀರಿ. ಅವರ ಮನೆಯ ತೊಟ್ಟಿಲನಲ್ಲಿರುವ ಕಂದಮ್ಮಗಳಿಗೂ ನಮಸ್ಕರಿಸುತ್ತೀರಿ. ಯಾಕೆ ನಿಮಗೆ ಸ್ವಾಭಿಮಾನ ಇಲ್ಲವೇ? ನಿಮ್ಮ ಜಮೀನಿನಲ್ಲಿ ಕಬ್ಬು ಬೆಳಯುತ್ತೀರಾ ಅಥವಾ ಅವರ ಜಮೀನಿನಲ್ಲಿ ಬೆಳೆಯುತ್ತೀರಾ? ಯಾರಿಗೂ ನಮಸ್ಕರಿಸಬೇಡಿ, ಸ್ವಾವಲಂಭಿಗಳಾಗಿ. ಪ್ರಧಾನಿ ನರೇಂದ್ರ ಮೋದಿಯವರೇ ಕಾಲಿಗೆ ನಮಸ್ಕಾರ ಮಾಡಿಸಿಕೊಳ್ಳುವುದಿಲ್ಲ. ಅಂದಮೇಲೆ ಇವರ ಕಾಲಿಗೆ ಏಕೆ ನಮಸ್ಕಾರ ಮಾಡುತ್ತೀರಿ ಎಂದು ಗುಡುಗಿದರು.

ಇದನ್ನೂ ಓದಿ: ಬಸನಗೌಡ ಪಾಟೀಲ್ ಯತ್ನಾಳ್ ಮಾತುಗಳಲ್ಲಿ ವೈರಾಗ್ಯದ ಛಾಯೆ ಇಣುಕುತ್ತಿರುವುದು ಆಶ್ಚರ್ಯ ಮೂಡಿಸುತ್ತದೆ!

ನಾನು ಯಾರಿಗೂ ಅಪ್ಪಾಜಿ ಅಪ್ಪಾಜಿ ಅಂತ ಕಾಲಿಗೆ ನಮಸ್ಕರಿಸುವುದಿಲ್ಲ. ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ನಾನು ಯಾರಿಗೂ ವಂಚನೆ ಮಾಡುವುದಿಲ್ಲ. ರೈತರು ಬರಗಾಲ ಬರಲಿ ಅಂತ ಬಯಸುತ್ತಾರೆ, ಐದು ಲಕ್ಷದ ಆಸೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಹೇಳಿದರು. ವಿಧಾನಸೌಧದಲ್ಲಿ ಇದೇ ವಿಚಾರದಲ್ಲಿ ನನಗೂ ಅವರಿಗೂ ಜಗಳ ಆಯ್ತು. ನಾನು ಹಾಗೇ ಅಂದಿಲ್ಲ ಅಂದರು. ನಿನ್ನ ಮೇಲೆ ಕೇಸ್ ಹಾಕುತ್ತೇನೆ ಅಂದರು. ನನ್ನ ಮೇಲೆ ಈಗಾಗಲೆ 100 ಕೇಸ್​ ಇದೆ, ಇದೊಂದು ಹೆಚ್ಚಲ್ಲ, ಕೇಸ್​ ಹಾಕಿ ಅಂದೆ ಎಂದು ಯತ್ನಾಳ್ (ಅಧಿವೇಶನದಲ್ಲಿ ಸಚಿವ ಶಿವನಾಂದ ಪಾಟೀಲ್​ ಮತ್ತು ತಮ್ಮ ಮಧ್ಯೆ ನಡೆದ ಮಾತಿನ ಜಟಾಪಟಿಯನ್ನು) ಸಭೆಯಲ್ಲಿ ಹೇಳಿದರು.

ಇಂದು ಗ್ಯಾರಂಟಿ ಗ್ಯಾರಂಟಿ ಅಂತಿದ್ದಾರೆ, ಆದರೆ ದೇಶ ಉಳಿದರೆ ಮಾತ್ರ ಗ್ಯಾರಂಟಿ ಜಾರಿಯಲ್ಲಿರುತ್ತದೆ. ದೇಶ ಉಳಿಯದಿದ್ದರೆ, ಮುಸ್ಲಿಂರೆಲ್ಲ ಒಂದಾದರೆ ಹಿಂದೂಗಳ ಜಮೀನು ಉಳಿಯಲ್ಲ, ಮನೆನೂ ಉಳಿಯಲ್ಲ. ಒಂದು ಮತಾಂತರವಾಗಬೇಕು, ಇಲ್ಲ ಸಾಯಬೇಕು ಇವೆರಡೇ ಆಯ್ಕೆ ಉಳಿಯುತ್ತೆ. ನಮ್ಮ ಅಜ್ಜ, ಮುತ್ತಜ್ಜರು ಟಿಪ್ಪು ಸುಲ್ತಾನ್ ವಿರುದ್ಧ, ಔರಂಗಜೇಬನ ವಿರುದ್ಧ ಹೋರಾಟ ಮಾಡಿದ್ದಕ್ಕೆ ಹಿಂದೂಗಳು ಉಳಿದಿದ್ದೇವೆ. ನಾವು ಯಾರಾದರೂ ಹಿಂದೂಗಳಾಗಿ ಉಳಿದಿದ್ದರೆ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯದಿಂದ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:59 am, Fri, 12 April 24