Rajya Sabha Election 2022 ರಾಜ್ಯಸಭಾ ಚುನಾವಣೆ ನಾಳೆ; ಯಾವ ರಾಜ್ಯದಲ್ಲಿ ಎಷ್ಟು ಸೀಟುಗಳಿವೆ? ಹೀಗಿರಲಿದೆ ಚುನಾವಣಾ ಪ್ರಕ್ರಿಯೆ
ಉತ್ತರ ಪ್ರದೇಶದಲ್ಲಿ 11ಸೀಟುಗಳು ಖಾಲಿ ಇದ್ದು, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ 6, ಬಿಹಾರದಲ್ಲಿ 5, ಆಂಧ್ರ ಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದಲ್ಲಿ 4 ಸೀಟುಗಳಿಗೆ ಚುನಾವಣೆ ನಡೆಯಲಿದೆ.
15 ರಾಜ್ಯಗಳಲ್ಲಿರುವ 57 ರಾಜ್ಯ ಸಭಾ ಸೀಟುಗಳಿಗೆ ನಾಳೆ (ಜೂನ್ 10ರಂದು) ಚುನಾವಣೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ಜೂನ್ ಮತ್ತು ಆಗಸ್ಟ್ ನಡುವೆ ವಿವಿಧ ದಿನಾಂಕಗಳಲ್ಲಿ ಸದಸ್ಯರ ನಿವೃತ್ತಿಯಿಂದಾಗಿ ಖಾಲಿಯಾಗಿ ಉಳಿದಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ, ಕಾಂಗ್ರೆಸ್ ನಾಯಕರಾದ ಅಂಬಿಕಾ ಸೋನಿ, ಜೈರಾಮ್ ರಮೇಶ್ ಮತ್ತು ಕಪಿಲ್ ಸಿಬಲ್ ಮತ್ತು ಬಿಎಸ್‌ಪಿಯ ಸತೀಶ್ ಚಂದ್ರ ಮಿಶ್ರಾ ಅವರು ನಿವೃತ್ತಿಯಾಗುತ್ತಿರುವವರಲ್ಲಿ ಪ್ರಮುಖರು. ಮತದಾನದ ಮುಕ್ತಾಯದ ಒಂದು ಗಂಟೆಯ ನಂತರ ಎಣಿಕೆ ನಡೆಯಲಿದೆ. ಚುನಾಯಿತರಾದ ಹೆಚ್ಚಿನ ಹೊಸ ಸದಸ್ಯರು ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವ ಸಾಧ್ಯತೆಯಿದೆ.
ರಾಜ್ಯ ಸಭಾ ಚುನಾವಣೆ: ಯಾವ ರಾಜ್ಯದಲ್ಲಿ ಎಷ್ಟು ಸೀಟು?
ಉತ್ತರ ಪ್ರದೇಶದಲ್ಲಿ 11ಸೀಟುಗಳು ಖಾಲಿ ಇದ್ದು, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ 6, ಬಿಹಾರದಲ್ಲಿ 5, ಆಂಧ್ರ ಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದಲ್ಲಿ 4 ಸೀಟುಗಳಿಗೆ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶ ಮತ್ತು ಒಡಿಶಾದಿಂದ ತಲಾ ಮೂವರು, ತೆಲಂಗಾಣ, ಛತ್ತೀಸ್‌ಗಢ, ಪಂಜಾಬ್, ಜಾರ್ಖಂಡ್ ಮತ್ತು ಹರ್ಯಾಣದಿಂದ ತಲಾ ಇಬ್ಬರು ಮತ್ತು ಉತ್ತರಾಖಂಡದಿಂದ ಒಬ್ಬರು ಸಹ ನಿವೃತ್ತರಾಗಿದ್ದಾರೆ.
ರಾಜ್ಯಗಳ ಪಟ್ಟಿ ಮತ್ತು ಅಲ್ಲಿ ತೆರವಾಗಿರುವ ರಾಜ್ಯಸಭಾ ಸೀಟುಗಳ ಸಂಖ್ಯೆ
ಉತ್ತರ ಪ್ರದೇಶ – 11
ಮಹಾರಾಷ್ಟ್ರ – 6
ತಮಿಳುನಾಡು – 6
ಬಿಹಾರ – 5
ರಾಜಸ್ಥಾನ – 4
ಆಂಧ್ರ ಪ್ರದೇಶ – 4
ಕರ್ನಾಟಕ – 4
ಮಧ್ಯಪ್ರದೇಶ – 3
ಒಡಿಶಾ – 3
ಪಂಜಾಬ್ – 2
ಹರ್ಯಾಣ – 2
ಜಾರ್ಖಂಡ್ – 2
ತೆಲಂಗಾಣ – 2
ಛತ್ತೀಸ್‌ಗಢ – 2
ಉತ್ತರಾಖಂಡ – 1
ರಾಜ್ಯಸಭಾ ಸೀಟುಗಳ ಲೆಕ್ಕಾಚಾರ
ಪ್ರಸ್ತುತ ಬಿಜೆಪಿಯಲ್ಲಿ 95 ಸಂಸದರು, ಕಾಂಗ್ರೆಸ್ನಲ್ಲಿ 29 ಹೀಗೆ ಒಟ್ಟು ಸದನದಲ್ಲಿ 245ಸದಸ್ಯರಿದ್ದಾರೆ. ಆಂಧ್ರಪ್ರದೇಶದಲ್ಲಿ ಬಿಜೆಪಿಯು ಸೋಲನ್ನು ಅನುಭವಿಸಲು ಸಿದ್ಧವಾಗಿದೆ. ಅಲ್ಲಿ ಅದು ಮೂರು ಹೊರಹೋಗುವ ಸದಸ್ಯರನ್ನು ಹೊಂದಿದೆ. ಜಾರ್ಖಂಡ್ ಮತ್ತು ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ತನ್ನ ಸಾಧನೆಯನ್ನು ಮಾಡುವ ಭರವಸೆಯಲ್ಲಿದೆ. ಬಿಜೆಪಿ ರಾಜ್ಯಸಭೆಯಲ್ಲಿ 100 ಮಾರ್ಕ್ ಅನ್ನು ಮುಟ್ಟಿದಾಗ ಪ್ರಮುಖ ಮೈಲಿಗಲ್ಲನ್ನು ದಾಟಿತು, ಇದು 1988 ರಲ್ಲಿ ಕಾಂಗ್ರೆಸ್ ಸಾಧಿಸಿದ ಸಾಧನೆಯಾಗಿದೆ. ತನ್ನ ಚುನಾವಣಾ ಭರವಸೆಗಳನ್ನು ಪೂರ್ಣಗೊಳಿಸಲು ಮಿತ್ರಪಕ್ಷಗಳೊಂದಿಗೆ ಮ್ಯಾಜಿಕ್ ಫಿಗರ್ 123 ರ ಸಮೀಪದಲ್ಲಿರಲು ಅದು ಆಶಿಸುತ್ತಿದೆ.
ಪಂಜಾಬ್‌ನಿಂದ ಅಕಾಲಿದಳದ ಏಕೈಕ ಸದಸ್ಯ ಬಲ್ವಿಂದರ್ ಸಿಂಗ್ ಭುಂದರ್ ಮತ್ತು ಕಾಂಗ್ರೆಸ್‌ನ ಅಂಬಿಕಾ ಸೋನಿ ಅವರು ಆಮ್ ಆದ್ಮಿ ಪಕ್ಷದ ಸದಸ್ಯರಿಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ. ಉತ್ತರ ಪ್ರದೇಶದಿಂದ ನಿವೃತ್ತರಾಗಿರುವ 11 ರಾಜ್ಯಸಭಾ ಸದಸ್ಯರಲ್ಲಿ ಐವರು ಬಿಜೆಪಿ ಸಂಸದರಿದ್ದಾರೆ. ಮಿತ್ರಪಕ್ಷಗಳೊಂದಿಗೆ ಬಿಜೆಪಿ ಎಂಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಆದರೆ ಪ್ರತಿಪಕ್ಷ ಸಮಾಜವಾದಿ ಪಕ್ಷವು ತನ್ನ ಮೂರು ಸ್ಥಾನಗಳನ್ನು ಉಳಿಸಿಕೊಳ್ಳಬಹುದು.
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸಮ್ಮಿಶ್ರವು ತಾನು ಹೊಂದಿರುವ ಎಲ್ಲಾ ಮೂರು ಸ್ಥಾನಗಳಲ್ಲಿ ತನ್ನ ಗೆಲುವು ಸಾಧಿಸುವ ನಿರೀಕ್ಷೆ ಇದ್ದು, ಬಿಜೆಪಿ ತನ್ನ ಮೂರು ಸ್ಥಾನಗಳಲ್ಲಿ ಎರಡನ್ನು ಆರಾಮವಾಗಿ ಗೆಲ್ಲಬಹುದು.
ಈ ಚುನಾವಣೆಯಲ್ಲಿ ಮೇಲ್ಮನೆಯಲ್ಲಿ ಬಿಎಸ್‌ಪಿಯ ಅಸ್ತಿತ್ವವು ಕೇವಲ ಒಂದಕ್ಕೆ ಇಳಿಯುವ ಸಾಧ್ಯತೆಯಿದೆ.
ಇದನ್ನೂ ಓದಿ: Rajya Sabha elections ರಾಜ್ಯಸಭಾ ಚುನಾವಣೆ ಹೇಗೆ ನಡೆಯುತ್ತದೆ? ಮತದಾನ ಪ್ರಕ್ರಿಯೆ ಹೇಗಿರುತ್ತದೆ? ಇಲ್ಲಿದೆ ಮಾಹಿತಿ
ನಾಲ್ಕು ರಾಜ್ಯಗಳಲ್ಲಿ ನಡೆಯಲಿದೆ ಜಿದ್ದಾಜಿದ್ದಿನ ಪೈಪೋಟಿ
57 ರಾಜ್ಯಸಭಾ ಸದಸ್ಯರಲ್ಲಿ 41 ಮಂದಿ 11 ರಾಜ್ಯಗಳಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕ ಮತ್ತು ಹರ್ಯಾಣದಲ್ಲಿ ಉಳಿದ 16 ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.
ಮಹಾರಾಷ್ಟ್ರ
ಮಹಾರಾಷ್ಟ್ರದಿಂದ ಆಯ್ಕೆಯಾಗುವ ಆರು ರಾಜ್ಯಸಭಾ ಸಂಸದರು ಗೆಲ್ಲಲು 42 ಮತಗಳ ಅಗತ್ಯವಿದೆ. ಆಡಳಿತಾರೂಢ ಎಂವಿಎ 151 ಮತಗಳನ್ನು ಹೊಂದಿದ್ದು ಮೂರು ಸ್ಥಾನಗಳನ್ನು ಗೆಲ್ಲಲು ಸಾಕಾಗುತ್ತದೆ, ಆದರೆ ಅದು ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮತ್ತೊಂದೆಡೆ, ಬಿಜೆಪಿ 106 ಶಾಸಕರನ್ನು ಹೊಂದಿದೆ ಮತ್ತು ಎರಡು ಸ್ಥಾನಗಳನ್ನು ಗೆಲ್ಲಬಹುದು. ಆದರೆ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎಂವಿಎಗೆ ಇನ್ನೂ 15 ಮತಗಳ ಅಗತ್ಯವಿದೆ, ಬಿಜೆಪಿಯು ಇನ್ನೂ 13 ಸ್ಥಾನಗಳನ್ನು ಗಳಿಸಲಿದೆ. ಎಂವಿಎ ಮತ್ತು ಬಿಜೆಪಿ ಎರಡೂ ಸಣ್ಣ ಪಕ್ಷಗಳು ಮತ್ತು 25 ಪಕ್ಷೇತರ ಶಾಸಕರನ್ನು ಓಲೈಸುತ್ತಿದೆ.
ಕರ್ನಾಟಕ
121 ಶಾಸಕರನ್ನು ಹೊಂದಿರುವ ಬಿಜೆಪಿ ಮತ್ತು 70 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನವನ್ನು ಗೆಲ್ಲುವುದು ಖಚಿತ. ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ರಾಜ್ಯಸಭಾ ಸ್ಥಾನವನ್ನು ಗೆಲ್ಲುವ ಸಂಖ್ಯಾಬಲದ ಕೊರತೆಯ ಹೊರತಾಗಿಯೂ 32 ಶಾಸಕರನ್ನು ಹೊಂದಿರುವ ಜೆಡಿಎಸ್ ತನ್ನ ಏಕೈಕ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ನಾಲ್ಕನೇ ಸ್ಥಾನಕ್ಕಾಗಿ ಲೆಹರ್ ಸಿಂಗ್ ಸಿರೋಯಾ (ಬಿಜೆಪಿ), ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್) ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ. ನಾಲ್ಕನೇ ಸ್ಥಾನವನ್ನು ಗೆಲ್ಲಲು ಅಗತ್ಯವಿರುವ ಮತಗಳನ್ನು ಮೂರು ಪಕ್ಷಗಳೂ ಹೊಂದಿಲ್ಲ, ಅದಕ್ಕಾಗಿಯೇ ಅವರು ಪರಸ್ಪರ ಬೆಂಬಲವನ್ನು ಕೋರುತ್ತಿದ್ದಾರೆ.
ಹರ್ಯಾಣ
ಜೆಜೆಪಿ ಮತ್ತು ಬಿಜೆಪಿ ಎರಡೂ ಪಕ್ಷಗಳ ಬೆಂಬಲಿತ ಮಾಧ್ಯಮ ಉದ್ಯಮಿ ಕಾರ್ತಿಕೇಯ ಶರ್ಮಾ ಅವರ ಪ್ರವೇಶವು ಹೆಚ್ಚಿನ ಕುತೂಹಲ ಹುಟ್ಟಿಸಿದೆ. ಶರ್ಮಾ ಅವರ ಪ್ರವೇಶವು ಮೇಲ್ಮನೆಯಲ್ಲಿ ಎರಡನೇ ಅವಧಿಗೆ ಕಣ್ಣಿಟ್ಟಿರುವ ಕಾಂಗ್ರೆಸ್‌ನ ಅಜಯ್ ಮಾಕೆನ್‌ಗೆ ಪೈಪೋಟಿ ನೀಡಲಿದೆ. ಶರ್ಮಾ ಅವರಿಗೆ ಗೆಲ್ಲಲು 31 ಮತಗಳ ಅಗತ್ಯವಿದೆ ಅಂದರೆ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕಿಂತ ನಾಲ್ಕು ಮತ ಹೆಚ್ಚು. ಕಾಂಗ್ರೆಸ್ 31 ಸ್ಥಾನಗಳನ್ನು ಹೊಂದಿದ್ದರೂ ಅದರ ಪಾಳಯದಿಂದ ಅಡ್ಡ ಮತದಾನದ ಭಯವಿದೆ. ಪಕ್ಷದ ಎಲ್ಲಾ 10 ಶಾಸಕರು ಶರ್ಮಾ ಅವರನ್ನು ಬೆಂಬಲಿಸಲಿದ್ದಾರೆ ಎಂದು ಜೆಜೆಪಿ ನಾಯಕ ಅಜಯ್ ಸಿಂಗ್ ಚೌಟಾಲ ಹೇಳಿದ್ದಾರೆ.
ರಾಜಸ್ಥಾನ
ಬಿಜೆಪಿ ಬೆಂಬಲಿತ ಮತ್ತೋರ್ವ ಮಾಧ್ಯಮ ದೊರೆ ಸುಭಾಷ್ ಚಂದ್ರ ಅವರು ಕಾಂಗ್ರೆಸ್‌ನ ಪ್ರಮೋದ್ ತಿವಾರಿ ಅವರಿಗೆ ಸವಾಲೊಡ್ಡುವ ನಾಲ್ಕನೇ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ. 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಪ್ರತಿ ಅಭ್ಯರ್ಥಿ ಗೆಲುವಿಗೆ 41 ಮತಗಳ ಅಗತ್ಯವಿದೆ. ಕಾಂಗ್ರೆಸ್ 108 ಶಾಸಕರನ್ನು ಹೊಂದಿದ್ದು, ಬಿಜೆಪಿ 71 ಮತಗಳನ್ನು ಹೊಂದಿದೆ. ಬಿಜೆಪಿ 30 ಹೆಚ್ಚುವರಿ ಮತಗಳನ್ನು ಹೊಂದಿದ್ದು, ಎರಡನೇ ಸ್ಥಾನ ಗೆಲ್ಲಲು ಇನ್ನೂ 11 ಮತಗಳ ಅಗತ್ಯವಿದೆ. ಮೂರನೇ ಸ್ಥಾನವನ್ನು ಗೆಲ್ಲಲು ಕಾಂಗ್ರೆಸ್‌ಗೆ ಇನ್ನೂ 15 ಮತಗಳ ಅಗತ್ಯವಿದೆ. ಆದ್ದರಿಂದ, ಯಾರು ಸ್ಥಾನವನ್ನು ಗೆಲ್ಲುತ್ತಾರೆ ಎಂಬುದರಲ್ಲಿ ಸಣ್ಣ ಪಕ್ಷಗಳು ಮತ್ತು ಪಕ್ಷೇತರರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. (Source)
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ