AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತೀಶ್ ಜಾರಕಿಹೊಳಿ ಹೊಸ ಬಾಂಬ್: ‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ

ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ಮತ್ತು ಕೆಲವು ಸಚಿವರ ಅಸಮಾಧಾನದ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಸ್ಥಿತಿಯನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಮೋಷನ್ ಬಯಕೆ ಸಾಮಾನ್ಯವಾಗಿದ್ದರೂ, ಎಲ್ಲರಿಗೂ ನೀಡಲು ಸಾಧ್ಯವಿಲ್ಲ ಎಂದ ಜಾರಕಿಹೊಳಿ, ತನಗೆ ಯಾವುದೇ ಅಸಮಾಧಾನವಿಲ್ಲ ಮತ್ತು ರಾಜೀನಾಮೆ ನೀಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸತೀಶ್ ಜಾರಕಿಹೊಳಿ ಹೊಸ ಬಾಂಬ್: ‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ
ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿImage Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on: Jun 05, 2026 | 4:09 PM

Share

ಬೆಂಗಳೂರು, ಜೂ.5: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಉಂಟಾಗಿರುವ ಭಿನ್ನಾಭಿಪ್ರಾಯ ಹಾಗೂ ರಾಜೀನಾಮೆ ಗದ್ದಲದ ನಡುವೆ, ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಅವರು ಅತ್ಯಂತ ಸಮಚಿತ್ತದ ಹಾಗೂ ವಾಸ್ತವಿಕ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕರ ಅಸಮಾಧಾನದ ಬೆಂಕಿಯನ್ನು ನಂದಿಸುವ ಸಂಪೂರ್ಣ ಸಾಮರ್ಥ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದಾರೆ. ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಸಚಿವ ಸ್ಥಾನದ ರಾಜೀನಾಮೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅತ್ಯಂತ ಹಗುರವಾಗಿ ಉತ್ತರಿಸಿದ ಜಾರಕಿಹೊಳಿ, “ಅವರು ರಾಜೀನಾಮೆ ಕೊಟ್ಟಿದ್ದಾರೆ ಅಷ್ಟೇ. ಆದರೆ ಈ ಇಡೀ ಪರಿಸ್ಥಿತಿಯನ್ನು ಸಮಾಧಾನಪಡಿಸುವ ಹಾಗೂ ಪರ್ಯಾಯ ವ್ಯವಸ್ಥೆ ಮಾಡುವ ಸಂಪೂರ್ಣ ಸಾಮರ್ಥ್ಯ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳು ಸರಿಹೋಗುತ್ತವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಸಚಿವ ಕೆ.ಎಚ್. ಮುನಿಯಪ್ಪ ಅವರ ಅಸಮಾಧಾನದ ಕುರಿತು ಮಾತನಾಡಿದ ಅವರು, “ರಾಜಕಾರಣದಲ್ಲಿ ಪ್ರಮೋಷನ್ ಅಥವಾ ಉನ್ನತ ಹುದ್ದೆಗಳ ಬಯಕೆ ಇರುವುದು ತೀರಾ ಸಾಮಾನ್ಯ. ಆದರೆ ಎಲ್ಲರಿಗೂ ಉನ್ನತ ಸ್ಥಾನಗಳನ್ನು ನೀಡಲು ಸಾಧ್ಯವಿಲ್ಲ, ಕೆಲವರಿಗೆ ಮಾತ್ರ ಅದು ಲಭ್ಯವಾಗುತ್ತದೆ. ಈ ಎಲ್ಲ ಗೊಂದಲಗಳನ್ನು ಸಿಎಂ ಬಗೆಹರಿಸಲಿದ್ದಾರೆ, ಅಲ್ಲಿಯವರೆಗೆ ಒಂದು-ಎರಡು ದಿನ ಕಾಯೋಣ” ಎಂದು ಹೇಳಿದ್ದಾರೆ.

ನಿಮಗೆ ಡಿಸಿಎಂ (DCM) ಸ್ಥಾನ ಅಥವಾ ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನ ಸಿಗದಿರುವುದು ಅಸಮಾಧಾನ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಆಸೆ ಇತ್ತು, ಆದರೆ ಏನು ಮಾಡಲಿಕ್ಕೆ ಆಗಲ್ಲ. ಸಿಕ್ಕಿದ್ದಕ್ಕೆ ಸಮಾಧಾನ, ತೃಪ್ತಿ ಪಡಬೇಕು ಅಷ್ಟೇ” ಎಂದು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳ ಬಗ್ಗೆ ಹೇಳಿದ್ದಾರೆ. ಅಲ್ಲದೆ, ತಾವು ರಾಜೀನಾಮೆ ನೀಡುವ ಬಗ್ಗೆ ಸ್ಪಷ್ಟವಾಗಿ ನಿರಾಕರಿಸಿದ ಸಚಿವರು, “ರಾಜೀನಾಮೆ ಯಾಕೆ ಕೊಡಬೇಕು? ಅದರ ಅವಶ್ಯಕತೆ ಇಲ್ಲ. ನಮಗೆ ಯಾವ ಖಾತೆ ಇದೆಯೋ, ಅದನ್ನೇ ಮುಂದುವರಿಸಿದ್ದಾರೆ, ನಾನು ಕೆಲಸ ಮಾಡುತ್ತೇನೆ” ಎಂದರು.

ಇದನ್ನೂ ಓದಿ: ರಾಮಲಿಂಗಾ ರೆಡ್ಡಿ ರಾಜೀನಾಮೆ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಹೆಚ್​ಕೆ ಪಾಟೀಲ್ ಶಾಕಿಂಗ್ ಮಾತು

ಸಚಿವರುಗಳಲ್ಲಿ ಮೊದಲು ನೊಂದವರು ನೀವು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ನೋವೂ ಇಲ್ಲ, ಸಂತೋಷವೂ ಇಲ್ಲ, ದುಃಖವೂ ಇಲ್ಲ ಎಂದು ಹೇಳುವ ಮೂಲಕ ಪ್ರಸ್ತುತ ರಾಜಕೀಯ ಹೈಡ್ರಾಮಾದ ನಡುವೆ ತಾವು ಸಂಪೂರ್ಣ ಸಮಚಿತ್ತದಿಂದ ಇರುವುದಾಗಿ ಈ ಮೂಲಕ ಹೇಳಿಕೊಂಡಿದ್ದಾರೆ. ಜಾರಕಿಹೊಳಿ ಅವರ ಈ ನಡೆ ಸಂಪುಟದ ಇತರ ರೆಬೆಲ್ ನಾಯಕರಿಗೆ ಪರೋಕ್ಷ ಸಂದೇಶ ರವಾನಿಸಿದಂತಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ
ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ
ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್​​: ಯುವಕ ಅರೆಸ್ಟ್
ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್​​: ಯುವಕ ಅರೆಸ್ಟ್
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು?
ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್ ಸಾವು, ಆಪ್ತ ಗೆಳೆಯ ಹೇಳಿದ್ದೇನು?
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಜೂ 28ರಂದು ರಾಷ್ಟ್ರೀಯ ಲಸಿಕಾ ದಿನ: ಚಿಕ್ಕ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮುತ್ತತ್ತಿ ದುರಂತ: ಕೊನೇ ಕ್ಷಣದ ವಿಡಿಯೋ ವೈರಲ್
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಕ್ರಸ್ಟ್ ಗೇಟ್‌ಗಳು ಲೋಕಾರ್ಪಣೆ
ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ