Science and Environment : ಜೀವವೆಂಬ ಜಾಲದೊಳಗೆ; ಏನಿದು ಮರಳುಕಾಗದದ ಎಲೆ?

Sandpaper Tree : ನಮ್ಮ ಮನೆಯಲ್ಲಿ ಹಬ್ಬ ಬಂದಾಗೆಲ್ಲ ದೇವರಪೀಠವನ್ನು ಯಾವುದೋ ಎಲೆಯಿಂದ ಉಜ್ಜಿ ತೊಳೆಯುತ್ತಿದ್ದರು. ಆ ಬಗ್ಗೆ ಒಂದಿಷ್ಟು ಮಾಹಿತಿ ಕೊಡಿ ಎಂದಿದ್ದಾರೆ ಹೊಸನಗರ ಮೂಲದ ಮಂಜುಳಾ ಅವರು.

Science and Environment : ಜೀವವೆಂಬ ಜಾಲದೊಳಗೆ; ಏನಿದು ಮರಳುಕಾಗದದ ಎಲೆ?
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jul 01, 2022 | 5:04 PM

ಜೀವವೆಂಬ ಜಾಲದೊಳಗೆ | Jeevavemba Jaaladolage : ಇತ್ತೀಚೆಗೆ ಈ ಎಲೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲವಾದರೂ ಒಂದಿಷ್ಟು ದಶಕಗಳ ಹಿಂದೆ ಮಲೆನಾಡಿನ ಎಲ್ಲ ಮನೆಗಳಲ್ಲಿ ಈ ಎಲೆಯ ಉಪಯೋಗ ತಿಳಿದಿತ್ತು. ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆಯೆ ಬರುವ ಸಾಲುಸಾಲು ಹಬ್ಬಗಳ ತಯಾರಿಗೆ ಮೊದಲ ಹೆಜ್ಜೆಯೆ ದೇವರ ಪೀಠ, ಮನೆಯಲ್ಲಿನ ಮರದ ಮಣೆಗಳು ಎಲ್ಲವನ್ನೂ ಸ್ವಚ್ಛಗೊಳಿಸುವ ಕೆಲಸ. ಈ ಸ್ವಚ್ಛತಾ ಕಾರ್ಯಕ್ಕೆ ಬಳಕೆಯಾಗುತ್ತಿದ್ದುದು ಸಂಪೂರ್ಣವಾಗಿ ಪರಿಸರ ಸ್ನೇಹಿಯಾದ ಅಂಟುವಾಳ ಪುಡಿ ಹಾಗೂ ಗರಗತ್ತನ ಸೊಪ್ಪು. ಗರಗತ್ತಿ ಅಥವಾ ಖರ್ಗಸ ಮಧ್ಯಮ ಗಾತ್ರದ ನಿತ್ಯ ಹರಿದ್ವರ್ಣ ಮರ. ಇಂಗ್ಲೀಷಿನಲ್ಲಿ ಇದರ ಸಾಮಾನ್ಯ ನಾಮಧೇಯ ಸ್ಯಾಂಡ್ ಪೇಪರ್ ಟ್ರೀ; ಹೆಸರೇ ಸೂಚಿಸುವಂತೆ ಮರಳುಕಾಗದದಂತಿರುವ ಎಲೆಗಳ ಮರ. ಅಂಡಾಕಾರದ ದೊಡ್ಡ ದೊಡ್ಡ ಎಲೆಗಳ ಮೇಲ್ಮೈ ತುಂಬಾ ಒರಟಾಗಿದ್ದು ಮರಳು ಕಾಗದವನ್ನು ಹೋಲುವುದರಿಂದ ಈ ಹೆಸರು. ಸುಮಾ ಸುಧಾಕಿರಣ, ಪರಿಸರ ವಿಜ್ಞಾನ ಲೇಖಕಿ (Suma Sudhakiran) 

ಇದು  Moraceae ಕುಟುಂಬಕ್ಕೆ ಸೇರಿದೆ. ವೈಜ್ಞಾನಿಕ ನಾಮಧೇಯ Ficus asperrima. ಹಣ್ಣುಗಳು ಅತ್ತಿಯ ಹಣ್ಣುಗಳ ಗಾತ್ರದಲ್ಲಿದ್ದು ಕೆನ್ನೀಲಿ ಛಾಯೆಯನ್ನು ಹೊಂದಿವೆ. ಸಸ್ಯರಸ ಹಾಗೂ ತೊಗಟೆಗಳು ಅನೇಕ ಔಷಧೀಯ ಗುಣ ಹೊಂದಿದ್ದು, ಆಯುರ್ವೇದ ಔಷಧಗಳಲ್ಲಿ ಬಳಕೆಯಾಗುತ್ತದೆ.

ಮಳೆ ಹೆಚ್ಚಾಗಿರುವ ಪ್ರದೇಶದಲ್ಲಿ ಬೆಳೆವ ಮರಗಿಡಗಳು ಎಲೆಯ ಮೇಲೆ ನೀರು ಹೆಚ್ಚಾಗಿ ನಿಲ್ಲದಂತೆ ನೋಡಿಕೊಳ್ಳಲು ಹಾಗೂ ಸೂಕ್ಷ್ಮಾಣುಗಳ ದಾಳಿ ತಪ್ಪಿಸಿಕೊಳ್ಳಲು ಅನೇಕ ಉಪಾಯಗಳನ್ನು ಅನುಸರಿಸುತ್ತವೆ. ಎಲೆಗಳ ಒರಟು ಮೇಲ್ಮೈ ಅವುಗಳ ಮೇಲೆ ನೀರು ಅಂಟಿಕೊಳ್ಳದಂತೆ ತಡೆಯುತ್ತದೆ; ಶಿಲೀಂದ್ರಗಳು ಬೆಳೆಯುವುದನ್ನು ತಡೆಯುತ್ತದೆ. ಎಲೆಗಳಲ್ಲಿರುವ ಸ್ಟೊಮ್ಯಾಟಾ ಎಂಬ ಪುಟ್ಟ ಪುಟ್ಟ ರಂಧ್ರಗಳ ಮೂಲಕ ಮರಗಿಡಗಳು ಉಸಿರಾಡುತ್ತವೆ. ಆದರೆ ಇದೇ ರಂಧ್ರಗಳು ಶಿಲೀಂದ್ರ, ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಾಣುಗಳು ಸಸ್ಯದೊಳಗೆ ನುಗ್ಗಿ ದಾಳಿ ನೆಡೆಸಲು ದಾರಿಯಾಗುತ್ತವೆ!

ಇದನ್ನೂ ಓದಿ
Image
ಹಾದಿಯೇ ತೋರಿದ ಹಾದಿ: ನಮ್ಮ ಹಾವಾಡಿಗರು ಎಲ್ಲೂ ಹೋಗಿಲ್ಲ ಇಲ್ಲೇ ಹೀಗೇ ಇದ್ದಾರೆ
Image
ಹಾದಿಯೇ ತೋರಿದ ಹಾದಿ: ನೀರಿನಾಳಕ್ಕಿಳಿದು ಶವತೆಗೆವ ಬಾಬಾ ಅಣ್ಣು ಸಿದ್ದಿ ಸಾಹಸಗಾಥೆ
Image
ಹಾದಿಯೇ ತೋರಿದ ಹಾದಿ: ಈ ‘ಅರಸು’ ಆಳಾಗಿ ದುಡಿಯಲು ಸಿದ್ಧನಿದ್ದಾನೆ
Image
Nomad: ಹಾದಿಯೇ ತೋರಿದ ಹಾದಿ; ‘ನಮ್ಮ ದೇಶದ ಸ್ಥಿತಿಗತಿಯನ್ನೇ ಕಲೆಯ ಮೂಲಕ ತೋರಿಸುತ್ತ ಹೊರಟಿದ್ದೇವೆ’

ಇದನ್ನೂ ಓದಿ : Science and Environment : ಜೀವವೆಂಬ ಜಾಲದೊಳಗೆ: ಪಕ್ಷಿಯಾದರೂ ಪೆಂಗ್ವಿನ್ ಯಾಕೆ ಹಾರದು?

ಎಲೆಗಳ ಮೇಲೆ ಬೀಳುವ ಶಿಲೀಂದ್ರದ ಸ್ಪೋರ್ ಮೊಳೆತು ಹೈಪೆ ಎಂಬ ನಾಳಗಳನ್ನು ಈ ಸ್ಟೊಮ್ಯಾಟ ರಂಧ್ರದ ಮೂಲಕ ಎಲೆಯೊಳಗೆ ತೂರಿ ಆಹಾರವನ್ನು ಹೀರಿ ಬೆಳೆಯುತ್ತದೆ. ಸ್ವಲ್ಪ ಉಬ್ಬಿರುವ ಸ್ಟೊಮ್ಯಾಟದ ಅಕ್ಕಪಕ್ಕದ ಕೋಶಗಳನ್ನು ಗುರುತಿಸಿ ಅಲ್ಲಿ ರಂಧ್ರವಿದೆಯೆಂದು ಅರಿಯುತ್ತದೆ ಈ ಶಿಲೀಂದ್ರದ ಹೈಪೆ. ಹಾಗಾಗಿ ಅದಕ್ಕೆ ಗೊಂದಲ ಉಂಟುಮಾಡಲು ಮೇಲ್ಮೈನ ಅನೇಕ ಕೋಶಗಳು ಉಬ್ಬಿದಂತೆ ರಚಿತವಾಗುತ್ತವೆ. ಹೀಗಾಗಿ ಮೇಲ್ಮೈ ಒರಟಾಗುತ್ತದೆ. ಇದರಿಂದ ಹೈಪೆಗೆ ಸುಲಭವಾಗಿ ರಂಧ್ರ ದೊರಕದೆ ಒಣಗಿಹೋಗುತ್ತದೆ. ಗಿಡ ಅದರ ದಾಳಿಯಿಂದ ತಪ್ಪಿಸಿಕೊಳ್ಳುತ್ತದೆ.

ಇದನ್ನೂ ಓದಿ : Science: ಜೀವವೆಂಬ ಜಾಲದೊಳಗೆ : ಏನಿದು ಮ್ಯೂಸಿಲೇಜ್​ನ ಮ್ಯಾಜಿಕ್?

ಮರಳು ಕಾಗದ ಅಥವಾ ಸ್ಯಾಂಡ್ ಪೇಪರ್ ಅನ್ನು ಮರ, ಉಕ್ಕು ಮೊದಲಾದವುಗಳ ಮೇಲ್ಮೈಯನ್ನು ಉಜ್ಜಿ ಮೃದುವಾಗಿಸಲು, ಗೋಡೆಗಳಿಂದ ಪೈಂಟ್ ತೆಗೆಯಲು, ಯಾವುದೇ ಮೇಲ್ಮೈ ಸ್ವಚ್ಛಗೊಳಿಸಲು ಉಪಯೋಗಿಸುತ್ತಾರೆ. ಮರಳು ಕಾಗದದ ಹಾಗೆಯೆ ಕೆಲಸ ಮಾಡುವ, ಮನೆಯ ಹಿಂದಿನ ಬೆಟ್ಟದಲ್ಲೇ ಸುಲಭವಾಗಿ ದೊರಕುವ ಗರಗತ್ತಿ ಮರದ ಎಲೆಗಳನ್ನು ಮನೆಯಲ್ಲಿನ ಮರದ ವಸ್ತುಗಳ ಕೊಳೆಯನ್ನು ತೆಗೆಯಲು ಉಪಯೋಗಿಸುತ್ತಿದ್ದುದು ಮಲೆನಾಡವಾಸಿಗಳ ಜಾಣ್ಮೆ. ಸಾಗರ ಸೊರಬ ಮೊದಲಾದೆಡೆ ಇರುವ ಗುಡಿಕೈಗಾರಿಕೆಗಳ ಕುಶಲಕರ್ಮಿಗಳು ಶ್ರೀಗಂಧದ ಕೆತ್ತನೆ ಕೆಲಸಗಳಿಗೆ ಮೆರಗು ಕೊಡಲು ಇದೇ ಎಲೆಗಳನ್ನು ಬಳಸುತ್ತಿದ್ದರಂತೆ.