Savitribai Phule Birth Anniversary: ಮಹಿಳೆಯರಿಗಾಗಿ ಹೋರಾಡಿದ, ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮ ದಿನ

ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿ, ಹೆಣ್ಣು ಮಕ್ಕಳಿಗಾಗಿ 18 ಶಾಲೆಗಳನ್ನು ತೆರೆದಿದ್ದಾರೆ. ಪತಿ ಜ್ಯೋತಿರಾವ್ ಜೊತೆಗೂಡಿ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ರು. 1848 ರಲ್ಲಿ ಪುಣೆಯಲ್ಲಿ ಸಾವಿತ್ರಿಬಾಯಿ ಮತ್ತು ಅವರ ಪತಿ ಜ್ಯೋತಿರಾವ್ ಅವರು ದೇಶದ ಮೊದಲ ಹೆಣ್ಣುಮಕ್ಕಳ ಶಾಲೆಯನ್ನು ತೆರೆದರು.

Savitribai Phule Birth Anniversary: ಮಹಿಳೆಯರಿಗಾಗಿ ಹೋರಾಡಿದ, ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮ ದಿನ
ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ
Follow us
TV9 Web
| Updated By: ಆಯೇಷಾ ಬಾನು

Updated on: Jan 03, 2022 | 3:59 PM

ಮಹಿಳಾ ಶಿಕ್ಷಣದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಿಳಾ ವಿಮೋಚಕಿ, ದೇಶದ ಮೊದಲ ಮಹಿಳಾ ಶಿಕ್ಷಕಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿಬಾಯಿ ಫುಲೆ ಅವರ 191ನೇ ಜನ್ಮದಿನಾಚರಣೆ ಇಂದು. ಹೆಣ್ಣು ಹುಟ್ಟೋದೆ ತಪ್ಪು, ಜನಿಸಿದ್ರು ನಾಲ್ಕು ಗೋಡೆಗಳ ಮಧ್ಯೆಯೇ ಅವಳ ಜೀವನ ಎನ್ನುತ್ತಿದ್ದ ಕಾಲದಲ್ಲಿ ಹೆಣ್ಣು ಮಕ್ಕಳೂ ಶಿಕ್ಷಣ ಪಡೆಯಬೇಕು, ಅವರಿಗೂ ಶಿಕ್ಷಣದಲ್ಲಿ ಸಮಾನವಾದ ಹಕ್ಕು ದೊರೆಯಬೇಕೆಂದು ಹೋರಾಡಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ.

1831 ರ ಜನವರಿ 3 ರಂದು ಅಂದ್ರೆ ಈ ದಿನ, ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯ ನೈಗಾಂವ್‌ನಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದರು. ಅವರು ಮಹಿಳೆಯರ ಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಭಾರತದಲ್ಲಿ ಮಹಿಳಾ ಶಿಕ್ಷಣದ ನಾಯಕಿಯಾದರು. ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಆಧುನಿಕ ಸ್ತ್ರೀವಾದಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 1840 ರಲ್ಲಿ, ಒಂಬತ್ತನೆಯ ವಯಸ್ಸಿನಲ್ಲಿ, ಸಾವಿತ್ರಿಬಾಯಿ 13 ವರ್ಷದ ಜ್ಯೋತಿರಾವ್ ಫುಲೆ ಅವರನ್ನು ವಿವಾಹವಾದರು. ಬಾಲ್ಯವಿವಾಹ, ಸತಿಯಂತಹ ಅನಿಷ್ಟಗಳ ವಿರುದ್ಧ ಧ್ವನಿ ಎತ್ತಿದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿ, ಹೆಣ್ಣು ಮಕ್ಕಳಿಗಾಗಿ 18 ಶಾಲೆಗಳನ್ನು ತೆರೆದಿದ್ದಾರೆ. ಪತಿ ಜ್ಯೋತಿರಾವ್ ಜೊತೆಗೂಡಿ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ರು. 1848 ರಲ್ಲಿ ಪುಣೆಯಲ್ಲಿ ಸಾವಿತ್ರಿಬಾಯಿ ಮತ್ತು ಅವರ ಪತಿ ಜ್ಯೋತಿರಾವ್ ಅವರು ದೇಶದ ಮೊದಲ ಹೆಣ್ಣುಮಕ್ಕಳ ಶಾಲೆಯನ್ನು ತೆರೆದರು.

ಸಾವಿತ್ರಿಬಾಯಿ ಫುಲೆ ತಮ್ಮ ಗಂಡ ಜ್ಯೋತಿರಾವ್ ಪುಲೆಯವರನ್ನು ಗುರುವಾಗಿ ಪರಿಗಣಿಸಿದ್ದರು ಹಾಗೂ 1847 ರಲ್ಲಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ. ಆಗ ಇವರಿಗೆ 17 ವರ್ಷವಾಗಿತ್ತು. ಸಾವಿತ್ರಿಬಾಯಿ ಅವರು ಮಹಿಳೆಯರ ಹಕ್ಕುಗಳಿಗಾಗಿ ಕೆಲಸ ಮಾಡಿದ್ದು ಮಾತ್ರವಲ್ಲದೆ ಸಮಾಜದಲ್ಲಿ ಪ್ರಚಲಿತದಲ್ಲಿರುವ ಭ್ರಷ್ಟ ಜಾತಿ ವ್ಯವಸ್ಥೆಯ ವಿರುದ್ಧವೂ ಹೋರಾಡಿದರು. ಜಾತಿ ಪದ್ಧತಿಯನ್ನು ತೊಡೆದುಹಾಕುವ ಭಾಗವಾಗಿ, ಅವರು ಅಸ್ಪೃಶ್ಯರಿಗಾಗಿ ತಮ್ಮ ಮನೆಯಲ್ಲಿ ಬಾವಿಯನ್ನು ನಿರ್ಮಿಸಿದರು. ಸಾವಿತ್ರಿಬಾಯಿ ಸಮಾಜ ಸುಧಾರಕಿ ಮಾತ್ರವಲ್ಲ, ತತ್ವಜ್ಞಾನಿ ಮತ್ತು ಕವಿಯೂ ಆಗಿದ್ದರು. ಅವರ ಕವಿತೆಗಳು ಹೆಚ್ಚಾಗಿ ಪ್ರಕೃತಿ, ಶಿಕ್ಷಣ ಮತ್ತು ಜಾತಿ ಪದ್ಧತಿಯ ನಿರ್ಮೂಲನೆಯನ್ನು ಕೇಂದ್ರೀಕರಿಸಿದ್ದವು.

ಅತ್ಯಾಚಾರ ಸಂತ್ರಸ್ತರ ಕರುಣಾಜನಕ ಸ್ಥಿತಿಯನ್ನು ನೋಡಿ, ಅವರು ತಮ್ಮ ಪತಿಯೊಂದಿಗೆ ಸಂತ್ರಸ್ತರಿಗೆ ಆರೈಕೆ ಕೇಂದ್ರವನ್ನು ತೆರೆದರು. ದೇಶದಲ್ಲಿ ಜಾತಿ ವ್ಯವಸ್ಥೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದರು. ಅವರು ತಮ್ಮ ಪತಿಯೊಂದಿಗೆ ‘ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು, ಇದು ಪುರೋಹಿತರು ಮತ್ತು ವರದಕ್ಷಿಣೆ ಇಲ್ಲದೆ ವಿವಾಹಗಳನ್ನು ನಡೆಸಿತು.

ಸಾವಿತ್ರಿಬಾಯಿ ಫುಲೆ ಮೇಲೆ ಕೆಸರು ಸೆಗಣಿ ಎರಚಿ ಕಲ್ಲುಗಳನ್ನು ಎಸೆದ್ರು ಹೆಣ್ಣು ಮಕ್ಕಳು ಮನೆಬಿಟ್ಟು ಹೊರಗೆ ಬಂದು ಅದರಲ್ಲೂ ಪುರುಷ ಪ್ರಧಾನ ಹಿಂದೂ ಧರ್ಮದಲ್ಲಿ ಅಕ್ಷರ ಕಲಿಸುವುದು ಅಪಚಾರವೆಂದು ಬಗೆದ ಸಾರ್ವಜನಿಕರಿಂದ ಕೆಸರು ಸೆಗಣಿ ಎರಚಿ ಕಲ್ಲುಗಳನ್ನು ಎಸೆಯುತ್ತಿದ್ದರು.

1897 ರಲ್ಲಿ, ಪುಣೆಯಲ್ಲಿ ಪ್ಲೇಗ್ ಇತ್ತು ಮತ್ತು ಈ ಸಾಂಕ್ರಾಮಿಕ ರೋಗದಿಂದಾಗಿ, ಸಾವಿತ್ರಿಬಾಯಿ ಫುಲೆ ಅವರು ತಮ್ಮ 66 ನೇ ವಯಸ್ಸಿನಲ್ಲಿ ಪುಣೆಯಲ್ಲಿ 10 ಮಾರ್ಚ್ 1897 ರಂದು ನಿಧನರಾದರು.

ಕೃತಿಗಳು.. 1 ಕಾವ್ಯಪುಲೆ(ಕಾವ್ಯ ಅರಳಿದೆ) 1854 2 ಭವನ ಕಾಶಿ ಶುಭೋದ ರತ್ನಾಕರ 1891 3 ತಮ್ಮ ಭಾಷಣಗಳ ಸಂಪಾದಿತ ಕೃತಿ 1892 4 ಕರ್ಜೆ(ಸಾಲ) ಪ್ರಭಂದ.

ದಿಟ್ಟ ಹೆಜ್ಜೆಗಳು *1874 ರಲ್ಲಿ ಬ್ರಾಹ್ಮಣ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತು ತೆಗೆದುಕೊಂಡು ಗೌರವ ಬದುಕನ್ನು ಕೊಟ್ಟಿದ್ದು. *1855 ರಲ್ಲಿ ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ರಾತ್ರಿ ಪಾಳಯದ ಶಾಲೆ ಸ್ಥಾಪಿಸಿದ್ದು.. *1848 -1852 ರ ಅವಧಿಯಲ್ಲಿ ಒಟ್ಟು 18 ಪಾಠಶಾಲೆ ತೆರೆದಿದ್ದು. *ಬಾಲ್ಯವಿವಾಹ, ಸತಿ ಸಹಗಮನ ಪದ್ದತಿ,ಮಹಿಳೆಯರ ಕೇಶ ಮುಂಡನ ಮುಂತಾದ ಅನಿಷ್ಟಗಳ ವಿರುದ್ಧ ಹೋರಾಟ.

ಪ್ರಶಸ್ತಿ ಬ್ರಿಟಿಷ್ ಸರ್ಕಾರ “ಇಂಡಿಯನ್ ಫಸ್ಟ್ ಲೇಡಿ ಟೀಚರ್” ಎಂದು ಪುರಸ್ಕಾರ ಕೊಟ್ಟಿದೆ.

ಇದನ್ನೂ ಓದಿ: Kareena Kapoor: ಬರೀ ಮೂರೇ ದಿನಕ್ಕೆ ಹೊಸ ವರ್ಷದ ರೂಲ್ ಬ್ರೇಕ್ ಮಾಡಿದ ಕರೀನಾ!