ಟಿವಿ9 ಕನ್ನಡ ಡಿಜಿಟಲ್ ಸಮೀಕ್ಷೆ : ಈ ಬಾರಿಯ ಬಜೆಟ್ ನಲ್ಲಿ ನೀವೇನನ್ನು ನಿರೀಕ್ಷಿಸುತ್ತೀರಿ?
ಈ ಬಾರಿಯ ಬಜೆಟ್ ನಲ್ಲಿ ಜನರ ನಿರೀಕ್ಷೆ ಏನು? ಸರ್ಕಾರಕ್ಕೆ ಯಾವೆಲ್ಲ ಸಲಹೆಯನ್ನು ಜನರು ನೀಡಿದ್ದಾರೆ, ಜೊತೆಗೆ ಜನರ ಬೇಡಿಕೆ ಏನು ಎಂಬುದನ್ನು ಟಿವಿ9 ಕನ್ನಡ ಡಿಜಿಟಲ್ ಸೋಶಿಯಲ್ ಮಿಡಿಯಾದ ಮೂಲಕ ಒಂದು ಸರ್ವೆಯನ್ನು ಮಾಡಿತ್ತು. ಈ ಸರ್ವೆಯಲ್ಲಿ ಅನೇಕರು ಈ ಬಾರಿಯ ಬಜೆಟ್ ನಲ್ಲಿ ಯಾವೆಲ್ಲ ಯೋಜನೆಗಳು ಬರುಬೇಕು ಮತ್ತು ಜನರ ಅಭಿಪ್ರಾಯ ಏನು? ಎಂಬುದನ್ನು ಟಿವಿ9 ಕನ್ನಡ ಡಿಜಿಟಲ್ ಸರ್ವೆ ಮೂಲಕ ಜನರ ಅಭಿಪ್ರಾಯವನ್ನು ಪಡೆದುಕೊಂಡಿದೆ.
2022ರ ಕರ್ನಾಟಕ ರಾಜ್ಯದ ಬಜೆಟ್ ಮಂಡನೆ ಮಾಡಲು ಬೊಮ್ಮಾಯಿ ನೇತೃತ್ವದ ಸರ್ಕಾರ ಸಿದ್ದವಾಗುತ್ತಿದೆ. ಬಜೆಟ್ ಮಂಡನೆಗೂ ಮುನ್ನ ಯಾವೆಲ್ಲ ಕ್ಷೇತ್ರಗಳಿಗೆ ಅನುದಾನ ಮತ್ತು ಈ ಬಾರಿಯ ಬಜೆಟ್ ನಲ್ಲಿ ಯಾವೆಲ್ಲ ವಿಷಯಗಳನ್ನು ಸೇರಿಸಿಕೊಳ್ಳಬೇಕು ಎಂಬ ಚರ್ಚೆಗಳನ್ನು ನಡೆಸಲಿದೆ. ಈ ಬಾರಿಯ ಬಜೆಟ್ ಮಂಡನೆಗೆ ಯಾವೆಲ್ಲ ವಿಷಯಗಳನ್ನು ಸೇರಿಸಬೇಕು ಮತ್ತು ಬಜೆಟ್ ಬಗ್ಗೆ ಜನಾಭಿಪ್ರಾಯ ಏನು? ಎಂಬ ಮಾಹಿತಿಯನ್ನು ಟಿವಿ9 ಕನ್ನಡ ಡಿಜಿಟಲ್ ಒಂದು ಪೋಲ್ ಮೂಲಕ ಮಾಡಿತ್ತು.
ಈ ಬಾರಿಯ ಬಜೆಟ್ ನಲ್ಲಿ ಜನರ ನಿರೀಕ್ಷೆ ಏನು? ಸರ್ಕಾರಕ್ಕೆ ಯಾವೆಲ್ಲ ಸಲಹೆಯನ್ನು ಜನರು ನೀಡಿದ್ದಾರೆ, ಜೊತೆಗೆ ಜನರ ಬೇಡಿಕೆ ಏನು ಎಂಬುದನ್ನು ಟಿವಿ9 ಕನ್ನಡ ಡಿಜಿಟಲ್ ಸೋಶಿಯಲ್ ಮಿಡಿಯಾದ ಮೂಲಕ ಒಂದು ಸರ್ವೆಯನ್ನು ಮಾಡಿತ್ತು. ಈ ಸರ್ವೆಯಲ್ಲಿ ಅನೇಕರು ಈ ಬಾರಿಯ ಬಜೆಟ್ ನಲ್ಲಿ ಯಾವೆಲ್ಲ ಯೋಜನೆಗಳು ಬರುಬೇಕು ಮತ್ತು ಜನರ ಅಭಿಪ್ರಾಯ ಏನು? ಎಂಬುದನ್ನು ಟಿವಿ9 ಕನ್ನಡ ಡಿಜಿಟಲ್ ಸರ್ವೆ ಮೂಲಕ ಜನರ ಅಭಿಪ್ರಾಯವನ್ನು ಪಡೆದುಕೊಂಡಿದೆ.
ಇದೀಗ ಈ ಸರ್ವೆಯನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರುವ ಪ್ರಯತ್ನವನ್ನು ಟಿವಿ9 ಕನ್ನಡ ಡಿಜಿಟಲ್ ಮಾಡುತ್ತಿದೆ.
ಈ ಬಾರಿಯ ಬಜೆಟ್ ನಲ್ಲಿ ಜನರ ಪ್ರಕಾರ ಯಾವೆಲ್ಲ ಅಂಶಗಳ ಇರಬೇಕು
- ರೈತರ ಬೇಡಿಕೆ : ಈ ಬಾರಿ ಕರ್ನಾಟಕದ ಬಜೆಟ್ ನಲ್ಲಿ ರೈತರಪರವಾದ ನಿಲುವು ಇರಬೇಕು, ಮೊದಲಾಗಿ ಅವರ ಸಾಲವನ್ನು ಮನ್ನಾ ಮಾಡಬೇಕು. ಗೊಬ್ಬರದ ಬೆಲೆ ಕಡಿಮೆ ಮಾಡಿ ಮತ್ತು ರಾತ್ರಿ ನೀಡವ ಕರೆಂಟ್ ನ್ನು ಬೆಳಿಗ್ಗೆ ನೀಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಹನಿ ನೀರವರಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಎಲ್ಲ ವರ್ಗದ ರೈತರಿಗೆ 90 ಶೇಕಾಡ ಸಹಾಯಧನ ನೀಡುವಂತೆ ಈ ಬಜೆಟ್ ನಲ್ಲಿ ಮಂಡಿಸಿ ಎಂದು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಜಿಎಸ್ ಟಿ ಕಡಿಮೆ ಮಾಡಿ ಜೊತೆಗೆ ರೈತರಿಗೆ ಸಹಾಯ ವಿಮೆಗಳನ್ನು ಘೋಷಣೆ ಮಾಡಿ ಎಂದು ನಾವು ಮಾಡಿದ ಸರ್ವೆಯಲ್ಲಿ ಹೇಳಿಕೊಂಡಿದ್ದಾರೆ. ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದಿದ್ದಾರೆ. ಸರ್ಕಾರ ನೀಡುವ ಕೃಷಿ ಸಹಾಯಧನಗಳನ್ನು ತಕ್ಷಣ ಸಿಗುವಂತೆ ಮಾಡಿ ಎಂಬ ಮನವಿಯನ್ನು ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರ ಸಾಲಮನ್ನಾ ಮಾಡಿ ಎಂಬ ಬೇಡಿಕೆಯನ್ನೆಟ್ಟಿದ್ದಾರೆ. ರೈತರನ್ನು ಮಧ್ಯವರ್ತಿಗಳಿಂದ ರಕ್ಷಣೆ ಮಾಡಿ ಎಂದಿದ್ದಾರೆ.
- ಯುವಕರ ಬೇಡಿಕೆ : ರಾಜ್ಯದಲ್ಲಿ ಯುವಸಮೂಹ ನಿರೋದ್ಯಗದಿಂದ ಬಳಲುತ್ತಿದೆ, ಜೊತೆಗೆ ಯುವಕರಿಗೆ ಮೀಸಲಾತಿಯನ್ನು ನೀಡಬೇಕು ಆ ಬಗ್ಗೆ ಬಜೆಟ್ ನಲ್ಲಿ ತಿಳಿಸಬೇಕು ಮತ್ತು ಅದನ್ನು ಅನುಷ್ಠಾನಗೊಳಿಸಬೇಕು ಎಂದಿದ್ದಾರೆ. ಈಗಾಗಲೇ ಸರ್ಕಾರದಲ್ಲಿರುವ ವಿವಿಧ ಇಲಾಖೆಯಲ್ಲಿರುವ ಹುದ್ದೆಗಳಿಗೆ ಭರ್ತಿ ಮಾಡಬೇಕು ಮತ್ತು ಹೆಚ್ಚಿನ ಮೀಸಲಾತಿಯನ್ನು ಯುವಕರಿಗೆ ಮತ್ತು ಬಡವರಿಗೆ ನೀಡಬೇಕು ಎಂದು ತಿಳಿಸಿದ್ದಾರೆ. ಯುವಕರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರನ್ನು ಪ್ರೋತ್ಸಾಹ ಮಡಬೇಕಿದೆ. ಇದರ ಜೊತೆಗೆ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಹಾಗೂ ರಾಜ್ಯದ ಯುವಕರಿಗೆ ಉದ್ಯೋಗ ಸಿಗುವಂತೆ ಈ ಬಜೆಟ್ ನಲ್ಲಿ ಇರಬೇಕು ಎಂದಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಹೆಚ್ಚಿನ ಗಮನವನ್ನು ಈ ಬಜೆಟ್ ನಲ್ಲಿ ನೀಡಬೇಕು. ಯುವಕ ಸ್ವಂ-ಉದ್ಯೋಗಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡಬೇಕು ಎಂದಿದ್ದಾರೆ.
- ಶೈಕ್ಷಣಿಕ ಕ್ಷೇತ್ರದ ಬೇಡಿಕೆ : ನಿವೃತ್ತಿ ಹೊಂದಿದ ಶಿಕ್ಷಕರಿಗೆ ಪಿಂಚಣಿಯನ್ನು ನೀಡಿ, ಜೊತೆಗೆ ಅವರಿಗೆ ಶೈಕ್ಷಣಿಕವಾಗಿ ಕಾರ್ಯನಿರ್ವಹಿಸಿದಕ್ಕೆ ಒಳ್ಳೆಯ ಯೋಜನೆಯೊಂದನ್ನು ಜಾರಿಗೊಳಿಸಿ ಎಂದಿದ್ದಾರೆ. ಆಶಾ ಕಾರ್ಯಕರ್ತರಿಗೆ ವೇತನ ಹೆಚ್ಚು ಮಾಡಿ ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ. ಪದವಿ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್ ನೀಡಬೇಕು. ಆ ಬಗ್ಗೆ ಈ ಬಾರಿಯ ಬಜೆಟ್ ನಲ್ಲಿ ಚರ್ಚಿಸಿ ಎಂದಿದ್ದಾರೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಜೊತೆಗೆ ಸರ್ಕಾರಿ ಶಾಲೆಗಳಿಗೆ ಒಳ್ಳೆಯ ಯೋಜನೆಗಳನ್ನು ತರುವ ಬಗ್ಗೆ , ಸರ್ಕಾರಿ ಶಾಲೆಗಳು ಮುಚ್ಚದಂತೆ ಕೆಲವು ಕ್ರಮಗಳನ್ನು ಈ ಬಜೆಟ್ ನಲ್ಲಿ ತಿಳಿಬೇಕು ಮತ್ತು ಸರ್ಕಾರಿ ಶಾಳೆಗಳ ದುರಸ್ತಿ ಮಾಡಲು ಹಣ ಬಿಡುಗಡೆ ಮಾಡಬೇಕು ಮತ್ತು ಅದನ್ನು ಕಾರ್ಯರೂಪಕ್ಕೆ ತರುವಂತೆ ಬಜೆಟ್ ನಲ್ಲಿ ತಿಳಿಸಬೇಕು. ಖಾಸಗಿ ಶಾಲೆಗಳಿಗೂ ಸರ್ಕಾರದಿಂದ ಅನುದಾನವನ್ನು ನೀಡಿ ಎಂದು ಹೇಳೀದ್ದಾರೆ.
- ಸಾಮಾಜಿಕ ಮತ್ತು ಧಾರ್ಮಿಕ ಬೇಡಿಕೆ : ಸಾಮಾಜಿಕ ಮತ್ತು ಧಾರ್ಮಿಕವಾಗಿ ಈ ಬಾರಿಯ ಬಜೆಟ್ ನಲ್ಲಿ ಯಾವೆಲ್ಲ ವಿಷಯಗಳನ್ನು ತರಬೇಕು ಎಂಬ ಅಭಿಪ್ರಾಯಗಳನ್ನು ಜನರು ವ್ಯಕ್ತಪಡಿಸಿದ್ದಾರೆ. ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಬಜೆಟ್ ಸಮೀಕ್ಷೆಯಲ್ಲಿ ಜನರಿಂದ ಅನೇಕ ಅಭಿಪ್ರಾಯಗಳು ಬಂದಿದೆ. ಈ ಬಾರಿ ಬಜೆಟ್ ನಲ್ಲಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಮಿಸಲಾತಿಯನ್ನು ಹೆಚ್ಚಿಸಬೇಕು ಮತ್ತು ಸರ್ಕಾರಿ ಹುದ್ದೆಗಳಲ್ಲಿ ಮಿಸಲಾತಿಯನ್ನು ಹೆಚ್ಚಿಸಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ. ಅಂಗವಿಕಲರಿಗೆ ಹೆಚ್ಚಿನ ಸಹಾಯಧನವನ್ನು ನೀಡಬೇಕು ಮತ್ತು ಅವರಿಗೂ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗವನ್ನು ನೀಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಒಂದು ಒಳ್ಳೆಯ ಯೋಜನೆಯನ್ನು ತರಬೇಕು ಎಂದಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಆಗುತ್ತಿರುವ ಭ್ರಷ್ಟಚಾರಗಳನ್ನು ತಡೆಯಬೇಕು ಮತ್ತು ಹಿಂದೂ ದೇವಾಲಯಗಳನ್ನು ಈ ಬಾರಿ ಸ್ವಾತಂತ್ರ್ಯಗೊಳಿಸುವ ಬಗ್ಗೆ ಮತ್ತು ದೇವಾಲಯಗಳಿಗೆ ಹೊಸ ಯೋಜನೆಯನ್ನು ಈ ಬಜೆಟ್ ನಲ್ಲಿ ತರಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಪ್ರತಿ ಹಳ್ಳಿಗಳಿಗೂ ಡಾಂಬರೀಕರಣ ಮಾಡುವ ಬಗ್ಗೆ ಈ ಬಜೆಟ್ ನಲ್ಲಿ ತಿಳಿಸಬೇಕು. ಬಾಗಲಕೋಟೆ ರೈಲ್ವೇ ಮಾರ್ಗದ ಕುರಿತು ಯೋಜನೆಯನ್ನು ತರಬೇಕು. ಹಿಂದುಳಿದ ವರ್ಗಳಿಗೆ ಯೋಜನೆ ಮತ್ತು ವಿದ್ಯಾರ್ಥಿ ವೇತನ ನೀಡಬೇಕು ಎಂದು ಟಿವಿ9 ಕನ್ನಡ ಡಿಜಿಟಲ್ ಸರ್ವೆಯಲ್ಲಿ ತಿಳಿಸಿದ್ದಾರೆ. ಕೋಲಾರ ಚಿಕ್ಕಬಳ್ಳಾಪುರಕ್ಕೆ ಶಾಶ್ವತ ನೀರಾವರಿಯನ್ನು ವ್ಯವಸ್ಥೆಯನ್ನು ಮಾಡಬೇಕು. ಒಂದು ಕುಟುಂಬಕ್ಕೆ ಎರಡು ಮಕ್ಕಳು ಎಂದು ಮಸೂದೆಯನ್ನು ಮಂಡಿಸಿ ಎಂದಿದ್ದಾರೆ . ಇದರ ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಕೋಮುವಿವಾದ ಹುಟ್ಟದಂತೆ ನೋಡಿಕೊಳ್ಳಿ ಎಲ್ಲರಿಗೂ ಸಮಾನ ಸ್ಥಾನವನ್ನು ಶಾಲಾ-ಕಾಲೇಜಿನಲ್ಲಿ ನೀಡಿ ಎಂದಿದ್ದಾರೆ.
- ಕಾರ್ಮಿಕರ ಬೇಡಿಕೆ : ಈ ಬಾರಿ ಬಜೆಟ್ ನಲ್ಲಿ ಬಡ ಕಾರ್ಮಿಕರು ಹಲವು ಬೇಡಿಕೆಯನ್ನು ಇಟ್ಟಿದ್ದಾರೆ. ಕಾರ್ಮಿಕ ವೇತನದಲ್ಲಿ ಈ ಬಾರಿಯ ಬಜೆಟ್ ನಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಕಾರ್ಮಿಕರಿಗೆ ಹೆಚ್ಚಿನ ಮೀಸಲಾತಿಗಳನ್ನು ನೀಡಬೇಕು, ಹೊಸ ಯೋಜನೆಗಳನ್ನು ಕಾರ್ಮಿಕರಿಗೆ ನೀಡಬೇಕು. ಹಲವು ವರ್ಷಗಳಿಂದ ಉಳಿದಿರುವ ನಮ್ಮ ಬೇಡಿಕೆಗಳನ್ನು ತಕ್ಷಣ ಈ ಬಜೆಟ್ ನಲ್ಲಿ ಮಂಜೂರು ಮಾಡಬೇಕು ಸಿಎಂ ಬೊಮ್ಮಾಯಿ ಅವರು ನಮ್ಮ ಬೇಡಿಕೆಯನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ದಿನಕೂಲಿ ಕಾರ್ಮಿಕ ಕೆಲಸವನ್ನು ಖಾಯಂ ಕೆಲಸವನ್ನಾಗಿ ಘೋಷಣೆ ಮಾಡಿ. ಬಡ ಕಾರ್ಮಿಕರಿಗೆ ಮನೆ ನಿರ್ಮಾಣ ಮಾಡುವ ಬಗ್ಗೆ ಈ ಬಜೆಟ್ ನಲ್ಲಿ ತಿಳಿಸಲು ಹೇಳಿದ್ದಾರೆ. ಬಡ ಕಲಾವಿದರಿಗೆ ಆಶ್ರಯ ನೀಡಿ, ಅವರಿಗೆ ಬೇಕಾದ ಸೌಕರ್ಯವನ್ನು ನೀಡಿ ಅವರಿಗೂ ಈ ಬಜೆಟ್ ನಲ್ಲಿ ಹೆಚ್ಚಿನ ಯೋಜನೆಗಳನ್ನು ನೀಡಬೇಕು.
- ಸರ್ಕಾರಿ ಸೌಲಭ್ಯಗಳ ಬೇಡಿಕೆ : ಈ ಬಾರಿಯ ಬಜೆಟ್ ನಲ್ಲಿ ಸರ್ಕಾರಿ ಸೌಲಭ್ಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಏಕೆಂದರೆ ಸರ್ಕಾರಿ ಸೌಲಭ್ಯಗಳು ಸಕಲದಲ್ಲಿ ದೂರಕುತ್ತಿಲ್ಲ. ಈ ಬಗ್ಗೆ ಜನಸಾಮಾನ್ಯರಿಗೆ ಗೊಂದಲ ಮತ್ತು ಹಲವು ಸಮಸ್ಯೆಗಳು ಹುಟ್ಟಿಕೊಂಡಿದೆ, ಎಂದು ಟಿವಿ9 ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕು. ಗರ್ಭಿಣಿಯರಿಗೆ ಹೊಸ ಯೋಜನೆಗಳನ್ನು ರೂಪಿಸಬೇಕು ಮತ್ತು ಸರ್ಕಾರ ಹೀಗಾಗಲೇ ತಂದಿರುವ ಯೋಜನೆಗಳು ಉತ್ತಮವಾಗಿದ್ದು ಅದನ್ನು ಮುಂದುವರಿಸಿಕೊಂಡು ಹೋಗುಬೇಕು. ಆಶಾ ಕಾರ್ಯಕರ್ತೆಯರಿಗೂ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕು. ಅವರ ಬೇಡಿಕೆಗಳನ್ನು ಈ ವರ್ಷವಾದರೂ ಪೂರ್ಣಗೊಳಿಸಬೇಕು ಮತ್ತು ಅವರನ್ನು ಆರ್ಥಿಕವಾಗಿ ಬಲಪಡಿಸಬೇಕು ಎಂದು ಸರ್ವೆಯಲ್ಲಿ ತಿಳಿಸಿದ್ದಾರೆ.
- ಜನಸಾಮನ್ಯರ ಬೇಡಿಕೆ : ಕರ್ನಾಟಕ ಸರ್ಕಾರದ ಈ ಬಾರಿಯ ಬಜೆಟ್ ನಲ್ಲಿ ಸಾಮಾನ್ಯ ಜನರು ಒಂದಿಷ್ಟು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟಿವಿ9 ಡಿಜಿಟಲ್ ಮಾಡಿದ ಸರ್ವೆ ಪ್ರಕಾರ ಜನಸಾಮಾನ್ಯರು ತಮ್ಮ ದಿನನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಬೇಕು, ತಮ್ಮ ಊರಿನಲ್ಲಿರುವ ಒಳಚರಂಡಿ ಮತ್ತು ರಸ್ತೆಗಳ ಸಮಸ್ಯೆಗೆ ತಕ್ಷಣ ಪರಿಹಾರ ನೀಡಬೇಕು, ಇನ್ನೂ ಕೊರೊನಾ ಸಮಯದಲ್ಲಿ ಬೀದಿ ವ್ಯಾಪರಿಗಳಿಗೆ ತುಂಬಾ ತೊಂದರೆಯಾಗಿದೆ ಅದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ, ಕೆಲವೊಂದು ಕಡೆ ಕುಡಿಯುವ ನೀರಿನ ಸಮಸ್ಯೆಗಳು ಇದೆ, ಅದನ್ನು ಈ ಬಜೆಟ್ ನಲ್ಲಿ ಚರ್ಚಿಸಿ ಎಂದು ಕಮೆಂಟ್ ಮಾಡಿದ್ದಾರೆ. ನಾಡ ಕಚೇರಿಯಲ್ಲಿ ಯಾವುದೇ ಅಧಿಕಾರಿಗಳು ನಮ್ಮ ಕೈಗೆ ಸಿಗುತ್ತಿಲ್ಲ, ಪುರಸಭೆಯಲ್ಲಿ, ಜಿಲ್ಲಾ ಕಚೇರಿಗಳು ಅಧಿಕಾರಿಗಳ ಕೊರತೆ ಇದೆ, ಇದರಿಂದ ನಮ್ಮ ಕೆಲಸಗಳನ್ನು ಸರಿಯಾಗಿ ಆಗುತ್ತಿಲ್ಲ.ಪ್ರತಿ ಹಳ್ಳಿಗಳ ಒಳಚರಂಡಿ ಮತ್ತು ಶಿಕ್ಷಣ, ರಸ್ತೆ, ಸಾರಿಗೆಯನ್ನು ಅಭಿವೃದ್ಧಿಪಡಿಸಿ ಜೊತೆಗೆ ಹೊಸ ಯೋಜನೆಗಳನ್ನು ತರಬೇಕು. ಪ್ರತಿ ಗ್ರಾಮಪಂಚಾಯತ್ ಗಳಿಗೂ ಕ್ರೀಡಾಂಗಣವನ್ನು ನೀಡಬೇಕು ಜೊತೆಗೆ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅವಕಾಶ ನೀಡಿ. ರಾಜ್ಯದ ಪ್ರತಿ ಹಳ್ಳಿಗಳ ಕೆರೆಯನ್ನು ತುಂಬಿ, ಹಳ್ಳಿಗಳಿಗೆ ಡಾಂಬರೀಕರಣ, ವೈದ್ಯಕೀಯ ವ್ಯವಸ್ಥೆಗಳನ್ನು ಈ ಬಜೆಟ್ ನಲ್ಲಿ ಮಾಡಿ ಎಂದು ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳು | ಒಟ್ಟು ಕಮೆಂಟ್ |
ಫೇಸ್ ಬುಕ್ | 2 ಸಾವಿರಕ್ಕೂ ಹೆಚ್ಚು |
ಇನ್ಸ್ಟಾಗ್ರ್ಯಾಮ್ | 500ಕ್ಕೂ ಹೆಚ್ಚು |
ಯೂಟೂಬ್ | 2500ಕ್ಕೂ ಹೆಚ್ಚು |
ಟ್ವಿಟರ್ | 500ಕ್ಕೂ ಹೆಚ್ಚು |
ಒಟ್ಟಾರೆಯಾಗಿ ಈ ಬಾರಿ ಕರ್ನಾಟಕ ಸರ್ಕಾರದ ಬಜೆಟ್ ನಲ್ಲಿ ಯಾವೆಲ್ಲ ವಿಚಾರಗಳನ್ನು ಸೇರಿಸಿಕೊಳ್ಳಬೇಕು, ಟಿವಿ9 ಡಿಜಿಟಲ್ ಮಾಡಿದ ಸಮೀಕ್ಷೆಯ ಮೂಲಕ ಈ ಬಾರಿಯ ಬಜೆಟ್ ನಲ್ಲಿ ಜನಾಭಿಪ್ರಾಯ ಏನು ಎಂಬುದನ್ನು ಟಿವಿ9 ಕನ್ನಡ ಡಿಜಿಟಲ್ ತಿಳಿಸಿಕೊಟ್ಟಿದೆ. ಸರ್ಕಾರ ಈ ಸೆಮೀಕ್ಷೆಯ ಮೂಲಕ ಜನರಿಗೆ ಯಾವೆಲ್ಲ ಯೋಜನೆಗಳ ಬೇಕು ಎಂಬುದನ್ನು ಅರಿತುಕೊಳ್ಳಬೇಕಿದೆ, ಜನರ ಸಮಕಷಷ್ಟಗಳನ್ನು ಏನು ಎಂಬುದನ್ನು ತಿಳಿದುಕೊಳ್ಳಲು ಈಸಮೀಕ್ಷೆ ಸಹಾಯಕವಾಗಿದೆ.
Published On - 3:06 pm, Mon, 28 February 22