ಅಬ್ಬಾ! ಸಂಗೀತಕ್ಕೆ ಇಷ್ಟೊಂದು ತಾಕತ್ತು ಇದೆಯಾ?

ಒಂದು ವೇಳೆ ನೀವು ಸಂಗೀತ ಪ್ರಿಯರಾಗಿದ್ದು ಹಾಡು, ಮ್ಯೂಸಿಕ್ ಕೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರೆ ಖಂಡಿತ ನಿಮ್ಮ ಆರೋಗ್ಯದಲ್ಲಿ ಈ ಎಲ್ಲಾ ಲಾಭಗಳು ಸಂಗೀತದಿಂದ ಆಗಿರುತ್ತದೆ. ಹೌದು ಸಂಗೀತಕ್ಕೂ, ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಯಾರು ಸಂಗೀತವನ್ನು ಆಹ್ಲಾದಿಸುತ್ತಾರೋ ಅವರಿಗೆ ಕೆಲವು ಪ್ರಮುಖವಾದ ಆರೋಗ್ಯ ಲಾಭಗಳಾಗುತ್ತವೆ. ಕೆಲವು ಹಾಡುಗಳನ್ನು ಅಥವಾ ಮ್ಯೂಸಿಕ್ ಗಳನ್ನು ಕೇಳಿದಾಗ ಬೇಸರದಲ್ಲಿದ್ದಾಗಲೂ ಮನಸ್ಸಿಗೆ ಸಮಾಧಾನ ಅನ್ನಿಸುತ್ತದೆಯಲ್ಲ ಅದಕ್ಕೆ ಕಾರಣವಿದೆ. ಪರಿಣಾಮಗಳು: ನಮ್ಮ ಮೆದುಳಿಗೆ ಮ್ಯೂಸಿಕ್ ನ ಮೆಲೊಡಿ, ತಾಳ, ರಾಗ, ಏರಿಳಿತ ಎಲ್ಲವನ್ನೂ ಸ್ವೀಕರಿಸುವುದಕ್ಕಾಗಿ ಬೇರೆಬೇರೆ […]

ಅಬ್ಬಾ! ಸಂಗೀತಕ್ಕೆ ಇಷ್ಟೊಂದು ತಾಕತ್ತು ಇದೆಯಾ?
Follow us
ಸಾಧು ಶ್ರೀನಾಥ್​
|

Updated on:Nov 02, 2019 | 5:21 PM

ಒಂದು ವೇಳೆ ನೀವು ಸಂಗೀತ ಪ್ರಿಯರಾಗಿದ್ದು ಹಾಡು, ಮ್ಯೂಸಿಕ್ ಕೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರೆ ಖಂಡಿತ ನಿಮ್ಮ ಆರೋಗ್ಯದಲ್ಲಿ ಈ ಎಲ್ಲಾ ಲಾಭಗಳು ಸಂಗೀತದಿಂದ ಆಗಿರುತ್ತದೆ. ಹೌದು ಸಂಗೀತಕ್ಕೂ, ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ಯಾರು ಸಂಗೀತವನ್ನು ಆಹ್ಲಾದಿಸುತ್ತಾರೋ ಅವರಿಗೆ ಕೆಲವು ಪ್ರಮುಖವಾದ ಆರೋಗ್ಯ ಲಾಭಗಳಾಗುತ್ತವೆ. ಕೆಲವು ಹಾಡುಗಳನ್ನು ಅಥವಾ ಮ್ಯೂಸಿಕ್ ಗಳನ್ನು ಕೇಳಿದಾಗ ಬೇಸರದಲ್ಲಿದ್ದಾಗಲೂ ಮನಸ್ಸಿಗೆ ಸಮಾಧಾನ ಅನ್ನಿಸುತ್ತದೆಯಲ್ಲ ಅದಕ್ಕೆ ಕಾರಣವಿದೆ.

ಪರಿಣಾಮಗಳು: ನಮ್ಮ ಮೆದುಳಿಗೆ ಮ್ಯೂಸಿಕ್ ನ ಮೆಲೊಡಿ, ತಾಳ, ರಾಗ, ಏರಿಳಿತ ಎಲ್ಲವನ್ನೂ ಸ್ವೀಕರಿಸುವುದಕ್ಕಾಗಿ ಬೇರೆಬೇರೆ ಮಡಿಕೆಗಳಿರುತ್ತದೆ. ಈಗ ನಾವು ಹುಟ್ಟಿದಾಗಿನಿಂದಲೇ ಅತಿಯಾದ ಕರ್ಕಶ ಶಬ್ದ ಮತ್ತು ಮ್ಯೂಸಿಕ್ ಎರಡನ್ನೂ ಸ್ವೀಕರಿಸುವ ರೀತಿಯೇ ಬೇರೆಯಾಗಿರುತ್ತದೆ ಇದಕ್ಕೆ ಕಾರಣ ಮೆದುಳು. ವೇಗವಾದ ಮ್ಯೂಸಿಕ್ ಗಳು ನಿಮ್ಮ ಹಾರ್ಟ್ ರೇಟ್, ಉಸಿರಾಟ ಪ್ರಕ್ರಿಯೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತವೆಯಂತೆ. ಅದೇ ಕಡಿಮೆ ಶಬ್ದದ ಮೆಲೊಡಿ ಮ್ಯೂಸಿಕ್ ಗಳು ಇದರ ವಿರುದ್ಧ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ಮನುಷ್ಯನ ಮೇಲೆ ಸಂಗೀತ ಬೀರುವ ಪರಿಣಾಮದ ಬಗ್ಗೆ ಸರಿಯಾಗಿ ಯಾರಿಗೂ ಅರ್ಥ ಮಾಡಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಆದರೆ ಅಧ್ಯಯನವೊಂದು ತಿಳಿಸುವ ಪ್ರಕಾರ ನಿಮ್ಮ ಮನಸ್ಸು ಇಷ್ಟ ಪಡುವ ಮ್ಯೂಸಿಕ್ ಅನ್ನು ನೀವು ಕೇಳಿಸಿಕೊಂಡು ಅಹ್ಲಾದಿಸಿದಾಗ ಮೆದುಳಿನಲ್ಲಿ ಡೊಪಮೈನ್ ಅನ್ನುವ ರಾಸಾಯಿಕವೊಂದು ಬಿಡುಗಡೆಗೊಳ್ಳುತ್ತದೆಯಂತೆ, ಇದು ನಿಮ್ಮ ಮನಸ್ಥಿತಿಯ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟುಮಾಡಲಿದೆ ಎಂದು ತಿಳಿದುಬಂದಿದೆ.

ಸಂಗೀತವು ಸಂತೋಷ, ದುಃಖ ಅಥವಾ ಭಯ ಇತ್ಯಾದಿ ಬಲವಾದ ರೀತಿಯ ಭಾವನೆಗಳಿಗೂ ಕಾರಣವಾಗಬಹುದು. ಜೀವನದಲ್ಲಿ ಯಾವುದೋ ಭಾವನೆಯ ನಿರ್ವಹಣೆಯನ್ನು ಮಾಡಿಕೊಂಡು ಮುಂದುವರಿಯುವುದಕ್ಕೆ ಸಂಗೀತ ಪ್ರೇರಣಾಶಕ್ತಿಯನ್ನು ನೀಡುತ್ತದೆ. ಕೆಲವು ಅಧ್ಯಯನದ ಪ್ರಕಾರ ನಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ವೃದ್ಧಿಸುವ ಸಾಮರ್ಥ್ಯ ಸಂಗೀತಕ್ಕಿದೆ ಎಂದು ಹೇಳುತ್ತಾರೆ. ಆರೋಗ್ಯದ ಅಭಿವೃದ್ಧಿಗೆ ಮ್ಯೂಸಿಕ್ ಕೇಳುವುದು ಬಹಳ ಒಳ್ಳೆಯದು ಎಂಬುದನ್ನು ಅಧ್ಯಯನವು ಸಾಬೀತುಪಡಿಸಿದೆ.

ಆತಂಕವನ್ನು ಕಡಿಮೆ ಮಾಡುತ್ತದೆ: ಕ್ಯಾನ್ಸರ್ ಇರುವ ವ್ಯಕ್ತಿಗಳಿಗೆ ಸಂಗೀತ ಕೇಳಿಸುವುದರ ಜೊತೆಗೆ ಸಾಮಾನ್ಯ ಕೇರ್ ತೆಗೆದುಕೊಳ್ಳುವುದರಿಂದಾಗಿ, ಕೇವಲ ಸಾಮಾನ್ಯ ಆರೈಕೆ ತೆಗೆದುಕೊಂಡ ರೋಗಿಗಳಿಗಿಂತ ಹೆಚ್ಚು ಆತಂಕ ರಹಿತರಾಗಿರುವುದು ಅಧ್ಯಯನದಿಂದ ಸಾಬೀತಾಗಿದೆ. ಅಂದರೆ ಯಾವ ಕ್ಯಾನ್ಸರ್ ರೋಗಿಯು ಸಂಗೀತದ ಜೊತೆಗೆ ಸಾಮಾನ್ಯವಾಗಿ ಕಾಯಿಲೆಗೆ ಚಿಕಿತ್ಸೆ ಪಡೆದರೋ ಅವರ ಆತಂಕ ಸಂಗೀತ ಕೇಳದೇ ಚಿಕಿತ್ಸೆ ಪಡೆದ ವ್ಯಕ್ತಿಗಳಿಗಿಂತ ಕಡಿಮೆ ಇರುವುದು ತಿಳಿದು ಬಂದಿದೆ. ಸಂಗೀತವು ಏರೋಬಿಕ್ ವ್ಯಾಯಾಮವನ್ನು ಹೆಚ್ಚಿಸುತ್ತದೆ. ಮಾನಸಿಕ ಮತ್ತು ದೈಹಿಕ ಪ್ರಚೋದನೆಯನ್ನು ಮಾಡುತ್ತದೆ ಮತ್ತು ಒಟ್ಟಾರೆ ದೇಹ ಹಾಗೂ ಮನಸ್ಸಿನ ಕಾರ್ಯಕ್ಷಮತೆಯನ್ನು ಅಭಿವೃದ್ಧಿಗೊಳಿಸುತ್ತದೆ. ಲಯ ಮತ್ತು ಮಧುರವಾಗಿರುವ ಸಂಗೀತವು ನಮ್ಮ ಮೆದುಳಿನ ಸ್ಮರಣಾ ಶಕ್ತಿಯನ್ನು ರೂಪಿಸಲು ಸಹಾಯ ಮಾಡುತ್ತದೆ.

ಪಾರ್ಶ್ವವಾಯು ಪೀಡಿತ ವ್ಯಕ್ತಿಗಳಲ್ಲಿ ಸಂಗೀತ ಆಲಿಸುವುದರಿಂದಾಗಿ ಮೌಖಿಕ ಸ್ಮರಣೆ, ಕಡಿಮೆ ಗೊಂದಲಕ್ಕೊಳಗಾಗುವುದು, ಉತ್ತಮ ಗಮನದ ಕೇಂದ್ರೀಕರಣಕ್ಕೆ ನೆರವಾಗಿದೆ ಎಂದು ತಿಳಿದುಬಂದಿದೆ.ಗಂಭೀರ ಆರೋಗ್ಯ ಸಮಸ್ಯೆಯನ್ನು ದೀರ್ಘಾವಧಿಯಿಂದ ಎದುರಿಸುತ್ತಿರುವವವರಿಗೆ ಸಂಗೀತ ಚಿಕಿತ್ಸೆಯ ಮೂಲಕ ಕಾಯಿಲೆಯನ್ನು ನಿಧಾನಗತಿಯಲ್ಲಿ ಶಮನ ಮಾಡಲಾಗುತ್ತದೆ. ಜೀವಿತಾವಧಿಯ ಕಾಯಿಲೆ ಇರುವ ರೋಗಿಗಳಲ್ಲಿ ಭಯ, ಒಂಟಿತನ ಮತ್ತು ಕೋಪದಂತಹ ಭಾವನೆಗಳ ಅಭಿವ್ಯಕ್ತಿಪಡಿಸಲು ಸಂಗೀತ ಚಿಕಿತ್ಸೆ ನೀಡುವುದು ವಿದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.ಅಲ್ಜಮೈರ್ ಸಮಸ್ಯೆ ಅಂದರೆ ಕಳೆದು ಹೋದ ನೆನಪಿನ ಶಕ್ತಿಯನ್ನು ಮರಳಿ ಪಡೆಯುವ ಸದುದ್ದೇಶದಿಂದ ಸಂಗೀತ ಆಲಿಸುವಿಕೆಯ ನೆರವು ಪಡೆಯಲಾಗುತ್ತದೆ.

ಇದು ಒಟ್ಟಾರೆ ಮಾನಸಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ನೆರವು ನೀಡುತ್ತದೆ. ಮಕ್ಕಳಲ್ಲಿ ಕಂಡುಬರುವ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಸಮಸ್ಯೆಯ ನಿವಾರಣೆಗೆ ಸಂಗೀತ ಸಹಾಯ ಮಾಡುತ್ತದೆ. ಯಾವ ಮಕ್ಕಳು ಈ ಸಮಸ್ಯೆಯಲ್ಲಿರುತ್ತಾರೋ ಅವರಿಗೆ ಸಂಗೀತ ಕೇಳಿಸುವುದರಿಂದ ಅವರ ಸಾಮಾಜಿಕ ಪ್ರತಿಕ್ರಿಯೆಗಳು, ಸಂವಹನ ಕೌಶಲ್ಯಗಳು, ಗಮನ ಕೌಶಲ್ಯಗಳಲ್ಲಿ ಅಭಿವೃದ್ಧಿಯಾಗಿರುವುದು ತಿಳಿದುಬಂದಿದೆ.

Published On - 4:27 pm, Fri, 1 November 19