ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿ ಆರಾಧನೆ ಹೇಗೆ ಮಾಡಬೇಕು?

ಸಾಧು ಶ್ರೀನಾಥ್​

|

Updated on:Oct 08, 2019 | 11:17 AM

ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿ ಆರಾಧನೆಗೆ ಪ್ರಶಸ್ತವಾದ ದಿನ. ನವದುರ್ಗೆಯರಲ್ಲಿ ಸಿದ್ಧಿದಾತ್ರಿ ಕೊನೆಯವಳು. ಮಾರ್ಕಂಡೇಯ ಪುರಾಣದ ಪ್ರಕಾರ, ಸಿದ್ಧಿದಾತ್ರಿ ಎಲ್ಲ ರೀತಿಯ ಸಿದ್ಧಿಗಳನ್ನು ಕರುಣಿಸುವವಳು. ಆದ್ದರಿಂದಲೇ ಇವಳನ್ನು ಸಿದ್ಧಿದಾತ್ರಿ ಎನ್ನಲಾಗುತ್ತೆ. ಇವಳು ಕಮಲದ ಮೇಲೆ ಕುಳಿತಿದ್ದಾಳೆ, ಸಿದ್ಧಿದಾತ್ರಿಗೆ ಚತುರ್ಭುಜಗಳಿವೆ, ಮೇಲಿನ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ ಹಿಡಿದಿದ್ದಾಳೆ, ಕೆಳಗಿನ ಬಲಗೈಯಲ್ಲಿ ಗದೆ, ಎಡಗೈಯಲ್ಲಿ ಕಮಲವಿದೆ. ಸಿದ್ಧಿದಾತ್ರಿ ಮಹಾಲಕ್ಷ್ಮೀಯ ಸ್ವರೂಪ. ಭಕ್ತಿಯಿಂದ ಈ ದೇವಿಯ ಬಳಿ ಬೇಡಿದ್ರೆ ಪ್ರಸನ್ನಳಾಗಿ ವರ ಕೊಡ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಒಂಬತ್ತನೇ […]

ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿ ಆರಾಧನೆ ಹೇಗೆ ಮಾಡಬೇಕು?
Follow us

ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿ ಆರಾಧನೆಗೆ ಪ್ರಶಸ್ತವಾದ ದಿನ. ನವದುರ್ಗೆಯರಲ್ಲಿ ಸಿದ್ಧಿದಾತ್ರಿ ಕೊನೆಯವಳು. ಮಾರ್ಕಂಡೇಯ ಪುರಾಣದ ಪ್ರಕಾರ, ಸಿದ್ಧಿದಾತ್ರಿ ಎಲ್ಲ ರೀತಿಯ ಸಿದ್ಧಿಗಳನ್ನು ಕರುಣಿಸುವವಳು. ಆದ್ದರಿಂದಲೇ ಇವಳನ್ನು ಸಿದ್ಧಿದಾತ್ರಿ ಎನ್ನಲಾಗುತ್ತೆ.

ಇವಳು ಕಮಲದ ಮೇಲೆ ಕುಳಿತಿದ್ದಾಳೆ, ಸಿದ್ಧಿದಾತ್ರಿಗೆ ಚತುರ್ಭುಜಗಳಿವೆ, ಮೇಲಿನ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ ಹಿಡಿದಿದ್ದಾಳೆ, ಕೆಳಗಿನ ಬಲಗೈಯಲ್ಲಿ ಗದೆ, ಎಡಗೈಯಲ್ಲಿ ಕಮಲವಿದೆ. ಸಿದ್ಧಿದಾತ್ರಿ ಮಹಾಲಕ್ಷ್ಮೀಯ ಸ್ವರೂಪ. ಭಕ್ತಿಯಿಂದ ಈ ದೇವಿಯ ಬಳಿ ಬೇಡಿದ್ರೆ ಪ್ರಸನ್ನಳಾಗಿ ವರ ಕೊಡ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿಯನ್ನು ಮಂತ್ರ ಸಹಿತವಾಗಿ ಪೂಜಿಸುವುದು ಶ್ರೇಯಸ್ಕರ ಎನ್ನಲಾಗುತ್ತೆ.

ಸಿದ್ಧಿದಾತ್ರಿ ಮಂತ್ರ

ಸಿದ್ಧಗಂಧರ್ವ ಯಕ್ಷಾದ್ಯೈಹಸುರೈಹಮರೈಹಪಿ ಸೇವ್ಯಮಾನಾ ಸದಾ ಭೂಯಾತ್‌ ಸಿದ್ಧಿದಾ ಸಿದ್ಧಿದಾಯಿನೀ

ಪ್ರತಿಯೊಬ್ಬ ಮನುಷ್ಯನೂ ತಾಯಿ ಸಿದ್ಧಿದಾತ್ರಿಯ ಕೃಪೆ ಪಡೆಯಲು ನಿರಂತರ ಪ್ರಯತ್ನ ಮಾಡಬೇಕು. ಈ ದೇವಿಯ ಉಪಾಸನೆಯಿಂದ ಭಕ್ತರ, ಸಾಧಕರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಸಿದ್ಧಿದಾತ್ರಿ ಪೂಜೆಯ ಫಲಗಳು

* ಈಕೆ ಸರ್ವಸಿದ್ಧಿಗಳನ್ನು ಕೊಡುವ ದೇವಿ * ಇವಳ ಆರಾಧನೆಯಿಂದ ಅಷ್ಟಸಿದ್ಧಿಗಳು ಪ್ರಾಪ್ತಿ * ಇವಳ ಪೂಜೆ ಮಾಡಿದ್ರೆ ರಕ್ಷಣೆ ಸಿಗುತ್ತೆ * ಸರ್ವಕಾರ್ಯಗಳಲ್ಲೂ ವಿಜಯ ಪ್ರಾಪ್ತಿಯಾಗುತ್ತೆ * ದುಃಖವನ್ನು ದೂರ ಮಾಡ್ತಾಳೆ * ಸುಖ ಭೋಗಗಳನ್ನು ಕರುಣಿಸ್ತಾಳೆ * ಮೋಕ್ಷ ದಯ ಪಾಲಿಸ್ತಾಳೆ

ನವರಾತ್ರಿಯಲ್ಲಿ ನವದುರ್ಗೆಯರನ್ನು ಪೂಜಿಸುವ ಪದ್ಧತಿ ಅತ್ಯಂತ ವಿಶೇಷ. ಒಂಬತ್ತು ದಿನಗಳ ಕಾಲ ಒಂಬತ್ತು ದೇವಿಯರ ಪೂಜೆಯನ್ನು ನಿಷ್ಟೆಯಿಂದ ಮಾಡಿದ್ರೆ ಯಶಸ್ಸು ಸಿಗೋದು ಖಚಿತ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಮಹಾನ್ ಶಕ್ತಿ ಸ್ವರೂಪಿಣಿಯರ ಆಶೀರ್ವಾದ ನಮ್ಮ ಮೇಲಿದ್ರೆ ಜೀವನದಲ್ಲಿ ಕಷ್ಟಗಳು ಎದುರಾಗಲ್ಲ, ಶತ್ರುಗಳ ಭಯವಿರಲ್ಲ, ಸಾಧನೆಗೆ ಬೇಕಾದ ಶಕ್ತಿ ದೊರೆಯುತ್ತೆ ಅನ್ನೋ ನಂಬಿಕೆ ಅನಾದಿಕಾಲದಿಂದಲೂ ಇದೆ.

ತಾಜಾ ಸುದ್ದಿ

Related Stories

Click on your DTH Provider to Add TV9 Kannada