ಭಗವಂತ ವಿಷ್ಣುವಿನ ಅನಂತ ರೂಪಗಳ ಪ್ರತೀಕವೇ ಅನಂತ ಗಂಟು! ಈ ಅನಂತ ದಾರದ ಮಹಿಮೆ ತಿಳಿಯೋಣ ಬನ್ನೀ
ಪಾಂಡವರು ಜೂಜಾಟದಲ್ಲಿ ಸೋತು ಎಲ್ಲವನ್ನೂ ಕಳೆದುಕೊಂಡು ಅಲ್ಲಿ ಇಲ್ಲಿ ಅಲೆದಾಟ ನಡೆಸಿದ್ದರು. ಆಗ ಶ್ರೀ ಕೃಷ್ಣ ಅನಂತ ಚತುರ್ದಶಿಯ ದಿನ ವಿಷ್ಣು ದೇವರ ಅನಂತ ಸ್ವರೂಪ ಪೂಜೆ ಮಾಡುತ್ತಾ ವ್ರತ ಪಾಲಿಸುವಂತೆ ಸಲಹೆ ನೀಡುತ್ತಾನೆ. ಹಾಗೆ ಶ್ರೀ ಕೃಷ್ಣನ ಸಲಹೆಯಂತೆ ಪಾಂಡವರು ಅನಂತ ವ್ರತ ಆಚರಿಸುತ್ತಾರೆ. ಮತ್ತು ಅದರಂತೆ ಪಾಂಡವರು ಕಷ್ಟ ಕಾರ್ಪಣ್ಯಗಳೆಲ್ಲಾ ನಿವಾರಣೆಯಾಗುತ್ತವೆ.
ಭಗವಂತ ಶ್ರೀ ವಿಷ್ಣುವಿನ ವಿರಾಟ ಸ್ವರೂಪ ಅನಂತವಾದದ್ದು; ಅದಕ್ಕೆ ಅಂತ್ಯ ಎಂಬುದು ಇಲ್ಲ. ಅನಂತ ಪದ್ಮನಾಭ ಚತುರ್ದಶಿಯ ದಿನ ವಿಷ್ಣು ಮೂರ್ತಿ ಅನಂತ ಸ್ವರೂಪಗಳ ಸರ್ವ ಪೂಜೆ ನಡೆಯುತ್ತದೆ. ಅನಂತ ಚತುರ್ದಶಿಯ ಕೊನೆಗೆ ಮುಖ್ಯವಾಗುತ್ತದೆ ಅನಂತ ಗಂಟು! ಈ ಅನಂತ ದಾರದ ಬಗ್ಗೆ ತಿಳಿಯೋಣ ಬನ್ನೀ. ಅನಂತ ಚತುರ್ದಶಿಯನ್ನು ಈ ಬಾರಿ ಸೆಪ್ಟೆಂಬರ್ 19ರಂದು ಭಾನುವಾರ ಆಚರಿಸಲಾಗುವುದು. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ದಶಿ ದಿನದಂದು ಹಬ್ಬ ಆಚರಿಸಲಾಗುತ್ತದೆ. ಇದೇ ದಿನ ಗಣೇಶೋತ್ಸವ ಕೊನೆಗೊಂಡು ಗಣೇಶನ ವಿಸರ್ಜನೆ ಸಹ ನಡೆಯುತ್ತೆ. ಅನಂತ ಚತುರ್ದಶಿಯ ದಿನ ವಿಷ್ಣುವಿನ ಅನಂತ ರೂಪಗಳ ದರ್ಶನವಾಗುತ್ತದೆ ಎಂಬುದು ನಂಬಿಕೆ. ಹಾಗಾಗಿ ಅಂದು ಆ ಅನಂತ ರೂಪಗಳಿಗೂ ಪೂಜೆ ನೆರವೇರಿಸುವುದರಿಂದ ಭಗವಂತ ವಿಷ್ಣು ಸಂಪ್ರೀತನಾಗಿ ನಮ್ಮ ಮೇಲೆ ಕೃಪಾಶೀರ್ವಾದ ಮಾಡುತ್ತಾನೆ ಎಂಬ ನಂಬಿಕೆ.
ಅನಂತ ಚತುರ್ದಶಿ ವ್ರತ, ಅನಂತ ಪದ್ಮನಾಭ ವ್ರತ: ಪಾಂಡವರು ಜೂಜಾಟದಲ್ಲಿ ಸೋತು ಎಲ್ಲವನ್ನೂ ಕಳೆದುಕೊಂಡು ಅಲ್ಲಿ ಇಲ್ಲಿ ಅಲೆದಾಟ ನಡೆಸಿದ್ದರು. ಆಗ ಶ್ರೀ ಕೃಷ್ಣ ಅನಂತ ಚತುರ್ದಶಿಯ ದಿನ ವಿಷ್ಣು ದೇವರ ಅನಂತ ಸ್ವರೂಪ ಪೂಜೆ ಮಾಡುತ್ತಾ ವ್ರತ ಪಾಲಿಸುವಂತೆ ಸಲಹೆ ನೀಡುತ್ತಾನೆ. ಹಾಗೆ ಶ್ರೀ ಕೃಷ್ಣನ ಸಲಹೆಯಂತೆ ಪಾಂಡವರು ಅನಂತ ವ್ರತ ಆಚರಿಸುತ್ತಾರೆ. ಮತ್ತು ಅದರಂತೆ ಪಾಂಡವರು ಕಷ್ಟ ಕಾರ್ಪಣ್ಯಗಳೆಲ್ಲಾ ನಿವಾರಣೆಯಾಗುತ್ತವೆ. ಅದಾದ ಮೇಲಷ್ಟೇ ಪಾಂಡವರು ವಿಜಯ ಸಾಧಿಸುತ್ತಾರೆ.
ಒಮ್ಮೆ ದೇವರ್ಷಿ ನಾರದ ಮಹಾಮುನಿಗಳು ವಿಷ್ಣು ಭಗವಂತ ತನ್ನ ಅನಂತ ವಿರಾಟ ರೂಪ ದರ್ಶನ ನೀಡಬೇಕು ಎಂದು ಅಪೇಕ್ಷಿಸುತ್ತಾರೆ. ವಿಷ್ಣು ಅದರಂತೆ ನಾರದ ಮುನಿಗಳ ಇಚ್ಛೆಗೆ ಅನುಗುಣವಾಗಿ ಸಚ್ಚಿದಾನಂದ ಸತ್ಯನಾರಾಯಣ ಸ್ವಾಮಿಯ ಅನಂತ ಸ್ವರೂಪ ಪ್ರಕಟವಾಗುತ್ತದೆ. ಅಂದು ಭಾದ್ರಪದ ಮಾಸದ ಶುಕ್ಲ ಪಕ್ಷ ಚತುರ್ದಶಿ ದಿನವಾಗಿದ್ದರಿಂದ ಅನಂತ ಪದ್ಮನಾಭ ವ್ರತ ಆಚರಿಸುತ್ತಾ ಬರಲಾಗಿದೆ.
ಅನಂತ ವರಗಳ ಕರುಣಿಸುವ ಪದ್ಮನಾಭ: ಅನಂತ ಪೂಜೆ ನಡೆಯುವುದೇಕೆ ಎಂದರೆ ವಿಷ್ಣು ಭಗವಂತ ಸೃಷ್ಟಿಯ ಆರಂಭಕ್ಕೆ ಚಾಲನೆ ನೀಡಿ, 14 ಲೋಕಗಳಲ್ಲಿ ಸೃಷ್ಟಿಯಲ್ಲಿ ತೊಡಗುತ್ತಾನೆ. ಅವು ತಳ, ಅತಳ, ವಿತಳ, ಸುತಳ, ತಲಾತಳ, ಮಹಾತಳ, ರಸಾತಳ, ಪಾತಾಳ, ಭೂ, ಭುವಃ, ಸ್ವಃ, ಜನ, ತಪ ಮತ್ತು ಸತ್ಯ ಲೋಕ. ಈ ಹದಿನಾಲಕ್ಕೂ ಲೋಕಗಳ ರಚನೆಯ ಬಳಿಕ ಅವುಗಳ ಸಂರಕ್ಷಣೆ ಮತ್ತು ಪಾಲನೆ ಮಾಡಲು ವಿಷ್ಣು ಭಗವಂತ 14 ರೂಪಗಳಲ್ಲಿ ಪ್ರಕಟವಾಗುತ್ತಾನೆ. ಅದುವೇ ಅನಂತ ರೂಪಗಳು. ಅಂದು ಅನಂತ, ಶ್ರೀಕೃಷ್ಣ, ಪದ್ಮನಾಭ, ಮಾಧವ, ವೈಕುಂಠಪತಿ, ಶ್ರೀಧರ, ತ್ರಿವಿಕ್ರಮ, ಮಧುಸೂದನ, ವಾಮನ, ಕೇಶವ, ನಾರಾಯಣ, ದಾಮೋದರ ಮತ್ತು ಗೋವಿಂದ ಸ್ವರೂಪಗಳಲ್ಲಿ ಪೂಜಿಸಲಾಗುತ್ತದೆ.
ಅನಂತ ಸೂತ್ರದ ಅನಂತ ದಾರದ ಮಹಿಮೆ ಮನುಷ್ಯರನ್ನು ಸಂಕಟಗಳಿಂದ ಪಾರು ಮಾಡಲು ಅನಂತ ಚತುರ್ದಶಿಯ ದಿನ ವ್ರತಾಚರಣೆಯ ಬಳಿಕ ಅರಿಶಿನದಿಂದ ಒದ್ದೆ ಮಾಡಿರುವ ದಾರವನ್ನು ಪುರುಷರ ಬಲ ಭುಜ ಭಾಗಕ್ಕೆ ಮತ್ತು ಮಹಿಳೆಯರ ಎಡ ಭುಜ ಭಾಗಕ್ಕೆ ಕಟ್ಟಬೇಕು. ಅನಂತ ದಾರ ಧಾರಣೆಯಿಂದ ವಿಷ್ಣು ಭಗವಂತನ ಮಹಾಕೃಪೆ ಆ ವ್ಯಕ್ತಿಯ ಮೇಲೆ ಬೀರುತ್ತದೆ. ಅದರಿಂದ ಆ ವ್ಯಕ್ತಿಯ ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳೆಲ್ಲವೂ ನಿವಾರಣೆಯಾಗುತ್ತವೆ.
Also Read: 9 ವರ್ಷ ನಂತರ ‘ಅನಂತ’ ಸಂಪತ್ತಿನ ದೇಗುಲ ವಿವಾದ ಇತ್ಯರ್ಥ, ಸುಪ್ರೀಂ ಆದೇಶ ಏನು? (Ananta Chaturdashi 2021 knots of ananta sutra symbolize 14 forms of lord vishnu how srihari is called lord ananta)