AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Clove Power: ಮನೆಯಲ್ಲಿ ಲವಂಗ ಮತ್ತು ಕರ್ಪೂರ ಸುಟ್ಟರೆ ಸಿಗುವ ಅದ್ಭುತ ಪ್ರಯೋಜನಗಳು ಗೊತ್ತಾ?

ಹಿಂದೂ ಧರ್ಮದಲ್ಲಿ ಲವಂಗ ಕೇವಲ ಮಸಾಲೆ ಪದಾರ್ಥವಲ್ಲ, ಇದು ಪೂಜೆಗಳಲ್ಲಿ ಪವಿತ್ರ ಸ್ಥಾನ ಪಡೆದಿದೆ. ಶಾಸ್ತ್ರಗಳ ಪ್ರಕಾರ, ಲವಂಗವನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ಆರ್ಥಿಕ ಸಮಸ್ಯೆಗಳು, ಅನಾರೋಗ್ಯ, ಕೌಟುಂಬಿಕ ಕಲಹಗಳು, ವೃತ್ತಿ ಅಡೆತಡೆಗಳು ಮತ್ತು ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಲವಂಗದ ಪರಿಹಾರಗಳು ಜೀವನದ ಹಲವು ಸಮಸ್ಯೆಗಳಿಗೆ ದಿವ್ಯ ಔಷಧಿಯಾಗಿವೆ.

Clove Power: ಮನೆಯಲ್ಲಿ ಲವಂಗ ಮತ್ತು ಕರ್ಪೂರ ಸುಟ್ಟರೆ ಸಿಗುವ ಅದ್ಭುತ ಪ್ರಯೋಜನಗಳು ಗೊತ್ತಾ?
ಲವಂಗ
ಅಕ್ಷತಾ ವರ್ಕಾಡಿ
|

Updated on:Aug 26, 2026 | 7:40 AM

Share

ಹಿಂದೂ ಧರ್ಮದಲ್ಲಿ, ಲವಂಗದ ಸ್ಥಾನವು ಕೇವಲ ಅಡುಗೆಮನೆಯ ಮಸಾಲೆ ಪದಾರ್ಥಕ್ಕೆ ಸೀಮಿತವಾಗಿಲ್ಲ. ಪೂಜೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಲವಂಗವನ್ನು ಅತ್ಯಂತ ಪವಿತ್ರ ಹಾಗೂ ಮಂಗಳಕರವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳು ಮತ್ತು ಜ್ಯೋತಿಷ್ಯದ ಪ್ರಕಾರ, ದೈನಂದಿನ ಜೀವನದಲ್ಲಿ ಈ ಸಣ್ಣ ಲವಂಗವನ್ನು ನಿರ್ದಿಷ್ಟ ರೀತಿಯಲ್ಲಿ ಬಳಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಜೀವನದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.

ಆರ್ಥಿಕ ಅಭಿವೃದ್ಧಿ ಮತ್ತು ಸಂಪತ್ತಿನ ವೃದ್ಧಿ:

ಮನೆಯಲ್ಲಿ ಧನಲಾಭ ಉಂಟಾಗಲು ಮತ್ತು ಸಾಲದ ಬಾಧೆಯಿಂದ ಮುಕ್ತಿ ಪಡೆಯಲು ಲವಂಗದ ಪರಿಹಾರ ಅತ್ಯಂತ ಶಕ್ತಿಶಾಲಿ. ರಾತ್ರಿ ಮಲಗುವ ಮುನ್ನ ಬೆಳ್ಳಿಯ ಬಟ್ಟಲಿನಲ್ಲಿ ಸ್ವಲ್ಪ ಕರ್ಪೂರ ಮತ್ತು ಲವಂಗವನ್ನು ಹಾಕಿ ಸುಡುವುದರಿಂದ ಮನೆಯಲ್ಲಿ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ. ಹೀಗೆ ಮಾಡುವುದರಿಂದ ಸಂಪತ್ತಿನ ಕೊರತೆ ನೀಗಿ, ಆರ್ಥಿಕ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.

ಆರೋಗ್ಯ ವೃದ್ಧಿ ಮತ್ತು ರೋಗ ನಿವಾರಣೆ:

ಮನೆಯಲ್ಲಿ ಯಾರಾದರೂ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಪದೇ ಪದೇ ಅಸ್ವಸ್ಥರಾಗುತ್ತಿದ್ದರೆ ಲವಂಗವನ್ನು ಸುಡುವುದು ಒಳ್ಳೆಯದು. ಲವಂಗವನ್ನು ಸುಡುವುದರಿಂದ ಹೊರಹೊಮ್ಮುವ ಹೊಗೆ ಮತ್ತು ನಕಾರಾತ್ಮಕ ಶಕ್ತಿ ನಿವಾರಕ ಗುಣಗಳು ಮನೆಯ ವಾತಾವರಣವನ್ನು ಶುದ್ಧೀಕರಿಸುತ್ತವೆ. ಇದು ಮನೆಯ ಸದಸ್ಯರನ್ನು ಅನಾರೋಗ್ಯದಿಂದ ಮುಕ್ತರನ್ನಾಗಿ ಮಾಡಲು ಮತ್ತು ಶೀಘ್ರ ಗುಣಮುಖರಾಗಲು ನೆರವಾಗುತ್ತದೆ.

ಕುಟುಂಬದಲ್ಲಿ ಶಾಂತಿ ಮತ್ತು ಪ್ರೀತಿಯ ವೃದ್ಧಿ:

ಮನೆಯಲ್ಲಿ ಆಗಾಗ ಕೌಟುಂಬಿಕ ಕಲಹಗಳು, ಮನಸ್ತಾಪಗಳು ಉಂಟಾಗುತ್ತಿದ್ದರೆ ಮತ್ತು ಕುಟುಂಬದ ಸದಸ್ಯರ ನಡುವೆ ಪ್ರೀತಿ ಕಡಿಮೆಯಾಗುತ್ತಿದ್ದರೆ ಸರಳ ನಿಯಮವನ್ನು ಪಾಲಿಸಬಹುದು. ಮಂಗಳವಾರದಂದು ಹನುಮಾನ್ ದೇವಾಲಯಕ್ಕೆ ತೆರಳಿ 5 ಲವಂಗ ಮತ್ತು ಕರ್ಪೂರವನ್ನು ಉರಿಸಬೇಕು. ಜೊತೆಗೆ ಮನೆಯಲ್ಲಿಯೂ ಲವಂಗವನ್ನು ಸುಟ್ಟು ಅದರ ಹೊಗೆಯನ್ನು ಎಲ್ಲಾ ಕೊಠಡಿಗಳಿಗೂ ಹಬ್ಬಿಸುವುದರಿಂದ ಕುಟುಂಬದ ಸಂಘರ್ಷಗಳು ನಿವಾರಣೆಯಾಗಿ ಶಾಂತಿ ನೆಲೆಸುತ್ತದೆ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಅಷ್ಟಲಕ್ಷ್ಮಿ ರಾಜಯೋಗ; ಈ 4 ರಾಶಿಗೆ ಒಲಿಯಲಿದೆ ಅಪಾರ ಧನಸಂಪತ್ತು!

ವೃತ್ತಿಜೀವನದ ಯಶಸ್ಸು ಮತ್ತು ಕೆಲಸದ ಅವಕಾಶಗಳು:

ನೀವು ಮಾಡುತ್ತಿರುವ ಕೆಲಸದಲ್ಲಿ ಪದೇ ಪದೇ ಅಡೆತಡೆಗಳು ಎದುರಾಗುತ್ತಿದ್ದರೆ, ಸೂಕ್ತ ಉದ್ಯೋಗ ಸಿಗದೆ ತೊಂದರೆ ಅನುಭವಿಸುತ್ತಿದ್ದರೆ ಮನೆಯಲ್ಲಿ ಪ್ರತಿದಿನ ಲವಂಗವನ್ನು ಸುಡುವ ಅಭ್ಯಾಸ ಮಾಡಿಕೊಳ್ಳಿ. ಈ ಧಾರ್ಮಿಕ ಪರಿಹಾರವು ವೃತ್ತಿರಂಗದಲ್ಲಿದ್ದ ಅಡೆತಡೆಗಳನ್ನು ತೆಗೆದುಹಾಕಿ, ಹೊಸ ಉದ್ಯೋಗಾವಕಾಶಗಳು ಸಿಗುವಂತೆ ಮಾಡುತ್ತದೆ.

ಮಾನಸಿಕ ನೆಮ್ಮದಿ ಮತ್ತು ಧನಾತ್ಮಕ ಚಿಂತನೆ:

ಇಂದಿನ ಒತ್ತಡದ ಜೀವನದಲ್ಲಿ ಮಾನಸಿಕ ಶಾಂತಿ ಪ್ರತಿಯೊಬ್ಬರಿಗೂ ಅತ್ಯಗತ್ಯ. ಪ್ರತಿದಿನ ಮನೆಯಲ್ಲಿ ಕರ್ಪೂರದ ಜೊತೆ ಲವಂಗವನ್ನು ಉರಿಸುವುದರಿಂದ ಮನಸ್ಸಿನಲ್ಲಿರುವ ಆತಂಕ, ಭೀತಿ ಹಾಗೂ ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ. ಇದು ಮಾನಸಿಕ ತೃಪ್ತಿ, ನೆಮ್ಮದಿ ಮತ್ತು ಧನಾತ್ಮಕ ವಾತಾವರಣವನ್ನು ಕಲ್ಪಿಸಿಕೊಡುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:39 am, Wed, 26 August 26

Follow Us