AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಘಟನೆ ಪದೇ ಪದೇ ಮರುಳಿಸುತ್ತಿದ್ದರೆ, ನಿಮ್ಮ ಒಳ್ಳೆಯ ಸಮಯ ಪ್ರಾರಂಭವಾಗುತ್ತಿದೆ ಎಂಬುದರ ಮುನ್ಸೂಚನೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ಲಕ್ಷಣಗಳು ಮುಂಬರುವ ಒಳ್ಳೆಯ ದಿನಗಳನ್ನು ಸೂಚಿಸುತ್ತವೆ. ಮನೆಗೆ ಹಸು ಬರುವುದು, ಶಂಖ ಅಥವಾ ಗಂಟೆಯ ಶಬ್ದ ಕೇಳುವುದು, ಅಂಗೈ ತುರಿಕೆ, ಕಪ್ಪು ಇರುವೆಗಳ ಹಿಂಡು ಮನೆಗೆ ಬರುವುದು ಮತ್ತು ಕನಸಿನಲ್ಲಿ ಪೊರಕೆ ಕಾಣುವುದು ಇವುಗಳನ್ನು ಶುಭ ಲಕ್ಷಣಗಳೆಂದು ಪರಿಗಣಿಸಲಾಗುತ್ತದೆ. ಈ ಲಕ್ಷಣಗಳು ದೇವರ ಆಶೀರ್ವಾದ ಮತ್ತು ಸಮೃದ್ಧಿಯ ಸಂಕೇತಗಳಾಗಿವೆ.

ಈ ಘಟನೆ ಪದೇ ಪದೇ ಮರುಳಿಸುತ್ತಿದ್ದರೆ, ನಿಮ್ಮ ಒಳ್ಳೆಯ ಸಮಯ ಪ್ರಾರಂಭವಾಗುತ್ತಿದೆ ಎಂಬುದರ  ಮುನ್ಸೂಚನೆ
Good Luck Signs
ಅಕ್ಷತಾ ವರ್ಕಾಡಿ
|

Updated on:Jun 19, 2025 | 11:16 AM

Share

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಜಾತಕವನ್ನು ಆಧಾರಿಸಿ ಆತನ ಜೀವನದ ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಹೇಳಬಹುದು. ಅದೇ ರೀತಿ ನಿಮ್ಮ ಜೀವನದಲ್ಲಿ ಕೆಲವೊಂದು ಘಟನೆಗಳು ಪದೇ ಪದೇ ಮರುಳಿಸುತ್ತಿದ್ದರೆ, ಆದ್ದರಿಂದಲೂ ಕೂಡ ಶುಭ ಮತ್ತು ಅಶುಭ ಘಟನೆಗಳ ಮುನ್ಸೂಚನೆಯನ್ನು ತಿಳಿಯಬಹುದು ಎಂದು ಜ್ಯೋತಿಷಿಗಳು ಸೂಚಿಸುತ್ತಾರೆ. ಆದ್ದರಿಂದ ಒಳ್ಳೆಯ ದಿನ ಪ್ರಾರಂಭವಾಗುವ ಮುನ್ನ ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮನೆಗೆ ಹಸು ಆಗಮನ:

ಯಾವತ್ತೂ ಬಾರದೇ ಇರುವ ಹಸುಗಳು ಇತ್ತೀಚಿನ ದಿನಗಳಲ್ಲಿ ನಿಮ್ಮ ಮನೆಗೆ ಹಸುಗಳು ಪದೇ ಪದೇ ಬರುತ್ತಿದ್ದರೆ, ಅದು ಶುಭ ಕಾಲದ ಸಂಕೇತ. ಅಂದರೆ ದೇವರುಗಳ ಆಶೀರ್ವಾದ ನಿಮ್ಮ ಮೇಲಿದೆ ಮತ್ತು ನಿಮಗೆ ಶುಭ ಕಾಲಗಳು ಪ್ರಾರಂಭವಾಗಲಿವೆ ಎಂದರ್ಥವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ.

ಶಂಖ ಅಥವಾ ಗಂಟೆ ಶಬ್ಧ:

ಜ್ಯೋತಿಷ್ಯದ ಪ್ರಕಾರ, ನೀವು ಕನಸಿನಲ್ಲಿ ಮಂತ್ರ, ಗಂಟೆ ಅಥವಾ ಶಂಖವನ್ನು ಕೇಳಿದರೆ, ಅದನ್ನು ಶುಭ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಕನಸಿನಲ್ಲಿ ಶಂಖ ಅಥವಾ ಗಂಟೆಯನ್ನು ಕೇಳುವುದು ಒಳ್ಳೆಯ ದಿನಗಳ ಆರಂಭವನ್ನು ಸೂಚಿಸುತ್ತದೆ.

ಇದನ್ನೂ ಓದಿ
Image
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
Image
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
Image
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
Image
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಅಂಗೈ ತುರಿಕೆ:

ನಿಮ್ಮ ಅಂಗೈ ಪದೇ ಪದೇ ತುರಿಕೆ ಕಂಡುಬಂದರೆ, ಅದು ಮುಂಬರುವ ಒಳ್ಳೆಯ ದಿನಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂಗೈ ತುರಿಕೆ ನಿಮ್ಮ ಕೆಟ್ಟ ಸಮಯಗಳು ಕೊನೆಗೊಳ್ಳಲಿವೆ ಎಂದು ಸೂಚಿಸುತ್ತದೆ.

ಇದನ್ನೂ ಓದಿ: ಸಂಖ್ಯೆ 7ರ ಹಿಂದಿನ ರಹಸ್ಯಗಳು; ಇದು ಶುಭವೋ, ಅಶುಭವೋ?

ಮನೆಯಲ್ಲಿ ಕಪ್ಪು ಇರುವೆಗಳ ಹಿಂಡು:

ಸನಾತನ ಧರ್ಮದ ಪ್ರಕಾರ, ಕಪ್ಪು ಇರುವೆಗಳ ಹಿಂಡು ಇದ್ದಕ್ಕಿದ್ದಂತೆ ನಿಮ್ಮ ಮನೆಗೆ ಪ್ರವೇಶಿಸಿದರೆ, ಅದು ಲಕ್ಷ್ಮಿ ದೇವಿಯ ಆಶೀರ್ವಾದದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಕಪ್ಪು ಇರುವೆಗಳ ಹಠಾತ್ ಆಗಮನವು ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ ಎಂದು ಸೂಚಿಸುತ್ತದೆ.

ಕನಸಿನಲ್ಲಿ ಪದೇ ಪದೇ ಪೊರಕೆ ಕಾಣುವುದು:

ಜ್ಯೋತಿಷ್ಯದ ಪ್ರಕಾರ, ನೀವು ಕನಸಿನಲ್ಲಿ ಪದೇ ಪದೇ ಪೊರಕೆ ಕಾಣಿಸಿಕೊಂಡರೆ, ಅದು ಮುಂಬರುವ ಒಳ್ಳೆಯ ದಿನಗಳ ಸೂಚನೆಯಾಗಿರಬಹುದು. ಬೆಳಿಗ್ಗೆ ಅಥವಾ ಮನೆಯಿಂದ ಹೊರಡುವಾಗ ಪೊರಕೆಯನ್ನು ನೋಡುವುದು ಲಕ್ಷ್ಮಿ ದೇವಿಯ ಆಶೀರ್ವಾದದ ಸಂಕೇತವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:16 am, Thu, 19 June 25

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
‘ಬಿಗ್ ಬಾಸ್​ಗೆ ಮೂರು ಬಿಟ್ಟು ಬರ್ತಾರೆ ಅಂದುಕೊಂಡಿರಲಿಲ್ಲ’; ವೈಷ್ಣವಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ!
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ
ಸಖತ್ ಆಗವ್ರೆ ಅಂತ ಕಾಳು ಹಾಕೋಕೆ ಬಂದ ಯಶಸ್​ಗೆ ಮರೆಯಲಾರದ ಪಾಠ ಕಲಿಸಿದ ಗಾನವಿ