AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Surya Grahan 2026: ಫೆಬ್ರವರಿ 17ರಂದು ವರ್ಷದ ಮೊದಲ ಸೂರ್ಯಗ್ರಹಣ; ಉಂಗುರಾಕಾರದಲ್ಲಿ ಸೂರ್ಯ ಗೋಚರ

ಫೆಬ್ರವರಿ 17ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, 'ರಿಂಗ್ ಆಫ್ ಫೈರ್' ದೃಶ್ಯ ಜಗತ್ತಿನ ಹಲವೆಡೆ ಗೋಚರಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:26ಕ್ಕೆ ಆರಂಭವಾಗಿ ಸಂಜೆ 7:57ಕ್ಕೆ ಮುಕ್ತಾಯಗೊಳ್ಳುತ್ತದೆ. ಭಾರತದಲ್ಲಿ ಈ ಗ್ರಹಣ ಗೋಚರಿಸದ ಕಾರಣ ಸೂತಕ ಇರುವುದಿಲ್ಲ. ಅಮೆರಿಕದ ನಾಸಾ ಸಂಸ್ಥೆ ಇದರ ನೇರಪ್ರಸಾರ ಮಾಡುವ ಸಾಧ್ಯತೆಯಿದೆ, ಮನೆಯಲ್ಲೇ ಆನ್‌ಲೈನ್ ಮೂಲಕ ವೀಕ್ಷಿಸಬಹುದು.

Surya Grahan 2026: ಫೆಬ್ರವರಿ 17ರಂದು ವರ್ಷದ ಮೊದಲ ಸೂರ್ಯಗ್ರಹಣ; ಉಂಗುರಾಕಾರದಲ್ಲಿ ಸೂರ್ಯ ಗೋಚರ
ಕಂಕಣ ಸೂರ್ಯಗ್ರಹಣ
ಅಕ್ಷತಾ ವರ್ಕಾಡಿ
|

Updated on: Feb 12, 2026 | 12:14 PM

Share

ಕೆಲವೇ ದಿನಗಳಲ್ಲಿ ಆಕಾಶದಲ್ಲಿ ಅಪರೂಪದ ಖಗೋಳ ದೃಶ್ಯವೊಂದು ಮೂಡಲಿದೆ. ಫೆಬ್ರವರಿ 17ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಜಗತ್ತಿನ ಹಲವೆಡೆ “ರಿಂಗ್ ಆಫ್ ಫೈರ್” ಎಂಬ ಅದ್ಭುತ ದೃಶ್ಯ ಗೋಚರಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣ ಮಧ್ಯಾಹ್ನ 3:26ಕ್ಕೆ ಆರಂಭವಾಗಿ ಸಂಜೆ 7:57ಕ್ಕೆ ಮುಕ್ತಾಯಗೊಳ್ಳುತ್ತದೆ. ಒಟ್ಟು ಸುಮಾರು 4 ಗಂಟೆ 32 ನಿಮಿಷಗಳ ಕಾಲ ಈ ಗ್ರಹಣ ಪ್ರಕ್ರಿಯೆ ನಡೆಯಲಿದೆ.

ಗ್ರಹಣದ ಗರಿಷ್ಠ ಹಂತ ಸಂಜೆ 5:42ರ ಸುಮಾರಿಗೆ ಸಂಭವಿಸಲಿದೆ. ಈ ವೇಳೆ ಚಂದ್ರನು ಸೂರ್ಯನನ್ನು ಸಂಪೂರ್ಣ ಮುಚ್ಚದೆ, ಸೂರ್ಯನ ಅಂಚುಗಳು ಬೆಂಕಿಯ ಉಂಗುರದಂತೆ ಹೊಳೆಯುತ್ತವೆ. ಈ ದೃಶ್ಯವೇ “ರಿಂಗ್ ಆಫ್ ಫೈರ್” ಎಂದು ಕರೆಯಲ್ಪಡುತ್ತದೆ. ಗರಿಷ್ಠ ಹಂತವು ಸುಮಾರು 2 ನಿಮಿಷ 20 ಸೆಕೆಂಡುಗಳ ಕಾಲ ಮುಂದುವರಿದು, ಬಳಿಕ ಗ್ರಹಣ ಕ್ರಮೇಣ ಕ್ಷೀಣಿಸಿ ಅಂತ್ಯಗೊಳ್ಳುತ್ತದೆ.

ಕಂಕಣ ಸೂರ್ಯಗ್ರಹಣವು ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಉಂಟಾಗುತ್ತದೆ. ಆದರೆ ಚಂದ್ರನು ಭೂಮಿಯಿಂದ ಸ್ವಲ್ಪ ದೂರದಲ್ಲಿರುವ ಕಾರಣ ಸೂರ್ಯನಿಗಿಂತ ಸಣ್ಣದಾಗಿ ಕಾಣುತ್ತದೆ. ಈ ಕಾರಣದಿಂದ ಸೂರ್ಯನನ್ನು ಸಂಪೂರ್ಣ ಮುಚ್ಚಲು ಸಾಧ್ಯವಾಗದೆ, ಸೂರ್ಯನ ಸುತ್ತಲೂ ಉಂಗುರದ ಆಕಾರದಲ್ಲಿ ಬೆಳಕು ಕಾಣಿಸುತ್ತದೆ. ಇದೇ ಈ ಗ್ರಹಣದ ವೈಶಿಷ್ಟ್ಯವಾಗಿದ್ದು, ಖಗೋಳಶಾಸ್ತ್ರ ಪ್ರಿಯರಿಗೆ ಅತ್ಯಂತ ಆಕರ್ಷಕ ಕ್ಷಣವಾಗಿರುತ್ತದೆ.

ಇದನ್ನೂ ಓದಿ: ಜೀವನವನ್ನೇ ಬದಲಾಯಿಸುವ ಮಹಾನ್ ಶಕ್ತಿ ಮಹಾಲಕ್ಷ್ಮೀ ರಾಜಯೋಗದ ಬಗ್ಗೆ ಮಾಹಿತಿ ಇಲ್ಲಿದೆ

ಆದರೆ ಭಾರತೀಯರಿಗೆ ಈ ಬಾರಿ ಈ ಅದ್ಭುತವನ್ನು ನೇರವಾಗಿ ವೀಕ್ಷಿಸುವ ಅವಕಾಶ ದೊರೆಯುವುದಿಲ್ಲ. ಭಾರತದಲ್ಲಿಯೂ ಅಲ್ಲದೆ ಏಷ್ಯಾದ ಬಹುತೇಕ ಭಾಗಗಳಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಹೀಗಾಗಿ ದೇಶದಲ್ಲಿ ಸೂತಕ ಅಥವಾ ವಿಶೇಷ ಧಾರ್ಮಿಕ ಆಚರಣೆಗಳ ಅವಶ್ಯಕತೆ ಇರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಈ ಗ್ರಹಣವನ್ನು ನೇರಪ್ರಸಾರ ಮಾಡುವ ಸಾಧ್ಯತೆ ಇದೆ. ನಾಸಾದ ಅಧಿಕೃತ ಯೂಟ್ಯೂಬ್ ಚಾನೆಲ್ ಅಥವಾ ಆನ್‌ಲೈನ್ ವೇದಿಕೆಗಳ ಮೂಲಕ ಈ ಅಪರೂಪದ ದೃಶ್ಯವನ್ನು ಮನೆಯಲ್ಲೇ ಕುಳಿತು ವೀಕ್ಷಿಸಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ವಿಶ್ವವಿಖ್ಯಾತ ಜಂಬೂ ಸವಾರಿಗೆ ದಿನಗಣನೆ: ಅರಮನೆ ಆವರಣದಲ್ಲಿ ಭರ್ಜರಿ ತಾಲೀಮು
ವಿಶ್ವವಿಖ್ಯಾತ ಜಂಬೂ ಸವಾರಿಗೆ ದಿನಗಣನೆ: ಅರಮನೆ ಆವರಣದಲ್ಲಿ ಭರ್ಜರಿ ತಾಲೀಮು
ಕೆಪಿಎಸ್ಸಿ ನೇಮಕಾತಿ ಹಗರಣ: ಬಗೆದಷ್ಟೂ ಬಯಲಾಗ್ತಿದೆ ಕನ್ನಾಳೆ ಕಳ್ಳಾಟ
ಕೆಪಿಎಸ್ಸಿ ನೇಮಕಾತಿ ಹಗರಣ: ಬಗೆದಷ್ಟೂ ಬಯಲಾಗ್ತಿದೆ ಕನ್ನಾಳೆ ಕಳ್ಳಾಟ
ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ: ಆಗಿದ್ದೇನು?
ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ: ಆಗಿದ್ದೇನು?
ಬೆಂಗಳೂರಿನಲ್ಲಿ ವಕೀಲನ ಕೊಲೆ: ಸಂಬಂಧಿಕರ ಶಾಕಿಂಗ್ ರಿಯಾಕ್ಷನ್!
ಬೆಂಗಳೂರಿನಲ್ಲಿ ವಕೀಲನ ಕೊಲೆ: ಸಂಬಂಧಿಕರ ಶಾಕಿಂಗ್ ರಿಯಾಕ್ಷನ್!
ದೆಹಲಿ-ಪಂಜಾಬ್ ನೆಟ್‌ವರ್ಕ್, ಬಿಷ್ಣೋಯ್ ಗ್ಯಾಂಗ್ ಕೈವಾಡದ ಬಗ್ಗೆ ತನಿಖೆ
ದೆಹಲಿ-ಪಂಜಾಬ್ ನೆಟ್‌ವರ್ಕ್, ಬಿಷ್ಣೋಯ್ ಗ್ಯಾಂಗ್ ಕೈವಾಡದ ಬಗ್ಗೆ ತನಿಖೆ
ಕಿಮ್ಸ್ ಅವ್ಯವಸ್ಥೆ: ವ್ಹೀಲ್‌ಚೇರ್ ಇಲ್ಲದೆ ರೋಗಿಯ ಹೊತ್ತೊಯ್ದ ಸಂಬಂಧಿಕರು!
ಕಿಮ್ಸ್ ಅವ್ಯವಸ್ಥೆ: ವ್ಹೀಲ್‌ಚೇರ್ ಇಲ್ಲದೆ ರೋಗಿಯ ಹೊತ್ತೊಯ್ದ ಸಂಬಂಧಿಕರು!
ಮೈಸೂರು ದಸರಾಗೆ ದೀಪಾಲಂಕಾರದ ಮೆರಗು: ಈ ಬಾರಿಯ ವಿಶೇಷತೆ ಏನು?
ಮೈಸೂರು ದಸರಾಗೆ ದೀಪಾಲಂಕಾರದ ಮೆರಗು: ಈ ಬಾರಿಯ ವಿಶೇಷತೆ ಏನು?
ಗಗನ್ ನಡೆಗೆ ಕಣ್ಣೀರು ಹಾಕುವಷ್ಟು ಬೇಸರ ಮಾಡಿಕೊಂಡ ತಾಂಡವ್
ಗಗನ್ ನಡೆಗೆ ಕಣ್ಣೀರು ಹಾಕುವಷ್ಟು ಬೇಸರ ಮಾಡಿಕೊಂಡ ತಾಂಡವ್
ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಭೆ ಯಶಸ್ವಿ
ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಭೆ ಯಶಸ್ವಿ
ರಾಮ್‌ಪುರದಲ್ಲಿ ಓವೈಸಿ ಗುಡುಗು: ಮುಸ್ಲಿಂ ಯುವಶಕ್ತಿಗೆ ಎಐಎಂಐಎಂ ಹೊಸ ವೇದಿಕೆ
ರಾಮ್‌ಪುರದಲ್ಲಿ ಓವೈಸಿ ಗುಡುಗು: ಮುಸ್ಲಿಂ ಯುವಶಕ್ತಿಗೆ ಎಐಎಂಐಎಂ ಹೊಸ ವೇದಿಕೆ