AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishna Janmashtami 2022: ಕೃಷ್ಣಾವತಾರದ ಮೂಲ ಉದ್ದೇಶ ಏನು? ಉದ್ದೇಶ ಸಾಧನೆಯ ದಾರಿ ಹೇಗೆ ? ಕೃಷ್ಣ ಪೂಜೆಯ ಸಾರ್ಥಕ್ಯ ಹೇಗೆ?

Krishna Janmashtami 2022: ಧರ್ಮಪಾಲನೆ ಕಷ್ಟಕರವಾಗಿ ಸಾತ್ವಿಕರು ಪರದಾಡುವ ಸ್ಥಿತಿ ಬರುತ್ತದೆ. ಆಗ ಭಗವಂತ ಸಪರಿವಾರಕನಾಗಿ ಭೂಮಿಗೆ ಬರುವ ವ್ಯವಸ್ಥೆಯೇ ಅವತಾರ ಎಂದು ಕರೆಯಲ್ಪಡುತ್ತದೆ.

Krishna Janmashtami 2022: ಕೃಷ್ಣಾವತಾರದ ಮೂಲ ಉದ್ದೇಶ ಏನು? ಉದ್ದೇಶ ಸಾಧನೆಯ ದಾರಿ ಹೇಗೆ ? ಕೃಷ್ಣ ಪೂಜೆಯ ಸಾರ್ಥಕ್ಯ ಹೇಗೆ?
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 18, 2022 | 7:09 AM

Share

ಭಗವಂತ ಜಗತ್ತಿನ ಸಮತೋಲನವನ್ನು ಕಾಯುವ ದೃಷ್ಟಿಯಿಂದ ಬೇರೆ ಬೇರೆ ರೂಪದಲ್ಲಿ ಬಂದು ತನ್ನ ಕರ್ತವ್ಯವನ್ನು ಪೂರೈಸುತ್ತಿರುತ್ತಾನೆ. ಸಂಪೂರ್ಣ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ ಆದ ಕರ್ತವ್ಯವೆಂಬುದು ಇದ್ದೇ ಇದೆ. ಅದನ್ನು ಜೀವಿಯು ಮರೆತಾಗ ಅಥವಾ ಅದನ್ನು ಮಾಡದೇ ಇದ್ದಾಗ ಜಗತ್ತು ಅಸಮತೋಲನ ಸ್ಥಿತಿಯನ್ನು ಹೊಂದುತ್ತದೆ. ಧರ್ಮಪಾಲನೆ ಕಷ್ಟಕರವಾಗಿ ಸಾತ್ವಿಕರು ಪರದಾಡುವ ಸ್ಥಿತಿ ಬರುತ್ತದೆ. ಆಗ ಭಗವಂತ ಸಪರಿವಾರಕನಾಗಿ ಭೂಮಿಗೆ ಬರುವ ವ್ಯವಸ್ಥೆಯೇ ಅವತಾರ ಎಂದು ಕರೆಯಲ್ಪಡುತ್ತದೆ. ಅಂತಹ ಅವತಾರಗಳಲ್ಲೊಂದಾದ ಕೃಷ್ಣಾವತಾರದ ಕುರಿತಾಗಿ ವಿಚಾರಮಾಡೋಣ.

ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮೀ ತಿಥಿಯನ್ನು ಕೃಷ್ಣಾಷ್ಟಮೀ ಎಂದು ಆಚರಿಸುತ್ತಾರೆ. ಅವನ ಅವತಾರ ಹೇಗಾಯಿತು ಎಂದು ಎಲ್ಲರಿಗೂ ತಿಳಿದೇ ಇದೆ. ಆದರೆ ಅದರ ಉದ್ದೇಶ ಏನು ಎಂಬುದನ್ನು ನಾವು ನೋಡೋಣ. ಧರ್ಮರಕ್ಷಣೆ ಎಂಬುದು ಅದರ ಉತ್ತರ. ಆದರೆ ಅದು ಹೇಗೆ ? ಭಗವಂತ ತನ್ನ ಎಂಟನೇ ಅವತಾರದಲ್ಲಿ ಅತೀ ಮುಖ್ಯ ಸ್ಥಾನ ನೀಡಿದ್ದು ಪ್ರೀತಿಗೆ ಮತ್ತು ಗೆಳತನಕ್ಕೆ. ಸಾತ್ವಿಕವಾದ ವಾತಾವರಣದಲ್ಲಿ ಪ್ರೀತಿ ಬಿಟ್ಟರೆ ಬೇರೇನೂ ಇರದು. ಅದುವೇ ಧರ್ಮ ಸಾಧನೋಪಾಯ. ಅದನ್ನೇ “ರಾಧಾ” ಎಂಬ ಪಾತ್ರ / ವ್ಯಕ್ತಿಯ ಮೂಲಕ ತಿಳಿಸಿದ್ದಾನೆ ಭಗವಂತ. ಏನೀ ರಾಧಾ ವಿಶೇಷ ಎಂದು ಪ್ರಶ್ನೆ ಬರಬಹುದು.

ರಾಧಾ ಎಂದರೆ ಅದೊಂದು ಸ್ಥಿತಿ. ಗಂಗೆಯು ಮಹಾವಿಷ್ಣುವಿನ ಪಾದದಿಂದ ಹೊರಟು ಶಿವನ ತಲೆಯನ್ನೇರಿ ಹಿಮಾಲಯದ ಮಡಿಲಲ್ಲಿ ಪವಡಿಸಿ ತಾ ಹೋಗುವ ಸ್ಥಳಗಳನ್ನೆಲ್ಲಾ ಪವಿತ್ರೀಕರಿಸಿ ಸಮುದ್ರ ಸೇರುತ್ತದೆ ಆ ಗಂಗೆಯು ಆವಿಯಾಗುವ ಮೂಲಕ ತನ್ನ ಮೂಲಸ್ಥಾನವನ್ನು ಸೇರುತ್ತದೆ ಅಲ್ಲವೇ…. “ಧಾರಾ”ಕಾರಾವಗಿ ಹರಿದು ಬಂದ ಗಂಗೆ ಪುನಃ ಭಗವಂತವನ ಪಾದ . ಅಂದರೆ “ಧಾರಾ”ಕಾರವಾದದ್ದು “ರಾಧಾ”ಕಾರವಾಗುತ್ತದೆ. ಅದೇ ಸೃಷ್ಟಿಯ ಮೂಲ ನಿಯಮ. ಅದನ್ನು ತಿಳಿಸಲೆಂದೇ ಮತ್ತು ಈ ಸ್ಥಿತಿಯನ್ನು ಮನುಜನಿಗೆ ತಿಳಿಸಲೆಂದೇ ಭಗವಂತ ಈ ಅವತಾರವೆತ್ತಿದ್ದು. ನಾವು ಭಗವಂತನ ಅನುಗ್ರಹದಿಂದ ಜನ್ಮಪಡೆದು ಜಗತ್ತಿನಲ್ಲಿ ಏನೇನೋ ಮಾಡುತ್ತೇವೆ. ಆದರೆ ನಾವುಗಳು ಗಂಗೆಯಂತೆ ಪವಿತ್ರ ಯಾತ್ರೆಯನ್ನು ಮಾಡಬೇಕು. ಇಲ್ಲದಿದ್ದಲ್ಲಿ ಪರಾಕ್ರಮಿ ಕಂಸನ ಸ್ಥಿತಿ,ಬಲವಂತನಾದ ದುರ್ಯೋಧನನ ಸ್ಥಿತಿ, ಬುದ್ಧಿವಂತ ಶಕುನಿಯಸ್ಥಿತಿ, ಪ್ರಚಂಡ ಕರ್ಣನ ಸ್ಥಿತಿ, ಮಾಗಧನ ಸ್ಥಿತಿ ಬರುತ್ತದೆ. ಕಷ್ಟವೆನಿಸಿದರೂ ಪಾಂಡವರಂತೆ ಪ್ರೀತಿಯಿಂದ ಬಾಳಿ. ಗಂಗೆ ಗುಡ್ಡ ಮೇಡಲ್ಲಿ ಹರಿದರೂ ಪಾವಿತ್ರ್ಯಕ್ಕೆ ಅವಳ ಮುಂದೆ ಸರಿಸಮರಿಲ್ಲ. ಪರಾಕ್ರಮಿಗಳು,ಸತ್ಯಸಂಧರು ಹಲವರಿದ್ದರೂ ಪಾಂಡವರಗಿಂತ ಮೇಲಾದವರು ಯಾರೂ ಇಲ್ಲ. ಕಾರಣ ಒಂದೇ ಕರ್ತವ್ಯ ಮತ್ತು ಪ್ರೀತಿ. ಅದೇ ನಾವು ಬರುವುದು ಧಾರಾ ಬಂದಲ್ಲಿಗೆ ಪುನಃ ಸೇರುವು ರಾಧಾ ಇದರ ಮಧ್ಯದಲ್ಲಿ ಆಚರಿಸಬೇಕಾದ್ದು ಧರ್ಮ(ಅದೂ ಪ್ರೀತಿಯಿಂದ).

ಇದನ್ನು ಸಾರಲು ಬಂದ ಭಗವಂತನ ಜನ್ಮದಿನವನ್ನು ನಾವು ಆಚರಿಸುವ ಸಂದರ್ಭದಲ್ಲಿದ್ದೇವೆ. ಅದನ್ನೇ ಭಗವಂತ ಇಚ್ಛೆಪಡುವಂತೆ ಮಾಡೋಣ. “ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ” ಯಾವಾತನು ನನಗೆ ತುಳಸಿಎಲೆ, ಪುಷ್ಪ,ನೀರು ಇದರಲ್ಲಿ ಒಂದಾದರೂ ಸಾಕು ಅದನ್ನು ಪ್ರೀತಿ ತುಂಬಿದ ಭಕ್ತಿಯಿಂದ ಅರ್ಪಿಸುತ್ತಾನೋ ಅದೇ ನನ್ನ ಪೂಜೆ ಎಂದಿದ್ದಾನೆ. ಆದ ಕಾರಣ ಆಡಂಬರ ಬಿಟ್ಟು. ಪ್ರೀತಿಯಿಂದ ಕೃಷ್ಣನಿಗೊಪ್ಪುವ ರೀತಿಯಲ್ಲಿ ಅವನ ಪ್ರೀತಿಗೋಸ್ಕರ ನಾವು ಶುದ್ಧಭಾವದಿಂದ ಅವನ ಆರಾಧನೆಯನ್ನು ಮಾಡೋಣ ಅಲ್ಲವೇ.

ಪೂಜೆಯ ಹಂತ

ಕಲಶಸ್ಥಾಪನೆ, ಮೂರ್ತಿಸ್ಥಾಪನೆ, ಅಭಿಷೇಕ, ಅರ್ಚನೆ, ಸ್ತೋತ್ರ, ಆರತಿ, ಪ್ರಸನ್ನಪೂಜೆ, ಅರ್ಘ್ಯ ಸಮರ್ಪಣೆ, ಪ್ರದಕ್ಷಿಣೆ, ತೊಟ್ಟಿಲು ಸೇವೆ, ಮಹಾಮಂಗಲ. ಇದರಲ್ಲಿ ಅನುಕೂಲವಿದ್ದಷ್ಟು ಭಕ್ತಿಯಿಂದ ಮಾಡಿರಿ.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕ

SRBSS College Honnava

kkmanasvi@gmail.com

ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ