AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Onam 2026: ರಾಜ ಮಹಾಬಲಿಯ ಸ್ವಾಗತಕ್ಕೆ ಸಜ್ಜಾದ ಕೇರಳ; ಇಂದಿನಿಂದ 10 ದಿನಗಳ ವರೆಗೆ ಓಣಂ ಸಂಭ್ರಮ

ಓಣಂ, ಕೇರಳದ ಅತಿ ದೊಡ್ಡ ಸುಗ್ಗಿ ಹಬ್ಬ. ಜಾತಿ-ಮತ ಭೇದವಿಲ್ಲದೆ 10 ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುವ ಈ ಹಬ್ಬ, ಪ್ರಜಾವತ್ಸಲ ರಾಜ ಮಹಾಬಲಿಯ ಪುನರಾಗಮನವನ್ನು ಸಂಕೇತಿಸುತ್ತದೆ. ವರ್ಣರಂಜಿತ 'ಪೂಕಳಂ' ಹೂವಿನ ರಂಗೋಲಿ, ಸಾಂಪ್ರದಾಯಿಕ 'ಓಣಂ ಸದ್ಯ' ಊಟ, 'ಸರ್ಪ ದೋಣಿ ಓಟ' ಮತ್ತು 'ಪುಲಿಕಳಿ' ನೃತ್ಯಗಳು ಈ ಹಬ್ಬದ ಪ್ರಮುಖ ಆಕರ್ಷಣೆಗಳು. ಇದು ಕೇರಳದ ಸಮೃದ್ಧ ಸಂಸ್ಕೃತಿ ಮತ್ತು ಸೌಹಾರ್ದತೆಯನ್ನು ಎತ್ತಿಹಿಡಿಯುವ ಒಂದು ವಿಶಿಷ್ಟ ಆಚರಣೆಯಾಗಿದೆ.

Onam 2026: ರಾಜ ಮಹಾಬಲಿಯ ಸ್ವಾಗತಕ್ಕೆ ಸಜ್ಜಾದ ಕೇರಳ; ಇಂದಿನಿಂದ 10 ದಿನಗಳ ವರೆಗೆ ಓಣಂ ಸಂಭ್ರಮ
ಓಣಂ ಸಂಭ್ರಮImage Credit source: Getty Images
ಅಕ್ಷತಾ ವರ್ಕಾಡಿ
|

Updated on: Aug 16, 2026 | 8:41 AM

Share

ದಕ್ಷಿಣ ಭಾರತದ ಕರಾವಳಿ ರಾಜ್ಯವಾದ ಕೇರಳದಲ್ಲಿ ಅತ್ಯಂತ ಸಡಗರ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವ ಪ್ರಮುಖ ಸುಗ್ಗಿ ಹಬ್ಬವೇ ಓಣಂ. ಮಲಯಾಳಂ ಪಂಚಾಂಗದ ‘ಚಿಂಗಂ’ ಮಾಸದಲ್ಲಿ ಬರುವ ಈ ಹಬ್ಬವು ಧರ್ಮ, ಜಾತಿ ಅಥವಾ ವರ್ಗಗಳ ಭೇದವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಜಾನಪದ ಹಾಗೂ ಸಾಂಸ್ಕೃತಿಕ ಮಹೋತ್ಸವವಾಗಿದೆ. ನಾಡಿನ ಸಮೃದ್ಧಿ, ಸೌಹಾರ್ದತೆ ಮತ್ತು ಸಾಂಪ್ರದಾಯಿಕ ಪರಂಪರೆಯನ್ನು ಎತ್ತಿಹಿಡಿಯುವ ಈ ಸಂಭ್ರಮವು ಒಟ್ಟು ಹತ್ತು ದಿನಗಳ ಕಾಲ ವಿಜೃಂಭಿಸುತ್ತದೆ.

‘ಅಥಂ’ ನಕ್ಷತ್ರದೊಂದಿಗೆ ಓಣಂ ಸಂಭ್ರಮಕ್ಕೆ ಅಧಿಕೃತ ಚಾಲನೆ:

ಕೇರಳದ ಅತ್ಯಂತ ದೊಡ್ಡ ಹಾಗೂ ವರ್ಣರಂಜಿತ ಸುಗ್ಗಿ ಹಬ್ಬವಾದ ಓಣಂ ಆಚರಣೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಸಾಂಪ್ರದಾಯಿಕ ‘ಅಥಂ’ (ಹಸ್ತಾ ನಕ್ಷತ್ರ) ನಕ್ಷತ್ರದ ಆಗಮನದೊಂದಿಗೆ ಆಗಸ್ಟ್ 16ರಿಂದ ರಾಜ್ಯಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿದೆ.

10 ದಿನಗಳ ಸಂಭ್ರಮಕ್ಕೆ ಚಾಲನೆ ನೀಡಿದ ಕೇರಳ ಪ್ರವಾಸೋದ್ಯಮ:

ಕೇರಳ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ಆಗಸ್ಟ್ 16ರ ಅಥಂ ದಿನದಿಂದ ಪ್ರಾರಂಭವಾಗುವ ಈ ಆಚರಣೆಯು 10 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಈ ಹಬ್ಬದ ಆಚರಣೆಯು ಆಗಸ್ಟ್ 26ರಂದು ನೆರವೇರಲಿರುವ ಪ್ರಮುಖ ದಿನವಾದ ‘ತಿರುಓಣಂ’ (Thiruvonam) ನೊಂದಿಗೆ ಸಮಾಪ್ತಿಯಾಗಲಿದೆ.

ಪೌರಾಣಿಕ ಹಿನ್ನೆಲೆ: ಪ್ರಜಾವತ್ಸಲ ಚಕ್ರವರ್ತಿ ಮಹಾಬಲಿಯ ಕಥೆ:

ಓಣಂ ಹಬ್ಬದ ಹಿಂದೆ ಪ್ರಜಾವತ್ಸಲ ಹಾಗೂ ದಯಾಳುವಾಗಿದ್ದ ಅಸುರ ರಾಜ ಮಹಾಬಲಿಯ ಪೌರಾಣಿಕ ಕಥೆಯಿದೆ. ಮಹಾಬಲಿಯ ಆಡಳಿತದಲ್ಲಿ ಪ್ರಜೆಗಳು ಅತ್ಯಂತ ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದ ಬಾಳುತ್ತಿದ್ದರು. ಆತನ ಕೀರ್ತಿ ಮತ್ತು ಪ್ರಭಾವ ಹೆಚ್ಚಾಗುತ್ತಿದ್ದಂತೆ, ದೇವತೆಗಳ ವಿನಂತಿಯ ಮೇರೆಗೆ ಭಗವಾನ್ ವಿಷ್ಣುವು ವಾಮನ ರೂಪ ತಾಳಿ ಬಂದನು. ವಾಮನನು ದಾನವಾಗಿ ಮೂರು ಹೆಜ್ಜೆ ಜಾಗವನ್ನು ಕೇಳಿ, ಭೂಮಿ ಮತ್ತು ಆಕಾಶವನ್ನು ಆವರಿಸಿದಾಗ ಮೂರನೇ ಹೆಜ್ಜೆಗೆ ಮಹಾಬಲಿ ತನ್ನ ತಲೆಯನ್ನೇ ಒಡ್ಡಿದನು. ವಾಮನನು ಮಹಾಬಲಿಯನ್ನು ಪಾತಾಳಕ್ಕೆ ತಳ್ಳಿದರೂ, ಆತನ ಭಕ್ತಿಗೆ ಮೆಚ್ಚಿ ವರ್ಷಕ್ಕೊಮ್ಮೆ ತನ್ನ ಪ್ರಜೆಗಳನ್ನು ನೋಡಲು ಭೂಮಿಗೆ ಬರಲು ವರ ನೀಡಿದನು. ಈ ರೀತಿ ರಾಜ ಮಹಾಬಲಿ ಮರಳಿ ತಮ್ಮ ರಾಜ್ಯಕ್ಕೆ ಬರುವ ನೆನಪಿಗಾಗಿಯೇ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ತಿರುಮಲ ಶ್ರೀವಾರಿ ಪವಿತ್ರೋತ್ಸವ: ಆಗಸ್ಟ್ 23ರಿಂದ 25ರವರೆಗೆ ವಿಶೇಷ ಪೂಜೆ; ಹಲವು ಸೇವೆಗಳು ರದ್ದು

ಹತ್ತು ದಿನಗಳ ಸಾಂಪ್ರದಾಯಿಕ ಪಯಣ:

ಓಣಂ ಆಚರಣೆಯು ‘ಅಥಂ’ ನಕ್ಷತ್ರದಿಂದ ಪ್ರಾರಂಭವಾಗಿ 10ನೇ ದಿನದ ‘ತಿರುಓಣಂ’ ನಕ್ಷತ್ರದವರೆಗೆ ಸಾಗುತ್ತದೆ. ಮೊದಲ ದಿನ ಮನೆಗಳ ಅಂಗಳದಲ್ಲಿ ಸಣ್ಣದಾಗಿ ‘ಪೂಕಳಂ’ (ಹೂವಿನ ರಂಗೋಲಿ) ರಚಿಸಲು ಆರಂಭಿಸಲಾಗುತ್ತದೆ. ನಂತರದ ದಿನಗಳಲ್ಲಿ ಮನೆ ಸ್ವಚ್ಛಗೊಳಿಸಿ, ರಂಗೋಲಿಗೆ ಮತ್ತಷ್ಟು ಹೂವುಗಳನ್ನು ಸೇರಿಸುತ್ತಾ ಹಬ್ಬದ ಹೊಸ ಉಡುಪುಗಳನ್ನು (ಓಣಕೋಡಿ) ಖರೀದಿಸಲಾಗುತ್ತದೆ. ದಿನ ಕಳೆಯುತ್ತಿದ್ದಂತೆ ಅಡುಗೆಗೆ ತಯಾರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿ, 10ನೇ ದಿನವಾದ ‘ತಿರುಓಣಂ’ ನಂದು ರಾಜ ಮಹಾಬಲಿಯನ್ನು ಮಹಾ ಸಂಭ್ರಮದಿಂದ ಸ್ವಾಗತಿಸಲಾಗುತ್ತದೆ.

ಓಣಂ ಹಬ್ಬದ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಗಳು:

ಓಣಂ ಬರಿ ಆಚರಣೆಯಷ್ಟೇ ಅಲ್ಲ, ಅದು ಕೇರಳದ ವಿವಿಧ ಸಾಂಪ್ರದಾಯಿಕ ಕಲೆ ಹಾಗೂ ಸಂಸ್ಕೃತಿಯ ಸಂಗಮವಾಗಿದೆ. ಹತ್ತು ದಿನಗಳ ಕಾಲ ಪ್ರತಿಯೊಂದು ಮನೆಯ ಅಂಗಳದಲ್ಲೂ ಹೊಸ ಬಣ್ಣ ಬಣ್ಣದ ಹೂವುಗಳಿಂದ ಸಿದ್ಧಪಡಿಸುವ ‘ಪೂಕಳಂ’ ಹೂವಿನ ರಂಗೋಲಿ ಕಂಗೊಳಿಸುತ್ತದೆ. ಜೊತೆಗೆ ಬಾಳೆ ಎಲೆಯಲ್ಲಿ ಬಡಿಸುವ ಸಾಂಪ್ರದಾಯಿಕ ಸಸ್ಯಾಹಾರಿ ಊಟವಾದ ‘ಓಣಂ ಸದ್ಯ’, ಪಂಪಾ ನದಿಯಲ್ಲಿ ನಡೆಯುವ ಜಗತ್ಪ್ರಸಿದ್ಧ ‘ಸರ್ಪ ದೋಣಿ ಓಟ’ (ವಲ್ಲಂಕಳಿ) ಮತ್ತು ತೃಶ್ಶೂರ್‌ನಲ್ಲಿ ನಡೆಯುವ ಸಾಂಪ್ರದಾಯಿಕ ‘ಹುಲಿ ವೇಷ’ (ಪುಲಿಕಳಿ) ನೃತ್ಯಗಳು ಈ ಹಬ್ಬದ ಮುಖ್ಯ ಆಕರ್ಷಣೆಗಳಾಗಿವೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
RSS ನೋಂದಣಿ ಆಗಿಲ್ಲ, ಆಗೋದು ಇಲ್ಲ: ಪ್ರಿಯಾಂಕ್ ಖರ್ಗೆ ಸಂತೋಷ್​​ ತಿರುಗೇಟು
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
'ವಂದೇ ಮಾತರಂ' ಗೀತೆಗೆ ಅವಮಾನಿಸಿದರೇ ಸೋನಿಯಾ ಗಾಂಧಿ?
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು