AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ದಿನ ಅದೃಷ್ಟ ತರಬೇಕೇ? ಹಾಗಿದ್ರೆ ವಾರದ ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು ತಿಳಿಯಿರಿ!

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿದಿನದ ಬಟ್ಟೆಯ ಬಣ್ಣಗಳು ನಮ್ಮ ಮನಸ್ಥಿತಿ ಮತ್ತು ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಪ್ರತಿ ಗ್ರಹ ಮತ್ತು ದೇವತೆಗೆ ಅನುಗುಣವಾಗಿ ಬಣ್ಣಗಳನ್ನು ಆಯ್ಕೆ ಮಾಡುವುದರಿಂದ ಸಕಾರಾತ್ಮಕತೆ, ಯಶಸ್ಸು ಮತ್ತು ಶಾಂತಿ ಲಭಿಸುತ್ತದೆ. ಸೋಮವಾರದಿಂದ ಭಾನುವಾರದವರೆಗೆ ಯಾವ ಬಣ್ಣಗಳನ್ನು ಧರಿಸಬೇಕು, ಅವುಗಳ ಆಧ್ಯಾತ್ಮಿಕ ಮಹತ್ವ ಮತ್ತು ಹೇಗೆ ನಮ್ಮ ಜೀವನವನ್ನು ಧನಾತ್ಮಕವಾಗಿ ಪ್ರಭಾವಿಸುತ್ತವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ನಿಮ್ಮ ದಿನ ಅದೃಷ್ಟ ತರಬೇಕೇ? ಹಾಗಿದ್ರೆ ವಾರದ ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು ತಿಳಿಯಿರಿ!
ವಾರದ ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕುImage Credit source: Getty Images
ಅಕ್ಷತಾ ವರ್ಕಾಡಿ
|

Updated on: Sep 27, 2026 | 10:03 AM

Share

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಾವು ಧರಿಸುವ ಬಟ್ಟೆಗಳ ಬಣ್ಣಗಳು ನಮ್ಮ ಆಲೋಚನೆಗಳು, ಮನಸ್ಥಿತಿ ಹಾಗೂ ದಿನನಿತ್ಯದ ಶಕ್ತಿಯ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಪ್ರತಿಯೊಂದು ದಿನಕ್ಕೂ ತನ್ನದೇ ಆದ ಗ್ರಹ ಮತ್ತು ದೇವತೆಗಳ ಆಧ್ಯಾತ್ಮಿಕ ಮಹತ್ವವಿದ್ದು, ಅದಕ್ಕನುಗುಣವಾಗಿ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಜೀವನದಲ್ಲಿ ಧನಾತ್ಮಕ ಶಕ್ತಿ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ.

ಸೋಮವಾರ ಬಿಳಿ, ಕೆನೆ ಮತ್ತು ತಿಳಿ ಬಣ್ಣಗಳು:

ಸೋಮವಾರವನ್ನು ಶಿವನಿಗೆ ಹಾಗೂ ಚಂದ್ರ ಗ್ರಹಕ್ಕೆ ಅರ್ಪಿತವಾದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಮನಸ್ಸಿಗೆ ಶಾಂತಿ, ಸಮಾಧಾನ ಮತ್ತು ಪ್ರಶಾಂತತೆ ನೀಡುವ ಬಿಳಿ, ಕೆನೆ, ತಿಳಿ ಗುಲಾಬಿ, ತಿಳಿ ಆಕಾಶ ನೀಲಿ ಹಾಗೂ ತಿಳಿ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಅತ್ಯಂತ ಶುಭ. ಆದರೆ ಈ ದಿನ ಕಪ್ಪು ಮತ್ತು ಅತಿಯಾದ ಪ್ರಕಾಶಮಾನವಾದ ಗಾಢ ಬಣ್ಣಗಳನ್ನು ತಪ್ಪಿಸುವುದು ಉತ್ತಮ.

ಮಂಗಳವಾರ ಕೆಂಪು, ಕೇಸರಿ ಮತ್ತು ಕಿತ್ತಳೆ ಬಣ್ಣಗಳು:

ಮಂಗಳವಾರ ಹನುಮಂತ ದೇವರಿಗೆ ಮತ್ತು ಮಂಗಳ ಗ್ರಹಕ್ಕೆ ಮೀಸಲಾದ ದಿನವಾಗಿದೆ. ಮಂಗಳ ಗ್ರಹವು ಉತ್ಸಾಹ, ಸಾಹಸ ಮತ್ತು ಶಕ್ತಿಯ ಸಂಕೇತವಾಗಿರುವುದರಿಂದ, ಈ ದಿನ ಕೆಂಪು, ಕೇಸರಿ, ಕಿತ್ತಳೆ ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಹೆಚ್ಚು ಫಲದಾಯಕ. ಈ ಬಣ್ಣಗಳು ನಿಮ್ಮಲ್ಲಿ ದಿನವಿಡೀ ಹೊಸ ಚೈತನ್ಯ ಮತ್ತು ಶಕ್ತಿಯನ್ನು ತುಂಬುತ್ತವೆ.

ಬುಧವಾರ ಹಸಿರು ಬಣ್ಣ:

ಬುಧವಾರವನ್ನು ಗಣೇಶನಿಗೆ ಮತ್ತು ಬುಧ ಗ್ರಹಕ್ಕೆ ಸಂಬಂಧಿಸಿದ ದಿನವೆಂದು ನಂಬಲಾಗುತ್ತದೆ. ಗಣೇಶನಿಗೆ ದೂರ್ವಾ ಅಂದರೆ ಗರಿಕೆ ಎಂದರೆ ಅತ್ಯಂತ ಪ್ರಿಯವಾದ ಕಾರಣ, ಹಸಿರು ಬಣ್ಣಕ್ಕೆ ಈ ದಿನ ವಿಶೇಷ ಮಹತ್ವವಿದೆ. ಹೀಗಾಗಿ ಬುಧವಾರದಂದು ಹಸಿರು ಅಥವಾ ಹಸಿರಿನ ವಿವಿಧ ಛಾಯೆಯ ಬಟ್ಟೆಗಳನ್ನು ಧರಿಸುವುದರಿಂದ ಜ್ಞಾನ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಗುರುವಾರ ಹಳದಿ ಮತ್ತು ಚಿನ್ನದ ಬಣ್ಣಗಳು:

ಗುರುವಾರ ಶ್ರೀ ಹರಿ ವಿಷ್ಣು ಹಾಗೂ ಬೃಹಸ್ಪತಿ ಅಂದರೆ ಗುರು ಗ್ರಹಕ್ಕೆ ಸಮರ್ಪಿತವಾದ ದಿನ. ವಿಷ್ಣುವಿಗೆ ಹಳದಿ ಬಣ್ಣವೆಂದರೆ ತೀರಾ ಇಷ್ಟವಾದ್ದರಿಂದ, ಈ ದಿನ ಹಳದಿ ಅಥವಾ ಚಿನ್ನದ ಬಣ್ಣದ ಬಟ್ಟೆಗಳನ್ನು ಧರಿಸುವುದು ಸೂಕ್ತ. ಇದು ಮನೆಯಲ್ಲಿ ಹಾಗೂ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳು ಮತ್ತು ಶುಭಫಲಗಳು ಹೆಚ್ಚಾಗಲು ನೆರವಾಗುತ್ತದೆ.

ಶುಕ್ರವಾರ ಕೆಂಪು ಮತ್ತು ಆಕರ್ಷಕ ಹೊಳೆಯುವ ಬಣ್ಣಗಳು:

ಶುಕ್ರವಾರವನ್ನು ಶುಕ್ರ ಗ್ರಹ ಹಾಗೂ ಲಕ್ಷ್ಮಿ ದೇವಿಗೆ ಅರ್ಪಿಸಲಾಗುತ್ತದೆ. ಈ ದಿನ ಪ್ರಸನ್ನತೆ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಕೆಂಪು, ತಿಳಿ ಬಣ್ಣಗಳು ಹಾಗೂ ಸ್ವಲ್ಪ ಹೊಳಪು ಅಥವಾ ಆಕರ್ಷಣೆ ಇರುವ ಬಟ್ಟೆಗಳನ್ನು ಧರಿಸುವುದು ಶುಭ ತರುತ್ತದೆ. ಇವು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಮತ್ತು ಸಕಾರಾತ್ಮಕ ವಾತಾವರಣ ನಿರ್ಮಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ: ಮಂತ್ರ ಪಠಣ ಮಾಡುವಾಗ ಕಣ್ಣುಗಳನ್ನು ಏಕೆ ಮುಚ್ಚಬೇಕು? ಆಧ್ಯಾತ್ಮಿಕ ಕಾರಣ ಇಲ್ಲಿದೆ

ಶನಿವಾರ ನೀಲಿ ಮತ್ತು ಕಪ್ಪು ಬಣ್ಣಗಳು:

ಶನಿವಾರವನ್ನು ಶನಿ ದೇವರಿಗೆ ಮೀಸಲಾದ ದಿನವೆಂದು ಪರಿಗಣಿಸಲಾಗುತ್ತದೆ. ಶನಿ ದೇವರಿಗೆ ಕಡು ಬಣ್ಣಗಳು ಹೆಚ್ಚು ಪ್ರಿಯವಾದ ಕಾರಣ, ಈ ದಿನ ನೀಲಿ, ಕಡು ನೀಲಿ ಹಾಗೂ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಅತ್ಯಂತ ಶ್ರೇಷ್ಠ. ಈ ಬಣ್ಣಗಳು ಶನಿ ದೇವರ ಕೃಪೆಗೆ ಪಾತ್ರರಾಗಲು ನೆರವಾಗುತ್ತವೆ.

ಭಾನುವಾರ ಕೆಂಪು, ಕಿತ್ತಳೆ ಮತ್ತು ಹಳದಿ ಬಣ್ಣಗಳು:

ಭಾನುವಾರ ಸೂರ್ಯ ದೇವರಿಗೆ ಮೀಸಲಾದ ದಿನ. ಸೂರ್ಯನು ತೇಜಸ್ಸು, ಪ್ರಭುತ್ವ ಮತ್ತು ನಾಯಕತ್ವದ ಸಂಕೇತವಾಗಿರುವುದರಿಂದ, ಈ ದಿನ ಕೆಂಪು, ಕೇಸರಿ, ಕಿತ್ತಳೆ ಮತ್ತು ಹಳದಿ ಯಂತಹ ಪ್ರಕಾಶಮಾನವಾದ ಬಣ್ಣಗಳನ್ನು ಧರಿಸುವುದು ಶುಭ. ಇವು ನಿಮ್ಮಲ್ಲಿ ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.

ದಿನಕ್ಕೆ ತಕ್ಕಂತೆ ಸೂಕ್ತ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಧಾರ್ಮಿಕ ನಂಬಿಕೆಯಷ್ಟೇ ಅಲ್ಲದೆ, ನಮಗೆ ಮಾನಸಿಕವಾಗಿ ಹೊಸ ಉತ್ಸಾಹ ಮತ್ತು ಸಕಾರಾತ್ಮಕ ಆಲೋಚನೆಗಳನ್ನು ನೀಡಲು ನೆರವಾಗುತ್ತದೆ. ನಿಮ್ಮ ದಿನನಿತ್ಯದ ಶೈಲಿಯಲ್ಲಿ ಈ ಸಣ್ಣ ಬದಲಾವಣೆಗಳನ್ನು ಅಳವಡಿಸಿಕೊಂಡು ಸಕಾರಾತ್ಮಕತೆಯನ್ನು ಅನುಭವಿಸಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್​ಲಾಲ್
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್​ಲಾಲ್
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ಗ್ಯಾರಂಟಿ ಕೊಟ್ಟಿದ್ದೇವೆ, ಈಗ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದೇವೆ: ಬಾಲಕೃಷ್ಣ
ಗ್ಯಾರಂಟಿ ಕೊಟ್ಟಿದ್ದೇವೆ, ಈಗ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದೇವೆ: ಬಾಲಕೃಷ್ಣ
ಇಂದಿನಿಂದ ಪಿತೃಪಕ್ಷ ಪ್ರಾರಂಭ
ಇಂದಿನಿಂದ ಪಿತೃಪಕ್ಷ ಪ್ರಾರಂಭ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಪಾಕ್ ಪ್ರಧಾನಿಯ ಸುಳ್ಳು ಹೇಳಿಕೆಗೆ ನಕ್ಕು ತಲೆಯಾಡಿಸಿದ ಭಾರತೀಯ ರಾಜತಾಂತ್ರಿಕ
ಪಾಕ್ ಪ್ರಧಾನಿಯ ಸುಳ್ಳು ಹೇಳಿಕೆಗೆ ನಕ್ಕು ತಲೆಯಾಡಿಸಿದ ಭಾರತೀಯ ರಾಜತಾಂತ್ರಿಕ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ