Sankashti Chaturthi: ಭಕ್ತರ ಸಂಕಷ್ಟ ನಿವಾರಿಸುವ ಸಂಕಷ್ಟ ಚತುರ್ಥಿಯ ಮಹತ್ವ, ಪೂಜೆ ವಿಧಿ ವಿಧಾನ ಇಲ್ಲಿದೆ

ಸಂಕಷ್ಟ ಚತುರ್ಥಿಯಂದು ಉಪವಾಸ ಮಾಡಿ ಗಣೇಶನನ್ನು ಪೂಜಿಸಿದರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

Sankashti Chaturthi: ಭಕ್ತರ ಸಂಕಷ್ಟ ನಿವಾರಿಸುವ ಸಂಕಷ್ಟ ಚತುರ್ಥಿಯ ಮಹತ್ವ, ಪೂಜೆ ವಿಧಿ ವಿಧಾನ ಇಲ್ಲಿದೆ
ಸಂಕಷ್ಟಿ ಚತುರ್ಥಿImage Credit source: News18
Follow us
TV9 Web
| Updated By: ಆಯೇಷಾ ಬಾನು

Updated on: Oct 13, 2022 | 10:09 AM

ಯಾವುದೇ ಶುಭ ಕಾರ್ಯಗಳನ್ನು ಆರಂಭಿಸುವಾಗ, ಯಾವುದೇ ಕೆಲಸ ಆರಂಭಕ್ಕೂ ಮುನ್ನ ಏಕದಂತ, ಪ್ರಥಮ ಪೂಜಿತ ಗಣಪತಿಯನ್ನು ಪೂಜಿಸಲಾಗುತ್ತೆ. ಏಕೆಂದರೆ ಭಗವಾನ್ ಗಣೇಶ ಎಲ್ಲಾ ಅಡೆತಡೆಗಳನ್ನು ನೀವಾರಿಸುವ ಸಂಕಷ್ಟ ಹರ. ಪ್ರತಿ ತೊಂದರೆ, ಬಿಕ್ಕಟ್ಟು ಮತ್ತು ಅಡೆತಡೆಗಳನ್ನು ನಿವಾರಿಸುವ ದೇವರು. ಹೀಗಾಗಿ ಭಕ್ತರು ತಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆ, ತೊಂದರೆಗಳನ್ನು ದೂರ ಮಾಡು ಎಂದು ಗಣೇಶನ ಮೊರೆ ಹೋಗುತ್ತಾನೆ. ಈ ರೀತಿ ನಿಮ್ಮಲ್ಲೂ ಇರುವ ತೊಂದರೆ ನಿವಾರಣೆ ಎಂದು ಉತ್ತಮ ದಿನ. ಏಕೆಂದರೆ ಇಂದು ಸಂಕಷ್ಟ ಚತುರ್ಥಿ. ಧರ್ಮಗ್ರಂಥಗಳ ಪ್ರಕಾರ, ಸಂಕಷ್ಟ ಚತುರ್ಥಿಯಂದು ಉಪವಾಸ ಮಾಡಿ ಗಣೇಶನನ್ನು ಪೂಜಿಸಿದರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

ಚತುರ್ಥಿ ಸಮಯ

ಅಕ್ಟೋಬರ್ 13ರ ಬೆಳಗ್ಗೆ 01:59ಕ್ಕೆ ಚತುರ್ಥಿ ತಿಥಿ ಪ್ರಾರಂಭವಾಗುತ್ತದೆ. ಮತ್ತು ಅಕ್ಟೋಬರ್ 14ರ ಬೆಳಗ್ಗೆ 03:08ಕ್ಕೆ ಚತುರ್ಥಿ ತಿಥಿ ಕೊನೆಗೊಳ್ಳುತ್ತದೆ.

ವರ್ಷವಿಡೀ ಚತುರ್ಥಿಯಂದು ಉಪವಾಸವನ್ನು ಮಾಡಲಾಗುತ್ತೆ

ಸಂಕಷ್ಟ ಚತುರ್ಥಿಯ ಉಪವಾಸವನ್ನು ವರ್ಷವಿಡೀ ಆಚರಿಸಲಾಗುತ್ತದೆ. ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿಯಂದು ಈ ಉಪವಾಸವನ್ನು ಆಚರಿಸಲಾಗುತ್ತದೆ. ಗಣೇಶ ಪುರಾಣದಲ್ಲಿ, ಬ್ರಹ್ಮ ಈ ಉಪವಾಸದ ಬಗ್ಗೆ ಹೇಳುತ್ತಾನೆ. ಇಲ್ಲಿ ಎಲ್ಲಾ ಚತುರ್ಥಿಯ ಉಪವಾಸಗಳು ಬಹಳ ಮುಖ್ಯ ಎನ್ನಲಾಗಿದೆ. ಉಪವಾಸಗಳನ್ನು ಮಾಡುವ ಮೂಲಕ ಗಣೇಶನಿಗೆ ಭಕ್ತರು ಹತ್ತಿರವಾಗುತ್ತಾರೆ. ಭಕ್ತರ ಸಂಕಷ್ಟಗಳನ್ನು ಗಣೇಶ ನಿವಾರಣೆ ಮಾಡುತ್ತಾನೆ ಎನ್ನಲಾಗಿದೆ. ಸಂಕಷ್ಟ ಚತುರ್ಥಿಯ ರಾತ್ರಿ ಚಂದ್ರನನ್ನು ಪೂಜಿಸಬೇಕೆಂಬ ನಿಯಮವಿದೆ. ಇಲ್ಲದೇ ಹೋದರೆ ಈ ಉಪವಾಸ ಪೂರ್ಣವಾಗುವುದಿಲ್ಲ. ಇದನ್ನೂ ಓದಿ: Shashti puja 2022: ಇಂದು ಷಷ್ಠಿ ಪೂಜೆ – ಭಗವಾನ್ ಕಾರ್ತಿಕೇಯನ ಆರಾಧನೆ, ಮಹತ್ವ ತಿಳಿಯಿರಿ

ಉಪವಾಸದ ವಿವಿಧ ವಿಧಾನಗಳು

ಗಣೇಶ ಪುರಾಣದ ಪ್ರಕಾರ, ಶ್ರಾವನ ಮಾಸದ ಚತುರ್ಥಿಯ ಸಮಯದಲ್ಲಿ ಮೋದಕವನ್ನು ಸೇವಿಸಿದ ನಂತರ ಉಪವಾಸ ಮಾಡಬೇಕು, ಭಾದ್ರಪದ ಚತುರ್ಥಿಯಂದು ಹಾಲು ಸೇವಿಸಬೇಕು ಮತ್ತು ಅಶ್ವಿನಿ ಮಾಸ ಚತುರ್ಥಿಯಲ್ಲಿ ಸಂಪೂರ್ಣ ಉಪವಾಸವನ್ನು ಆಚರಿಸಬೇಕು. ಮಾಘದಲ್ಲಿ ಎಳ್ಳು ಮತ್ತು ಫಾಲ್ಗುಣದಲ್ಲಿ ತುಪ್ಪ-ಸಕ್ಕರೆ, ಚೈತ್ರದಲ್ಲಿ ಪಂಚಗವ್ಯ, ವೈಶಾಖದಲ್ಲಿ ಶತಪತ್ರ, ಜ್ಯೇಷ್ಠದಲ್ಲಿ ಕೇವಲ ತುಪ್ಪ ಮತ್ತು ಆಷಾಢಮಾಸದ ಚತುರ್ಥಿಯಂದು ಕೇವಲ ಜೇನುತುಪ್ಪ ಈ ರೀತಿ ಪ್ರತಿ ತಿಂಗಳು ಬರುವ ಚತುರ್ಥಿಗೆ ಬೇರೆ ಬೇರೆ ರೀತಿಯಲ್ಲಿ ಉಪವಾಸಗಳನ್ನು ಮಾಡಲಾಗುತ್ತೆ.

ಸಂಕಷ್ಟಿ ಚತುರ್ಥಿ ಪೂಜೆಯನ್ನು ಹೇಗೆ ಮಾಡಬೇಕು?

ಸಂಕಷ್ಟ ಚತುರ್ಥಿಯ ದಿನ ಮುಂಜಾನೆಯೇ ಸ್ನಾನ ಮಾಡಿ ಉಪವಾಸ ಆಚರಿಸುವ ಪ್ರತಿಜ್ಞೆ ಮಾಡಿ ಪೂಜೆ ಮಾಡಬೇಕು. ನಂತರ ಶುಭ ಮುಹೂರ್ತದಲ್ಲಿ ಗಣೇಶನಿಗೆ ಅಭಿಷೇಕವನ್ನು ಮಾಡಬೇಕು. ಗಣೇಶನಿಗೆ ಶ್ರೀಗಂಧ, ಮೋದಕ, ಹಣ್ಣುಗಳು, ಹೂವುಗಳು, ವಸ್ತ್ರಗಳು, ಧೂಪ, ಅಕ್ಷತೆ, ದೂರ್ವಾ ಇತ್ಯಾದಿಗಳನ್ನು ಅರ್ಪಿಸಬೇಕು. ಈ ದಿನದಂದು ಗಣೇಶ ಚಾಲೀಸವನ್ನು ಪಠಿಸಬೇಕು ಮತ್ತು ಸಂಕಷ್ಟ ಚತುರ್ಥಿ ಉಪವಾಸದ ಕಥೆಯನ್ನು ಕೇಳಬೇಕು. ಕೊನೆಯಲ್ಲಿ, ಗಣೇಶನಿಗೆ ಆರತಿ ಮಾಡಿ ರಾತ್ರಿ ಚಂದ್ರನಿಗೆ ಅರ್ಧ್ಯಾವನ್ನು ಅರ್ಪಿಸಿ ನಂತರ ಉಪವಾಸವನ್ನು ಕೊನೆಗೊಳಿಸಬೇಕು. ಇದನ್ನೂ ಓದಿ: Vastu Tips: ಸಂಪತ್ತಿನ ದೇವತೆ ಲಕ್ಷ್ಮಿ, ಪ್ರಥಮ ಪೂಜಿತ ಗಣೇಶ ಮತ್ತು ಭಗವಾನ್ ಶಿವನ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿಟ್ಟರೆ ಹೆಚ್ಚು ಫಲ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತೆ?

ಸಂಕಷ್ಟ ಚತುರ್ಥಿ ಕಥೆ

ಸಂಕಷ್ಟಿ ಚತುರ್ಥಿಯ ಮಹತ್ವವನ್ನು ಗಣೇಶ ಪುರಾಣದಲ್ಲೂ ಹೇಳಲಾಗಿದೆ. ಅದರ ಪ್ರಕಾರ ಕೃತವೀರ್ಯ ಎಂಬ ರಾಜನಿಗೆ ಮಕ್ಕಳಿರಲಿಲ್ಲ. ಇದರಿಂದ ಆತ ಚಿಂತೆಗೀಡಾಗಿದ್ದ. ಹೀಗಾಗಿ ಆತ ಪುತ್ರಕಾಮೇಷ್ಠಿ ಯಾಗ ಮಾಡಿ ತಪಸ್ಸು ಮಾಡಿದರೂ ಸಂತಾನ ಸುಖ ಸಿಗಲಿಲ್ಲ. ನಾರದ ಋಷಿಯ ಆಜ್ಞೆಯ ಮೇರೆಗೆ ರಾಜನ ಪೂರ್ವಜರಾಗಿದ್ದ ಬ್ರಹ್ಮರಿಗೆ ಕೃತವೀರ್ಯ ಪರಿಹಾರವನ್ನು ಕೇಳಿದನು. ಆಗ ಬ್ರಹ್ಮ ಸಂಕಷ್ಟ ಚತುರ್ಥಿಯ ಉಪವಾಸವನ್ನು ಮಾಡುವುದಕ್ಕೆ ಹೇಳುತ್ತಾರೆ. ಇದಾದ ನಂತರ ಪೂರ್ವಜರು ಕೃತವೀರ್ಯನ ಕನಸಿನಲ್ಲಿ ಬಂದು ಸಂಕಷ್ಟ ಚತುರ್ಥಿ ಉಪವಾಸವನ್ನು ಆಚರಿಸಲು ಪ್ರೇರೇಪಿಸಿದರು. ಇದನ್ನು ಮಾಡಿದ ನಂತರ ರಾಜ ಕೃತವೀರ್ಯನಿಗೆ ಒಬ್ಬ ಮಗನು ಹುಟ್ಟಿದನು.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?