ಗಂಡು- ಹೆಣ್ಣಿನ ಸಮ್ಮಿಲನವೇ ಆಗದೇ ಅವತರಿಸಿದ ಮಹಾಭಾರತದಲ್ಲಿನ ವಿಚಿತ್ರ ಜನ್ಮ ವೃತ್ತಾಂತಗಳು

ಗಂಡು- ಹೆಣ್ಣು ಸೇರಿದರಷ್ಟೇ ಸೃಷ್ಟಿ ಕಾರ್ಯ ಮುಂದುವರಿಯುತ್ತದೆ ಎಂಬುದು ವೈಜ್ಞಾನಿಕ ವಿಚಾರ. ಆದರೆ ಮಹಾಭಾರತದಲ್ಲಿ ಕೆಲವು ಸನ್ನಿವೇಶಗಳು ಬರುತ್ತವೆ. ಅದರ ಪ್ರಕಾರ, ಇಂಥ ಸೃಷ್ಟಿಯನ್ನು ಅಯೋನಿಜ ಸೃಷ್ಟಿ ಎಂದು ಕರೆಯಲಾಗುತ್ತದೆ. ಅಂದರೆ ಇವರು ಗಂಡು- ಹೆಣ್ಣಿನ ಸಮ್ಮಿಲನವೇ ಆಗದೆ ಜನ್ಮ ತಾಳಿದವರು.

ಗಂಡು- ಹೆಣ್ಣಿನ ಸಮ್ಮಿಲನವೇ ಆಗದೇ ಅವತರಿಸಿದ ಮಹಾಭಾರತದಲ್ಲಿನ ವಿಚಿತ್ರ ಜನ್ಮ ವೃತ್ತಾಂತಗಳು
ಗಂಡು- ಹೆಣ್ಣಿನ ಸಮ್ಮಿಲನವೇ ಆಗದೇ ಅವತರಿಸಿದ ಮಹಾಭಾರತದಲ್ಲಿನ ವಿಚಿತ್ರ ಜನ್ಮ ವೃತ್ತಾಂತಗಳು (ಸಾಂದರ್ಭಿಕ ಚಿತ್ರ)
Follow us
ಸ್ವಾತಿ ಎನ್​ಕೆ
| Updated By: Rakesh Nayak Manchi

Updated on: Aug 29, 2023 | 10:55 PM

ಗಂಡು- ಹೆಣ್ಣು ಸೇರಿದರಷ್ಟೇ ಸೃಷ್ಟಿ ಕಾರ್ಯ ಮುಂದುವರಿಯುತ್ತದೆ ಎಂಬುದು ವೈಜ್ಞಾನಿಕ ವಿಚಾರ. ಆದರೆ ಮಹಾಭಾರತದಲ್ಲಿ (Mahabharat) ಕೆಲವು ಸನ್ನಿವೇಶಗಳು ಬರುತ್ತವೆ. ಅದರ ಪ್ರಕಾರ, ಇಂಥ ಸೃಷ್ಟಿಯನ್ನು ಅಯೋನಿಜ ಸೃಷ್ಟಿ ಎಂದು ಕರೆಯಲಾಗುತ್ತದೆ. ಅಂದರೆ ಗಂಡು- ಹೆಣ್ಣಿನ ಸಮ್ಮಿಲನವೇ ಆಗದೆ ಜನ್ಮ ತಾಳಿದವರು ಅವರು. ತಂದೆ- ತಾಯಿಗಳು ಇದ್ದರೆ ತಾನೇ ಮಕ್ಕಳು. ಆದರೆ ಹಾಗಿಲ್ಲದೆ ಕೇವಲ ತಂದೆಯಿಂದ ಮಾತ್ರ ಜನ್ಮ ತಳೆದವರು ಅಥವಾ ತಂದೆ- ತಾಯಿ ಇಬ್ಬರೂ ಇಲ್ಲದೆ ಯಜ್ಞ ಕುಂಡದಿಂದ ಎದ್ದು ಬಂದವರಿದ್ದಾರೆ. ಈ ಲೇಖನದಲ್ಲಿ ಆ ರೀತಿಯಾಗಿ ಜನ್ಮ ತಳೆದಂಥವರ ಬಗ್ಗೆ ಇರುವ ಮಹಾಭಾರತದಲ್ಲಿನ ಉಲ್ಲೇಖಗಳನ್ನು ಇಲ್ಲಿ ನೀಡಲಾಗುತ್ತಿದೆ. ಮುಂದೆ ಓದಿಕೊಳ್ಳಿ.

ದ್ರೋಣಾಚಾರ್ಯ

ಎಲ್ಲರಿಗೂ ತಿಳಿದಿರುವಂತೆ ಪಾಂಡವರು- ಕೌರವರ ಗುರುಗಳು ದ್ರೋಣಾಚಾರ್ಯ. ಅವರ ಜನ್ಮ ವೃತ್ತಾಂತವೇ ಬಹಳ ಆಸಕ್ತಿಕರವಾದದ್ದು. ದ್ರೋಣಾಚಾರ್ಯರನ್ನು ದೇವ ಗುರುಗಳಾದ ಬೃಹಸ್ಪತಿಗಳ ಅವತಾರ ಎನ್ನಲಾಗುತ್ತದೆ. ಭರದ್ವಾಜ ಋಷಿಯ ಮಗನಾಗಿ ದ್ರೋಣರು ಹುಟ್ಟುತ್ತಾರೆ. ಈ ಭರದ್ವಾಜರು ಯಾರೆಂದರೆ, ಅದೇ ಬೃಹಸ್ಪತಿಯ ಮಗ.

ಭರದ್ವಾಜರು ಒಮ್ಮೆ ಘೃತಾಚಿ ಎಂಬ ಅಪ್ಸರೆ ಸ್ತ್ರೀಯನ್ನು ನೋಡುತ್ತಾರೆ. ಅವರಿಗೆ ಆಕೆಯಲ್ಲಿ ಮೋಹ ಬೆಳೆಯಿತು. ಮನಸ್ಸು ವಿಕಾರಗೊಂಡು, ಭರದ್ವಾಜರ ವೀರ್ಯ ಸ್ಖಲನವಾಯಿತು. ಹಾಗೆ ಸ್ಖಲನವಾದ ವೀರ್ಯವನ್ನು ಒಂದು ಕಳಶದಲ್ಲಿ ಎತ್ತಿಡುತ್ತಾರೆ. ಅಲ್ಲಿಯೇ ಯೋಗ ಸಾಮರ್ಥ್ಯದಿಂದ ಹುಟ್ಟಿದ ಮಗ ದ್ರೋಣ ಎಂದು ಹೆಸರು ಪಡೆಯಿತು.

ದ್ರೋಣ ಅಂದರೆ ದೊನ್ನೆ ಅಥವಾ ಕಳಶ ಎಂದರ್ಥ. ದೊನ್ನೆಯಲ್ಲೇ ಉದ್ಭವಿಸಿದ ಮಗುವಿಗೆ ದ್ರೋಣ ಎಂದು ಹೆಸರಿಡುತ್ತಾರೆ. ಅವರೇ ಬೃಹಸ್ಪತಿಯ ಅವತಾರವಾದ ದ್ರೋಣಾಚಾರ್ಯರು. ಗಂಡು- ಹೆಣ್ಣಿನ ಸಮ್ಮಿಲನವೇ ಆಗದೆ ಜನಿಸಿದ ದ್ರೋಣಾಚಾರ್ಯರು ಹನ್ನೆರಡು ವರ್ಷಗಳ ಕಾಲ ಬೃಹಸ್ಪತಿಗಳ ಬಳಿ ವ್ಯಾಸಂಗ ಮಾಡುತ್ತಾರೆ. ಮುಂದೆ ಕೌರವರು- ಪಾಂಡವರು ಗುರುಗಳಾಗುತ್ತಾರೆ, ಕುರುಕ್ಷೇತ್ರ ಯುದ್ಧದಲ್ಲಿ ದೃಷ್ಟದ್ಯುಮ್ನನಿಂದ ಹತರಾಗುತ್ತಾರೆ.

ದ್ರುಪದ

ಪೃಷಥ ರಾಜ ಎಂಬಾತ ಒಬ್ಬನಿರುತ್ತಾನೆ. ದ್ರುಪದ ಚಕ್ರವರ್ತಿಯ ತಂದೆಯ ಹೆಸರು ದ್ರುಪದ ರಾಜ. ಈ ಪೃಷಥ ರಾಜ ಅಪ್ಸರಾ ಸ್ತ್ರೀಯೊಬ್ಬಳನ್ನು ನೋಡಿ, ಮೋಹಗೊಳ್ಳುತ್ತಾನೆ. ಆಗ ವೀರ್ಯ ಸ್ಖಲನವಾಗುತ್ತದೆ. ಹಾಗೆ ಆದಾಯ ನೆಲದ ಮೇಲೆ ವೀರ್ಯ ಬೀಳುತ್ತದೆ. ನಾಚಿಕೆಯಿಂದ ಪೃಷಥ ರಾಜ ಕಾಲಿನಿಂದ ಒರೆಸುತ್ತಾನೆ. ಅಲ್ಲಿಯೇ ಹುಟ್ಟಿದವನು ದ್ರುಪದ. ದ್ರುತ ಅಂದರೆ ತಿಕ್ಕುವುದು, ಪದ ಅಂದರೆ ಕಾಲು, ಕಾಲಿನಿಂದ ವೀರ್ಯವನ್ನು ತಿಕ್ಕಿದಾಗ ಅಲ್ಲಿಯೇ ಹುಟ್ಟಿದವನು ದ್ರುಪದ. ಈತನೇ ಪಾಂಡವರ ಮಾವ. ದೃಷ್ಟದ್ಯುಮ್ನ, ದ್ರೌಪದಿ ಇವರ ತಂದೆ, ಪಾಂಚಾಲ ದೇಶದ ಚಕ್ರವರ್ತಿ ದ್ರುಪದ. ಅಯೋನಿಜ ಸೃಷ್ಟಿಗೆ ಈತ ಇನ್ನೊಂದು ದೃಷ್ಟಾಂತ.

ಧೃಷ್ಟದ್ಯುಮ್ನ- ದ್ರೌಪದಿ

ಇವರಿಬ್ಬರೂ ದ್ರುಪದನ ಮಕ್ಕಳು. ಆದರೆ ಅಗ್ನಿಕುಂಡದಿಂದ ಎದ್ದು ಬಂದಂಥವರು. ಅಪಾರವಾದ ತೇಜಸ್ಸು, ದಿವ್ಯವಾದ ಕಾಂತಿ, ತೇಜಸ್ಸು, ಹೊಳಪು ಹೊಂದಿದ್ದಂಥವನು ಎಂಬರ್ಥ ಬರುತ್ತದೆ ದೃಷ್ಟದ್ಯುಮ್ನ ಎಂಬುದಕ್ಕೆ. ಇನ್ನು ದ್ರುಪದನ ಮಗಳಾದ್ದರಿಂದ ದ್ರೌಪದಿ ಎಂಬ ಹೆಸರು ಬರುತ್ತದೆ. ಅವಳಿಗೆ ಇಟ್ಟ ಹೆಸರು ಕೃಷ್ಣಾ. ಇನ್ನು ಪಾಂಚಾಲ ದೇಶದ ಹೆಣ್ಣುಮಗಳಾದ್ದರಿಂದ ಅವಳ ಹೆಸರು ಪಾಂಚಾಲಿ.

ಕೌರವರು

ಕುಂತಿಗೆ ಮೊದಲು ಮಕ್ಕಳಾಯಿತು ಎಂಬ ಕಾರಣಕ್ಕೆ ಸಿಟ್ಟುಗೊಂಡ ಗಾಂಧಾರಿ, ಅಂದರೆ ಧೃತರಾಷ್ಟ್ರನ ಹೆಂಡತಿಯು ತಾನು ಗರ್ಭ ಧರಿಸಿದ್ದ ವೇಳೆಯಲ್ಲೆ ಅದನ್ನು ಕೈಗಳಿಂದ ಚಚ್ಚಿಕೊಳ್ಳುತ್ತಾಳೆ. ಗರ್ಭವು ತುಂಡು ತುಂಡಾಗಿ ಬೀಳುತ್ತವೆ. ಆಗ ವೇದವ್ಯಾಸರು, ನೂರಾ ಒಂದು ತುಪ್ಪದ ಗಡಿಗೆಯಲ್ಲಿ ಆ ಗರ್ಭದ ತುಂಡುಗಳನ್ನು ಇಡುತ್ತಾರೆ. ದಿನಕ್ಕೆ ಒಬ್ಬರಂತೆ ಅದರಿಂದ ಹುಟ್ಟಿಬರುತ್ತಾರೆ. ಹಾಗೆ ದುರ್ಯೋಧನಾದಿಯಾಗಿ ನೂರಾ ಒಂದು ಜನ ಹುಟ್ಟಿ ಬರುತ್ತಾರೆ. ಒಂದು ಹೆಣ್ಣು ಮಗು ಇದ್ದರೆ ಚೆನ್ನಾಗಿರುತ್ತದೆ ಅಂದುಕೊಂಡಿದ್ದರಿಂದ ಹುಟ್ಟುವವಳು ದುಶ್ಯಲಾ. ಅವಳನ್ನು ಜಯದ್ರಥ ಎಂಬುವನಿಗೆ ಮದುವೆ ಮಾಡಿಕೊಡುತ್ತಾರೆ.

ಕೃಪಾ- ಕೃಪಿ

ಶರದ್ವಾನ್ ಎಂಬ ಮಹರ್ಷಿಗಳು ಮೇನಕಾ ಎಂಬ ಅಪ್ಸರಾ ಸ್ತ್ರೀಯನ್ನು ನೋಡಿ ಮೋಹಗೊಳ್ಳುತ್ತಾರೆ. ಇವರಿಗೆ ವೀರ್ಯ ಸ್ಖಲನವಾಗುತ್ತದೆ. ಅದನ್ನು ಒಂದು ಪುಟ್ಟ ದರ್ಬೆಯ ಹಾಸಿಗೆ ಮೇಲೆ ಹಾಕುತ್ತಾರೆ. ಅಲ್ಲೇ ಒಂದು ಗಂಡು- ಒಂದು ಹೆಣ್ಣು ಅವಳಿ ಮಕ್ಕಳ ಜನನ ಆಗುತ್ತದೆ. ಇದನ್ನು ನೋಡಿದ ಶಂತನು ಮಹಾರಾಜ- ಅಂದರೆ ಭೀಷ್ಮರ ತಂದೆ, ತಾವೇ ತೆಗೆದುಕೊಂಡು ಹೋಗಿ, ಲಾಲನೆ- ಪಾಲನೆ ಮಾಡುತ್ತಾರೆ. ಶಂತನುವಿನ ಕೃಪೆಯಿಂದ ಬೆಳೆದವರಾದ್ದರಿಂದ ಕೃಪಾ- ಕೃಪಿ ಎಂಬ ಹೆಸರು ಇವರಿಗೆ ಬರುತ್ತದೆ. ಇವರೇ ಮುಂದೆ ಕೃಪಾಚಾರ್ಯರಾದರು. ಮಹಾಭಾರತದ ಯುದ್ಧದಲ್ಲಿ ಸಾಯದೇ ಉಳಿದವರು ಕೃಪಾಚಾರ್ಯರು ಮತ್ತು ಚಿರಂಜೀವಿಗಳಾದರು. ಇನ್ನು ಕೃಪಿಯನ್ನು ದ್ರೋಣಾಚಾರ್ಯರು ವಿವಾಹ ಆದರು. ಇವರ ಮಗನೇ ಅಶ್ವಾತ್ಥಾಮ.

ಮಹಾಭಾರತದಲ್ಲಿ ಹಲವು ಪಾತ್ರಗಳಿಗೆ ಅವರ ವಿಚಿತ್ರ ಜನನದ ಹಿನ್ನೆಲೆಯಲ್ಲೇ ಹೆಸರುಗಳಿವೆ. ಅವುಗಳು ಬಹಳ ಆಸಕ್ತಿಕರವಾಗಿವೆ ಮತ್ತು ತಮ್ಮ ಪಾತ್ರದ ಕಾರಣಗಳಿಂದಲೂ ಪ್ರಮುಖವಾಗಿ ಕಂಡುಬಂದಿವೆ.

ಲೇಖಕ: ಭೀಮಸೇನಾಚಾರ್ ಅಥನೂರು, ಪಂಡಿತರು ಹಾಗೂ ಪ್ರವಚನಕಾರರು

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ