AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯ ಮುಂದೆ ಸೀತಾಫಲ ಗಿಡ ನೆಡಬಾರದೇ? ವಾಸ್ತು ಶಾಸ್ತ್ರ ಹೇಳುವುದೇನು?

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ ಸೀತಾಫಲ ಮರ ಇರುವುದು ಆರ್ಥಿಕ ತೊಂದರೆಗಳನ್ನು ತರುತ್ತದೆ. ಸೀತಾಫಲ ಧಾರ್ಮಿಕವಾಗಿ ಪೂಜ್ಯವಾಗಿದ್ದರೂ, ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಹಣಕಾಸಿನ ಸಮಸ್ಯೆಗಳು ಮತ್ತು ಕಿರಿಕಿರಿ ತಪ್ಪಿಸಲು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಈ ಮರವನ್ನು ತೆಗೆಯುವುದು ಅಥವಾ ಅದರ ಪಕ್ಕದಲ್ಲಿ ಅಶೋಕ ಅಥವಾ ನೆಲ್ಲಿಕಾಯಿ ಗಿಡ ನೆಡುವುದು ವಾಸ್ತು ದೋಷ ನಿವಾರಣೆಗೆ ಸುಲಭ ಪರಿಹಾರಗಳು.

ಮನೆಯ ಮುಂದೆ ಸೀತಾಫಲ ಗಿಡ ನೆಡಬಾರದೇ? ವಾಸ್ತು ಶಾಸ್ತ್ರ ಹೇಳುವುದೇನು?
ಸೀತಾಫಲ ಗಿಡ Image Credit source: Getty Images
ಅಕ್ಷತಾ ವರ್ಕಾಡಿ
|

Updated on: Sep 19, 2026 | 9:46 AM

Share

ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರಕ್ಕೆ ಪ್ರತಿಯೊಬ್ಬರ ಜೀವನದಲ್ಲೂ ಹೆಚ್ಚಿನ ಪ್ರಾಮುಖ್ಯತೆಯಿದೆ. ಆದರೆ, ಕೆಲವರು ವಾಸ್ತು ನಿಯಮಗಳನ್ನು ಪಾಲಿಸಲು ಆಸಕ್ತಿ ತೋರುವುದಿಲ್ಲ, ಇದರಿಂದಾಗಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನೇಕರು ವಾಸ್ತು ಎಂದರೆ ಕೇವಲ ಮನೆ ನಿರ್ಮಾಣ, ದಿಕ್ಕುಗಳು ಮತ್ತು ಮೂಲೆಗಳಿಗೆ ಮಾತ್ರ ಸೀಮಿತ ಎಂದು ಭಾವಿಸುತ್ತಾರೆ. ಆದರೆ ಮನೆಯ ಸುತ್ತಮುತ್ತ ನೆಡುವ ಗಿಡಮರಗಳೂ ವಾಸ್ತು ಮೇಲೆ ಪ್ರಭಾವ ಬೀರುತ್ತವೆ.

ಸೀತಾಫಲ ಮರ ಮತ್ತು ಧಾರ್ಮಿಕ ನಂಬಿಕೆ:

ಸಾಮಾನ್ಯವಾಗಿ ಜನರು ತಮ್ಮ ಮನೆಗಳ ಮುಂದೆ ಪೇರಲೆ, ಮಾವು ಮುಂತಾದ ಹಣ್ಣಿನ ಮರಗಳನ್ನು ನೆಡುತ್ತಾರೆ. ಕೆಲವರು ಸೀತಾಫಲ ಗಿಡವನ್ನು ಸಹ ನೆಡುತ್ತಾರೆ. ಧಾರ್ಮಿಕವಾಗಿ ಲಕ್ಷ್ಮಿ ದೇವಿಯ ಪೂಜೆಯಲ್ಲಿ ಸೀತಾಫಲವನ್ನು ಬಳಸಲಾಗುತ್ತದೆ ಹಾಗೂ ಈ ಹಣ್ಣನ್ನು ದೇವಿಗೆ ಅರ್ಪಿಸುವುದರಿಂದ ಬಡತನ ದೂರವಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದಾಗಿ ಪೂಜೆಗೆ ಬಳಕೆಯಾಗುವ ಈ ಗಿಡವನ್ನು ಮನೆಯ ಮುಂದೆ ಬೆಳೆಸುವುದು ಒಳ್ಳೆಯದು ಎಂದು ಭಾವಿಸಲಾಗುತ್ತದೆ.

ಆರ್ಥಿಕ ತೊಂದರೆ ಹಾಗೂ ವಾಸ್ತು ದೋಷ:

ಆರೋಗ್ಯದ ದೃಷ್ಟಿಯಿಂದ ಸೀತಾಫಲವು ದೇಹಕ್ಕೆ ಅತ್ಯಂತ ಒಳ್ಳೆಯದಾಗಿದ್ದರೂ, ವಾಸ್ತು ಪ್ರಕಾರ ಮನೆಯ ಮುಂದೆ ಸೀತಾಫಲ ಮರ ಇರುವುದು ಶುಭಕರವಲ್ಲ ಎಂದು ವಾಸ್ತು ತಜ್ಞರು ತಿಳಿಸುತ್ತಾರೆ. ಮನೆಯ ಎದುರು ಈ ಮರವನ್ನು ನೆಡುವುದರಿಂದ ಆರ್ಥಿಕ ತೊಂದರೆಗಳು ಹೆಚ್ಚಾಗುತ್ತವೆ ಮತ್ತು ಹಲವು ರೀತಿಯ ಕಿರಿಕಿರಿಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ

ವಾಸ್ತು ದೋಷ ನಿವಾರಣೆಗೆ ಸುಲಭ ಪರಿಹಾರಗಳು:

ಯಾರಾದರೂ ತಮ್ಮ ಮನೆಯ ಮುಂದೆ ಸೀತಾಫಲ ಮರವನ್ನು ನೆಟ್ಟಿದ್ದರೆ, ವಾಸ್ತು ದೋಷದಿಂದ ಪಾರಾಗಲು ತಜ್ಞರು ಕೆಲವು ಸುಲಭ ಪರಿಹಾರಗಳನ್ನು ಸೂಚಿಸುತ್ತಾರೆ. ಮರವನ್ನು ತಕ್ಷಣವೇ ತೆರವುಗೊಳಿಸುವುದು ಒಂದು ಮಾರ್ಗವಾದರೆ, ಒಂದು ವೇಳೆ ಮರವನ್ನು ಕತ್ತರಿಸಲು ಇಷ್ಟವಿಲ್ಲದಿದ್ದರೆ ಅದರ ಪಕ್ಕದಲ್ಲಿಯೇ ಅಶೋಕ ಮರ ಅಥವಾ ನೆಲ್ಲಿಕಾಯಿ ಗಿಡವನ್ನು ನೆಡುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ
ಇಂದು ಈ ರಾಶಿಯವರಿಗೆ ಹಳೆಯ ಹೂಡಿಕೆಗಳಿಂದ ಲಾಭ
ಇಂದು ಈ ರಾಶಿಯವರಿಗೆ ಹಳೆಯ ಹೂಡಿಕೆಗಳಿಂದ ಲಾಭ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ