Vidura neeti: ಮಹಾಭಾರತದಲ್ಲಿನ ವಿದುರ ನೀತಿಯ ಪ್ರಕಾರ ಈ 6 ಕಾರಣಗಳಿಂದಾಗಿ ಒಬ್ಬ ವ್ಯಕ್ತಿಯು ನಿದ್ದೆಯನ್ನು ಕಳೆದುಕೊಳ್ತಾರೆ

ಮಹಾಭಾರತದ ಉದ್ಯೋಗ ಪರ್ವದಲ್ಲಿ ಬರುವಂಥ ವಿದುರ ನೀತಿ ಇದು. ಧೃತರಾಷ್ಟ್ರನಿಗೆ ವಿದುರ ಉಪದೇಶ ಮಾಡಿದ ನೀತಿಯಾದ ಇದರಲ್ಲಿ ಸಾರ್ವಕಾಲಿಕ ಸತ್ಯಗಳಿವೆ. ಆ ಪೈಕಿ ಒಂದು ಸಣ್ಣ ಭಾಗ ಅಥವಾ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ.

Vidura neeti: ಮಹಾಭಾರತದಲ್ಲಿನ ವಿದುರ ನೀತಿಯ ಪ್ರಕಾರ ಈ 6 ಕಾರಣಗಳಿಂದಾಗಿ ಒಬ್ಬ ವ್ಯಕ್ತಿಯು ನಿದ್ದೆಯನ್ನು ಕಳೆದುಕೊಳ್ತಾರೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Jun 18, 2021 | 7:11 AM

ಮಹಾಭಾರತದಲ್ಲಿ ಬರುವ ವಿದುರ ನೀತಿ ಬಗ್ಗೆ ನೀವು ಕೇಳಿದ್ದೀರಾ? ಹೇಗೆ ಚಾಣಕ್ಯ ನೀತಿ ಬಹಳ ಖ್ಯಾತಿಯೋ ಅದೇ ಥರ ವಿದುರ ನೀತಿ ಕೂಡ ಮಾನ್ಯತೆ ಪಡೆದಿದೆ. ಕಾಯಿಲೆ ಅಥವಾ ಸರಿಯಾದ ಕಾರಣ ಇಲ್ಲದೆ ರಾತ್ರಿ ವೇಳೆ ನಿದ್ದೆ ಬರುತ್ತಿಲ್ಲ ಅಂತಾದರೆ ಹಾಗಿರುವುದಕ್ಕೆ ಸಾಧ್ಯವಿಲ್ಲ ಎಂಬರ್ಥದ ವಿಶ್ಲೇಷಣೆಯನ್ನು ಮಾಡಲಾಗಿದೆ ವಿದುರ ನೀತಿಯಲ್ಲಿ. ಒಂದು ವೇಳೆ ರಾತ್ರಿ ನಿದ್ದೆ ಬರುತ್ತಿಲ್ಲ ಅಂತಾದರೆ ಈ ಆರು ಕಾರಣಗಳು ಇರುತ್ತವೆ. ಈ ಆರು ವಿಭಾಗದಲ್ಲಿ ಬರುವ ಜನರಿಗೆ ನಿದ್ದೆ ಬರುವುದಿಲ್ಲ ಎಂಬುದನ್ನು ಬಹಳ ಆಸಕ್ತಿಕರ ಅನ್ನೋ ಹಾಗೆ ನಿರೂಪಿಸಲಾಗಿದೆ. ಹಾಗಿದ್ದರೆ ಯಾವುದು ಆ ಆರು ಕಾರಣಗಳು ಎಂಬುದನ್ನು ನೋಡೋಣವೇ?

1. ಶತ್ರುತ್ವ ಒಬ್ಬ ವ್ಯಕ್ತಿಗೆ ತನಗಿಂತ ಬಲಶಾಲಿ ಜತೆಗೆ ವೈರತ್ವ ಇದ್ದಲ್ಲಿ ಆಗ ನಿದ್ದೆ ಬರುವುದಿಲ್ಲ. ಏಕೆಂದರೆ, ತನ್ನ ಶತ್ರು ಯಾವಾಗ ಬೇಕಾದರೂ ದಾಳಿ ಮಾಡಬಹುದು. ಯಾವ ರೂಪದಲ್ಲಿ ಬೇಕಾದರೂ ಬರಬಹುದು. ಹೀಗೆ ತನ್ನ ಪ್ರಬಲ ಶತ್ರುವಿನಿಂದ ಬಚಾವಾಗುವುದು ಹೇಗೆ ಎಂದು ಯೋಜನೆ- ಪರಿಹಾರಗಳನ್ನು ಹುಡುಕುತ್ತಾ ತನ್ನ ರಾತ್ರಿಗಳನ್ನು ನಿದ್ದೆ ಇಲ್ಲದಂತೆ ಕಳೆಯುವಂತಾಗುತ್ತದೆ.

2. ದೌರ್ಬಲ್ಯ ಅಸಮರ್ಥ ವ್ಯಕ್ತಿ ಆಗಿದ್ದಾಗ ತನ್ನ ಬಳಿ ಇರುವ ಅಮೂಲ್ಯ ವಸ್ತುಗಳನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಚಿಂತೆ ಸದಾ ಕಾಡುತ್ತಿರುತ್ತದೆ. ತನ್ನ ವಸ್ತುಗಳನ್ನು ಇತರರಿಂದ ಕಾಪಾಡಿಕೊಳ್ಳಬೇಕಾದ ಆತಂಕ, ಚಿಂತೆಯಲ್ಲಿ ಅಂಥ ವ್ಯಕ್ತಿಗಳಿಗೆ ಸರಿಯಾದ ನಿದ್ದೆ ಬರುವುದಿಲ್ಲ.

3. ಸಂಪತ್ತನ್ನ ಕಳೆದುಕೊಂಡಿರುವುದು ಯಾವ ವ್ಯಕ್ತಿ ತನ್ನ ಬಳಿ ಇರುವ ಸಂಪತ್ತು ಕಳೆದುಕೊಳ್ಳುತ್ತಾರೋ ಅವರಿಗೆ ಎರಡು ಕಾರಣಗಳಿಗಾಗಿ ನಿದ್ದೆ ಬರುವುದಿಲ್ಲ. ಒಂದು, ತನ್ನ ಬಳಿ ಇಲ್ಲದ್ದರ ಬಗ್ಗೆಯೇ ಯೋಚನೆ ಬರುತ್ತಿರುತ್ತದೆ. ಹಾಗೂ ತಾನು ಕಳೆದುಕೊಂಡಿದ್ದರ ಬಗ್ಗೆಯೂ ಚಿಂತೆ ಹಚ್ಚಿಕೊಂಡಿರುತ್ತದೆ. ಆದ್ದರಿಂದ ಆ ವ್ಯಕ್ತಿಗೆ ನಿದ್ದೆ ಬರಲ್ಲ.

4. ಕಳ್ಳರು ಕಳ್ಳರಿಗೆ ತಮ್ಮ ಬಳಿ ಇರುವ ವಸ್ತುಗಳೆಲ್ಲ ತಮ್ಮ ಸ್ವಂತದ್ದಲ್ಲ ಎಂಬ ಬಗ್ಗೆ ಯಾವಾಗಲೂ ಭತ ಇರುತ್ತದೆ. ಯಾವ ಸಮಯದಲ್ಲಿ ಬೇಕಾದರೂ ಅವುಗಳನ್ನು ತೆಗೆದುಕೊಂಡು ಹೋಗಬಹುದು ಎಂಬ ಭಯ ಅವರಿಗೆ ಇರುತ್ತದೆ. ಆದ್ದರಿಂದ ಸದಾ ಭಯ ಹಾಗೂ ಚಿಂತೆ ಕಾಡುತ್ತಲೇ ಇರುತ್ತದೆ. ಆದ್ದರಿಂದ ನಿದ್ದೆ ಇಲ್ಲದೆ ದಿನ ದೂಡಬೇಕಾಗುತ್ತದೆ.

5. ವೈಫಲ್ಯ ಯಾವ ವ್ಯಕ್ತಿ ತನ್ನ ಎಲ್ಲ ಕೆಲಸ- ಕಾರ್ಯಗಳಲ್ಲಿ ವೈಫಲ್ಯ ಆಗಿಬಿಟ್ಟಿರುತ್ತಾರೋ ಅಂಥವರಿಗೆ ತಮ್ಮ ಬಗ್ಗೆಯೇ ಆತ್ಮವಿಶ್ವಾಸ ಹೊರಟುಹೋಗಿರುತ್ತದೆ. ಸಮಾಜದಿಂದ ಕೂಡ ದೂರ ಉಳಿದಿರುತ್ತಾರೆ. ಏಕಾಂಗಿತನದ ಕಾರಣಕ್ಕೆ ನಿದ್ರೆ ಇಲ್ಲದಂತಾಗುತ್ತದೆ.

6. ತಪ್ಪಾದ ಬಯಕೆಗಳು ಯಾವ ವ್ಯಕ್ತಿಗೆ ಮನಸ್ಸಿನಲ್ಲಿ ತಪ್ಪಾದ ಬಯಕೆಗಳು ಇರುತ್ತವೋ ಅಂಥವರು ಅಲ್ಪಾವಧಿಯ ಸಂತೋಷ ಪಡೆಯಲು ಆಲೋಚಿಸುತ್ತಾರೆ. ಆದರೆ ದೀರ್ಘಾವಧಿಯಲ್ಲಿ ಈ ಅಲ್ಪಕಾಲದ ಸುಖದ ಪರಿಣಾಮವನ್ನು ಅನುಭವಿಸುತ್ತಾರೆ. ಇದರಿಂದಾಗಿ ನಿದ್ರೆ ಕಳೆದುಕೊಳ್ಳುವಂತಾಗುತ್ತದೆ.

ಈ ವಿದುರ ನೀತಿಯು ಮಹಾಭಾರತದ ಉದ್ಯೋಗ ಪರ್ವದಲ್ಲಿ ಬರುತ್ತದ. 33ರಿಂದ 40ರ ತನಕ ಎಂಟು ಅಧ್ಯಾಯಗಳಲ್ಲಿ ಧೃತರಾಷ್ಟ್ರನಿಗೆ ವಿದುರ ಹೇಳುವ ನೀತಿಪಾಠಗಳು ಸಾಕಷ್ಟಿವೆ. ಈಗ ಇಲ್ಲಿ ತಿಳಿಸಿರುವುದು ಒಂದು ಸಣ್ಣ ಭಾಗ ಮಾತ್ರ.

ಇದನ್ನೂ ಓದಿ: Spirituality: ವ್ರತ ಪೂಜೆ, ಅನುಷ್ಠಾನಗಳಲ್ಲಿ ಬೇರೆಯವರು ಮಾಡಿದ ಅಡುಗೆಯನ್ನು ಯಾಕೆ ಊಟ ಮಾಡಬಾರದು ಅಂತಾರೆ?

(Vidura, the great scholor in Mahabharata. He explained 6 reasons of sleepless nights of people in Vidura neeti.)

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್