ನವರಾತ್ರಿಯ ನಾಲ್ಕನೇ ದಿನ: ಕೂಷ್ಮಾಂಡ ದೇವಿಯ ಹಿನ್ನಲೆಯೇನು? ಈ ದಿನದ ಪೂಜಾ ಮಹತ್ವವೇನು? ಇಲ್ಲಿದೆ ಮಾಹಿತಿ
ನವರಾತ್ರಿಯ ನಾಲ್ಕನೇ ದಿನ ಅಥವಾ ಚತುರ್ಥಿಯಂದು ದೇವಿಯ ಕೂಷ್ಮಾಂಡ ದೇವಿಯ ಅವತಾರವನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ತಾಯಿ ಕೂಷ್ಮಾಂಡಾ ವಿಶ್ವವನ್ನು ಸೃಷ್ಟಿಸಿದಳು ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿ ಈ ದೇವಿಯ ಪೂಜೆ ಮಾಡುವುದು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ. ನವರಾತ್ರಿ ಹಬ್ಬದ 4ನೇ ದಿನದಂದು ಪೂಜೆ ಮಾಡುವ ಕೂಷ್ಮಾಂಡ ದೇವಿಯ ಹಿನ್ನಲೆ ಮತ್ತು ಪೂಜಾ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

ನವರಾತ್ರಿಯ ಒಂಬತ್ತು ದಿನ ದೇವಿಯ ಒಂದೊಂದು ಅವತಾರವನ್ನು ಪೂಜಿಸಲಾಗುತ್ತದೆ. ನವರಾತ್ರಿಯ ನಾಲ್ಕನೇ ದಿನ ಅಥವಾ ಚತುರ್ಥಿಯಂದು ದೇವಿಯ ಕೂಷ್ಮಾಂಡ ದೇವಿಯ ಅವತಾರವನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ತಾಯಿ ಕೂಷ್ಮಾಂಡಾ ವಿಶ್ವವನ್ನು ಸೃಷ್ಟಿಸಿದಳು ಎಂಬ ನಂಬಿಕೆ ಇದೆ. ಈ ಕಾರಣಕ್ಕಾಗಿ ಈ ದೇವಿಯ ಪೂಜೆ ಮಾಡುವುದು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗಿದೆ. ನವರಾತ್ರಿ ಹಬ್ಬದ 4ನೇ ದಿನದಂದು ಪೂಜೆ ಮಾಡುವ ಕೂಷ್ಮಾಂಡ ದೇವಿಯ ಹಿನ್ನಲೆ ಮತ್ತು ಪೂಜಾ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.
ಕೂಷ್ಮಾಂಡ ದೇವಿಯ ಹಿನ್ನೆಲೆಯೇನು?
ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ಶಕ್ತಿಯಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿ- ಸ್ವರೂಪ ಶಕ್ತಿಯಾಗಿದ್ದಾಳೆ. ಅದಕ್ಕಾಗಿಯೇ ಅವಳು ಮೂಲ ರೂಪ ಮತ್ತು ಬ್ರಹ್ಮಾಂಡದ ಮೂಲ ಶಕ್ತಿಯಾಗಿದ್ದಾಳೆ. ಕೂಷ್ಮಾಂಡ ದೇವಿಯ ವಾಸವು ಸೌರವ್ಯೂಹದ ಒಳಗಿನ ಪ್ರಪಂಚದಲ್ಲಿದೆ ಎಂದು ನಂಬಲಾಗಿದೆ. ದುರ್ಗಾ ದೇವಿಯ ಕೂಷ್ಮಾಂಡ ದೇವಿಯ ರೂಪವು ವಿಶಿಷ್ಟವಾಗಿದ್ದು, ಅವಳು 8 ತೋಳುಗಳನ್ನು ಹೊಂದಿದ್ದಾಳೆ. ಈ ಕಾರಣಕ್ಕಾಗಿ ಅವಳಿಗೆ ಪೂಜೆ ಮಾಡುವುದು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ದೇವಿಗೆ ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದೂ ಅವಳನ್ನು ವರ್ಣಿಸಲಾಗುತ್ತದೆ. ಜೊತೆಗೆ ಆಕೆ ತನ್ನ ಕೈಯಲ್ಲಿ ಜಪಮಾಲೆಯನ್ನು ಹಿಡಿದು, ಸಿಂಹದ ಮೇಲೆ ಸವಾರಿ ಮಾಡಿಕೊಂಡು ಬರುತ್ತಾಳೆ. ಕೂಷ್ಮಾಂಡ ದೇವಿಯ ರೂಪವು ಮಂದ ನಗುವಿನ ರೂಪವಾಗಿದೆ ಎಂದು ಬಣ್ಣಿಸಲಾಗುತ್ತದೆ. ವರಾತ್ರಿಯ ನಾಲ್ಕನೇ ದಿನ ತಾಯಿಯನ್ನು ಮೆಚ್ಚಿಸಲು ಬೂದು ಕುಂಬಳಕಾಯಿಯನ್ನು ದಾನ ಮಾಡಲಾಗುತ್ತದೆ.
ಪೂಜೆಯ ಮಹತ್ವ
ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಆಕೆಯು ನಿಮಗೆ ಆರೋಗ್ಯ ಆಯುಷ್ಯ ನೀಡುತ್ತಾಳೆ ಎನ್ನುವ ನಂಬಿಕೆಯಿದೆ. ತಾಯಿಯ ಈ ರೂಪವನ್ನು ಪೂಜಿಸುವುದರಿಂದ ಎಲ್ಲಾ ರೋಗಗಳು ನಿವಾರಣೆಯಾಗುತ್ತದೆ ಮತ್ತು ಮನಸ್ಸು ಮತ್ತು ದೇಹ ಸಂತೋಷವಾಗಿರುತ್ತದೆ. ಯಾವುದೇ ಪ್ರಮುಖ ಸಮಸ್ಯೆಯ ಪರಿಹಾರವು ಕೇವಲ ತಾಯಿಯ ಧ್ಯಾನ ಮತ್ತು ಪೂಜೆಯಿಂದ ಮುನ್ನೆಲೆಗೆ ಬರುತ್ತದೆ ಮತ್ತು ಪಾಪಗಳು ದೂರವಾಗುತ್ತವೆ. ಜೊತೆಗೆ ಈ ದೇವಿಯನ್ನು ನೆನೆದು ಶುದ್ಧವಾದ ಮನಸ್ಸಿನಲ್ಲಿ ಪೂಜಿಸುವುದರಿಂದ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಕೆಟ್ಟ ದಿನಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ.
ಇದನ್ನೂ ಓದಿ: ಕರಾವಳಿ ಕರ್ನಾಟಕದ ನವರಾತ್ರಿ ಹಬ್ಬದಲ್ಲಿ ಹುಲಿಕುಣಿತ ಪ್ರಮುಖ ಆಕರ್ಷಣೆ, ಇದರ ವಿಶೇಷತೆಗಳೇನು?
ಕೂಷ್ಮಾಂಡ ದೇವಿಯ ಅನುಗ್ರಹ ಪಡೆಯಲು ಯಾವ ಮಂತ್ರ ಜಪಿಸಬೇಕು?
– ”ಏಂ ಹ್ರೀಂ ದೇವ್ಯೈ ನಮಃ
-ಓಂ ದೇವಿ ಕೂಷ್ಮಾಂಡೈ ನಮಃ
-ಯಾ ದೇವಿ ಸರ್ವಭೂತೇಷು ಮಾ ಕೂಷ್ಮಾಂಡಾ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
– ವಂದೇ ವಾಂಚಿತ ಕಾಮಾರ್ಥ ಚಂದ್ರಾರ್ಧಕೃತಶೇಖರಂ ಸಿಂಹರೂಢ ಅಷ್ಟಭುಜಾ ಕೂಷ್ಮಾಂಡ ಯಶಸ್ವಿನೀಂ
– ”ಓಂ ಏಂ ಹ್ರೀಂ ಕ್ಲೀಂ ಕೂಷ್ಮಾಂಡೈ ನಮಃ”
– ಕುಸ್ತಿತಃ ಕೂಷ್ಮಾ ಕೂಷ್ಮಾ – ತ್ರಿವಿಧತಾಪಯುತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮುದರರೂಪಾಯಾಂ ಯಸ್ಯಾಃ ಸಾ ಕೂಷ್ಮಾಂಡ
-ಸುರಸಂಪೂರ್ಣಕಲಶಂ ರೂಧೀರಾಪ್ಲುತಮೇವ ಚ ದಧಾನ ಹಸ್ತಪದ್ಮಾಭ್ಯಂ ಕೂಷ್ಮಾಂಡ ಶುಭದಾಸ್ತು ಮೇ
-ಓಂ ದೇವಿ ಕೂಷ್ಮಾಂಡದಾಯ್ಯೈ ನಮಃ
ಮತ್ತಷ್ಟು ಅಧ್ಯಾತ್ಮದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:




