ಕೊರೊನಾದಿಂದ ವಿಶ್ವಕಪ್ ಮುಂದೂಡಲ್ಪಟ್ಟರೆ ಸ್ಟೀವ್ ಸ್ಮಿತ್ ಆಯ್ಕೆ ಏನು?
ಐಪಿಎಲ್ ಅಂದ್ರೇನೆ ಹಾಗೇ.. ಎಂತ ಸ್ಟಾರ್ ಕ್ರಿಕೆಟಿಗನಿಗಾದ್ರೂ ಮೋಡಿ ಮಾಡುತ್ತೆ. ಇದೇ ಕಾರಣಕ್ಕೆ ವಿದೇಶಿ ಆಟಗಾರರು ಐಪಿಎಲ್ ಅನ್ನೋ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆಡೋದಕ್ಕೆ ಇಷ್ಟಪಡೋದು. ಐಪಿಎಲ್ ಬಿಡ್ಡಿಂಗ್ನಲ್ಲಿ ನಾವ್ ಸೇಲ್ ಆದ್ರೆ ಸಾಕಪ್ಪಾ ಅಂತಾ ಬೇಡಿಕೊಳ್ಳೋದು. ಇದಕ್ಕೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಕೂಡ ಹೊರತಾಗಿಲ್ಲ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ಆಯೋಜನೆಯಾಗೋ ಟಿಟ್ವೆಂಟಿ ವಿಶ್ವಕಪ್ ಟೂರ್ನಿ ಮುಂದೂಡಲ್ಪಟ್ರೆ, ದೇಸಿ ಕ್ರಿಕೆಟ್ನಲ್ಲಿ ಆಡ್ತೀರಾ? ಇಲ್ಲಾ ಐಪಿಎಲ್ನಲ್ಲಿ ಆಡ್ತೀರಾ ಅನ್ನೋ ಪ್ರಶ್ನೆಯನ್ನ ಸ್ಮಿತ್ಗೆ ಕೇಳಲಾಗಿತ್ತು. ಈ ಪ್ರಶ್ನೆಗೆ […]
ಐಪಿಎಲ್ ಅಂದ್ರೇನೆ ಹಾಗೇ.. ಎಂತ ಸ್ಟಾರ್ ಕ್ರಿಕೆಟಿಗನಿಗಾದ್ರೂ ಮೋಡಿ ಮಾಡುತ್ತೆ. ಇದೇ ಕಾರಣಕ್ಕೆ ವಿದೇಶಿ ಆಟಗಾರರು ಐಪಿಎಲ್ ಅನ್ನೋ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆಡೋದಕ್ಕೆ ಇಷ್ಟಪಡೋದು. ಐಪಿಎಲ್ ಬಿಡ್ಡಿಂಗ್ನಲ್ಲಿ ನಾವ್ ಸೇಲ್ ಆದ್ರೆ ಸಾಕಪ್ಪಾ ಅಂತಾ ಬೇಡಿಕೊಳ್ಳೋದು. ಇದಕ್ಕೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಕೂಡ ಹೊರತಾಗಿಲ್ಲ.
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ಆಯೋಜನೆಯಾಗೋ ಟಿಟ್ವೆಂಟಿ ವಿಶ್ವಕಪ್ ಟೂರ್ನಿ ಮುಂದೂಡಲ್ಪಟ್ರೆ, ದೇಸಿ ಕ್ರಿಕೆಟ್ನಲ್ಲಿ ಆಡ್ತೀರಾ? ಇಲ್ಲಾ ಐಪಿಎಲ್ನಲ್ಲಿ ಆಡ್ತೀರಾ ಅನ್ನೋ ಪ್ರಶ್ನೆಯನ್ನ ಸ್ಮಿತ್ಗೆ ಕೇಳಲಾಗಿತ್ತು. ಈ ಪ್ರಶ್ನೆಗೆ ಸ್ಮಿತ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡೋದಾಗಿ ಹೇಳಿದ್ದಾರೆ.
ವಿಶ್ವಕಪ್ ಮುಂದೂಡಲ್ಪಟ್ಟರೆ ಐಪಿಎಲ್ ಆಡುತ್ತೇನೆ: ನನ್ನ ದೇಶದ ಪರವಾಗಿ ವಿಶ್ವಕಪ್‌ನಲ್ಲಿ ಆಡಬೇಕಾಗಿರೋ ಜವಾಬ್ದಾರಿ ಇರುವಾಗ, ಬೇರೆ ಏಕದಿನವಾಗಲಿ ಅಥವಾ ಟಿ20ಟೂರ್ನಿಯನ್ನಾಗಲಿ ಒಪ್ಪಿಕೊಳ್ಳಲು ಕಷ್ಟವಾಗುತ್ತೆ. ಅಂಥ ಸಂದರ್ಭದಲ್ಲಿ ನಾನು ವಿಶ್ವಕಪ್ ಅನ್ನೇ ಆರಿಸಿಕೊಳ್ಳುತ್ತೇನೆ. ಒಂದು ವೇಳೆ ವಿಶ್ವಕಪ್ ಮುಂದೂಡಲ್ಪಟ್ಟರೆ, ನಾನು ಐಪಿಎಲ್ ಆಡುತ್ತೇನೆ. ದೇಸಿ ಟೂರ್ನಿಗಳಲ್ಲಿ ಐಪಿಎಲ್ ಅದ್ಭುತ ಟೂರ್ನಿಯಾಗಿದೆ ಎಂದು ಸ್ಮಿತ್ ಬಣ್ಣಿಸಿದ್ದಾರೆ.
ಕೊರೊನಾದಿಂದಾಗಿ ಆಸ್ಟ್ರೇಲಿಯಾದಲ್ಲಿ ನಡೆಯೋ ಟಿಟ್ವೆಂಟಿ ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದುಡಲ್ಪಡೋ ಸಾಧ್ಯತೆಯಿದೆ. ಒಂದು ವೇಳೆ ಟಿಟ್ವೆಂಟಿ ವಿಶ್ವಕಪ್ ಮುಂದೂಡಲ್ಪಟ್ರೆ, ಅಕ್ಟೋಬರ್, ನವೆಂಬರ್ನಲ್ಲೇ ಬಿಸಿಸಿಐ ಐಪಿಎಲ್ ನಡೆಸೋದಕ್ಕೆ ಫ್ಲ್ಯಾನ್ ಹಾಕಿಕೊಂಡಿದೆ. ಇದೇ ಕಾರಣಕ್ಕೆ ಸ್ಮಿತ್ ಐಪಿಎಲ್ನಲ್ಲಿ ಆಡೋ ಇಂಗಿತ ವ್ಯಕ್ತಪಡಿಸಿದ್ದಾರೆ.
ಇನ್ನು ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿರುವ ಸ್ಟೀವ್ ಸ್ಮಿತ್, ಈ ಸೀಸನ್ನಲ್ಲಿ ಆರ್ಆರ್ ತಂಡವನ್ನ ಮುನ್ನಡೆಸಬೇಕಿತ್ತು. ಆದ್ರೆ ಕೊರೊನಾದಿಂದ ಈ ಬಾರಿಯ ಐಪಿಎಲ್ ಸೀಸನ್ ನಡೆಯುತ್ತೋ ನಡೆಯದಿಲ್ವೋ ಅನ್ನೋ ಗೊಂದಲವಿದೆ. ಅದೇನೇ ಇರಲಿ, ಐಪಿಎಲ್ನಲ್ಲಿ ಆಡೋದಕ್ಕೆ ವಿದೇಶಿ ಕ್ರಿಕೆಟಿಗರು ಎಷ್ಟು ಹಾತೊರೆಯುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ.