AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್‌ ಟೆಸ್ಟ್ ತಂಡದಿಂದ ಹೊರಬಿದ್ದ ಬೆನ್ ಸ್ಟೋಕ್ಸ್ ಹೊಸ ತಂಡಕ್ಕೆ ಎಂಟ್ರಿ

Ben Stokes: ನೈಟ್‌ಕ್ಲಬ್ ಜಗಳದಿಂದ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ಬಳಿಕ ಲಂಡನ್‌ನಲ್ಲಿ ನಡೆದ ಘಟನೆ ಕಾರಣ, ಜೋ ರೂಟ್ ಎರಡನೇ ಟೆಸ್ಟ್‌ಗೆ ನಾಯಕತ್ವ ವಹಿಸಿದ್ದಾರೆ. ಆದರೂ, ಸ್ಟೋಕ್ಸ್ ಡರ್ಹಾಮ್ ಪರ ಕೌಂಟಿ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಅವರ ವೃತ್ತಿಜೀವನದಲ್ಲಿ ಇಂತಹ ವಿವಾದಗಳು ಹೊಸತೇನಲ್ಲ, ಹಿಂದೆಯೂ ಹಲವು ಬಾರಿ ಮದ್ಯಪಾನ ಮತ್ತು ಜಗಳದಂತಹ ಘಟನೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ಇಂಗ್ಲೆಂಡ್‌ ಟೆಸ್ಟ್ ತಂಡದಿಂದ ಹೊರಬಿದ್ದ ಬೆನ್ ಸ್ಟೋಕ್ಸ್ ಹೊಸ ತಂಡಕ್ಕೆ ಎಂಟ್ರಿ
Ben Stokes
ಪೃಥ್ವಿಶಂಕರ
|

Updated on:Jun 18, 2026 | 10:44 PM

Share

ಪ್ರಸ್ತುತ ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್ (England vs New Zealand) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್‌ ಏಕಪಕ್ಷೀಯವಾಗಿ ಗೆದ್ದುಕೊಂಡಿತು. ಇದೀಗ ಉಭಯ ತಂಡಗಳ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್‌ ಟೆಸ್ಟ್ ತಂಡದ ನಿಯಮಿತ ನಾಯಕ ಬೆನ್ ಸ್ಟೋಕ್ಸ್ (Ben Stokes) ಆಡುತ್ತಿಲ್ಲ. ಹೀಗಾಗಿ ಅವರ ಬದಲಿಗೆ ಜೋ ರೂಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಷ್ಟಕ್ಕೂ ಬೆನ್ ಸ್ಟೋಕ್ಸ್ ಏಕೆ ಈ ಪಂದ್ಯವನ್ನು ಆಡುತ್ತಿಲ್ಲ ಎಂಬುದಕ್ಕೆ ಕಾರಣ, ನೈಟ್ ಕ್ಲಬ್​ನಲ್ಲಿ ಬೆನ್ ಸ್ಟೋಕ್ಸ್ ಕುಡಿದು ಜಗಳವಾಡಿದ್ದು.

ಈ ಕಾರಣದಿಂದಾಗಿ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಅವರನ್ನು ತಂಡದಿಂದ ಕೈಬಿಡಲಾಯಿತು. ಆದಾಗ್ಯೂ, ಸ್ಟೋಕ್ಸ್ ಕ್ರಿಕೆಟ್ ಮೈದಾನಕ್ಕೆ ಮರಳಿದ್ದು, ಕೌಂಟಿ ಕ್ರಿಕೆಟ್​ನಲ್ಲಿ ಡರ್ಹಾಮ್ ತಂಡದ ಪರ ಆಡಲು ಸಜ್ಜಾಗಿದ್ದಾರೆ. ಡರ್ಹಾಮ್ ತಂಡ ಶುಕ್ರವಾರದಿಂದ ನಾರ್ಥಾಂಪ್ಟನ್ಶೈರ್ ವಿರುದ್ಧ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೆ ಸ್ಟೋಕ್ಸ್ ಜೊತೆಗೆ, ಗಸ್ ಅಟ್ಕಿನ್ಸನ್ ಕೂಡ ದೇಶೀಯ ಕ್ರಿಕೆಟ್ ಆಡಲು ಅನುಮತಿ ಪಡೆದಿದ್ದಾರೆ. ಅಟ್ಕಿನ್ಸನ್ ಗ್ಲಾಮೋರ್ಗನ್ ವಿರುದ್ಧ ಸರ್ರೆ ಪರ ಆಡಲಿದ್ದಾರೆ.

ಬೆನ್ ಸ್ಟೋಕ್ಸ್ ತಂಡದಿಂದ ಹೊರಬೀಳಲು ಕಾರಣವೇನು?

ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಗೆಲುವಿನ ನಂತರ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಲಂಡನ್ ನೈಟ್‌ಕ್ಲಬ್‌ನಲ್ಲಿ ವಿಪರೀತ ಮದ್ಯ ಸೇವಿಸಿ ತಂಡದ ಸಹ ಆಟಗಾರ ಗಸ್ ಅಟ್ಕಿನ್ಸನ್ ಅವರೊಂದಿಗೆ ಸೇರಿ, ಅದೇ ಕ್ಲಬ್‌ನಲ್ಲಿದ್ದ ರಗ್ಬಿ ಆಟಗಾರನ ಮೇಲೆ ಹಲ್ಲೆ ನಡೆಸಿದರು. ಬೆನ್ ಸ್ಟೋಕ್ಸ್ ಅವರ ಈ ಕೃತ್ಯದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು. ಇದಾದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತಕ್ಷಣ ಕ್ರಮ ಕೈಗೊಂಡು ಸ್ಟೋಕ್ಸ್ ಅವರನ್ನು ಓವಲ್ ಟೆಸ್ಟ್‌ನಿಂದ ಕೈಬಿಟ್ಟಿತು.

ಬೆನ್ ಸ್ಟೋಕ್ಸ್ ವಿವಾದ

  • ಬೆನ್ ಸ್ಟೋಕ್ಸ್ ಈ ರೀತಿಯ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ತಮ್ಮ ವೃತ್ತಿಜೀವನದ ಆರಂಭದಿಂದಲೂ, ಅವರು ಮದ್ಯಪಾನ ಮಾಡುವ ಮೂಲಕ ಹಲವಾರು ಬಾರಿ ತಂಡದ ನಿಯಮಗಳನ್ನು ಮುರಿದಿದ್ದಾರೆ. 2011 ರಲ್ಲಿ, ಅವರು ಡರ್ಹಾಮ್‌ನಲ್ಲಿ ಪೊಲೀಸರೊಂದಿಗೆ ಕುಡಿದ ಮತ್ತಿನಲ್ಲಿ ವಾಗ್ವಾದ ನಡೆಸಿದ್ದರು. ನಂತರ ಅವರನ್ನು ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿತ್ತು.
  • 2013 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಗ್ಲೆಂಡ್ ತಂಡದ ಜೊತೆಗೆ ಬೆನ್ ಸ್ಟೋಕ್ಸ್ ಮದ್ಯಪಾನ ಮಾಡುವ ಮೂಲಕ ತಂಡದ ನಿಯಮ ಉಲ್ಲಂಘಿಸಿದ ಕಾರಣ ಅವರನ್ನು ಮನೆಗೆ ಕಳುಹಿಸಲಾಗಿತ್ತು.
  • 2014 ರ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಬೆನ್ ಸ್ಟೋಕ್ಸ್ ಕೈ ಮುರಿದುಕೊಂಡಿದ್ದರು. ಕೋಪದ ಭರದಲ್ಲಿ, ಅವರು ಡ್ರೆಸ್ಸಿಂಗ್ ರೂಮ್ ಲಾಕರ್‌ಗೆ ಗುದ್ದಿದರು, ಇದರ ಪರಿಣಾಮವಾಗಿ ಕೈ ಮೂಳೆ ಮುರಿದಿತು. ಇದರ ಪರಿಣಾಮವಾಗಿ ಅವರು 2014 ರ ಟಿ20 ವಿಶ್ವಕಪ್‌ನಿಂದ ಹೊರಗುಳಿಯಬೇಕಾಯಿತು.
  • 2017 ರಲ್ಲಿ, ಬೆನ್ ಸ್ಟೋಕ್ಸ್ ಬ್ರಿಸ್ಟಲ್ ನೈಟ್‌ಕ್ಲಬ್‌ನಲ್ಲಿ ಇಬ್ಬರು ಪುರುಷರ ಮೇಲೆ ಹಲ್ಲೆ ನಡೆಸಿದರು. ಹೀಗಾಗಿ ಸ್ಟೋಕ್ಸ್​ಗೆ ದಂಡವನ್ನು ವಿಧಿಸಲಾಗಿತ್ತು. ಇದರ ಜೊತೆಗೆ ಎಂಟು ಪಂದ್ಯಗಳಿಂದ ಅವರನ್ನು ಹೊರಗಿಡಲಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:40 pm, Thu, 18 June 26

Follow Us
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ಜೈಲಲ್ಲಿ ಪವಿತ್ರಾ ಗೌಡಗೆ ಕೆಲಸ ಮಾಡಿಕೊಡಲು ಆಳುಗಳು ಇದ್ದಾರೆ: ಸಂಧ್ಯಾ ಆರೋಪ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ವಡೋದರಾದಲ್ಲಿ 4 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಲ್ಕೋಹಾಲ್ ಬಾಟಲಿಗಳ ಧ್ವಂಸ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಪರಿಷತ್‌ ಚುನಾವಣೆ: ಗೆಲುವು ಬೆನ್ನಲ್ಲೇ ತಿಪ್ಪಣ್ಣಪ್ಪ ಕಮಕನೂರು ಭಾವುಕ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಬಿಜೆಪಿ ಅಭ್ಯರ್ಥಿಗಳಿಗೆ ಕಷ್ಟ ಆಗಿದ್ಯಾಕೆ? ರಘು ಕೌಟಿಲ್ಯ ಏನಂದ್ರು ನೋಡಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಪರಿಷತ್​​ ಚುನಾವಣೆ ಫಲಿತಾಂಶ: ಕಾಂಗ್ರೆಸ್​​ ನಾಯಕರಿಂದ ಸುದ್ದಿಗೋಷ್ಠಿ
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಸಂಪೂರ್ಣ ಬತ್ತಿದ ಕಾವೇರಿ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಬರ?
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು