Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಎಕ್ಸ್​ ಖಾತೆಯಲ್ಲಿ ಚೆಸ್ ಚತುರೆ ಆರ್​. ವೈಶಾಲಿ ಪೋಸ್ಟ್​

Women's Day: ಇಂದು ವಿಶ್ವದಾದ್ಯಂತ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಪ್ರಧಾನಿ ನೇರಂದ್ರ ಮೋದಿ ಅವರ ಎಕ್ಸ್ ಖಾತೆಯ ಹ್ಯಾಂಡಲ್​ಗಳನ್ನು ಮಹಿಳಾ ಸಾಧಕಿಯರಿಗೆ ಹಂಚಿಕೊಳ್ಳಲಾಗಿದೆ. ಅದರಂತೆ ಕ್ರೀಡಾ ಕ್ಷೇತ್ರದಲ್ಲಿ ಮಿಂಚಿರುವ ಚೆಸ್ ಚತುರೆ ಆರ್​. ವೈಶಾಲಿ ಪ್ರಧಾನಿ ಅವರ ಎಕ್ಸ್ ಖಾತೆಯಲ್ಲಿ ಬರಹವೊಂದನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಎಕ್ಸ್​ ಖಾತೆಯಲ್ಲಿ ಚೆಸ್ ಚತುರೆ ಆರ್​. ವೈಶಾಲಿ ಪೋಸ್ಟ್​
Vaishali - Narendra Modi
Follow us
ಝಾಹಿರ್ ಯೂಸುಫ್
|

Updated on:Mar 08, 2025 | 11:27 AM

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ (ಮಾ.8) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಎಕ್ಸ್ ಖಾತೆಯಲ್ಲಿ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಆರ್. ವೈಶಾಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ವುಮೆನ್ಸ್ ಡೇ ಪ್ರಯುಕ್ತ ಪ್ರಧಾನಿ ಅವರ ಎಕ್ಸ್​ ಖಾತೆಯ ಹ್ಯಾಂಡಲ್​ನ್ನು ಮಹಿಳಾ ಸಾಧಕರಿಗೆ ಹಂಚಿಕೊಳ್ಳಲಾಗಿದ್ದು, ಈ ಮೂಲಕ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಲಾಗಿದೆ. ಅದರಂತೆ ಪ್ರಧಾನಿ ಮೋದಿ ಅವರ ಖಾತೆಯಲ್ಲಿ ವೈಶಾಲಿ ದೀರ್ಘವಾದ ಬರಹವೊಂದನ್ನು ಹಂಚಿಕೊಂಡಿದ್ದಾರೆ.

“ವನಕ್ಕಮ್ (ನಮಸ್ಕಾರ)! ನಾನು ವೈಶಾಲಿ. ನಮ್ಮ ಪ್ರಧಾನಿ ತಿರು ನರೇಂದ್ರ ಮೋದಿಜಿ ಅವರ ಸಾಮಾಜಿಕ ಖಾತೆಯ ಹ್ಯಾಂಡಲ್ ಪಡೆದಿರುವುದರಿಂದ ರೋಮಾಂಚನಗೊಂಡಿದ್ದೇನೆ. ಅದು ಕೂಡ ಮಹಿಳಾ ದಿನದಂದು. ನಿಮ್ಮಲ್ಲಿ ಹಲವರಿಗೆ ತಿಳಿದಿರುವಂತೆ, ನಾನು ಚೆಸ್ ಆಡುತ್ತೇನೆ. ಅಲ್ಲದೆ ನಮ್ಮ ಪ್ರೀತಿಯ ದೇಶವನ್ನು ಅನೇಕ ಪಂದ್ಯಾವಳಿಗಳಲ್ಲಿ ಪ್ರತಿನಿಧಿಸುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

ಆರ್​. ವೈಶಾಲಿ ಪೋಸ್ಟ್:

“ನಾನು ಜನಿಸಿದ್ದು ಜೂನ್ 21 ರಂದು. ಆ ದಿನವನ್ನು ಕಾಕತಾಳೀಯವಾಗಿ ಈಗ ಅಂತರರಾಷ್ಟ್ರೀಯ ಯೋಗ ದಿನವೆಂದು ಜನಪ್ರಿಯಗೊಳಿಸಲಾಗಿದೆ. ನಾನು 6ನೇ ವಯಸ್ಸಿನಿಂದಲೂ ಚೆಸ್ ಆಡುತ್ತಿದ್ದೇನೆ! ಚೆಸ್ ಆಡುವುದು ನನಗೆ ಕಲಿಕೆಯ, ರೋಮಾಂಚಕ ಮತ್ತು ಪ್ರತಿಫಲದಾಯಕ ಪ್ರಯಾಣವಾಗಿದೆ. ಇದು ನನ್ನ ಅನೇಕ ಪಂದ್ಯಾವಳಿಗಳು ಮತ್ತು ಒಲಿಂಪಿಯಾಡ್ ಯಶಸ್ಸನ್ನು ಪ್ರತಿಬಿಂಬಿಸುತ್ತದೆ”.

“ನಾನು ಎಲ್ಲಾ ಮಹಿಳೆಯರಿಗೆ, ವಿಶೇಷವಾಗಿ ಯುವತಿಯರಿಗೆ ಒಂದು ಸಂದೇಶವನ್ನು ನೀಡಲು ಬಯಸುತ್ತೇನೆ – ಅಡೆತಡೆಗಳನ್ನು ಲೆಕ್ಕಿಸದೆ ನಿಮ್ಮ ಕನಸುಗಳನ್ನು ಹಿಂಬಾಲಿಸಿ. ನಿಮ್ಮ ಉತ್ಸಾಹವು ನಿಮ್ಮ ಯಶಸ್ಸಿಗೆ ಶಕ್ತಿ ನೀಡುತ್ತದೆ. ಮಹಿಳೆಯರು ತಮ್ಮ ಕನಸುಗಳನ್ನು ಹಿಂಬಾಲಿಸಲು ಮತ್ತು ಅವರು ಆಯ್ಕೆ ಮಾಡುವ ಯಾವುದೇ ಕ್ಷೇತ್ರದಲ್ಲಿ ಅಡೆತಡೆಗಳನ್ನು ಮುರಿಯಲು ನಾನು ಪ್ರೋತ್ಸಾಹಿಸಲು ಬಯಸುತ್ತೇನೆ. ಏಕೆಂದರೆ ಅವರು ಅದನ್ನು ಮಾಡಬಹುದು ಎಂದು ನನಗೆ ತಿಳಿದಿದೆ”.

“ನನ್ನ FIDE ಶ್ರೇಯಾಂಕವನ್ನು ಇನ್ನಷ್ಟು ಸುಧಾರಿಸಲು ಮತ್ತು ನನ್ನ ದೇಶವನ್ನು ಹೆಮ್ಮೆಪಡುವಂತೆ ಮಾಡಲು ನಾನು ಬಯಸುತ್ತೇನೆ. ಚೆಸ್ ನನಗೆ ತುಂಬಾ ನೀಡಿದೆ ಮತ್ತು ನಾನು ಪ್ರೀತಿಸುವ ಕ್ರೀಡೆಗೆ ಹೆಚ್ಚಿನ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ. ಅದೇ ಉತ್ಸಾಹದಲ್ಲಿ, ಯುವತಿಯರು ತಮಗೆ ಇಷ್ಟವಾದ ಎಲ್ಲಾ ಕ್ರೀಡೆಯಲ್ಲೂ ಮುಂದುವರೆಯಬೇಕೆಂದು ಹೇಳಲು ಬಯಸುತ್ತೇನೆ”.

“ಪೋಷಕರಿಗೆ ಮತ್ತು ಒಡಹುಟ್ಟಿದವರಿಗೆ ನನ್ನ ಸಂದೇಶವೇನೆಂದರೆ – ಮಹಿಳೆಯರನ್ನು ಬೆಂಬಲಿಸಿ. ಅವರ ಸಾಮರ್ಥ್ಯಗಳ ಮೇಲೆ ನಂಬಿಕೆಯಿಡಿ, ಅವರು ಅದ್ಭುತಗಳನ್ನು ಮಾಡುತ್ತಾರೆ. ನನ್ನ ಜೀವನದಲ್ಲಿ, ತಂದೆ-ತಾಯಿಯಾದ ತಿರು ರಮೇಶ್‌ಬಾಬು ಮತ್ತು ತಿರುಮತಿ ನಾಗಲಕ್ಷ್ಮಿ ಬೆಂಬಲವಾಗಿ ನಿಂತಿದ್ದಾರೆ. ನನ್ನ ಸಹೋದರ ಪಜ್ಞಾನಂದ ಮತ್ತು ನಾನು ನಿಕಟ ಬಾಂಧವ್ಯವನ್ನು ಹೊಂದಿದ್ದು, ಪ್ರತಿಯೊಂದನ್ನು ಹಂಚಿಕೊಳ್ಳುತ್ತೇನೆ. ಹಾಗೆಯೇ ಅತ್ಯುತ್ತಮ ತರಬೇತುದಾರರು, ತಂಡದ ಸದಸ್ಯರು ಇರುವುದು ನನ್ನ ಅದೃಷ್ಟ. ಸಹಜವಾಗಿಯೇ ನಾನು ವಿಶ್ವನಾಥನ್ ಆನಂದ್ ಸರ್ ಅವರಿಂದ ತುಂಬಾ ಸ್ಫೂರ್ತಿ ಪಡೆದಿದ್ದೇನೆ”.

ಇದನ್ನೂ ಓದಿ: IPL 2026: ಐಪಿಎಲ್​ಗೆ ಪಾಕಿಸ್ತಾನ್ ವೇಗಿ ಮೊಹಮ್ಮದ್ ಅಮೀರ್

“ಇಂದಿನ ಭಾರತವು ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಬೆಂಬಲವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ತುಂಬಾ ಉತ್ತೇಜನಕಾರಿಯಾಗಿದೆ. ಮಹಿಳೆಯರಿಗೆ ಕ್ರೀಡೆಗಳನ್ನು ಮುಂದುವರೆಯಲು ಪ್ರೇರೇಪಿಸುವುದರಿಂದ ಹಿಡಿದು ತರಬೇತಿಯವರೆಗೆ ಮತ್ತು ಅವರಿಗೆ ಸಾಕಷ್ಟು ಕ್ರೀಡಾ ಮಾನ್ಯತೆ ನೀಡುವವರೆಗೆ, ಭಾರತ ಸಾಧಿಸುತ್ತಿರುವ ಪ್ರಗತಿ ಅಸಾಧಾರಣವಾಗಿದೆ” ಎಂದು ಆರ್​ ವೈಶಾಲಿ ಪ್ರಧಾನಿ ಮೋದಿ ಅವರ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Published On - 11:22 am, Sat, 8 March 25

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ