AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌತ್ ಝೋನ್ ಆಲೌಟ್: ಈಸ್ಟ್ ಝೋನ್​​ಗೆ ಬೃಹತ್ ರನ್​​ಗಳ ಮುನ್ನಡೆ

ಚೆನ್ನೈನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ ಅಂತ್ಯಗೊಂಡಿದೆ. ಪ್ರಥಮ ಇನ್ನಿಂಗ್ಸ್ ಮುಕ್ತಾಯದ ವೇಳೆಗೆ ಈಸ್ಟ್ ಝೋನ್ ಬರೋಬ್ಬರಿ 372 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಬೃಹತ್ ಮುನ್ನಡೆಯ ಬಲದಿಂದ ಇಶಾನ್ ಕಿಶನ್ ನೇತೃತ್ವದ ಈಸ್ಟ್ ಝೋನ್ ತಂಡವು ಪಂದ್ಯವನ್ನು ಡ್ರಾದತ್ತ ಕೊಂಡೊಯ್ಯುವ ಸಾಧ್ಯತೆಯಿದೆ.

ಸೌತ್ ಝೋನ್ ಆಲೌಟ್: ಈಸ್ಟ್ ಝೋನ್​​ಗೆ ಬೃಹತ್ ರನ್​​ಗಳ ಮುನ್ನಡೆ
ಈಸ್ಟ್ ಝೋನ್ Vs ಸೌತ್ ಝೋನ್Image Credit source: PTI
ಝಾಹಿರ್ ಯೂಸುಫ್
|

Updated on: Sep 09, 2026 | 12:33 PM

Share

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2026ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ಸೌತ್ ಝೋನ್ 336 ರನ್​ಗಳಿಸಿ ಆಲೌಟ್ ಆಗಿದೆ. ಈ ಆಲೌಟ್​ನೊಂದಿಗೆ ಈಸ್ಟ್ ಝೋನ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 372 ರನ್​ಗಳ ಭಾರೀ ಮುನ್ನಡೆ ಪಡೆದುಕೊಂಡಿದೆ.

ಇಶಾನ್ ಕಿಶನ್ ದ್ವಿಶತಕದ ವೈಭವ:

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಈಸ್ಟ್ ಝೋನ್ ತಂಡ ಪರ ನಾಯಕ ಇಶಾನ್ ಕಿಶನ್ ಕೇವಲ 334 ಎಸೆತಗಳಲ್ಲಿ 270 ರನ್‌ಗಳನ್ನು ಚಚ್ಚಿ ದಾಖಲೆ ಬರೆದಿದ್ದರು. ಇವರಿಗೆ ಭರ್ಜರಿ ಸಾಥ್ ನೀಡಿದ ಕುಮಾರ್ ಕುಶಾಗ್ರ (101 ರನ್) ಶತಕ ಸಿಡಿಸಿದ್ದರು. ಇನ್ನು ಶಿಖರ್ ಮೋಹನ್ (85 ರನ್) ಹಾಗೂ ಅಭಿಮನ್ಯು ಈಶ್ವರನ್ (72 ರನ್) ಅರ್ಧಶತಕಗಳ ಕೊಡುಗೆ ನೀಡಿದ್ದರು. ಈ ಮೂಲಕ ಈಸ್ಟ್ ಝೋನ್​ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 708 ರನ್ ಕಲೆಹಾಕಿತು.

ಶತಕ ವಂಚಿತರಾದ ತಿಲಕ್ ವರ್ಮಾ:

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸೌತ್ ಝೋನ್ ಪರ ನಾಯಕ ತಿಲಕ್ ವರ್ಮಾ ಏಕಾಂಗಿ ಹೋರಾಟ ನಡೆಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಅವರು 211 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 99 ರನ್ ಗಳಿಸಿ ಶತಕದ ಸನಿಹದಲ್ಲಿದ್ದರು. ಆದರೆ, ದುರದೃಷ್ಟವಶಾತ್ ಮೊಹಮ್ಮದ್ ಖುರೇಷಿ ಬೌಲಿಂಗ್‌ನಲ್ಲಿ ಅವರಿಗೆ ಕ್ಯಾಚ್ ನೀಡಿ ಕೇವಲ 1 ರನ್‌ನಿಂದ ಶತಕದ ಅವಕಾಶವನ್ನು ಕೈಚೆಲ್ಲಿ ನಿರಾಸೆಯಿಂದ ಪೆವಿಲಿಯನ್ ಸೇರಿದರು.

ಇನ್ನು ಸೌತ್ ಝೋನ್ ತಂಡದ ಪರ ಇತರ ಪ್ರಮುಖ ಬ್ಯಾಟರ್‌ಗಳಾದ ದೇವದತ್ ಪಡಿಕ್ಕಲ್ 62 ರನ್ ಹಾಗೂ ಚಾಮಾ ಮಿಲಿಂದ್ 43 ರನ್ ಗಳಿಸಿ ತಂಡದ ಮೊತ್ತ 300ರ ಗಡಿ ದಾಟಲು ನೆರವಾದರು. ಅಂತಿಮವಾಗಿ ಸೌತ್ ಜೋನ್ 107.3 ಓವರ್‌ಗಳಲ್ಲಿ 336 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಮುಕೇಶ್ ಕುಮಾರ್ ಭರ್ಜರಿ ಬೌಲಿಂಗ್:

ಈಸ್ಟ್ ಝೋನ್ ಪರ ಮಿಂಚಿನ ದಾಳಿ ಸಂಘಟಿಸಿದ ಅನುಭವಿ ವೇಗಿ ಮುಕೇಶ್ ಕುಮಾರ್ 3 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಶಮಿ, ಶಿಖರ್ ಮೋಹನ್ ಹಾಗೂ ಮೊಹಮ್ಮದ್ ಖುರೇಷಿ ತಲಾ 2 ವಿಕೆಟ್ ಕಬಳಿಸಿ ಸೌತ್ ಝೋನ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಅದರಂತೆ ಇದೀಗ ಈಸ್ಟ್​ ಝೋನ್ ತಂಡವು ಮೊದಲ ಇನ್ನಿಂಗ್ಸ್ ಮುಕ್ತಾಯದ ವೇಳೆಗೆ ಒಟ್ಟು 372 ರನ್‌ಗಳ ಬೃಹತ್ ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯದಲ್ಲಿ ಕೇವಲ ಒಂದು ದಿನದ ಆಟ ಬಾಕಿ ಉಳಿದಿದ್ದು, ಹೀಗಾಗಿ ಈ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು.

ಈಸ್ಟ್​ ಝೋನ್ (ಪ್ಲೇಯಿಂಗ್ XI): ಅಭಿಮನ್ಯು ಈಶ್ವರನ್, ವೈಭವ್ ಸೂರ್ಯವಂಶಿ, ಕುಮಾರ್ ಕುಶಾಗ್ರಾ, ಸುದೀಪ್ ಕುಮಾರ್ ಘರಾಮಿ, ಇಶಾನ್ ಕಿಶನ್ (ನಾಯಕ, ಶಿಖರ್ ಮೋಹನ್, ಅನುಕೂಲ್ ರಾಯ್, ಎಂಡಿ ಕೌನೈನ್ ಖುರೈಶಿ, ಮೊಹಮ್ಮದ್ ಶಮಿ, ಅಭಿಜಿತ್ ಕೆ ಸರ್ಕಾರ್, ಮುಖೇಶ್ ಕುಮಾರ್.

ಇದನ್ನೂ ಓದಿ: ದುಲೀಪ್ ಟ್ರೋಫಿ ಫೈನಲ್ ಪಂದ್ಯ ಡ್ರಾ ಆದರೆ ಯಾರಿಗೆ ಪ್ರಶಸ್ತಿ?

ಸೌತ್ ಝೋನ್ (ಪ್ಲೇಯಿಂಗ್ XI): ರಿಕಿ ಭುಯಿ, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶೇಕ್ ರಶೀದ್, ತಿಲಕ್ ವರ್ಮಾ (ನಾಯಕ), ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ತ್ರಿಪುರಾಣ ವಿಜಯ್, ಮೊಹಮ್ಮದ್ ಸಿರಾಜ್, ಚಾಮ ವಿ ಮಿಲಿಂದ್, ಎಂಡಿ ನಿಧೀಶ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ