AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಸತತ 6ನೇ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್; ತಂಡದಲ್ಲಿ 2 ಬದಲಾವಣೆ

India vs England 4th T20: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಬ್ರಿಸ್ಟಲ್‌ನಲ್ಲಿ ನಡೆಯುತ್ತಿದೆ. ಸರಣಿಯಲ್ಲಿ 0-2 ಅಂತರದಲ್ಲಿ ಹಿನ್ನಡೆ ಸಾಧಿಸಿರುವ ಟೀಂ ಇಂಡಿಯಾಗೆ ಇದು "ಮಾಡು ಇಲ್ಲವೇ ಮಡಿ" ಪಂದ್ಯ. ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿದ್ದು, ವಾಷಿಂಗ್ಟನ್ ಸುಂದರ್ ಮತ್ತು ಪ್ರಸಿದ್ಧ್ ಕೃಷ್ಣ ತಂಡಕ್ಕೆ ಸೇರಿಕೊಂಡಿದ್ದಾರೆ. ಉಭಯ ತಂಡಗಳು ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿಯುತ್ತಿವೆ.

IND vs ENG: ಸತತ 6ನೇ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್; ತಂಡದಲ್ಲಿ 2 ಬದಲಾವಣೆ
Ind Vs Eng Toss
ಪೃಥ್ವಿಶಂಕರ
|

Updated on:Jul 09, 2026 | 9:44 PM

Share

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ಬ್ರಿಸ್ಟಲ್‌ನ ಕೌಂಟಿ ಮೈದಾನದಲ್ಲಿ ನಡೆಯುತ್ತಿದೆ. ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ 0-2 ಅಂತರದಲ್ಲಿ ಹಿನ್ನಡೆ ಸಾಧಿಸಿದೆ. ಭಾರತ ತಂಡ ಸರಣಿ ಸೋಲನ್ನು ತಪ್ಪಿಸಬೇಕಾದರೆ ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಇತ್ತ 12 ವರ್ಷಗಳ ನಂತರ ಭಾರತ ವಿರುದ್ಧ ಟಿ20 ಸರಣಿ ಗೆಲ್ಲುವತ್ತ ಇಂಗ್ಲೆಂಡ್ ಕಣ್ಣಿಟ್ಟಿದೆ. ಹೀಗಾಗಿ ಉಭಯ ತಂಡಗಳು ಶತಾಯಗತಾಯ ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿಯುತ್ತಿವೆ.

ಟಾಸ್ ಗೆದ್ದ ಶ್ರೇಯಸ್ ಅಯ್ಯರ್

ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ವೇಗಿ ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ಅವರನ್ನು ಈ ಪಂದ್ಯದಿಂದ ಹೊರಗಿಡಲಾಗಿದ್ದು, ವಾಷಿಂಗ್ಟನ್ ಸುಂದರ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಆಡುವ ಅವಕಾಶ ನೀಡಲಾಗಿದೆ. ಇತ್ತ ಇಂಗ್ಲೆಂಡ್‌ ತಂಡದಲ್ಲೂ ಒಂದು ಬದಲಾವಣೆಯನ್ನು ಮಾಡಲಾಗಿದೆ.

8 ವರ್ಷಗಳ ನಂತರ ಬ್ರಿಸ್ಟಲ್‌ನ ಪಂದ್ಯ

ಭಾರತ ತಂಡ 8 ವರ್ಷಗಳ ಬಳಿಕ ಬ್ರಿಸ್ಟಲ್‌ನ ಕೌಂಟಿ ಮೈದಾನದಲ್ಲಿ ಟಿ20 ಪಂದ್ಯ ಆಡಲಿದೆ. ಇದಕ್ಕೂ ಮುನ್ನ ಭಾರತ ತನ್ನ ಏಕೈಕ ಮತ್ತು ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು 2018ರಲ್ಲಿ ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ಆಡಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 198 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ರೋಹಿತ್ ಶರ್ಮಾ ಅಜೇಯ ಶತಕ ಬಾರಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟಿದ್ದರು.

ಉಭಯ ತಂಡಗಳ ಪ್ಲೇಯಿಂಗ್ 11

ಭಾರತ ತಂಡ: ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶನ್ ಕಿಶನ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ತಿಲಕ್ ವರ್ಮಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ.

ಇಂಗ್ಲೆಂಡ್‌ ತಂಡ: ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಆದಿಲ್ ರಶೀದ್ ಮತ್ತು ಜೋಶ್ ಟಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:43 pm, Thu, 9 July 26

Follow Us
ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಭದ್ರತಾ ಪರಿಶೀಲನೆ ನಡೆಸಿದ ಅಮಿತ್ ಶಾ
ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಭದ್ರತಾ ಪರಿಶೀಲನೆ ನಡೆಸಿದ ಅಮಿತ್ ಶಾ
ಸಕಲೇಶಪುರದ ಆನೆಮಹಲ್ ಬಳಿ ಭೂಕುಸಿತದ ಆತಂಕ
ಸಕಲೇಶಪುರದ ಆನೆಮಹಲ್ ಬಳಿ ಭೂಕುಸಿತದ ಆತಂಕ
ಪಾತಾಳ ಕಂಡ ಟೊಮ್ಯಾಟೋ ಬೆಲೆ: ರಸ್ತೆ ಬದಿ ತಂದು ಬೆಳೆ ಸುರಿದ ರೈತರು
ಪಾತಾಳ ಕಂಡ ಟೊಮ್ಯಾಟೋ ಬೆಲೆ: ರಸ್ತೆ ಬದಿ ತಂದು ಬೆಳೆ ಸುರಿದ ರೈತರು
ಮಳೆ ವಿಚಾರವಾಗಿ ಪ್ರಧಾನಿ ಮೋದಿ ಎಚ್ಚರಿಕೆ ಗಂಟೆ ಕೊಟ್ಟಿದ್ದಾರೆ: ಸಿಎಂ
ಮಳೆ ವಿಚಾರವಾಗಿ ಪ್ರಧಾನಿ ಮೋದಿ ಎಚ್ಚರಿಕೆ ಗಂಟೆ ಕೊಟ್ಟಿದ್ದಾರೆ: ಸಿಎಂ
ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ; ವಿಡಿಯೋ ವೈರಲ್
ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ; ವಿಡಿಯೋ ವೈರಲ್
ಇರಾನ್​ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ದಾಳಿ
ಇರಾನ್​ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ದಾಳಿ
RSS ವಿರುದ್ಧ ಮಾತಾಡಿದ್ರೆ ಕಾಂಗ್ರೆಸ್​​ನಲ್ಲಿ ಬಡ್ತಿ: ಯತ್ನಾಳ್​​ ಆರೋಪ
RSS ವಿರುದ್ಧ ಮಾತಾಡಿದ್ರೆ ಕಾಂಗ್ರೆಸ್​​ನಲ್ಲಿ ಬಡ್ತಿ: ಯತ್ನಾಳ್​​ ಆರೋಪ
ಫುಟ್​ಪಾತ್​ ತೆರವು ಬೆನ್ನಲ್ಲೇ ವಾಹನ ಟೋಯಿಂಗ್ ಬಗ್ಗೆ ಕೃಷ್ಣಬೈರೇಗೌಡ ಸುಳಿವು
ಫುಟ್​ಪಾತ್​ ತೆರವು ಬೆನ್ನಲ್ಲೇ ವಾಹನ ಟೋಯಿಂಗ್ ಬಗ್ಗೆ ಕೃಷ್ಣಬೈರೇಗೌಡ ಸುಳಿವು
ನೈಸ್‌ ರೋಡ್ ಸಮೀಪ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ನೈಸ್‌ ರೋಡ್ ಸಮೀಪ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
‘ನೀನು ಹೀರೋನೆ ಅಲ್ಲ’, ಎಂದು ನನಗೆ ಹೇಳಿದ್ದಾರೆ’: ಸತೀಶ್ ನೀನಾಸಂ
‘ನೀನು ಹೀರೋನೆ ಅಲ್ಲ’, ಎಂದು ನನಗೆ ಹೇಳಿದ್ದಾರೆ’: ಸತೀಶ್ ನೀನಾಸಂ