ಶೂನ್ಯಕ್ಕೆ ರೋಹಿತ್, ಕೊಹ್ಲಿ, ಶ್ರೇಯಸ್ ಔಟ್; ಮೊದಲ ಓವರ್‌ನಲ್ಲೇ ಭಾರತಕ್ಕೆ ಆಘಾತ
ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಮೊದಲ ಓವರ್‌ನಲ್ಲೇ ಆಘಾತ ಎದುರಾಗಿದೆ. ಮ್ಯಾಟ್ ಹೆನ್ರಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಇಂತಹ ಘಟನೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಬಾರಿ ನಡೆದಿದ್ದು, ಭಾರತದ ಬ್ಯಾಟಿಂಗ್‌ಗೆ ಭಾರಿ ಹಿನ್ನಡೆ ಉಂಟಾಗಿದೆ.

ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ಶುಕ್ರವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 334 ರನ್ಗಳ ಬೃಹತ್ ಗುರಿ ನಿಗದಿಪಡಿಸಿತು. ಈ ಗುರ ಬೆನ್ನಟ್ಟಿದ ಭಾರತಕ್ಕೆ ಮೊದಲ ಓವರ್‌ನಲ್ಲೇ ಆಘಾತ ಎದುರಾಗಿದೆ. ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಮೊದಲ ಓವರ್‌ನಲ್ಲೇ ಪ್ರಮುಖ ಮೂವರು ಬ್ಯಾಟರ್ಗಳನ್ನು ಶೂನ್ಯಕ್ಕೆ ಔಟ್ ಮಾಡಿದ್ದಾರೆ. ಈ ಓವರ್‌ನಲ್ಲಿ ಹೆನ್ರಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡುವ ಮೂಲಕ ನ್ಯೂಜಿಲೆಂಡ್‌ಗೆ ಕನಸಿನ ಆರಂಭ ಒದಗಿಸಿದರು.
ಸೊನ್ನೆ ಸುತ್ತಿದ ಮೂವರು
ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಖಾತೆ ತೆರೆಯುವ ಮೊದಲೇ ಗೋಲ್ಡನ್ ಡಕ್‌ಗೆ ಬಲಿಯಾದರೆ, ವಿರಾಟ್ ಕೊಹ್ಲಿ ನಾಲ್ಕು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಮ್ಯಾಟ್ ಹೆನ್ರಿ ಮೊದಲು ರೋಹಿತ್ ಶರ್ಮಾ ಅವರನ್ನು ಸ್ಲಿಪ್‌ನಲ್ಲಿ ಕ್ಯಾಚ್ ಕೊಡಿಸಿ ಪೆವಿಲಿಯನ್‌ಗೆ ಕಳುಹಿಸಿದರು. ಚೆಂಡಿನ ಸ್ವಿಂಗ್ ಅನ್ನು ಸರಿಯಾಗಿ ನಿರ್ಧರಿಸುವಲ್ಲಿ ಎಡವಿದ ರೋಹಿತ್ ವಿಕೆಟ್ ಕಳೆದುಕೊಂಡರು. ಇದಾದ ನಾಲ್ಕು ಎಸೆತಗಳ ಬಳಿಕ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್ ಆದರು.
ಭಾರತದ ಪಾಲಿಗೆ ದುಃಸ್ವಪ್ನ
ಇನ್ನು ಇದೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಕೂಡ ಹೆನ್ರಿ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಒಳಬಂದ ಚೆಂಡನ್ನು ತಡೆಯಲು ಯತ್ನಿಸಿದ ಶ್ರೇಯಸ್ ವಿಫಲರಾದರು. ಈ ಮೂಲಕ ಒಂದೇ ಓವರ್‌ನಲ್ಲಿ ಮೂರು ಪ್ರಮುಖ ವಿಕೆಟ್ ಕಬಳಿಸಿದ ಹೆನ್ರಿ ಸಂಭ್ರಮಿಸಿದರು. ಯಾವುದೇ ರನ್ ನೀಡದೆ ಮೂರು ವಿಕೆಟ್ ಪಡೆದ ಈ ಓವರ್ ಭಾರತದ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸಿತು.
ದಾಖಲೆ ಬರೆದ ಹೆನ್ರಿ
ಏಕದಿನ ಕ್ರಿಕೆಟ್‌ನ ಚೆಂಡು-ಚೆಂಡಿನ ದಾಖಲೆಗಳನ್ನು ನಿರ್ವಹಿಸಲು ಆರಂಭಿಸಿದ ಬಳಿಕ, ಪಂದ್ಯದ ಮೊದಲ ಓವರ್‌ನಲ್ಲೇ ಬೌಲರ್ ಒಬ್ಬರು ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಎರಡನೇ ಘಟನೆ ಇದಾಗಿದೆ. 2003ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಚಾಮಿಂದ ವಾಸ್ ಮೊದಲ ಓವರ್‌ನಲ್ಲೇ ನಾಲ್ಕು ವಿಕೆಟ್ ಪಡೆದು ಈ ದಾಖಲೆ ನಿರ್ಮಿಸಿದ್ದರು.
Published On - 12:29 pm, Fri, 13 November 26
